ಮರಳಿ ಗೂಡಿಗೆ ಬಂತು ಮರಿ ಹಕ್ಕಿ

ಮರಳಿ ಗೂಡಿಗೆ ಬಂತು ಮರಿ ಹಕ್ಕಿ

ಬರಹ

ಅಬ್ಬಾ ಮೊನ್ನೆ ರಾತ್ರಿ ಎಂತಹ ಸನ್ನಿವೇಶವೆಂದರೆ ನೋಡಿದವರ ಎದೆ ಕರಗುವಂತಿತ್ತು. ಮನೆಗೆ ಬರುವುದಿಲ್ಲ ಎಂದು ಅಳುತ್ತಿರುವ ಮಗಳು , ಮನೆಗೆ ಬಾರೆ ಎನ್ನುತ್ತಿರುವ ನಾನು ಒಂದೇ ಸಮನೇ ಅಳುತ್ತಿದ್ದೆವು.
ಕಾರಿನಲ್ಲಿ ಎತ್ತಿ ಹಾಕಿಕೊಂಡು ಕೂತರೂ ಬೋರ್ಗರೆದು ಅಳುತ್ತಿದ್ದ ನನ್ನ ಮಗಳನ್ನು ನೋಡಿ ನನಗೂ ಅಳು . ನನ್ನ ಮಗಳು ನಮ್ಮ ಮನೆಗೆ ಬರಲಾರೆ ಎಂದಾಗ ನನ್ನ ಮೇಲೆ ಸಿಟ್ಟು, ಜಿಗುಪ್ಸೆ, ಮಗಳನ್ನು ಒಲಿಸಿಕೊಳ್ಳಲು ಆಗದ ನನ್ನ ಅಸಹಾಯಕತೆಯ ಕಂಡು ಮರುಕ ಎಲ್ಲಾ ಒಟ್ಟಿಗೆ ಬಂದಿತ್ತು . ಸರಿ ನೀನು ಅಲ್ಲೇ ಇರು ನಾನು ನನಗೆ ಮಗಳೆ ಇಲ್ಲ ಅಂದ್ಕೋತೀನಿ ಎನ್ನುವ ಹಂತಕ್ಕೆ ನನ್ನ ಮಾತು ಬಂದಿತು.
ಅವಳಿಗೆ ಅದು ಹೇಗೆ ಅರ್ಥವಾಗುತ್ತದೆ. ಇನ್ನೂ ಅಳಲು ಶುರು ಮಾಡಿದಳು
ಕೊನೆಗೆ ಅವಳನ್ನು ಅಲ್ಲೇ ಬಿಟ್ಟು ಬರಲು ತೀರ್ಮಾನಿಸಿ ಕಾರಿನಿಂದ ಕೆಳಗೆ ಇಳಿಸಿದೆ. ನನ್ನ ಕಣ್ಣಲ್ಲಿ ಧಾರಾಕಾರ ನೀರು ಅವಳಿಗೆ ಏನನ್ನಿಸಿತೋ ಅವಳ ಅಳು ನಿಂತಿತು ತನ್ನ ಪುಟ್ಟ ಕೈಗಳಿಂದ ನನ್ನ ಕಣ್ಣ ಒರೆಸಿದಳು.
" ಅಮ್ಮ ನಾನೂ ಮನೆಗೆ ಬರ್ತೀನಿ " ಎಂದಾಗ ಅವಳ ಮುಂದೆ ನಾನು ಕುಬ್ಜಳಾದೆ ಎನಿಸಿತು
ಅವಳನ್ನು ಕರೆದುಕೊಂಡು ಮನೆಗೆ ಬರುವಾಗ ಪ್ರಾಮಿಸ್ ಮಾಡಿದೆ ಇನ್ನೂ ನಿನ್ನ ಜೊತೆ ನಾನು ತುಂಬಾ ಹೊತ್ತು ಇರುತ್ತೇನೆ. ಅವಳಿಗೆ ಬೇಕಾಗಿದ್ದು ಸಿಕ್ಕಿತೆಂಬಂತೆ ಅವಳು ನಕ್ಕಾಗ ನನಗೆ ಮತ್ತೆ ಕಣ್ಣಲ್ಲಿ ನೀರು ಈ ಸಲ ಸಂತೋಷಕ್ಕೆ.
ಎರೆಡು ದಿನದಿಂದ ಕೆಲಸಕ್ಕೆ ಚಕ್ಕರ್ ಕೊಟ್ಟು ಅವಳ ಜೊತೆಯಲ್ಲಿಯೇ ಇದ್ದೇನೆ.