ಗಾದೆಗಳು - ಗಂಡ-ಹೆಂಡತಿ ! (ಗಂಡಸು-ಹೆಂಗಸು- ಸಂಬಂಧಪಟ್ಟ ಗಾದೆಗಳು)
ಕಳೆದ ಬಾರಿ ಸುಮ್ಮನೆ ೧೦ ಗಾದೆಗಳನ್ನು ಬರೆದಿದ್ದೆ. ಈ ಸಾರಿ ಒಂದು ವಿಷಯವನ್ನಿಟ್ಟುಕೊಂಡು ಅದರ ಮೇಲೆ ಗೊತ್ತಿರುವ ಗಾದೆಗಳನ್ನು ಬರೆದರೆ ಇನ್ನೂ ಹೆಚ್ಚು ಮಜ ಸಿಗುತ್ತೆ ಅಂತ ನನ್ನ ಅನಿಸಿಕೆ. ನೀವೆಲ್ಲಾ ಏನಂತೀರಾ? ಅಂದಹಾಗೆ, ನನ್ನ ಗಾದೆಗಳು-ಅರಿವು ಲೇಖನಕ್ಕೆ ಪ್ರತಿಕ್ರಿಯಿಸಿದ ನಿಮಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು! ಕೆಳಗಿದೆ ಇನ್ನಷ್ಟು ಗಾದೆಗಳು!
೧. ಗಂಡ-ಹೆಂಡತಿ ಜಗಳ ಉಂಡು ಮಲಗೂವರೆಗೆ.
೨. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು.
೩. ಗಂಡಂಗಿಂತ ಹೆಂಡತಿ ಮಂಡೋದರಿ.
೪. ಹಳೇ ಚಪ್ಪಲಿ, ಹೊಸ ಹೆಂಡತಿ ಕಚ್ಚಲ್ಲ.
೫. ಹಳೇ ಗಂಡನ ಪಾದವೇ ಗತಿ.
೬. ಅಮ್ಮನವರು ಪಟ್ಟಕ್ಕೆ ಬರೋ ಹೊತ್ತಿಗೆ, ಅಯ್ಯನವರು ಚಟ್ಟಕ್ಕೆ ಏರಿದ್ರು.
೭. ಮದುವೆಯಾಗೋ ಬ್ರಾಹ್ಮಣ ಅಂದ್ರೇ, ನೀನೇ ನನ್ನ ಹೆಂಡತಿ ಅಂದನಂತೆ.
೮. ಗಂಡಸಿಗ್ಯಾಕೆ ಗೌರಿ ಚಿಂತೆ?
೯. ಇಷ್ಟು ಕಂಡ್ರೇ, ಕೃಷ್ಣಭಟ್ಟಂಗೆ ಮುಪ್ಪಿನಕಾಲಕ್ಕೆ ಮೂರು ಜನ ಹೆಂಡ್ರು.
೧೦. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು.
ಓದುಗರೇ, ನಿಮಗೆ ತಿಳಿದಿರುವ ( ಈ ವಿಷಯದಲ್ಲಿ) ಇನ್ನಷ್ಟು ಗಾದೆಗಳನ್ನು ಪಟ್ಟಿ ಮಾಡುವಿರಾ?