"ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"

Submitted by nekkar_guru on Mon, 09/01/2008 - 01:56
ಬರಹ

ಜೀವನವೆಂಬ ಕಾಲಚಕ್ರದಲ್ಲಿ ಪ್ರತಿದಿನ ಅನೇಕ ಜನರ ಭೇಟಿಯಾಗುತ್ತದೆ. ಆದರೆ ಅದರಲ್ಲಿ ಕೆಲವರಸ್ಟೆ ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ, ಹಾಗೆಯೇ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಜೀವನದ ಕಾಲು ಭಾಗ ಸವೆಸಿರುವ ನಾನು ಕೂಡ ಅನೇಕ ವಿಧದ ಜನರೊಂದಿಗೆ ಬೆರೆತು, ಅನೇಕ ಮಂದಿ ಗೆಳೆಯರ ಗೆಳೆತನದಲ್ಲಿ ಮಿಂದು, ಅನೇಕ ಹಿರಿಯರ ಆಶೀರ್ವಾದದಿಂದ ಎತ್ತರಕ್ಕೆ ಬೆಳೆಯುತ್ತಿದೇನೆ ಎಂದು ಹೇಳಲು ಸಂತೋಷವಾಗುತ್ತದೆ. ಕಾಲ ಗರ್ಭವನ್ನು ಬಗೆದು ಮೆಲುಕು ಹಾಕುತ್ತಾ ಹೋದರೆ ಸಂತೋಷವಾಗುತ್ತದೆ, ಆ ಗೆಳೆಯರು, ಅವರೊಂದಿಗಿನ ಆತ್ಮೀಯ ಒಡನಾಟ, ಛೇ ಎಲ್ಲಾ ಮುಗಿದೇ ಹೋಯಿತೇ ಎಂದು ಘಾತವಾಗುತ್ತದೆ. ಉದ್ಯಾನ ನಗರಿಯ ಈ ಸ್ಪರ್ದಾತ್ಮಕ ಜೀವನದಲ್ಲಿ ಆ ಎಲ್ಲಾ ಗೆಳೆಯರನ್ನು ಒಗ್ಗೂಡಿಸುದು, ನಮ್ಮ ಹಳೆಯ ಬಣ್ಣದ ಬದುಕನ್ನು ಮುಂದುವರಿಸುದು ಬರಿ ಹಗಲು ಕನಸಾಗಿಯೆ ಉಳಿಯಿತು. ಕೊನೆಯ ಪಕ್ಷ ಆ ಎಲ್ಲಾ ನೆನಪುಗಳನ್ನು ಮೆಲುಕು ಹಾಕಲು ಮಹಾನಗದಲ್ಲಿ ಸಮಯ ಸಿಕ್ಕರೆ ಅದು ನನ್ನ ಸೌಭಾಗ್ಯ.
ಪ್ರತಿಯೊಬ್ಬರ ಜೀವದಲ್ಲೂ ವಿದ್ಯಾರ್ಥಿ ಜೀವನ ಬಹಳ ಮಹತ್ವದಾಗಿರುತ್ತದೆ. ಮುಂದಿನ ಜೀವನಕ್ಕೆ ಭದ್ರ ತಳಹದಿ ಹಾಕುವಲ್ಲಿ ಹಾಗು ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಓರೆಗಲ್ಲಿಗೆ ಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಮ್ಮ ಅಕ್ಕಂದಿರ ಅಕ್ಕರೆಯಲ್ಲಿ ಬೆಳೆದು ವಿದ್ಯಾಭ್ಯಾಸಕ್ಕಾಗಿ ದೂರದ ಊರಿಗೆ ಹೋದಾಗ ಗೆಳೆಯರೆ ಸರ್ವಸ್ವವಾಗಿದ್ದರು. ಒಮ್ಮೆ ವಿದ್ಯಾಭ್ಯಾಸ ಮುಗಿಸಿ ಸಾವಿರ ಕನಸು ಹೊತ್ತು ಮಹಾನಗರಕ್ಕೆ ಕಾಲಿಟ್ಟಾಗ ಶುರುವಾಯೀತು ನೋಡಿ ಗಲಿಬಿಲಿ ಬರಿತ, ಸಮಯ ರಹಿತ, ಸಾಲುಗಟ್ಟಿ ನಿಂತ ಟ್ರಾಪಿಕ್ ನೋಡಿ ಗೊಣಗುತ್ತಾ ವಾರಾಂತ್ಯಕೋಸ್ಕರ ಬಕ ಪಕ್ಷಿಯಂತೆ ಕಾಯುವ ನನ್ನ ಮಾಯಾನಗರದ ಯಾಂತ್ರಿಕ ಜೀವನ.
ಅಷ್ಟೊಂದು ಚಿರಪರಿಚಿವಲ್ಲದ ರಾಜಧಾನಿಯಲ್ಲಿ ಉದ್ಯೋಗನಿರತನಾದ ನನಗೆ ಹೊಸಜನ, ಹೊಸ ವಾತವರಣ, ನಿರ್ಜೀವಿ ಕಂಪ್ಯೂಟರ್, ಸಹೋದ್ಯೋಗಿಗಳೊಂದಿಗಿನ ಮನಸ್ತಾಪ, ಮ್ಯಾನೇಜರ್ ತಂದಿಡುವ ಗೊತ್ತು ಗುರಿ ಇಲ್ಲದ ಕೆಲಸಗಳು, ಕೆಲವೇ ದಿನಗಳಲ್ಲಿ ಜೀವನವೇ ಬೇಸರವಾಗಿಸಿಬಿಟ್ಟಿತು. ಮನದಾಳದ ಭಾವನೆಗಳನ್ನು ಗೆಳೆಯರಲ್ಲಿ ಹಂಚಿಕೊಳ್ಳೊಣವೇಂದರೆ ದಿನಗಳೆದಂತೆ ಅವರ ಭೇಟಿಯೇ ಅಪರೂಪವಾಗತೊಡಗಿತು. ಹೊಸ ಗೆಳೆಯ, ಗೆಳತಿಯರ ಹುಡುಕಾಟದಲ್ಲಿದ್ದ ನನಗೆ "ಅನ್ನಿಯ" ಪರಿಚಯವಾಯೀತು. ಮೊದ ಮೊದಲು ಅದೇಕೋ ಅನ್ನಿಯ ವ್ಯಕ್ತಿತ್ವವಾಗಲಿ ಒಡನಾಟವಗಲಿ ಹಿಡಿಸುತ್ತಿರಲ್ಲಿಲ್ಲ. ಸುಧೀರ್ಘ ವಿದ್ಯಾಭ್ಯಾಸ ಮುಗಿಸಿ ತನ್ನ ವ್ರತ್ತಿ ಜೀವನ ರೂಪಿಸಲು ಸಾವಿರ ಕನಸು ಹೊತ್ತು ನಮ್ಮ ಕಂಪನಿಗೆ ಸೇರಿದ್ದಳು. ಯಾರೊಂದಿಗೂ ಜಾಸ್ತಿ ಬೆರೆಯದ, ತನ್ನಲ್ಲಡಿಗಿರುವ ವಿದ್ವತ್ತನ್ನು ಯಾರೊಂದಿಗೂ ಹಂಚಿಕೊಳ್ಳದ ತನ್ನಷ್ಟಕ್ಕೆ ತಾನಿದ್ದು, ಆಗಾಗ ಕೆಲಸಕ್ಕೆ ರಜಾ ಹಾಕುತ್ತಿದ್ದ ಅನ್ನಿಯ ವರ್ತನೆ ತೀರಾ ಹಿಡಿಸುತ್ತಿರಲಿಲ್ಲ. ಉದ್ಯೋಗ ನಿರತನಾಗಿದ್ದರು ರಾಜಧಾನಿಯಲ್ಲಿ ತಲೆಯೆತ್ತುತ್ತಿದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸಗಿಟ್ಟಿಸಿಕೊಳ್ಳಬೇಕೆಂಬುದು ನನ್ನ ರಾತ್ರಿ ನಿದ್ದೆಕೆಡಿಸುವ ಕನಸಾಗಿತ್ತು. ಈ ಉದ್ದೇಶ ಫೂರೈಸುದಕೋಸ್ಕರ ಸದಾ ಕಾರ್ಯ ನಿರತನಾಗಿದ್ದೇ. ಹೊಸ ಮಾಹಿತಿಗಳನ್ನು ಕ್ರೋಡಿಕರಿಸುದು, ಹೊಸ ತಂತ್ರಜ್ನಾನಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸುದು, ಮಾಡುವ ಕೆಲಸದ ಬಗ್ಗೆ ತಿಳಿದವರಲ್ಲಿ ಫೂರ್ಣ ಮಾಹಿತಿ ಪಡೆಯುದು ಹೀಗೆ ಸಾಗಿತ್ತು ನನ್ನ ಹೊಸ ಉದ್ಯೋಗನ್ವೇಷಣೆ. ಈ ನನ್ನ ಪ್ರವ್ರತ್ತಿಯನ್ನು ಹುರಿದುಂಭಿಸುವ ಸಹೋದ್ಯೋಗಿಗಳಿಗಿಂತ ಹೊಟ್ಟೆಕಿಚ್ಹು ಪಡುವವರೆ ಜಾಸ್ತಿಯಾಗತೊಡಗಿದರು. ಈ ಸಂಧರ್ಭದಲ್ಲಿ ಅನ್ನಿಯೊಬ್ಬಳು ಮಾತ್ರ ನನ್ನ ಹುರಿಧುಂಬಿಸುತ್ತಿದ್ದಳು. ನಿನ್ನಲ್ಲಿ ಪ್ರತಿಭೆಯೀದೆ, ನೀನು ಅಂದು ಕೊಂಡಿದ್ದನ್ನು ಸಾಧಿಸುತ್ತೀಯಾ ಎಂದು ಬಾಡಿದ ಹ್ರದಯ ಕಮಲಕ್ಕೆ ನೀರೇರೆದು ಅರಳಿಸಿದ್ದಳು. ಅಗಲೇ ನನಗೆ ಅನ್ನಿಯ ನಿಜವಾದ ವ್ಯಕ್ತಿತ್ವ ಅರ್ಥವಾತೊಡಗಿತು. ಬರಿ ಮುಖವನ್ನು ನೋಡಿ ಅವರ ವ್ಯಕ್ತಿತ್ವವನ್ನು ಅಳೆಯುತ್ತಿದ ನನ್ನ ಆತ್ಮಸ್ಥೇರ್ಯಕ್ಕೆ ಕೊಡಲಿ ಏಟು ಬಿದ್ದಂತಾಯೀತು. ಅನ್ನಿಯ ವ್ಯಕ್ತಿತ್ವ ನಿಜಕ್ಕೂ ಹಿಡಿಸತೊಡಗಿತು, ಒಡನಾಟ ಆತ್ಮೀಯವೆನಿಸತೊಡಗಿತು. ಅಕ್ಕತಂಗಿಯರ ಅಕ್ಕರೆಯಲ್ಲಿ ಬೆಳೆದವನಾಗಿದ್ದರೂ ಅದೇಕೊ ವಿದ್ಯಾರ್ಥಿ ಜೀವನದಲ್ಲಿ ಹುಡುಗಿಯರ ಗೆಳೆತನ ಮಾಡಿದವನಲ್ಲ. ಅದೇಕೊ ಅವರ ವ್ಯಕ್ತಿತ್ವ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಆದರೆ ಅನ್ನಿ ನನ್ನ ಎಲ್ಲಾ ಕಲ್ಪನೆಗಳನ್ನು ಸುಳ್ಳಾಗಿಸಿದ್ದಳು. ಹುಡುಗಿಯರು ಕೂಡ ಆತ್ಮೀಯ ಗೆಳೆಯರಗುತ್ತಾರೆ ಎಂದು ನನಗೆ ಮನದಟ್ಟಾಗಲು ಬಹಳ ದಿನ ಹಿಡಿಯಲಿಲ್ಲ.
ಅನ್ನಿ ಕೂಡ ನನ್ನಂತೆ ತುಂಬಿದ ಮನೆಯಲ್ಲಿ ಅಕ್ಕ ಅಣ್ಣಂದಿರ ಅಕ್ಕರೆಯಲ್ಲಿ ಬೆಳೆದವಳು. ಇದರಿಂದಾಗಿ ನಮ್ಮಿಬ್ಬರ ದ್ರಷ್ಟಿಕೋನ ಹೆಚ್ಚು ಕಮ್ಮಿ ಒಂದೇ ದಿಕ್ಕಿನಲ್ಲಿತ್ತು. ಅನ್ನಿ ನನಗಿಂತ ಬುದ್ದಿವಂತೆ ಯಾಗಿದ್ದರು ತನ್ನಲ್ಲಿ ಅಡಗಿರುವ ಬುದ್ದಿವಂತಿಕೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವಲ್ಲಿ ವಿಫಲವಾಗಿದ್ದಳು. ಮುಂದೆ ಆಫೀಸಿನ ಕೆಲಸವನ್ನು ಹಂಚಿಕೊಂಡು ಒಬ್ಬರಿಗೊಬ್ಬರು ತಿಳಿ ಹೇಳುತ್ತಾ ಮಾಡ ತೊಡಗಿದೆವು. ಇದರಿಂದಾಗಿ ಇಬ್ಬರ ಜ್ನಾನಾರ್ಜನೆ ಜಾಸ್ತಿಯಾಗ ತೊಡಗಿತು. ಬಿಡುವಿನ ಸಮಯದಲ್ಲಿ ಅನ್ನಿಯೊಂದಿಗೆ ಬಹಳ ಹೊತ್ತು ನಾನು ನಡೆದು ಬಂದ ದಾರಿ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಬಹಳ ಹೊತ್ತು ಹರಟೆ ಹೊಡೆಯುತ್ತಿದೆ. ಅವಳ ನಡೆನುಡಿ, ಸಭ್ಯ ವರ್ತನೆ, ವೇಷ ಭೂಷಣ, ಅವಳು ಅವರ ಮನೆಯವರ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ನಿಜವಾಗಿಯು ನನ್ನನ್ನು ನಿಬ್ಬೆರಗಾಗಿಸಿತ್ತು. ಪಾಶ್ಚಿಮಾತ್ಯ ಸಂಸ್ಕ್ರಿತಿಯ ಅಂಧಾನುಕರಣೆಯಲ್ಲಿರುವ ರಾಜಧಾನಿಯ ಯುವಜನಾಂಗದಲ್ಲಿ ಅನ್ನಿಯಂತವಳನ್ನು ಕಂಡು ಭಾರತೀಯ ಸಂಸ್ಕ್ರಿಯ ಆರಾಧಕನಾದ ನನಗೆ ಅತೀವ ಆನಂದವಾಗಿತ್ತು.
ಮುಂದೆ ಅನ್ನಿಯ ಹಾರೈಕೆಯೋ ಎಂಬಂತೆ ನನ್ನ ಕನಸಿನ ಉದ್ಯೋಗ ಸಿಕ್ಕಿತು. ಅನ್ನಿಗೂ ಕೂಡ ತನ್ನ ಕನಸಿನ ಕೆಲಸ ಕೆಲವೆ ದಿನಗಳಲ್ಲಿ ಕೈಗೆಟಕಿತು. ಹೀಗೆ ನಮ್ಮಿಬ್ಬರ ಉದ್ಯೋಗ, ಸಹೊದ್ಯೋಗಿಗಳು, ಕೆಲಸದ ವಾತಾವರಣ ಬದಲಾಗಿದ್ದರು ನಮ್ಮಿಬ್ಬರ ಸ್ನೇಹ ಮಾತ್ರ ಇನ್ನೂ ಬಲವಾಗಿತ್ತು. ಮುಂದೊಂದು ದಿನ ಅನ್ನಿಯ ಮನೆಯಲ್ಲಿ ತಂಗುವ ಸದವಕಾಶ ನನಗೆ ದೊರಕಿತು. ಮುದ್ದಿನ ಅಮ್ಮ, ಅಕ್ಕರೆಯ ಅಣ್ಣಂದಿರು, ಒಲವಿನ ಅಕ್ಕಭಾವಂದಿರು, ಹಾಗು ನೆಚ್ಚಿನ ಕಂಚು, ಪಾಚು, ಇವರು ಅನ್ನಿಯ ತುಂಬಿದ ಮನೆಯ ಸದಸ್ಯರು. ಮನೆಯವರಿಗೆಲ್ಲ ಅನ್ನಿಯೆಂದರೆ ಅಚ್ಚುಮೆಚ್ಚು, ಎಲ್ಲಿಲ್ಲದ ವಾತ್ಸಲ್ಯ. ಮನೆಗಿಬ್ಬರೇ ಇರುವ ಈ ಆಧುನಿಕ ಯುಗದಲ್ಲಿ ಅಣ್ಣ ಅಕ್ಕಂದಿರು ತುಂಬಿದ ಮನೆಯಲ್ಲಿ ಆತ್ಮೀಯರಾಗಿರುದು ನೋಡಿ ತುಂಬಾ ಸಂತೊಷವಾಯೀತು. ಅನ್ನಿಯ ಅಮ್ಮನವರ ಕೈಯಿಂದ ಮಾಡಿದ ರುಚಿ ರುಚಿಯಾದ ಹೊಳಿಗೆ ಊಟ, ಮನೆಯವರೆಲ್ಲರ ಅಭಿಮಾನದ ಆತೀಥ್ಯ, ಉದ್ಯಾನ ನಗರಿಯಿಂದ ಬೇಸತ್ತು ಹೋದ ಮನಸ್ಸಿಗೆ ಮುದ ನೀಡಿತು. ನನ್ನನೂ ಕೂಡ ಅವರ ಕುಟುಂಬದ ಒಬ್ಬ ಸದಸ್ಯನಂತೆ ಕಂಡದ್ದು ಅವರ ದೊಡ್ಡತನವೆಂದರೆ ತಪ್ಪಾಗಲಾರದು. ಅವರ ಆತ್ಮೀಯತೆ ಕಂಡು ಮಾತು ಮೌನವಾಗಿತ್ತು. ಸಾವಿರ ನೆನಪುಗಳನ್ನು ಹೊತ್ತು ಬರಲಾರದ ಮನಸ್ಸಿನಿಂದ ಮತ್ತೆ ಮಾಯನಗರಕ್ಕೆ ವಾಪಾಸು ಹೊರಟೆ.
ಹಣ, ಆಸ್ತಿ, ಅಂತಸ್ತು, ಗೌರವ ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸುತ್ತದೆ, ಆದರೆ ಇ ಅಂಶಗಳು ಅನ್ನಿಯ ವ್ಯಕ್ತಿತ್ವವನ್ನು ಬದಾಲಯಿಸದು ಎನ್ನುವುದು ನನ್ನ ನಂಬಿಕೆ. ತನ್ನ ಉನ್ನತಿಗೆ ಕಾರಣರಾದ ಅಣ್ಣಂದಿರಗೆ ತನ್ನ ಕೈಲಾದ ಸಹಾಯ ಮಾಡಬೇಕು, ಅಕ್ಕಂದಿರ ಮದುವೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು, ಕಂಚು ಪಾಚುವಿನ ಭವಿಷ್ಯ ರೂಪಿಸಬೇಕು, ಹೀಗೆ ಹತ್ತು ಹಲವು ಕನಸುಗಳನ್ನು ಅನ್ನಿ ತನ್ನ ಪುಟ್ಟ ಹ್ರದಯದಲ್ಲಿ ತುಂಬಿ ಕೊಂಡಿದ್ದಾಳೆ. ಅವಳ ಈ ಎಲ್ಲಾ ಕನಸುಗಳು ನನಸಾಗಲಿ, ಹೀಗೆ ಅವಳ ಜೀವನ ನಗುನಗುತಾ ಸಾಗಲಿ ಎಂದು ಆತ್ಮೀಯವಾಗಿ ಹಾರೈಸುತೇನೆ.
ನನ್ನ ಹಾಗೂ ಅನ್ನಿಯ ಸ್ನೇಹ ಸೂರ್ಯ ಚಂದ್ರರಿರುವಷ್ಟು ಕಾಲ ಚಿರಾಯುವಗಲಿ ಎಂದು ಹಾರೈಸಿ... 