ಅಡಿಗ ಮತ್ತೆ ಪ್ರಶಸ್ತಿ
ಅರವಿಂದ ಅಡಿಗರಿಗೆ ಬ್ರೂಕರ್ ಪ್ರಶಸ್ತಿ ಸಿಕ್ಕಿದ ಸುದ್ದಿ - ನಮ್ಮ ಮನೆಯ ಹುಡುಗನಿಗೆ ಸಿಕ್ಕಿದಷ್ಟು ಖುಷಿಯಾಯಿತು. ಭಲೇ, ಅಡಿಗರೇ, ನಿಮಗೆ ಅಭಿನಂದನೆಗಳು. ನೆನಪು ಹಿಂದಕ್ಕೆ ನೆಗೆಯಿತು- ಎಂಬತ್ತರ ದಶಕದಲ್ಲಿ ಅಡಿಗರ ಅಣ್ಣ ನಂತರ ಈ ತಮ್ಮ SSLC ಯಲ್ಲಿ ರಾಜ್ಯಕ್ಕೆ ಪ್ರಥಮರಾಗಿ ಗಮನ ಸೆಳೆದದ್ದು ಇನ್ನೂ ಹಸಿರಾಗಿದೆ. ಅಡಿಗರ ತಂದೆ ಡಾ.ಮಾಧವ ಅಡಿಗ ನನ್ನ ತಂದೆಗೆ ಪ್ರಾಸ್ಟೇಟ್ ಶಸ್ತ್ರ ಚಿಕಿತ್ಸೆ ಯನ್ನು ಫಾದರ್ಮುಲ್ಲರ್ ಆಸ್ಪತ್ರೆಯಲ್ಲಿ ಮಾಡಿದ್ದು ನೆನಪಾಗುತ್ತದೆ. ಆ ಬಳಿಕ ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು; ತಂದೆ ಹೊಸ ವೈದ್ಯರನ್ನು ಹುಡುಕಬೇಕಾಯಿತು. ತಂದೆಯೊಡನೆ ಇಲ್ಲಿಂದ ಆಸ್ಟ್ರೇಲಿಯಾಕ್ಕೆ ತೆರಳಿದ ಕನ್ನಡ ತರುಣ ಪ್ರತಿಭೆ ಇದೀಗ ಸಾಹಿತ್ಯ ಲೋಕದ ಮೂಲಕ ಮತ್ತೆ ಬಂದಿದ್ದಾರೆ. ಪತ್ರಿಕೆಯಲ್ಲಿ ನಾನು ಓದಿದೆ ಇತ್ತೀಚೆಗೆ ಅಡಿಗರು ಮಂಗಳೂರಿಗೆ ಬಂದಾಗ ಅವರ ಶಿಕ್ಷಕಕರೊಬ್ಬರು ಉಪೇಕ್ಷೆಯಿಂದ ಹೇಳಿದರಂತೆ ಅಷ್ಟೆಲ್ಲ ಹುಷಾರಿದ್ದ ನೀನು ಡಾಕ್ಟರ್, ಎಂಜನೀಯರ್ ಆಗುವ ಬದಲಿಗೆ ಯಾಕೆ ಪತ್ರಕರ್ತನಾಗಿದ್ದಿ? ಈ ಹೇಳಿಕೆ ಎಲ್ಲವನ್ನು ಹೇಳುತ್ತದೆಂದು ನನಗನ್ನಿಸುತ್ತದೆ. ಇದು ಆ ಶಿಕ್ಷಕರ ತಪ್ಪಲ್ಲ. ನಮ್ಮ ಹೆಹ್ಚಿನವರು ಅದೇ ಹಾದಿಯಲ್ಲೇ ಆಲೋಚಿಸುತ್ತಿದ್ದಾರೆ. ಅಡಿಗ ಡಾಕ್ಟರ್ , ಎಂಜನೀಯರ್ ಹೊರತಾದದ್ದು ಇನ್ನೂ ಎಷ್ಟೋ ಇದೆ ಎಂದು ನಾವು ಯಾಕೆ ಆಲೋಚಿಸುವುದಿಲ್ಲ ಎನ್ನುವುದೇ ಭೌತವಿಜ್ಞಾನ ಅಧ್ಯಾಪಕನಾದ ನನಗೆ ಬಲು ಅಚ್ಚರಿಯಾಗುತ್ತದೆ. ಕಥೆ, ಕವನ, ಸಾಹಿತ್ಯ, ನಾಟಕ ಇವೆಲ್ಲವೂ ನಮಗೆ ನಮ್ಮ ಜೀವನದ ಆನಂದಕ್ಕೆ ಅತೀ ಅಗತ್ಯ. ಅಡಿಗರು ಅದನ್ನು ನಮಗೆ ತೋರಿಸಿಕೊಟಿದ್ದಾರೆ. ಎಷ್ಟು ಅಡಿಗರು ಮರೆಯಾಗಿರಬಹುದು ಎಲ್ಲರನ್ನು ವಿಜ್ಞಾನ ಆ ಮೂಲಕ ಎಂಜನೀಯರ್, ಡಾಕ್ಟರ್ ಸೃಷ್ಟಿಸಿ ಹಣದ ಥೈಲಿಯನ್ನು ಬಾಚುವ ಹುನ್ನಾರದಲ್ಲಿ. ಅಡಿಗರಿಂದಾದಾರೂ ಹೀಗೂ ಸಾಧ್ಯ ಎನ್ನುವ ಮನವರಿಕೆ - ಜ್ಜಾನೋದಯವಾಗಲಿ ಎಂಬ ಹಾರೈಕೆ. ಅಡಿಗರಿಗೆ ಮತ್ತೊಮ್ಮೆ ಅಭಿನಂದನೆಗಳು.
ಕಾದಂಬರಿ ಓದಿ ಮತ್ತೆ ಬರೆಯುತ್ತೇನೆ.
ರಾಧಾಕೃಷ್ಣ.