ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವಾದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ.

ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವಾದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ.

ಬರಹ

 

ನಾನು ಒಂದು ಬರಹ ಮುಂಬೈ ಘಟನೆ  ಕುರಿತೇ ಬರೆಯಬೇಕೆಂದಿದ್ದೆ.

ಮಾಧ್ಯಮಗಳ ಅದರಲ್ಲೂ ಟೀವಿಯವರ ವರ್ತನೆ ಸ್ವಲ್ಪವೂ ಯಾರಿಗೂ ಹಿಡಿಸಿಲ್ಲ. ಅವರು ಸೇನೆಯ, ಯೋಧರ ಈ ಕಾರ್ಯಾಚರಣೆಯನ್ನ ನೇರ ಪ್ರಸಾರ ಪ್ರಸಾರಿಸಿದ್ದು. ಅದೇ ಉಗ್ರರಿಗೆ ನೆರವಾಗಿದ್ದು ರಹಸ್ಯವೇನಲ್ಲ. ಇಂತಾ ಒಂದು ಕ್ಲಿಷ್ಟಕರ ಸನ್ನಿವೇಶ(ಪ್ರಾಣಕ್ಕೆ ಎರವಾಗುವಂತ ಸನ್ನಿವೇಶ) ವನ್ನ ಮಾದ್ಯಮಗಳು ಯಾವುದೊ ಸಿನಿಮಾ ಚಿತ್ರೀಕರನವೆಮ್ಬಂತೆ ಬಿಂಬಿಸಿದ್ದು ಸರ್ವತ ಸರಿಯಲ್ಲ.

ನಾವು ಈ ದಿಶೆಯಲ್ಲಿ ೧೧/೦೯ ರಂದು ಅಮೆರಿಕಾದಲ್ಲಿ ಆದ ವರ್ಲ್ಡ್ trade ಸೆಂಟರ್ ದುರ್ಘಟನೆಯಲ್ಲಿ ಅಲ್ಲಿಯ ಮಾದ್ಯಮಗಳು ಎಷ್ಟು ವಾಸ್ತವಿಕವಾಗಿ,ಜವಾಬ್ದಾರಿಯಿಂದ,ವರ್ತಿಸಿದವೆಂದು ನಮಗೆಲ್ಲ ಗೊತ್ತು. ಇದುವರೆಗೂ ನಮ್ಮ ದೇಶದಲ್ಲಿ ಈ ತರದ ದುರ್ಘಟನೆ ನಡೆದಿರಲಿಲ್ಲ ಹೀಗಾಗಿ ಈ ದೃಶ್ಯ ಮಾದ್ಯಮದವರು ಹೇಗೆ ವರ್ತಿಸಬೇಕೆಂದು ಗೊತ್ತಿರಲಿಲ್ಲ ಅನ್ಸುತ್ತೆ ಇನ್ನು ಮುಂದೆ ಆದರೂ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಲಿ ಎನ್ನುವುದೇ ನಮ್ಮ ಆಗ್ರಹ. ಎಲ್ಲಕಿಂತ ಮುಖ್ಯವಾಗಿ ನಮ್ಮ ಸೇನೆ,ಯೋಧರು ,NSG commandoಗಳ ಕಾರ್ಯಾಚರಣೆ ಮೆಚತಕ್ಕದ್ದೆ , ನಾವು ಅವರನ್ನ ಖಂಡಿತ ಮರೆಯೋಲ್ಲ. ಹುತಾತ್ಮರ ದುಃಖ ಅರುವ ಮುನ್ನವೇ ನಮ್ಮ ಹೇಸಿಗೆ ಹುಟ್ಟಿಸುವ ರಾಜಕಾರಣಿಗಳು ತಮ್ಮ ಗೋಸುಂಬೆ ಮುಖ/ ಮನಸು ತೋರಿಸಲು ಆರಂಬಿಸಿದ್ದಾರೆ.

 

ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆಲ್ಲ ಜನತೆ ಸರಿಯಾದ ಪಾಠ ಕಲಿಸಬೇಕು. ಪ್ರತಿ ಸರಿ ಈ ತರಹದ .ಘಟನೆ ಅದಗಳೆಲ್ಲ ನಮ್ಮ ಘನ! ಗೃಹ ಸಚಿವ ಶವ?ರಾಜ ಪಟೇಲರು ಈ ದೇಶದಲ್ಲಿ ಇದೆಲ್ಲ ಸಾಮನ್ಯ ,ಜನತೆ ಅವರ ರಕ್ಷಣೆ ಅವರೇ ಮಾಡಬೇಕು,ಎಂಬಂತೆ ಮಾತನಾಡಿ ಅವರ ಹುದ್ದೆಗೆ ಅವಮಾನ ಮಾಡಿದರು. ಅದಕ್ಕಿಂತ ಹೆಚ್ಹಾಗಿ ಅವರು ಮಾಡಿದ ಮೊದಲ ಕೆಲಸ POTA ರದೂ ಮಾಡಿ ಉಗ್ರರಿಗೆ ಅನುಕೂಲ ಮಾಡಿಕೊಟ್ಟದ್ದು, ಈ ದೇಶಕ್ಕಾಗಿ ಹೋರಾಡಿದ ಪುರಾತನ, ಗೌರವ್ವನಿಯ ಪಕ್ಷವೊಂದರಿಂದ ಜನ ಇದನ್ನು ನಿರೀಕ್ಷಿಸಿರಲಿಲ್ಲ . ಅವರು(ಶವರಾಜ ಪಟೇಲರು) ಪ್ರತಿ ಸಾರಿ ಘತೆನಗಳು ನಡೆದಾಗಲೂ ಒಂದೇ ಉಚ್ಹಾರ ಅದು ಯಾವುದೇ ಕಾರಣಕ್ಕೂ POTA ಮರು ಜಾರಿ ಮಾಡುವುದಿಲ್ಲ , ಈ ಘಟನೆ ಎಲ್ಲ ಖಂಡಿಸಬೇಕು, ಜನ ಧೈರ್ಯದಿಂದ ಇರಬೇಕು ಇತ್ತ್ಯಾದಿ ಹಳಸಲು ಹೇಳಿಕೆಗಳು. ಇದಕ್ಕಿಂತ ಧೌರ್ಭಗ್ಯವೆಂದರೆ ನಮ್ಮ ದೇಶದ ಹೆಮ್ಮೆಯ ವೀರ ಅದಿಕಾರಿಗಳನ್ನ ನಾವು ಕಳೆದುಕೊಂಡದ್ದು, ಅವರನ್ನ ಅವರ ತರಹದವರನ್ನ ನಾವು ನೋಡುವುದು ?

ಉಗ್ರರ ಗುರಿಯೂ ಅದೇ(ವೀರ ಅಧಿಕಾರಿಗಳ) ಹತ್ಯೆ, ಆಗಿತ್ತು ಎಂದಾಗ ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಹೇಳದಸ್ತು ಹೇಸಿಗೆಯಗುತ್ತೆ. ಈ ಸಂದರ್ಭದಲ್ಲಿ ಪಾಕಿಸ್ತಾನ ,ಅಮೆರಿಕ,RUSSIYA, FRANCE, CHINA ವರ್ತಿಸಿದ ರೀತಿ ನಮಗೆ ಎಚ್ಹರಿಕೆ ಘಂಟೆ ಆಗಬೇಕು. ಇದೆ ಘಟನೆ ಅಲ್ಲೇ ಆಗಿದ್ದರೆ ಆಗ ಅವರು ವರ್ತಿಸುವ ರೀತಿಯೇ ಬೇರೆ ಆಗಿರುತ್ತಿತ್ತು. ಈ ಸಂದರ್ಭದಲ್ಲಿ ಮುಂಬೈ ಜನತೆ ವರ್ತಿಸಿದ ರೀತಿ ನಮ್ಮ ಬೆಂಗಳೂರಿಗೆ ಮಾದರಿ ಆಗಬೇಕು. ಯಾಕೆಂದರೆ ಕೆಲವೇ ತಿಂಗಳ ಹಿಂದೆ ಫೋರಮ್ ಮಾಲ್ ಪಕ್ಕ ಲೈವ್ ಬಾಂಬ್ ಸಿಕ್ಕಾಗ ಜನ ಅದು ಏನೋ ಆಟಿಕೆ ವಸ್ತು ಎಂಬಂತೆ(ಆಗ ಬಾಂಬ್ ನಿಷ್ಕ್ರಿಯ ತಜ್ಞರು ,ನಿಷ್ಕ್ರಿಯ ಮಾಡಲು ಹರ ಸಾಹಸ ಪಡುತ್ತಿದ್ದರು) ನೋಡುತ್ತಿದ್ದರು. ಕೆಲವರಂತೂ ಚಿತ್ರ ನಿರ್ದೇಶಕ/ ಛಾಯಾಗ್ರಹಕರಂತೆ ಪೋಸ್ ಕೊಡುತ್ತಾ ಕ್ಯಾಮೆರಾ ಮೊಬೈಲಿನಲ್ಲಿ ಸೆರೆ ಹಿಡಿಯುತ್ತಿದ್ದರು. ಆಗ ಆ ಬಾಂಬ್ ಏನಾದರೂ ಸಿಡಿದಿದ್ದರೆ? ಊಹಿಸಿಕೊಳ್ಳಿ............

 

ಇಂತಾ ಘಟನೆ ಮುಂದೆಯೂ ನಮ್ಮ ಬೆಂಗಳೂರಲ್ಲಿ ನಡೆಯಬಹುದು. ಆಗ ನಾವು ಇದನ್ನೆಲ್ಲಾ ಎದುರಿಸಲು ಹೇಗೆ ಸನ್ನದ್ದರಾಗಿದ್ದೇವೆ?

ನಿಮಗೆಲ್ಲ ಗೊತ್ತು ನಮ್ಮ ಬೆಂಗಳೂರು ಎಷ್ಟು ರಕ್ಷಣೆಗೆ ಒಳಪಟ್ಟಿದೆ ಎಂದು!. ಒಂದು ಸಾರಿ ಮಜೆಸ್ಟಿಕ್(ಇಲ್ಲಿ ದಿನಾಲೂ ೪ ರಿಂದ ೫ ಲಕ್ಷ ಜನ ಪರ ಊರಿಂದ, ಊರಿಗೆ ಹೋಗಲು ಬರುತ್ತಾರೆ) ಗೆ ಬಂದು ನೋಡಿ ಇಲ್ಲಿ ಸೆಕ್ಯೂರಿಟಿ ಅನ್ನುವುದೇ ಇಲ್ಲ. ಅಲ್ಲಿ ನಗರ ಸಾರಿಗೆ ನಿಲ್ದಾಣ, ಹೊರ ರಾಜ್ಯ, ಕರ್ನಾಟಕದಾದ್ಯಂತ ಓಡಾಡುವ ಕೆಂಪೇಗೌಡ ನಿಲ್ದಾಣ. ರೈಲ್ವೆ ನಿಲ್ದಾಣ ಇದೆ. ಇನ್ನು ಎ ಜಗವಂತೂ ಯಾವಾಗಲೂ ಗಿಜಿಗಿಡುತ್ತಿರುತ್ತದೆ, ಇಂತಾ ಒಂದು ಸ್ಥಳದಲ್ಲಿ ಮುಂಬೈ ತರಹದ(ಉಗ್ರಗಾಮಿಗಳು ಹುಚ್ಹು ಹಿಡಿದವರಂತೆ ಜನರ ಮೇಲೆ ಮನ ಬಂದಂತೆ ಗುಂಡು ಹಾರಿಸಿದರೆ?)ಘಟನೆ ನಡೆದರೆ ಊಹಿಸಲು ಕಷ್ಟ. ಈ ಸಂದರ್ಭದಲ್ಲಿ ನಮ್ಮ ಆಸ್ಪತ್ರೆಗಳು ಸಂನದ್ದವಗಿವೆಯೇ?

ಎಲ್ಲ ಆಸ್ಪತ್ರೆಗಳು ಇಂದಿನ ಪತ್ರಿಕೆಯಲ್ಲಿ ಸರ್ವ ರೀತಿಯಲ್ಲಿ ಸನ್ನದ್ದ ಅನ್ನುತ್ತಿವೆ. ಆಗೇ ಇದೆ ಅಂದುಕೊಳ್ಳೋಣ. ಈ ಸಂದರ್ಭದಲ್ಲಿ ಸರಕಾರ ಕೇವಲ ತನ್ನ ಶಾಸಕ, ಮುಖ್ಯಮಂತ್ರಿ,ಸಚ್ವರಿಗೆ ರಕ್ಷಣೆ ಕೊಟ್ಟರೆ ಸಾಲದು, ಎಲ್ಲ ಸಾಮಾನ್ಯ ಜನರೂ ನಾವು ಸುರಕ್ಷಿತವಾಗಿದ್ದೇವೆ ಅನ್ನುವ ಭರವಸೆ ಮೂಡಿಸಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು. ಇನ್ನು ನಮ್ಮ ಪೊಲೀಸರ ಸ್ತಿತಿಯಂಟು ಘೋರವಾಗಿದೆ. ಅವರಿಗೆ ಒಂದು ಒಳ್ಳೆ ಬುಲೆಟ್ ಪ್ರೂಫ್ ಜಾಕೆಟ್,ವಾಹನ, ಏನೂ ಇಲ್ಲ(ಇದು ಸ್ವತಹ ಪೋಲಿಸ್ ಮಹಾ ನಿರ್ದೇಶಕರೇ ಹೇಳಿದ ಕಟು ಸತ್ಯ) ಕೊತ್ತಿರುವುದೆಲ್ಲ ಓಬಿರಾಯನ ಕಾಲದ ಆಟಿಕೆ ಸಾಮಾನುಗಳ ರೀತಿಯ ಆಯುಧಗಳು, ಅವರು(ಪೊಲೀಸರು) ಇದನ್ನೆಲ್ಲಾ ಕೇಳಿದಾಗಲೆಲ್ಲ ಸರಕಾರ ದಿವ್ಯ ಮೌನ ವಹಿಸಿ ಅಲಕ್ಷ್ಯ ಮಾಡಿದ್ದೆ ಉಂಟು. ಈಗಲಾದರೂ ಸರಕಾರ ಕಣ್ಣು ತೆರೆದು ಹಣ ಬಿಡಿಗಡೆ ನಾಡಿ ಪೋಲಿಸ್ ವ್ಯವಸ್ತೆಯನ್ನ, ಮುಖ್ಯವಾಗಿ ಬೇಹುಗಾರಿಕೆ , ಬಳಪದಿಸಬೇಕಿದೆ.

 

ಮುಂಬೈ ಘಟನೆ ನಮಗೆಲ್ಲ(ಬೆಂಗಳೂರಿಗೆ ಮುಖ್ಯವಾಗಿ) ಪಾಠವಾಗಬೇಕು ನಾಗರೀಕರೆಲ್ಲ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ,ವಸ್ತುಗಳ ಬಗ್ಗೆ ತುಂಬಾ ಜಾಗರೂಕತೆಯಿಂದ ಇರಬೇಕು. ನಮ ಅಕ್ಕ ಪಕ್ಕದ ವ್ಯಕ್ತಿಗಳೇ ನಮ್ಮ ಶತ್ರುಗಳಗುವುದು ಈಗ ಹೊಸದಾಗಿ ಆರಂಭವಾದ ಭಯೋತ್ಪಾದನೆ.(ಮನೆಗೆ, ಅಪಾರ್ಟ್ಮೆಂಟ್ಗೆ, ಪಯಿಂಗ್ ಗೆಸ್ಟ್ ಬಂದು ಭಯೋತಪಾದನೆ ಮಾಡುವುದು) ಇದನ್ನಲ್ಲ ನಾವು ಬಗ್ಗು ಬಡಿಯಬೇಕು,. ಈ ದಿಸೆಯಲ್ಲಿ ಸರಕಾರ ಪ್ರತಿ ವಾರ್ಡ್ ಮಟ್ಟದಲ್ಲಿ ಜನರನ್ನ ಸೇರಿಸಿ ಈ ತರಹದ ಘಟನೆ ನಡೆದಾಗ ವರ್ತಿಸಬೇಕದ ರೀತಿ ನೀತಿ ಹೇಳಿಕೊಟ್ಟು ಜನರನ್ನ ಸಂನದ್ಧಗೊಲಿಸಬೇಕು(ಇದು ಹಣಕಾಸು ದೃಷ್ಟಿಯಿಂದ ತುಂಬಾ ಕಷ್ಟದ ಕೆಲಸ, ಆದರೆ ನಮ್ಮ ರಾಜಕಾರಣಿಗಳು ,ಅದಿಕಾರಿಗಳು ಎಷ್ಟು ಕಾಸು ಕೊಳ್ಳೆ ಹೊಡೆಯುತ್ತಿದ್ದಾರೆ) ಈಗಾಗಲೇ ನಮ್ಮ ಗೃಹ ರಕ್ಷಕ ದಳ ಪೋಲೀಸರ ಜೊತೆಗೆ ಈ ತರಹದ mock ಡ್ರಿಲ್ ಮಾಡುತ್ತಿದ್ದಾರೆ.....

 

ಈ ಮೇಲಿನ ನನ್ನ ಅಭಿಪ್ರಾಯ ನಿಮ್ಮ/ಈ ದೇಶದ ಎಲ್ಲ ಜನರ ಅಭಿಪ್ರಾಯವೇ ಆಗಿದೆ ಅಂತ ನನ್ನ ಭಾವನೆ. ಈ ತರಹದ (ಅನುಮಾನಾಸ್ಪದ ವ್ಯಕ್ತಿ/ವಸ್ತು/ ಭಯೋತ್ಪಾದನೆ ನಡೆಸುವ ಬಗ್ಗೆ ಮಾಹಿತಿ ಸಿಕ್ಕಾಗ ದಯಮಾಡಿ ಈ ಕೆಳಗಿನ ನಂಬರ್ಗಳಿಗೆ(ಉಚಿತ) ಕರೆ ಮಾಡಿ .

೧೦೦,

೧೦೧

೧೦೮(ambulance)

18004250(24/7/365days free line)

ಇದಲ್ಲದೆ ನಿಮ್ಮ ಹತ್ತಿರದ ಪೋಲಿಸ್ ಠಾಣೆಗೆ ತಿಳಿಸಿ, ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವಾದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .

 

ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ. ಉಗ್ರವಾದವನ್ನ/ಉಗ್ರವಾದಿಗಳನ್ನ ಬೇರು ಮಟ್ಟದಿಂದ ನಿರ್ಮೂಲನೆ ಮಾಡೋಣ