ಕಾಲಕೋಶ (ಕಾಲ್ಸೆಂಟರ್ (ತರ್ಲೆ) ಪದಕೋಶ)

To prevent automated spam submissions leave this field empty.
ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ. ಕಾಲನೇಮಿ: ಕಾಲ್ಸೆಂಟರ್ನಲ್ಲಿ ಬಂದ ಕರೆಗಳನ್ನು ಬೇರೆಬೇರೆ ಉದ್ಯೋಗಿಗಳಿಗೆ ಹಂಚುವಾತ. ಕಾಲಪುರುಷ: ಕಾಲ್ಸೆಂಟರ್ನಲ್ಲಿ ಕೆಲಸ ಮಾಡುವ ಗಂಡಸು. ಕಾಲೇಜು: ಕಾಲ್ಸೆಂಟರ್ನಲ್ಲಿ ಕೆಲಸ ಮಾಡಲು ಸರಿಯಾದ ಪ್ರಾಯ (age). ಕಾಲಮಾನ: ಕಂಪೆನಿಯ ಮಾನ ಉಳಿಯುವಂತೆ ಬಂದ ಕರೆಯನ್ನು ಉತ್ತರಿಸುವ ಚಾಕಚಕ್ಯತೆ. ಕಾಲರಾತ್ರಿ: ಕಾಲ್ಸೆಂಟರ್ನಲ್ಲಿ ರಾತ್ರಿ ಪಾಳಿ. ಕಾಲಜ್ಞಾನಿ: ಕಾಲ್ಸೆಂಟರ್ನಲ್ಲಿ ಬರುವ ಕರೆಗಳಿಗೆ ಸರಿಯಾದ ಉತ್ತರ ತಿಳಿದಿರುವಾತ. ಕಾಲಾಡಿಸು: ಕಾಲ್ಸೆಂಟರ್ನಲ್ಲಿ ಬಂದ ಕರೆಯನ್ನು ಸರಕಾರಿ ಕಚೇರಿಗಳಲ್ಲಿ ಮಾಡಿದಂತೆ ಒಬ್ಬ ಒಪರೇಟರ್ನಿಂದ ಮತ್ತೊಬ್ಬ ಒಪರೇಟರ್ಗೆ ಅಲ್ಲಿಂದ ಮತ್ತೊಬ್ಬನಿಗೆ ದಾಟಿಸುವುದು. -ಪವನಜ
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕಾಲ್ಕಿತ್ತುವ ವಿದ್ಯೆಗೆ -- ಏನಿರಬಹುದು? ;) ಐಸಿಐಸಿಐ ಕಾಲ್ ಸೆಂಟರ್ ನವರು, ಮತ್ತು ಕೆಲವರು ಹೆಚ್ಚು ಬಾರಿ ಹಂಗೂ ಹಿಂಗೂ ಏನೋ ಹೇಳಿ ಕಾಲ್ಕಿತ್ತುವುದೇ ಜಾಸ್ತಿ. -- "ಹೊಸ ಚಿಗುರು, ಹಳೆ ಬೇರು"

ಬಹುಶಃ ಈ ರೀತಿ ಅರ್ಥೈಸಬಹುದು- ಕಾಲ ಚಕ್ರ - ಹಳೆ ಕಾಲದ ತಿರುಗುವ ವಿಧಾನದ ಟೆಲಿಫೋನ್ ಡಯಲ್ ಕಾಲ ಹರಣ - ಒಂದು ಕರೆಯನ್ನು ಸರಿಯಾಗಿ ಉತ್ತರಿಸದೆ ಹಾಳು ಮಾಡುವುದು ಕಾಲ ಗಣನೆ - ಒಂದು ಕರೆಗೆ ಎಷ್ಟು ಸಮಯ ಹಿಡಿಯಿತು ಎಂದು ಲೆಕ್ಕ ಹಾಕುವುದು ಕಾಲಾಳು - ಕಾಲ್ ಸೆಂಟರ್ ಉದ್ಯೋಗಿ -ಹೆಣ್ಣು ಯಾ ಗಂಡು ಕಾಲ ಕ್ಷೇಪ - ಈ ತಲೆಹರಟೆಗಳನ್ನು ಓದುವುದು :) ಸಿಗೋಣ, ಪವನಜ ----------- Think globally, Act locally