ಅಕ್ಷರದಲ್ಲಿ ಆಟ
ಈ ಪ್ರಸಂಗ ಎಲ್ಲಿಯದು ಎಂದು ಮರೆತಿರುವೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎಂತಹ ಚಮತ್ಕಾರಗಳಿರುತ್ತವೆ! ಎಂಬುದನ್ನು ಇಲ್ಲಿ ನೋಡಿ. ಈ ವಾಕ್ಯ ಓದಿ...
"ದನವ ಕಡಿದು ಕಡಿದು ಗುಡಿಗೆ ತುಂಬಿದರು"
- ಇಂದಿನ ದಿನಗಳಲ್ಲಿ ಇಷ್ಟನ್ನೇ ಓದಿದರೆ ಎಂತಹ ಆಭಾಸ ವಾಗುತ್ತೆ, ಅಲ್ವಾ?
ಇಂತಹ ಒಂದು ವಾಕ್ಯದ ನಡುವೆ ಒಂದಕ್ಷರವನ್ನೂ ಅದಲು ಬದಲು ಮಾಡದೆ ಮೊದಲಿಗೆ ಒಂದಕ್ಷರವನ್ನು ಸೇರಿಸಿ ಎಂತಹ ಚಮತ್ಕಾರ ಮಾಡ ಬಹುದೆಂದರೆ ಕೇವಲ " ಚಂ" ಸೇರಿಸಿ ನೋಡಿ.
----------------------------------------------------------------------------------------
ನಾಲಿಗೆಗೊಂದು ಕಸರತ್ತು....... ಕಪ್ಪು ಕುಂಕುಮ-ಕೆಂಪು ಕುಂಕುಮ, ಕಪ್ಪು ಕುಂಕುಮ-ಕೆಂಪು ಕುಂಕುಮ, ಕಪ್ಪು ಕುಂಕುಮ-ಕೆಂಪು ಕುಂಕುಮ ಈ ಪದಗಳನ್ನು ವೇಗವಾಗಿ ಪುನರುಚ್ಛಾರ ಮಾಡುತ್ತಾಹೋಗಿ. ಉಚ್ಛಾರ ತಪ್ಪಾಗಲಿಲ್ಲವೇ? ತಡವರಿಸಲಿಲ್ಲವೇ?
ಸರಿ ಹಾಗಾದರೆ ಮಕ್ಕಳ ಮೇಲೆ ಶುರುವಾಗಲೀ ಪ್ರಯೋಗ.
-----------------------------------------------------------------------------------------
Bittaa bought some butter, Butter was bitter, bittaa bought some better butter, to make bitter butter better.
ಇದನ್ನು ಬೇಗ ಬೇಗನೆ ಹೇಳಲು ಪ್ರಯತ್ನಿಸಿ. ಚಿಕ್ಕ ಮಕ್ಕಳಿಗೆ ಗೋಳು ಗುಟ್ಟಿಸಲು ಒಳ್ಳೆಯ ಸಾಮಗ್ರಿ.