Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ

Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ

ಬರಹ

ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಜನಪ್ರಿಯ, ಸೃಜನಶೀಲ ನಿರ್ದೇಶಕ ಟಿ ಎನ್ ಸೀತಾರಾಂರವರ ಸಂದರ್ಶನ. ರಂಗಭೂಮಿ ಹಿನ್ನೆಲೆಯಿಂದ ಬಂದ ಸ್ಪಷ್ಟ ರಾಜಕೀಯ ನಿಲುವುಗಳನ್ನು ಹೊಂದಿರುವ ಸೀತಾರಾಂ ಒಂದು ಸುಖೀ ಸಮಾಜದ ಕನಸನ್ನು ಹೊತ್ತವರು. ಅವರ ಈ ಆದರ್ಶವೇ ಅವರ ಕೃತಿಗಳ ಸಾಮಾಜಿಕ ಕಾಳಜಿಗಳ ಪ್ರೇರಣೆ. ರಂಗಭೂಮಿಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದ ಅವರು ಮಾಯಾಮೃಗ, ಮನ್ವಂತರಗಳಂಥ ಯಶಸ್ವೀ ಧಾರಾವಾಹಿಗಳಲ್ಲಿ ಕಿರುತೆರೆಗೂ ಸೀತಾರಾಂ ಶೈಲಿಯನ್ನು ಪರಿಚಿಯಿಸಿದರು. ಗಂಭೀರ ರಂಗಪ್ರಯೋಗಗಳಲ್ಲಿ ತೊಡಗಿಕೊಂಡವರು ಜನಪ್ರಿಯ ಮಾಧ್ಯಮಗಳನ್ನು ಕೈಗೆತ್ತಿಕೊಂಡಾಗ ಸೋಲುತ್ತಾರೆ ಎಂಬುದನ್ನೂ ಸೀತಾರಾಂ ಸುಳ್ಳು ಮಾಡಿದರು. ಮೊದಲೆರಡು ಧಾರಾವಾಹಿಗಳ ಯಶಸ್ಸಿನಾಚೆಗೆ ಅವರ `ಮುಕ್ತ' ಸಾಗಿದೆ. ಮೆಗಾ ಧಾರಾವಾಹಿಗಳ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಅವರು ಇತ್ತೀಚೆಗೆ ಎರಡು ಚಲನಚಿತ್ರಗಳನ್ನು ಪ್ರಕಟಿಸಿದ್ದಾರೆ. ಈ‌ ಸಮಯದಲ್ಲಿ ಸಂಪದದ ಕೆಲ ಪ್ರಮುಖ ಸದಸ್ಯರು ಸೀತಾರಾಂರವರ ಸಂದರ್ಶನ ಮಾಡಬೇಕು ಎಂದು ಬಹಳ ಹಿಂದೆಯೇ ಆಲೋಚಿಸಿದ್ದರು, ಆದರೆ ಸಾಧ್ಯವಾಗಿದ್ದು ಹಲವು ತಿಂಗಳುಗಳ ನಂತರವೇ.

 

ಪ್ರತೀ ಬಾರಿಯೂ ಸಂದರ್ಶನ ನಡೆಸಲು ಹೋಗುವವರಷ್ಟೇ ಪ್ರಶ್ನೆಗಳನ್ನು ಸಿದ್ಧ ಪಡಿಸಿಕೊಂಡು ಕೇಳುತ್ತಿದ್ದರು. ಈ ಬಾರಿ ಸಂಪದ ಬಳಗದ ಸದಸ್ಯರಿಂದ ಪ್ರಶ್ನೆಗಳನ್ನು ಆಹ್ವಾನಿಸಿ ಅವುಗಳಿಗೂ ಉತ್ತರ ಪಡೆಯಲು ಪ್ರಯತ್ನಿಸಿದ್ದೇವೆ. ಸಮಯದ ಅಭಾವ ಮುಂತಾದ ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಆದರೆ ನಮ್ಮ ಮಿತಿಯೊಳಗೆ ಒಳ್ಳೆಯದನ್ನು ನೀಡುವ ನಮ್ಮ ಪ್ರಯತ್ನ ವಿಫಲವಾಗಿಲ್ಲ ಎನಿಸುತ್ತಿದೆ. ಇದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ನೀವೇ ತಿಳಿಸಬೇಕು.

> ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ (೧೯ MB). ಸಂದರ್ಶನದ ದಿನ ತೆಗೆದ ಕೆಲವು ಫೋಟೋಗಳು:

ಟಿ ಎನ್ ಸೀತಾರಾಂರವರ ಮನೆ ಹುಡುಕುವುದರಲ್ಲಿ ಬ್ಯುಸಿ ಟಿ ಎನ್ ಸೀತಾರಾಂT N Seetharam