ದಡ ಕಾಣದ ಯಾನ- ಜೀವನ
ಬರಹ
ಬಾಯಾರಿಸಿ ದಣಿವಾರಿಸಿಕೋ
ನಿಲ್ಲದಿರಲಿ ಪಯಣ
ಗರಿ ಬಿಚ್ಚಿ ಎದೆ ಸೆಟೆಸಿಕೋ
ಮುಂದುವರಿಯಲಿ ಯಾನ
ತುಂಬು ನೀರ ನದಿಯಿರಲಿ
ದಡ ಕಾಣದ ಯಾನ
ಇವು ಯಾವುವೂ ತರದಿರಲಿ
ಈ ಪಯಣಕೆ ವಿಘ್ನ
ಛಲವಿರಲಿ ಹುರುಪಿರಲಿ
ಗುರಿಸೇರುವ ಹಸಿವಿರಲಿ
ಆ ಗಮ್ಯದ ಈ ದೂರವ
ಕ್ರಮಿಸುವ ಮನಸ್ಸಿನಲಿ
ಈ ಜಗದೇ ಶಕ್ತಿಯೊಂದಿದೆ
ಎಲ್ಲದರ ಹಿಂದೆ
ನಿನ್ನಾವೆಗೆ ಅಂಬಿಗ ನೀ
ಸಾಗುತಲಿರು ಮುಂದೆ
ಕೂಡಿ ಬಾಳುವ ನೀತಿಯಲೇ
ಬಾಳರಳ್ವದು ಕಣಾ
ಪರಿಸರದೇ ಸ್ನೇಹದಲೇ
ಇಹುದೊಲುಮೆಯ ಗುಣ
ಬೆಳ್ಳಾಲ ಗೋಪಿನಾಥ ರಾವ್
ಅಶ್ವಥ್ ನಗರ
ಬೆಂಗಳೂರು 94