ಮನಸಿಲ್ಲದವರಲ್ಲಿ ಮನಸೆಳೆವ ಮಾತೇಕೆ???

ಮನಸಿಲ್ಲದವರಲ್ಲಿ ಮನಸೆಳೆವ ಮಾತೇಕೆ???

ಬರಹ

ನಾವು ಕಾರಣ ಗೊತ್ತಿಲ್ಲದೆ ಪ್ರೀತಿಸ್ತೀವಿ... ಆ ಮನುಶ್ಯ ನಮಗೆ ಯೋಗ್ಯನೋ ಇಲ್ಲವೋ ತಿಳಿಯಕ್ಕೆ ಒಮ್ಮೊಮ್ಮೆ ವರುಶಗಳ ಸಮಯನೂ ಸಾಲಲ್ಲ!!!

ಪ್ರತೀ ಹೆಣ್ಣು ಜೀವ ಬೇಡೋದು ಒ೦ದೇ.... ನನ್ನ ಭಾವನೆಗೆ ಸ್ಪ೦ದಿಸೋ ಇನ್ನೊ೦ದು ಮನಸು ನನ್ನ ಭಾಗ್ಯಕ್ಕೆ ಸಿಕ್ಕ್ರೆ ಸಾಕು ಅ೦ಥ.
ಅದಕ್ಕೆ ನೋಡಿ ಮೋಸ್ಟ್ ಗೀತೆಗಳಲ್ಲಿ ಹುಡುಗರು ಭಲೆ ಭಲೆ ಚ೦ದುಳ್ಳಿ ಹೆಣ್ಣು ನೀನು ಅ೦ಥ ಹಾಡಿದ್ರೆ, ...

ಆಕೆ ತನ್ನ ಕಲ್ಪನೆಯಲ್ಲಿ ಹಾಡೋದು ತಾಯಿ ತ೦ದೆ ಎಲ್ಲಾ ನೀನೆ ಯಾಕೆ ಬೇರೆ ನ೦ಟು ಅ೦ಥ :)
ಆದ್ರೆ ಅ೦ಥ ಜೀವಿ ಸಿಕ್ಕೊದು ಕನಸು ಅನ್ಸುತ್ತೆ!!!

ನಾನು ಬಹಳ ಪ್ರಯತ್ನ ಪಟ್ಟರೂ ಅವ ನನ್ನ ಕಣ್ಣ ಓದಲೇ ಇಲ್ಲ... ಕೊನೆಗೊಮ್ಮೆ ನಿರ್ಧಾರ ಮಾಡೇ ಬಿಟ್ಟೆ..

ಮನಸಿಲ್ಲದವರಲ್ಲಿ ಮನಸೆಳೆವ ಮಾತೇಕೆ
ಮಾತೇ ಇಲ್ಲದವರಲ್ಲಿ ಮೌನಕೆ ಬೆಲೆ ಎಲ್ಲಿ ???

ನನ್ನ ಆತ್ಮೀಯರೊಬ್ಬರು ನ೦ಗೆ ತಿಳಿಸಿ ಹೇಳಿದ ಮಾತಿದು, ನಾನದ ಓದಿ ಅರ್ಥೈಸಿಕೊ೦ಡಾಯ್ತು,

ಸೋತು ಗೆದ್ದೆನೋ ಅಥವಾ ಗೆದ್ದು ಸೋತೆನೋ ಇನ್ನೂ ನ೦ಗೇ ತಿಳೀತಿಲ್ಲ!!!
ಆದರೆ ನನ್ನ ಆತ್ಮವಿಶ್ವಾಸ ಕಡಿಮೆ ಆಗಿಲ್ಲ :)

ನಿರ್ಮಲ ಮನಸ್ಸಿಗಾಗಿ ಹುದುಕಾಟ ಬೇಡ ಗೆಳತಿಯರೇ... ಅದು ತಾನಾಗೆ ನಮ್ಮ ಬಳಿ ಒ೦ದಿಲ್ಲೊ೦ದು ದಿನ ಸೇರುತ್ತೆ............