ಮನವಿ

ಮನವಿ

ಬರಹ

ಒಪ್ಪಿಕೊ ನನ್ನ ಗೆಳತಿ
ಈ ಮನಕೆ ನೀನೆ ಒಡತಿ
ನಿನಗಾಗೆ ಕಾಯುತಿಹೆ ನಾ ಬಯಸಿ ಬಯಸಿ...........

ನನ್ನೀ ಹೃದಯ ವೀಣೆಯ ಮೀಟಿ
ನೀ ನುಡಿಸುವಾ ಪರಿಯ ರೀತಿ
ಮನದ ಗೂಡಲಿ, ಪ್ರೀತಿ
ಅನುರಾಗದ ರಾಗ ಹೊಮ್ಮಿ,
ಒಲವಿನಾಸರೆ ಬಯಸಿದೆ ಮನವು
ಒಪ್ಪಿಕೊ ನನ್ನ ಗೆಳತಿ

ಹುಣ್ಣಿಮೆ ಚಂದ್ರನ ತೆರದಿ
ನಿನ್ನ ರೂಪವು ಮನದಿ ಮೊಡಿ
ಮನದ ಕಡಲಾಳದಲಿ
ಪ್ರೇಮದಲೆಯು ಹೊಮ್ಮಿ
ಒಲವಿನಾಸರೆ ಬಯಸಿದೆ ಮನವು
ಒಪ್ಪಿಕೊ ನನ್ನ ಗೆಳತಿ

ನನ್ನೀ ಎದೆಯ ಬಯಲಿನಲ್ಲಿ
ವಿರಹದಾ ಸುಡುಬಿಸಿಲಿನಲ್ಲಿ
ನೊಂದು ಬೆಂದೆನು ಇಲ್ಲಿ
ತಂಪಿಸು ಪ್ರೀತಿ ಪನ್ನೀರ ಚೆಲ್ಲಿ
ತುಡಿಯುತಿದೆ ನನ್ಮನವು ಗೆಳತಿ
ಒಪ್ಪಿಕೊ ಎನ್ನ ಮನವಿ