ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ?
ಮುಂಬೈನ, ಟಾಜ್, ಒಬೆರಾಯ್ ಹೋಟೆಲ್ ಗಳು, ನಾರಿಮನ್ ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆಸ್ಪತ್ರೆ,ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ಪಾಠಕಲಿಯದ ವ್ಯವಸ್ಥೆಯ-ರುವಾರಿಗಳ ಕಾರ್ಯವೈಖರಿಯಲ್ಲಿ, ಇನ್ನೂ ಏಕೆ ಈ ನಿಷ್ಕ್ರಿಯತೆ ?
ಮುಂಬೈ ಜನಜೀವನದ ಇತಿಹಾಸದಲ್ಲಿ, ಹಿಂದೆಂದೂ ಆಗಿರದ ಅತ್ಯಂತ ಭೀಕರ ಹಾಗೂ ಬರ್ಬರ ಹತ್ಯೆಯಬಳಿಕ ಒಂದು ವಾರದ ನಂತರವೂ ೮ ಕೆ.ಜಿ ಆರ್ ಡಿ. ಎಕ್ಸ [RDX] ಸಿ. ಎಸ್. ಟಿ . ರೈಲ್ವೆ ಪಾರ್ಸೆಲ್ ಆಫೀಸ್ ನಲ್ಲಿ ದೊರೆಯಿತು. ಇದು ಯಾರ್ಗಾದೄ ತಿಳಿದಿದೆಯಾ. ಅದನ್ನು ಬಹಿರಂಗವಾಗಿ ಪತ್ತೆಹಚ್ಚಿ ತಮ್ಮ ಪತ್ರಿಕೆಯ ಮುಖಪುಟದಲ್ಲಿ ದೊಡ್ಡದಾಗಿ ವರದಿಮಾಡಿದ್ದು, ಮುಂಬೈ ನ ಒಂದು ಪ್ರಗತಿಪರ ವಿಚಾರಗಳ ಆದ್ಯತೆಗಾಗಿ ದುಡಿಯುತ್ತಿರುವ ದಿನ-ಪತ್ರಿಕೆ, 'ಮುಂಬೈ ಮಿರರ್,' ಮಾತ್ರ ! ಇಲ್ಲವಾಗಿದ್ದರೆ, ಕೆಲವು ಪತ್ರಿಕೆಗಳಲ್ಲಿ, ಎಷ್ಟೊ ಸಾಮಾನ್ಯ ವಿಷಯಗಳತರಹ, ಈ ವಿಷಯವೂ ಎಲ್ಲೋ ಕೊನೆಯ ಪುಟದಲ್ಲಿ ಪ್ರಕಟವಾಗುತ್ತಿತ್ತು. ಸಾರ್ವಜನಿಕರಿಗೆ ಇದರ ಸುಳಿವೂ ಸಿಗುತ್ತಿರಲಿಲ್ಲ.
ಅಂತಹ ಬೇಜವಾಬ್ದಾರಿ ಸಂಗತಿಗಳು ಒಂದೇ ಎರಡೇ ? ನಮ್ಮ ಜನ ಹಾಗೂ ನಾವುಗಳು ನಮ್ಮನ್ನೇ ಕೇಳಿಕೊಂಡು ತಲೆಚೆಚ್ಚಿಕೊಳ್ಳಬೇಕಾಗಿದೆ ! ಇದನ್ನೂ ಆತಂಕವಾದಿ ಅಜ್ಮಲ್ ಅಮೀರ್ ಕಸಬ್ ನೇ ಹೇಳಬೇಕಾಗಿತ್ತೆ ? ನವೆಂಬರ್, ೨೬ ನೆ ತಾರೀಖು, ಸಿ. ಎಸ್. ಟಿ. ರೈಲ್ವೆ ಸ್ಟೇಷನ್ ನಲ್ಲಿ ಗುಂಡಿನೇಟುಗಳನ್ನು ಸುರಿಸಿ, ೫೭ ಜನರ ಜೀವವನ್ನು ತೆಗೆದುಕೊಂಡ ಕಸವ್ ಮತ್ತು ಅವನ ಗೆಳೆಯ, ಇಸ್ಮೆಲ್ ಖಾನ್, ಆರ್ ಡಿ ಎಕ್ಸ್ ಇದ್ದ ಸಿಡಿಮದ್ದುಗಳ ಪೆಟ್ಟಿಗೆ ಹಾಗೂ ಚೀಲಗಳನ್ನು ಅಲ್ಲೆಯೇ ಎಸೆದು ಹೋಗಿದ್ದರು. ಅವು, ೩೨ ಸೆಕೆಂಡ್ ನಿಂದ ೧೯೭ ಗಂಟೆಗಳವರೆಗೂ ಸಿಡಿಯಲು ಸಮಯಾವಧಿಯನ್ನು ಹೊಂದಿವೆಯೆಂದು ಈಗ ವರದಿಗಳು ಬೊಬ್ಬೆ ಹೊಡೆಯುತ್ತಿವೆ. ಯಾರೂವಾರಸದಾರರಿಲ್ಲದ ಸಾಮಾನಿನಜೊತೆಯಲ್ಲಿ ಬಿದ್ದುಕೊಂಡಿದ್ದವು. ಸದ್ಯ ಪುಣ್ಯಕ್ಕೆ ಟೈಮರ್ ಸರಿಯಾಗಿ ಕೆಲಸಮಾಡುತ್ತಿರಲಿಲ್ಲ. ಅಲ್ಲಿನ ಕಸಗುಡಿಸಿ ಇರುವ ಪದಾರ್ಥಗಳ ಪಟ್ಟಿಮಾಡಿ ಏನಿದೆ, ಏನಿಲ್ಲ, ಯಾವುದು ಹೊಸದು, ಇವುಗಳ ವಿವರಗಳನ್ನು ಪಡೆಯುವುದು ಅವಶ್ಯಕವಲ್ಲವೇ ? ೨೭ ನೆಯ ತಾರೀಖು ಬೆಳಿಗ್ಯೆ, ೨.೩೫ ಕ್ಕೆ, ಎಲ್ಲಾ ಸರಿಯಾಗಿದೆ ಯೆಂದು ವರದಿಮಾದಿ ಕೈತೊಳೆದುಕೊಂಡಾಮೇಲೆ, ಯಾರೂ ಅದರ ಬಗ್ಗೆ ತೀವ್ರವಾಗಿ ಆಲೋಚಿಸಲೇ ಇಲ್ಲ.
ಕೊನೆಗೆ, ಬುಧವಾರ ಸಾಯಂಕಾಲ ೬ ಗಂಟೆಗೆ, ಪಂಚನಾಮ ಮಾಡಲು ರೈಲ್ವೆ ಪೋಲೀಸರು, ನಿರ್ಧರಿಸಿ, ಅಲ್ಲಿಯೇ ಬಿದ್ದಿದ್ದ ಯಾರೂ ಬೇಡದ ವಸ್ತುಗಳನ್ನು ಜಮಾಯಿಸಿದರು. ಈ ಸಂಗ್ರಹದಲ್ಲಿ ಆಗ ದೊರೆತದ್ದು, ಕೆಂಪು ಬಣ್ಣದ ಅತಿ ಭಾರವಾದ, ರುಕ್ಸ್ಯಾಕ್ ಬ್ಯಾಗು. ಇನ್ನೊಂದು ಭಾರಿ ತೂಕದ ಝಿಪ್ ಬ್ಯಾಗಿಗೆ, ಬೀಗ ಹಾಕಿತ್ತು. ಅದನ್ನು ಕಂಡು ಪೋಲಿಸ್ ಪೇದೆಗಳು ಗಾಬರಿಯಾದರು. ಒಳೆಗೇನಿದೆ ಯೆಂದು ಪತ್ತೆಹಚ್ಚಲು, 'ಡಾಗ್ ಸ್ಕ್ವಾಡ್' ಗೆ ಹೇಳಿಕಳಿಸಿದರು. ಅದೇಜಾಗದಲ್ಲೇ ಮುಖ್ಯಮಂತ್ರಿ ವಿಲಾಸರಾವ್ ಉಪಸ್ಥಿತರಿದ್ದರೂ, ಅವರಿಗೆ ತಿಳಿಸಲಿಲ್ಲ.
ಮುಂಬೈನ, The Bomb Detection and disposal squad [BBDC] ೬-೩೦ ಕ್ಕೆ ಬಂದಿತು. ೮ ಕೆಜಿ RDX ಟೈಮರ್ ಮತ್ತು ಬ್ಯಾಟರಿ ಸಮೇತ ಪೆಟ್ಟಿಗೆಯನ್ನು ತಮ್ಮ ವಶಕ್ಕೆತೆಗೆದುಕೊಂಡರು. ಇದು, ನಮ್ಮ ಮುಂಬೈನ ವಿಶಾಲ, ಸುಂದರ, ಹಾಗೂ ಭವ್ಯ ಸಂಪೂರ್ಣ, ಸಿ. ಎಸ್. ಟಿ ಕಟ್ಟಡವನ್ನು ಸಿಡಿಸಿ, ನುಚ್ಚುನೂರುಮಾಡಲು, ಸಾಕಾಗಿತ್ತು. ದೇವರ ದಯದಿಂದ. ಆತಂಕಿಗಳ ಈ ಭಾರೀ ಯೋಜನೆ ವಿಫಲವಾಯಿತು. ನಂತರ, ಜಿ. ಆರ್. ಪಿ. ಕಮಿಶನರ್ ಎ. ಕೆ. ಶರ್ಮ, 'ಆತಂಕವಾದಿಗಳು ತಂದಿರಬಹುದು, ಅದನ್ನು ನಾವು ಪತ್ತೆ,' ಹಚ್ಚುತ್ತೇವೆಂದರು.
ಎರಡು ದಿನಗಳ ಹಿಂದೆ, ತಾಜ್ ಮತ್ತು, ಒಬಿರಾಯ್ ಹೋಟೆಲ್ ಹತ್ತಿರ ೩ ಆರ್. ಡಿ. ಎಕ್ಸ್ ಬಾಂಬ್ ಗಳು ಸಿಕ್ಕಿದ್ದವು. ಆಗ ಅವರು ಇನ್ನೂ ಈತರಹದ ಬಾಂಬ್ ಗಳು ಇವೆಯೇ ಎಂದು ಹುಡುಕಿ ನೋಡಬೇಕಾಗಿತ್ತು. ನಾರಿಮನ್ ಹೌಸ್, ಆಸ್ಪತ್ರೆಯಬಳಿಯೂ ಇನ್ನೂ ಇಂತಹ ಸಾಮಗ್ರಿಗಳು ಎಷ್ಟು ಬಿದ್ದಿವೆಯೋ ಅವನ್ನು ನೋಡುವರ್ಯಾರು ? ಹಾಗೂ ಬಾಂಬ್ ಗಳನ್ನು ಶಾಂತ ಮಾಡೋರ್ಯಾರು ? ಯಾರು ಹೇಳ್ಬೇಕು. ಪ್ರತಿಯೊಂದಕ್ಕೂ ಆರ್ಮಿ ಬರಬೇಕು ಎನ್ನುವ ಮಾತು. ಪೋಲಿಸ್ ಪೇದೆಗಳಿಗೆ ಸ್ವಲ್ಪವಾದರೂ ಟ್ರೇನಿಂಗ್ ಬೇಡವೇ ? ಎಷ್ಟೋ ಜನ ಬಂದೂಕಗಳನ್ನು ಉಪಯೋಗಿಸಿಯೇ ಇಲ್ಲ. ಲಾಠಿಯಲ್ಲಿಯೇ 'ಕಾಮ್ ಚಲ್ತಾ ಹೈ' ಎನ್ನುತ್ತಾರೆ. ೯೪೦ ಕೋಟಿಹಣವನ್ನು ಮುಂಬೈ ಪೋಲೀಸ್ ಬಲವನ್ನು ಆಧುನೀಕರಿಸಲು ಅನುದಾನ ಸಿಕ್ಕಿತ್ತು. ಆದರೆ ಅದರಲ್ಲಿ ಎಷ್ಟು ಪಾಲು ಅವರ ಹಿತಕ್ಕೆ ವಿನಿಯೋಗವಾಯಿತು, ಹೇಳುವರು ಯಾರು ? !
ಈ ನಿಟ್ಟಿನಲ್ಲಿ ನಲ್ಲಿ ಪ್ರತಿದಿನ, ಮುಂಬೈ ಟೈಮ್ಸ್ ಒಂದು 'ವಿಶೇಷ ಕಾಲಂ,' ಕೊಡುತ್ತಿದ್ದಾರೆ. 'ಮುಂಬೈ ಟೈಮ್ಸ್ ಗೆ ಜನ ಪ್ರೆಶ್ನೆಗಳನ್ನು ಕೇಳಿ ಬರೆಯುತ್ತಿದ್ದಾರೆ. ಅವುಗಳ ಒಂದು ಕಿರುಪರಿಚಯ ಇಲ್ಲಿದೆ :
೧. ಆತಂಕವಾದಿಗಳ ಹಮ್ಲೆಯಿಂದ ಭಾರತಕ್ಕೆ ಘಾಸಿಯಾಗಿದೆ. ಮುಂಬೈ ಸಾಕಷ್ಟು ಪೆಟ್ಟು ತಿಂದಿದೆ. ಆದರೆ ಅಮೆರಿಕಕ್ಕೆ ಏಕೆ ಆತಂಕ ? ನಮಗೆ ಏಕೆ ಮುಂದೆ ಸೇಡುತೀರಿಸಿಕೊಳ್ಳುವ ಬಗ್ಗೆ ಸಲಹೆಕೊಡುತ್ತಿದೆ ?
೨. ರೈಲ್ವೆ ಪ್ರೊಟೆಕ್ಶನ್ ಫೋರ್ಸ್, ಅವರ ಪೋಲೀಸ್ ಪಡೆಯ ಹಿರಿಯ ಪೋಲೀಸ್ ಅಧಿಕಾರಿ, ಜಾದವ್ ರವರಿಗೆ, ಅವರ ಸಮಯೋಚಿತ ಹಾಗೂ ಕಾರ್ಯತತ್ಪರತೆಯ ಕೊಡುಗೆಯನ್ನು ಮೆಚ್ಚಿ, ೧೦ ಲಕ್ಷ ಬಹುಮಾನ ಕೊಟ್ಟರು. ಆದರೆ ತಮ್ಮ ಕೆಲಸದಲ್ಲಿ ಆಸಕ್ತಿ ತೋರಿಸಿದೆ, ಗಾಬರಿಯಿಂದ ಸಾರ್ವಜನಿಕರ ಹಿತವನ್ನು ಕಾಯಬೇಕಾದ ಇತರ ಪೋಲೀಸ್ ಪೇದೆಗಳ ಪಲಾಯನದ ಬಗ್ಗೆ, ಏನು ಕಾರವಾಯಿ ಮಾಡಿದ್ದಾರೆ ?
೩. ಮುಂಬೈ ಪೋಲಿಸ್ ಕಮೀಷನರ್, ಹಸನ್ ಗಫೂರ್, ೧೦ ಜನ ಆತಂಕವಾದಿಗಳಿದ್ದಾರೆ ಎನ್ನುವ ವಿಚಾರವನ್ನು ಹೇಗೆ ಪದೇ ಪದೇ ಹೇಳುತ್ತಿದ್ದಾರೆ. ಕಸವ್ ಹೇಳಿಕೆಯಲ್ಲಿ ಮತ್ತು ಹಸನ್ ಗಫೂರ್, ಹೇಳಿಕೆಯಲ್ಲಿ ಏಕೆ ಅಷ್ಟು ಅಂತರ. ಇದನ್ನು ಖಾತ್ರಿಪಡಿಸಿಕೊಳ್ಳಬೇಕಲ್ಲವೇ ?
೪. ವಿಲಾಸ್ ರಾವ್ ನಂತರ, ಸುಶೀಲ್ ಕುಮಾರ್ ಶಿಂದೆ, ಮುಲ್ಯಮಂತ್ರಿ. ಛಗನ್ ಭುಜಬಲ್, ಡೆಪ್ಯುಟಿ, ಹಾಗೂ ಹೋಮ್ ಮಿನಿಸ್ಟರ್. ಅವರಿಬ್ಬರೂ ಜೊತೆಜೊತೆಯಾಗಿ ಕೆಲಸಮಾಡಬಲ್ಲರೇ ? ಹಿಂದೆ, ಇದೇ ತರಹದ ಸಂದರ್ಭದಲ್ಲಿ ತಮ್ಮ ಕಾರ್ಯವೈಖರಿಯಲ್ಲಿ ಎಡವಿದ್ದ ಛಗನ್ ಭುಜಬಲರಿಗೆ ಅವರಿಗೆ ಪುನಃ ಅದೇ ಹುದ್ದೆಯನ್ನು ಕೊಡುವುದರಲ್ಲಿ ಏನರ್ಥ ? ಮುಂಬೈ ಪೋಲಿಸ್, ಈಗ ತನ್ನ ಹೆಸರುಕಳೆದುಕೊಂಡು ಸೊರಗುತ್ತಿರುವಾಗ, ಛಗನ್ ಹೇಗೆ ಪರಿಸ್ಥಿತಿಯನ್ನು ನಿಯಂತ್ರಿಸಬಲ್ಲರು. ಈಗಿನ ತಾಜಾಸುದ್ದಿಯ ಪ್ರಕಾರ, * ಅಶೋಕ್ ಚೌಹಾನ್ ರ ಹೆಸರು, ಎಲ್ಲರಿಗಿಂತ ಮುಂದಿದೆ. ಇವರು ವಿಲಾಸ್ ರಾವ್ ರವರ ಕ್ಯಾಬಿನೆಟ್ ನಲ್ಲಿ ಇಂಡಸ್ಟ್ರೀಸ್ ಮಂತ್ರಿಯಾಗಿದ್ದಾರೆ. ಪೂರ್ವ ಮುಖ್ಯಮಂತ್ರಿ, ಎಸ್. ಬಿ. ಚೌಹಾನರ ಮಗ. ಹೆಚ್ಚು ಸುದ್ದಿಯಲ್ಲಿಲ್ಲದಿದ್ದರೂ ಯಾವ ವಿವಾದಗಳಲ್ಲೂ ಅವರ ಹೆಸರು ಇದುವರೆಗೂ ಸೇರಿಕೊಂಡಿಲ್ಲ. ಮಧ್ಯವಯಸ್ಸಿನ ಅಶೋಕ್ ಚೌಹಾನ್ ರ ಹೆಸರನ್ನು ಅನೇಕ ಎಮ್. ಎಲ್. ಎ ಗಳು ಅನುಮೋದಿಸಿದರು. ಸೋನಿಯಗಾಂಧಿಯವರ ಅನುಮೋದನೆಗೆ ಎಲ್ಲರೂ ಕಾಯುತ್ತಿದ್ದಾರೆ. ನಾರಾಯಣ್ ರಾವ್ ರಾಣೆ ಅನೇಕಬಾರಿ, ಚರ್ಚಾಸ್ಪದವಾದ ಹೆಸರು. ಈಗಾಗಲೇ ಶಿವಸೇನೆಯಿಂದ ಹೊರಬಂದು, ಕಾಂಗ್ರೆಸ್ ಗೆ ಸೇರಿಕೊಂಡಿದ್ದರು. ಮುಖ್ಯಮಂತ್ರಿಯ ಪದವಿಯ ಕನಸು ಕಾಣುತ್ತಿದ್ದರು. ೫ ನೆಯ ತಾರೀಖಿನ ಸಾಯಂಕಾಲ, ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಸೋನಿಯಗಾಂಧಿಯವರ ಜೊತೆಯಲ್ಲಿ ಸಮಾಲೋಚನೆಯ ನಂತರ ಅಶೋಕ್ ಚೌಹಾನರಿಗೆ, ಅನುಮೋದನೆ ದೊರೆತಿದೆ. ಈಗ ಅಶೋಕ್ ಚೌಹಾನರೇ ಮಹಾರಾಷ್ಟ್ರದ ಮುಖ್ಯಮಂತ್ರಿಗಳು !
೫. ರಾಮ್ ಗೋಪಾಲ್ ವರ್ಮ, ಆತಂಕವಾದಿಗಳ ಕಾರ್ಯಾಚರಣೆಗಳಿಂದ ಛಿದ್ರವಾಗಿದ್ದ ತಾಜ್ ಬಳಿ, 'ಅಲ್ಲೇ ಸುಮ್ಮನೆ ನಿಂತಿದ್ದೆ,' ಎನ್ನುವ ಅರ್ಥವೇನೆಂದು ಕೇಳುತ್ತಿದ್ದಾರೆ. ವಿಲಾಸ್ ರಾವ್ ಕೂಡ ಹಾಗೆಯೇ ಅಲ್ಲಿ ಇಲ್ಲಿ , ’ಮೇಡಮ್ ಟುಸಾಡ್ ರ ವ್ಯಾಕ್ಸ್ ಮ್ಯೂಸಿಯಮ್,’ ನೋಡೋ ತರಹ, ನೋಡಿಕೊಂಡು ಹೋಗುತ್ತಿದ್ದರೆ ?
೬. ಕಸವ್ ಮತ್ತು ಅವನ ಸ್ನೇಹಿತ, ಇಸ್ಮೇಲ್ ಖಾನ್, ಮಲಬಾರ್ ಹಿಲ್ ಕಡೆ, ಕಳ್ಳತನದಿಂದ ಹಾರಿಸಿದ ಸ್ಕೋಡಾ ದಲ್ಲಿ ಧಾವಿಸುತ್ತಿದ್ದಾಗ, ಝಡ್ ಪ್ಲಸ್ ಸೆಕ್ಯೂರಿಟಿ ಇಟ್ಟುಕೊಂಡೂ ಅಲ್ಲೆಲ್ಲೋ ಮೂಲೆಯಲ್ಲಿ ಅಡಗಿಕೊಂಡಿದ್ದ, ರಾಜಕಾರಣಿಗಳನ್ನು ತರಾಟೆಗೆ ಯೇಕೆ ತೆಗೆದುಕೊಳ್ಳುತ್ತಿಲ್ಲ ?
೭. ಡಿ. ಬಿ ನಗರ್ ಪೋಲೀಸ್, ಸಾರ್ವಜನಿಕರ ಸಹಾಯದಿಂದ ಚೌಪಾತಿಯಲ್ಲಿ ಕಸಬ್ ನನ್ನು ಹೊಡೆದು ಚಚ್ಚಿಹಾಕಿ, ಸೆರೆಹಿಡಿಯಲು ಪೋಲೀಸರಿಗೆ ಸಹಕರಿಸಿದ್ದನ್ನು ಏಕೆ ಬಹಿರಂಗವಾಗಿ ಹೇಳುತ್ತಿಲ್ಲ ?
೮. ಗೇಟ್ವೇ ಬಳಿ, ನಡೆಸಿದ ಶ್ರದ್ಧಾಂಜಲಿ ಯ ಕ್ಯಾಂಡಲ್ ಲೈಟ್ ಸಮಾರಂಭ ಸರ್ಕಾರಕ್ಕೆ ಗೊತ್ತಾಗುವಷ್ಟು ಪ್ರಭಾವಶಾಲಿ ತಂತ್ರವೇ ? ಎಲ್ಲರೂ ಒಟ್ಟುಗೂಡಿ, ಮಂತ್ರಾಲಯಕ್ಕೆ ಹೋಗಿ ಪ್ರೊಟೆಸ್ಟ್ ಯಾಕೆ ಮಾಡಲಿಲ್ಲ ?
೯. ಆತಂಕವಾದಿಗಳು ಅಮಾಯಕರ ತಲೆಯನ್ನು ಚೆಂಡಾಡಿದ ದೃಷ್ಯಗಳನ್ನು ಪ್ರಸಾರಮಾಡಿದ್ದ ವೀಡಿಯೋ ತೋರಿಸಿದ್ದಾರೆ. ಕಸವ್ ಜೊತೆಯ ಸಂವಾದಮಾಡಿದ್ದ ವೀಡಿಯೋ ಚುಟಕಗಳನ್ನು ಅಂತಾರಾಷ್ಟ್ರೀಯ ನಾಗರಿಕರಿಗೆ ಏಕೆ ತೋರಿಸಿ ಪರಿಸ್ಥಿತಿಯ ಸತ್ಯವನ್ನು ಬಹಿರಂಗಪಡಿಸಬಾರದು ? ಅದರಲ್ಲೇನು ತಪ್ಪು ? ಇದು ವಿಶ್ವದ ಜನರಿಗೆ ಒಂದು ಪ್ರತ್ಯಕ್ಷ ಸತ್ಯದ ಪರಿಚಯವಾಗಿ, ಪಾಕೀಸ್ತಾನದ ನಿಜವಾದ ಬಣ್ಣ ಬಯಲಾದರೆ ತಪ್ಪೇನು ?
* ಅಶೋಕ್ ಚೌಹಾನ್ ಈಗ, ಕಾಂಗ್ರೆಸ್ ಪಕ್ಷದ ಆದ್ಯ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರೂ, ಅಮ್ಮನವರ ಹಸ್ತಾಕ್ಷರಕ್ಕಾಗಿ ಕಾಯುತ್ತಿದ್ದಾರೆ.
Source : (Times of India News Paper )