ಹೀಗೊಂದು ಮಾರಮ್ಮ ,ಚೌಡಮ್ಮಂದಿರ ಕತೆ -ಪುರಾಣದಿಂದ

ಹೀಗೊಂದು ಮಾರಮ್ಮ ,ಚೌಡಮ್ಮಂದಿರ ಕತೆ -ಪುರಾಣದಿಂದ

ಬರಹ

ನಮ್ಮ ಸೋದರತ್ತೆಯವರು ಈ ಮಾರಮ್ಮ ಹಾಗು ಚೌಡಮ್ಮ, ಮುಂತಾದ ದೇವಿಗಳಿಗೆ ಬ್ರಾಹ್ಮಣೇತರರೇ ಪೂಜಾರಿಗಳಾಗುತ್ತಾರೆಂಬುದಕ್ಕೆ ಹೇಳಿದ ಕತೆ

ತುಂಬಾ ಹಿಂದೆ ಪಾರ್ವತಿ, ಲಕ್ಶ್ಮಿ ಸರಸ್ವತಿ ಮೊದಲುಗೊಂಡು ಎಲ್ಲಾ ದೇವರರಿಗೂ ಬ್ರಾಹ್ಮಣರೆ ಅರ್ಚಕರಾಗಿದ್ದಕ್ಕೆ ಇತರ ಜಾತಿಯವರು ಶಿವನಲ್ಲಿ ತಮಗೂ ದೇವಿಯ ಪೂಜೆಗೆ ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರಂತೆ. ಆಗ ಶಿವನು ಮುಂದಿನ ಅವತಾರದಲ್ಲಿ ಒಬ್ಬ ಚಮ್ಮಾರ ಕುಲದಲ್ಲಿ ಹುಟ್ಟಿ ಆ ಆಸೆ ಈಡೇರಿಸುವುದಾಗಿ ಹೇಳಿದನಂತೆ
ಅಂತೆಯೆ ಪಾರ್ವತಿ ಒಬ್ಬ ಬ್ರಾಹ್ಮಣರ ಮನೆಯಲ್ಲಿ ಮಗಳಾಗಿ ಹುಟ್ಟಿದಳಂತೆ . ಆಕೆ ತುಂಬಾ ಸುಂದರಿ . ಅವಳ ಚೆಲುವು ಚಮ್ಮ್ಮಾರ ಕುಲದಲ್ಲಿ ಹುಟ್ಟಿದ್ದ ಒಬ್ಬ ಯುವಕನ ಆಸೆಯನ್ನು ಕೆರಳಿಸಿತಂತೆ.
ಹಾಗಾಗಿ ತಾನು ಬ್ರಾಹ್ಮಣನಂತೆ ಸೋಗು ಹಾಕಿ , ಹಾಗೂ ಹೀಗೊ ಅವಳನ್ನು ಮರಳು ಮಾಡಿ ಅವಳನ್ನು ಮದುವೆಯಾದನಂತೆ.
ಮದುವೆಯಾಗಿ ತುಂಬಾ ದಿನವಾದ ಮೇಲೆ ಒಮ್ಮೆ ಶಂಕರ ಪೋಳಿಯೊಂದನ್ನು ಮಾಡುವಾಗ ಇದೇನು ಇದು ಒಳ್ಳೆ ಸತ್ತ ಕೋಣದ ನಾಲಿಗೆ ಇದ್ದ ಹಾಗೆ ಇದೆ ಎಂದು ರೇಗಿಸಿದಾಗ ಮಾರಮ್ಮ ನಿಗೆ ಆತ ಬೇರೆಕುಲದವನು ಎಂದು ತಿಳಿಯಿತು
ಆಕೆ ಆತನಿಗೆ ನೀನು ಇನ್ನು ಮುಂದಿನ ಜನ್ಮ್ದದಲ್ಲಿ ಕೋಣನಾಗಿ ಹುಟ್ಟಿ ನಿನ್ನನ್ನೇ ಬಲಿ ತೆಗೆದುಕೊಳ್ಳುತ್ತೇನೆ ಎಂದು ಶಾಪ ಕೊಟ್ಟಳಂತೆ.
ಅಂದಿನಿಂದ ಮಾರಮ್ಮ ಮತ್ತು ಚೌಡಮ್ಮನ ಪೂಜೆಯನ್ನು ಇತರ ಜಾತಿಯವರೇ ಮಾಡುವುದು ಹಾಗು ಅವಳಿಗೆ ಬಲಿಯಾಗಿ ಕೋಣವನ್ನೇ ಕೊಡುವುದು ಎಂದು ಪ್ರತೀತಿ.
ಇದರ ಬಗ್ಗೆ ಇನ್ನಷ್ಟು ಕತೆ ಗೊತ್ತಿದ್ದರೆ ಹೇಳಿ