ಉದಯವಾಣಿಯಲ್ಲಿ ಬಂದಿರುವ ಕ್ರಿಸ್ಮಸ್ ಬಗ್ಗೆ ಇವತ್ತು ಓದಿರುವ ಕೆಲವು ಕವನಗಳು- ೧. ಕ್ರಿಸ್ಮಸ್, ------- ಕವಿ: ಜಿ.ಎಸ್.ಶಿವರುದ್ರಪ್ಪ.

ಉದಯವಾಣಿಯಲ್ಲಿ ಬಂದಿರುವ ಕ್ರಿಸ್ಮಸ್ ಬಗ್ಗೆ ಇವತ್ತು ಓದಿರುವ ಕೆಲವು ಕವನಗಳು- ೧. ಕ್ರಿಸ್ಮಸ್, ------- ಕವಿ: ಜಿ.ಎಸ್.ಶಿವರುದ್ರಪ್ಪ.

ಬರಹ

ಕ್ರಿಸ್ಮಸು ಬಂದಿಹುದು; ಕ್ರಿಸ್ತನೆದೆಯಂದದಲಿ
ಶೋಭಿಸಿದೆ ತಿಳಿನೀಲಿಯಾಕಾಶ; ಬೆಳ್ಳಕ್ಕಿ
ಮಾಲೆಗಳು ತೇಲುತಿವೆ ದೇವದೂತರ ತೆರದಿ.
ಚರ್ಚಿನ ಗಂಟೆ ಘೋಷಿಸಿದೆ ಗಂಭೀರ ಕಂಠ
ದಲಿ ಗುರುವಿನಾದೇಶವಂ;ಹೊನಲಾಗಿ ಹರಿವ
ಪ್ರಾರ್ಥನಾ ಗೀತದಲಿ ಮುಳುಗಿಹುದು ಮಂದಿರವು!
ಅದೊ ಒಳಗೆ, ಮೋಂಬತ್ತಿಗಳ ಮಬ್ಬು ಬೆಳಕಿನಲಿ
ನೋಡು ಕ್ರಿಸ್ತನ ದಿವ್ಯ ಮಂಗಳ ಮೂರ್ತಿ! ಅಂದು
ಗೋಲ್ಗೋಥದ ಗುಡ್ಡದಲಿ ಶಿಲುಬೆಯಜ್ಞಕೆ ತನ್ನ
ತನುವ ತೆತ್ತಾ ಧೀರಸುಂದರ ಪುರುಷ! ಜಗದ
ಗಂಭೀರತೆಯ ಮುಖ ಬಿಂಬವಾದಂತೆ; ಕಣ್ಣು
ಗಳೆರಡು ಕರುಣಾರಸದ ಕಡಲೆಂಬಂತೆ; ಆ
ಮೂರ್ತಿ 'ದೇವರ ರಾಜ್ಯವಿಹುದು ನಿಮ್ಮೊಳಗೆ'
ಎಂದರೂ ಮಾನವತೆ ತೊಳಲುತಿದೆ ತಮದೊಳಗೆ!

ಕ್ರಿಸ್ಮಸ್ ಹಬ್ಬ ಸಲುವಾಗಿ ಕ್ರೈಸ್ತ ಬಾಂಧವರಿಗೆ ಮುಂಗಡವಾಗಿ ಹಾರ್ದಿಕ ಶುಭಾಶಯಗಳು.