ಗೆಳತಿ, ತವರಿಗೆ ಹೋದಾಗ....
ಬರಹ
ಬರಿದಾದ ಕೆರೆಯೊಡಲು
ಅಂತಾಯಿತೆ ಈ ಮನವು
ಜೀವನದಿ ಚಿಲುಮೆಗಳು
ಬತ್ತಿಹೋದಂತಾಯಿತೇ ಜೀವನವು.......
ನೀ ಕಾಣದಿರುವಾ ದಿನವು
ಮನಸು ಕನಸಾ ಗೂಡುಗಳು
ಕನಸ ಅಲೆಯಲಿ ಮೈಮರೆತು
ಕಳೆದೆ ನಿದ್ದೆಬಾರದ ಇರುಳು.......
ಬಣ್ಣ ಬಣ್ಣದ ಈ ಲೋಕವು
ಕಪ್ಪು ಬಿಳುಪಿನ ಚಿತ್ರಗಳು
ನೀನಿರದೆ ಗೆಳತಿ, ತೋರಿಸು
ಬಂದು ಸುಂದರ ಕಾಮನಬಿಲ್ಲು.......
ನಿನ್ನ ಮಧುರ ಆ ನೆನಪು
ಸುಳಿದಾಡಿ ಇಣುಕಿ ಕೆಣಕುತಿರಲು
ಏಕಾಂತವು ಅಣಕಿಸಿ ನಗಲು
ಬಂದು ಪ್ರೇಮದಿ, ನನ್ನ ಸಲಹು......
ಮನಸ್ಸೆಂಬ ಹೂ ಬಳ್ಳಿಯು
ಮೈ ತುಂಬಿ ಚಿಗುರೊಡೆದು
ಪ್ರೀತಿ ಹೂ ಅರಳುವ ಸಮಯವು
ದೂರವಿರದೆ, ಪೋಷಿಸು ನೀರೆರೆದು.....