ಹಲ್ಮಿಡಿ ಶಾಸನ
ಇತಿಹಾಸಜ್ಞ ಎಂ ಎಚ್ ಕೃಷ್ಣ ಅವರು ಹಾಸನ ಜಿಲ್ಲೆಯಲ್ಲಿ ಸಂಶೋಧನಾ ಸಂಚಾರ ನಡೆಸಿದ್ದಾಗ ದನಗಳನ್ನು ಕಟ್ಟಿದ್ದ ಕಲ್ಲಿನ ಗೂಟವೊಂದು ಅವರ ಗಮನ ಸೆಳೆಯಿತು. ಅದು ವಿಶಿಷ್ಟ ಆಕಾರದಲ್ಲಿತ್ತು ಮಾತ್ರವಲ್ಲ ಅದರ ಮೇಲೆ ಅಕ್ಷರಗಳನ್ನು ಕೆತ್ತಲಾಗಿತ್ತು. ರೇಡಿಯೋಕಾರ್ಬನ್ ಡೇಟಿಂಗ್ ಮೂಲಕ ಆ ಕೆತ್ತನೆ ಕ್ರಿಸ್ತಶಕ ೪೫೦ರ ಸುಮಾರಿನದೆಂದು ತಿಳಿದುಬಂತು. ಅಕ್ಷರಗಳನ್ನು ಓದಿದಾಗ ಅದರಲ್ಲಿ ಪ್ರಸ್ತಾಪವಾಗಿದ್ದ ಕದಂಬ ಕಾಕುತ್ಸ್ಥವರ್ಮನ ಹೆಸರು ಸಹ ಈ ವಾದಕ್ಕೆ ಇಂಬುಗೊಟ್ಟಿತು.ಅದೇ ನಮ್ಮ ಪ್ರಸಿದ್ಧ ಹಲ್ಮಿಡಿ ಶಾಸನ.
ಆ ಶಾಸನವನ್ನು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಸರ್ಕಾರಿ ಪ್ರಾಚ್ಯವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಾಂಛನವಾಗಿ ಈ ಶಾಸನದ ಪ್ರತಿಕೃತಿಯನ್ನು ಅಳವಡಿಸಿಕೊಳ್ಳಲಾಗಿದೆ.
ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಕೆ ವಿ ನಾರಾಯಣರ ಲೇಖನಕ್ಕೆ ಪೂರಕವಾಗಿ ಈ ಶಾಸನದ ಪ್ರತಿಕೃತಿಯನ್ನು ಮುದ್ರಿಸಿದ್ದಾರೆ.
http://www.prajavaniepaper.com/pdf/2008/11/23/20081123h_001100002.jpg
ಶಾಸನದ ತಲೆಯ ಭಾಗದಲ್ಲಿರುವ ಚಕ್ರಾಕಾರದ ಸುತ್ತಲಿನ ಅಕ್ಷರಗಳು ಇಂತಿವೆ:
ಜಯತಿಶ್ರೀಪರಿಶ್ವಙ್ಗಶಾರ್‍ಙ್ಗವ್ಯಾನತಿರಚ್ಯುತಃದಾನವಾಕ್ಷ್ಣೋರ್ಯುಗಾನ್ತಾಗ್ನಿಶಿಷ್ಟಾನಾನ್ತು ಸುದರ್ಶನಃ
ಬಹುಶಃ ಇದರರ್ಥವನ್ನು ನಮ್ಮ ಹಂಸಾನಂದಿಗಳು ಚೆನ್ನಾಗಿ ವಿವರಿಸಬಲ್ಲರೇನೋ?
ಪ್ರೀತಿಯಿಂದ
ಸಿ ಮರಿಜೋಸೆಫ್