ಬರಾಕ್ ಒಬಾಮಗೆ ಐತಿಹಾಸಿಕ ವಿಜಯ
ಬರಹ
ಮೊಟ್ಟ ಮೊದಲ ಬಾರಿಗೆ ಅಮೇರಿಕಾ ಜನತೆ ಅಫ್ರಿಕನ್ ಅಮೇರಿಕನೊಬ್ಬರನ್ನ ತಮ್ಮ ಅಧ್ಯಕ್ಷರನ್ನಾಗಿ ಮಾಡಿ ಹೊಸ ಇತಿಹಾಸವನ್ನ ಬರೆದಿದ್ದಾರೆ.
ಬರಾಕ್ ಒಬಾಮ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನೀಡಿದ ಈ ಭಾಷಣ ಬಹಳಷ್ಟನ್ನ ಹೇಳತ್ತೆ.
ವರ್ಣ ಬೇಧ/ರೇಸಿಸಮ್ ನಿಂದ ಬೇಸತ್ತ ಅನೇಕ ಕರಿಯರು ಈ ಕ್ಷಣ ಆನಂದಭಾಷ್ಪ ಸುರಿಸಿದ್ದಾರೆ. "ನಾವೂ ಅದನ್ನ ಮಾಡಿ ತೋರಿಸಿ ಬಲ್ಲೆವು", "Yes we can" , "ಬದಲಾವಣೆಗಳು ಸಾಧ್ಯ" ಎಂದಿರುವ ಬರಾಕ್ ಒಬಾಮ ಯು.ಎಸ್ ಪ್ರಜೆಗಳ ಮತ್ತು ಪ್ರಪಂಚದ ನಿರೀಕ್ಷೆಗಳನ್ನ ಹೇಗೆ ನಿಭಾಯಿಸ್ತಾರೆ ಕಾದು ನೋಡಬೇಕಿದೆ.