ಏನು, ’ಡಿಸ್ನಿ ಲ್ಯಾಂಡ್,’ ನಲ್ಲಿ ಕೂತ್ಕೊಂಡ್. ಗುಬ್ಬಿಗಳ್ನ್, ನೋಡ್ತಿದ್ರಾ ? ಸರ್ಹೋಯ್ತು-ನನ್ನ ಇನ್ನೊಬ್ ಮಗ, ನಗೆಯಾಡಿದ್ದ !
ಹೌದು. ನೋಡಿ ನಾವು ಬೆಳಿಗ್ಯ, ೯ ಗಂಟೆ ಒಳ್ಗೆ, ಡಿಸ್ನಿ ಲ್ಯಾಂಡ್ ಒಳ್ಗೆ ಹೋದ್ವಿ. ಎಲ್ಲ ಕಡೆ ಲೈನ್ ನಲ್ಲಿ ನಿಂತ್ಗೊಬೇಕಲ್ವ. ನಾನು ಸುಮಾರಾಗಿ ಎಲ್ಲಕಡೆನೂ ಸಹಕರಿಸಿದೆ. ಅಂದ್ರೆ, ನನಗೆ ಆರ್ಥರಿಟೀಸ್ ಇದೆಯಲ್ಲ. ಅದಕ್ಕೆ. ಆಮೇಲೆ, ೧೨ ಗಂಟೆ ಹೊತ್ಗೆ, ಸಬ್ಮೆರೀನ್ ಯಾನದ ಸರದಿಬಂತಪ್ಪ. ಸರಿ. ಶುರುವಾಯಿತ್ ನೋಡಿ, ನನ್ ಕಾಲ್ ನೋವಿನ ಗೋಳು ! ಪಾಪ ನಮ್ಮ ಮಗ, ಹಾಗೂ ಹೆಂಡತಿಗೆ ಬೇಸರ. ’ನೀವ್ ಇಲ್ಲೇ ಎಲ್ಲಾದ್ರು ಕೂತ್ಕೊಳ್ಳಿ, ನಾನ್ ಕ್ಯೂ ನಲ್ಲಿ ನಿಲ್ತೇವೆ. ನಿಮಗೆ ಸಾಧ್ಯವಾದರ ನಮ್ಮನ್ನ ಜಾಯಿನ್ ಮಾಡಿ, ’ ಎಂದು ಹೇಳಿದರು. ನಾನು ಅಲ್ಲೇ ಫುಟ್ಪಾತಿನ ಹೊಟೆಲ್ ಬಳಿ ಒಂದು ಕುರ್ಚಿಯಮೇಲೆ ಕೂತಿದ್ದೆ. ಜನಗಳ್ನ, ಅವ್ರನ್ ಇವ್ರನ್ ನೋಡ್ತಾ ಇರೋವಾಗ, ಒಬ್ಬ ಪುಟ್ಟ ಹುಡ್ಗ, ಅಲ್ಲಿದ್ದ ಗುಬ್ಬಿಗಳ ಜೊತೆ ಆಟಆಡ್ತಿದ್ದ. ನನಗೂ ಮೋಜೆನಿಸಿತು. ಯಾಕೆ ಅಂದ್ರೆ ನಾವು ಅಮೆರಿಕದಲ್ಲಿ ಕ್ಯಾಲಿಫೋರ್ನಿಯದಲ್ಲಿ ಗುಬ್ಬಿಗಳ್ನ, ಕಾಗೆಗಳ್ನ ನೋಡ್ಲೇ ಇಲ್ಲ. ಮನುಷ್ಯರ್ನೂ ಅಂತ ಹೇಳ್ಬೋದು. ನಾನ್ ಹೇಳ್ತಿರೋದು, ನಾವಿದ್ದ ಊರು, ಕಾಸ್ತಾಮೆಸ ವಿಚಾರ !
ಆಗ, ನನ್ನ ಕ್ಯಾಮರಾ ಕಣ್ಣಿನಿಂದ ಕಂಡ ಚಿತ್ರನಾ ಇಲ್ಲಿ ಕೊಟ್ಟಿದೀನಿ. ಸುಮಾರು ಒಂದು ಗಂಟೆ ಲೈನ್ ನಲ್ಲಿ ಕಳೆದನಂತರ, ನಮ್ಮ ಮಗ ಕೈಬೀಸಿ ಕರೆದ. ’ಬನ್ನಿ, ಅಪ್ಪ, ಒಳಗೆ ಹೋಗೋಣ. ಕೂತ್ಗೊಬೋದು ಪರ್ವಾಗಿಲ್ಲ,’ ಅಂತ ಹೇಳ್ದ. ಅಲ್ಲಿ ಲೈನ್ ನಲ್ಲಿದ್ದ ಕೆಲವರು ನನ್ನಕಡೆ ಕೈಬೀಸಿ ಕರೆದ್ದದ್ದು ಕಾಣ್ಸ್ತು. ಜನ ಒಳ್ಳೇರಪ್ಪ. ’ ಮದ್ಯೆ ನುಗ್ಬೇಡ್ರಿ. ನಾವ್ ನಿಂತೀರೋದು ನಿಮ್ಕಣ್ಣಿಗೆ ಕಾಣಿಸ್ತಿಲ್ವಾ,” ಇತ್ಯಾದಿ ಮಾತು ಕೇಳಿಸ್ಲಿಲ್ಲ. ಸದ್ಯ. ನಾನು ಮುಂದೆ, ಸಬ್ಮೆರೀನ್ ಯಾನಮಾಡಿದ ಬಗ್ಗೆ ಬರ್ದಿದ್ದೆ. ನೀವ್ ಯಾರಾದ್ರು ಓದಿರ್ಲೂಬಹುದು, ಅಂತ ಅನ್ಕೊಂಡಿದೀನಪ್ಪ. ಗೊತ್ತಿಲ್ಲ. ಯಾರ್ ಒದ್ತಾರೋ ಬಿಡ್ತಾರೋ, ಈ ಎಂಕ್ಟೇಸಪ್ಪನ್ ಕಂತೇ ಪುರಾಣಾವ !
ನಮ್ಮಂತೋರ್ಗೆ, ಅಲ್ಲಿ ವ್ಹೀಲ್ ಛೇರ್ ವ್ಯವಸ್ಥೆ ಸೊಗ್ಸಾಗಿತ್ತು. ಆದ್ರೆ, ನಾನು ವ್ಹೀಲ್ ಛೇರ್ ಮೇಲೆ ಕೂತ್ಗೊಳ್ಳೊ ಮನೋಸ್ತಿತಿನ ಇನ್ನೂ ಬೆಳೆಸ್ಕೊಳ್ ಬೇಕಾಗಿದೆ. ಅದ್ರಲ್ಲೇ ಏನೋ ಹಮ್ಮು. ಇರತ್ತಲ್ಲಾ ಆತ್ಮಶ್ರೇಷ್ಠತೆ. ಇದನ್ನ ನೀವು ಇಗೋ ಅಂತೀರಲ್ವ ? ಈಗೂ ಆಮೇಲೋ, ನಡೀಲಿ ಇನ್ನೂ ಎಷ್ಟ್ ದಿನ ನಡ್ಯತ್ತೊ ನೋಡೋಣ. ಹಾ...ಗುಬ್ಬಿಗಳ್ನ ನಾವು ಮೈಸೂರ್ನಲ್ಲೂ, ನೋಡ್ಲಿಲ್ಲಾರೀ. ನಿಜ್ವಾಗ್ಲೂ ! ಅದೇನೋ ನಮ್ ಮುಂಬೈನಲ್ಲಿ ಗುಬ್ಬಿ, ಕಾಗೆ, ಎಲ್ಲಾರ್ನೂ ನೋಡ್ಬೋದು.
-ವೆಂ.