ಭಯೋತ್ಪಾದನೆಯ ನೆರಳಿನಲ್ಲಿ ಮುಂಬೈ - ಯಾರೀ ಪಾತಕರು?
ಭಾರತದ ಆರ್ಥಿಕತೆಯ ಹೃದಯ ಭಾಗ, ಷೇರು ಪೇಟೆಯ ನಗರ ಈಗ ಭಯೋತ್ಪಾದನೆಯ ನೆರಳಿನಲ್ಲಿ. ನೆನ್ನೆ ರಾತ್ರಿ ಮನೆ ಸೇರುವಷ್ಟರಲ್ಲಿ ನಡುರಾತ್ರಿ ೧೨:೩೦ ಆಗಿತ್ತು. ನಿದ್ದೆ ಮಾತ್ರ ಹತ್ತುತ್ತಿರಲಿಲ್ಲ. ಸಾಮಾನ್ಯವಾಗಿ ಡಿಸ್ಕವರಿ ಇಲ್ಲ ಇತರೆ ಮನರಂಜನೆಯ ಚಾನೆಲ್ ಗಳನ್ನ ತಡವಿ ನಿದ್ದೆ ಮಾಡ್ತಿದ್ದವನಿಗೆ ನೆನ್ನೆ ಯಾಕೋ ವಾರ್ತೆಗಳನ್ನ ನೋಡುವ ತವಕ. ಟೈಮ್ಸ್ ನೌ, ಎನ್.ಡಿ.ಟಿ.ವಿ! ಓ! ನೋಡಿದೊಡನೆ ಇದ್ದ ಸ್ವಲ್ಪ ನಿದ್ರೆಯೂ ಮಾಯ.
ಮುಂಬೈ ಮಹಾನಗರಿಯ ಐಷ್ಯಾರಾಮಿ ಹೋಟೆಲುಗಳನ್ನ ಡೆಕ್ಕನ್ ಮುಜಾಹಿದೀನ್ ಎಂದು ಹೇಳಿಕೊಂಡಿರುವ (ಇನ್ನೂ ಇದನ್ನ ಮೂಲಗಳು ಸ್ಪಷ್ಟ ಪಡಿಸಬೇಕಿದೆ) ಭಯೋತ್ಪಾದಕರು ಹೊಕ್ಕು ಅನೇಕ ಪಾಶ್ಚಾತ್ಯರನ್ನ ಸೆರೆಹಿಡಿದು, ಹೋಟೇಲುಗಳಿಗೆ ಬೆಂಕಿ, ಬಾಂಬು, ಬುಲೆಟ್ಟುಗಳ ಮಳೆಸುರಿದು, ಸೇನೆ, ಪೋಲೀಸರ ಜೊತೆ ಕಣ್ಣು ಮುಚ್ಚಾಲೆಯಾಟವನ್ನಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಭಯೋತ್ಪಾದನೆ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್ಕೌಂಟರ್ ಸ್ಪೆಷಲಿಷ್ಟ್ ವಿಜಯ್ ಸಲಾಕಾರ್ ಉಗ್ರರ ಗುಂಡಿಗೆ ಬಲಿಯಾಗಿರೋದು ಅತ್ಯಂತ ದುಖ:ದ ಸಂಗತಿ.
ಓಬೇರಾಯ್, ಟ್ರೈಡೆಂಟ್, ತಾಜ್, ಗೇಟ್ ವೇ ಆಫ್ ಇಂಡಿಯಾ, ಡಾಕ್ ಯಾರ್ಡ್, ಸಿ.ಎಸ್.ಟಿ ರೈಲ್ವೇ ಸ್ಟೇಷನ್ ಇತ್ಯಾದಿ ಈ ಕರಿ ನೆರಳಲ್ಲಿರುವ ಪ್ರದೇಶಗಳು.
ಯಾಕಿದೆಲ್ಲಾ? ಯಾರಿಗೋಸ್ಕರ?