ಗೂಗಲ್ ಅನುವಾದಕ... ಅವಾಂತರ

ಗೂಗಲ್ ಅನುವಾದಕ... ಅವಾಂತರ

ಬರಹ

ಇವತ್ತು ಅಂದ್ರೆ 07/10/2008 ನಮ್ಮ ದೇಶದ ಕ್ರಿಕೆಟ್ ಟೀಮಿನ ಹಳೆ ತಲೆಯಾದ ಗಂಗೂಲಿಯವರು ತುಂಬಾ ಬೇಸರದಿಂದ, ಇನ್ನೆರೆಡು ದಿನಗಳಲ್ಲಿ ಆರಂಭವಾಗುವ ಆಸೀಸ್ ಜೊತೆಗಿನ ಟೆಸ್ಟ್ ಸರಣಿ ಮುಗಿದ ನಂತರ ನಿವೃತ್ತಿ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ..

ಅದರೆಡೆಗೆ ಮತ್ತು ಅವರೆಡೆಗೆ ನಮ್ಮ ಅನುಕಂಪಬರಿತ ಕಳಕಳಿ ಇದೆ..

ಅದು ಅತ್ಲಾಗಿರಲಿ..
ಈಗ ವಿಷಯಕ್ಕೆ ಬರೋಣ..
ಹೀಗೆ ವೆಬ್ ಜಾಲಾಡುತ್ತಿರುವಾಗ www.thatshindi.com ಸೈಟ್ ಅನ್ನ ಕ್ಲಿಕ್ಕಿಸಿದೆ.. ಅದು ಹಿಂದಿಯಲ್ಲಿತ್ತು.. ಒಕೆ.
ಎಲ್ಲೋ ಗೂಗಲ್ ನವರ ಅನುವಾದಕ (Translator) ಅಂತರ್ಜಾಲ ಉಪಕರಣದ ಬಗ್ಗೆ ಕೇಳಿದ್ದೆ. ನೋಡೋಣ ಅಂತ ಅದರ ವಿಳಾಸ ಕ್ಲಿಕ್ಕಿಸಿದೆ..
ಮುಂದೆ ನಡೆದದ್ದು ನೋಡಿದ್ದು.. ನಗಬೇಕೋ ಅಳಬೇಕೋ ಎಂಬ ಗೊಂದಲಕ್ಕೆ ಸಿಲುಕಿಸಿತು..!
ವಿಷಯ ಏನಪ್ಪಾ ಅಂದ್ರೆ www.thatshindi.com ನಲ್ಲಿ ಗಂಗೂಲಿಯವರ ನಿವೃತ್ತಿ ಘೋಷಣೆಯ ಸುದ್ದಿ ಇತ್ತು ಅದೂ ಹಿಂದಿಯಲ್ಲಿ..
ಅದರ ಹಣೆಬರಹ ಹೀಗಿತ್ತು..: सीरीज के बाद अलविदा कहेंगे दादा
ಗೂಗಲ್ ನ ಅನುವಾದಕದಲ್ಲಿ (ಹಿಂದಿಯಿಂದ ಆಂಗ್ಲಕ್ಕೆ) ಅದು ಹೀಗೆ ಮೂಡಿತು:After the series will say goodbye grandfather

ಅದರ ಚಿತ್ರವನ್ನ upload ಮಾಡಿದ್ದೇನೆ ಒಮ್ಮೆ ವೀಕ್ಷಿಸಿ.
ತಪ್ಪಾಗುತ್ತೆ.. ಮಾನವನ ಸಹಜ ಗುಣ.. ಇನ್ನು ಅವನ ಆವಿಷ್ಕಾರದ ಮತ್ತೊಂದು ಅವತಾರ ಈ ತಂತ್ರಾಂಶ.
ಅದರಲ್ಲೂ ತಪ್ಪಾಗಿದೆ.. ಆದರೆ ಅದು ಅಭಾಸಕ್ಕೆ.. ಅವಾಂತರಕ್ಕೆ ಎಡೆಮಾಡಿಕೊಡಬಾರದು..

ಇದಷ್ಟೆ ಅಲ್ಲ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ ಮೈಸೂರು ದಸರಾದ ಅಧಿಕೃತ ವೆಬ್ ಜಾಲ www.mysoredasara2008.com ನ ಮೂಲ ಭಾಷೆಯಾಗಿ ಇಂಗ್ಲಿಷ ಉಪಯೋಗಿಸಲಾಗಿದೆ. ಅದರ ಕನ್ನಡ ಆವೃತ್ತಿಯನ್ನು ಒಮ್ಮೆ ನೋಡಿ.. ಅಲ್ಲಿ ಇನ್ನು ಎಷ್ಟೊಂದ್ ತಪ್ಪುಗಳಿವೆ ಅಂತಾ ಗಮನಿಸಿ..
ಪ್ರಕಟಿಸುವ ಮುನ್ನ ನೋಡಿ ತಿದ್ದಲು ಪುರುಸೊತ್ತಿಲ್ಲವೇ ಸರ್ಕಾರಿ ನೌಕರರಿಗೆ.. ಅಥವಾ ಸರ್ಕಾರಕ್ಕೆ...!! ಏನಂತೀರಿ..?