ಒಮ್ಮೆ ಓದಿ ಈ ಭಾವಗೀತೆ
ಬರಹ
ನನ್ನ ನೆಚ್ಚಿನ ಕವಿ ಲಕ್ಷ್ಮಿನಾರಾಯಣ ಭಟ್ಟರ ಭಾವಗೀತೆ ತಮ್ಮೊಂದಿಗೆ ಹಂಚಿಕೊಳ್ಳುವಾಸೆಯಾಯಿತು. ನಿಮಗೂ ಇಷ್ಟವಾಗಬಹುದು ಓದಿನೋಡಿ!
ಏಕೆ ಅರ್ಥ ಬಾಳಿಗೆ
ಏಕೆ ಅರ್ಥ ನಾಳೆಗೆ
ಅರ್ಥ ಒಂದು ಏಕೆ ಬೇಕು
ಅರಳಿ ನಗುವ ಹೂವಿಗೆ,
ಏಕೆ ಅರ್ಥ ಬಾಳಿಗೆ
ಏಕೆ ಅರ್ಥ ನಾಳೆಗೆ
ಕಳೆದು ಹೋದ ನೆನ್ನೆಗೆ
ಕಂಡು ಮರೆವ ನಾಳೆಗೆ
ಬರೆದುದೆಲ್ಲ ಅಳೆಸಿಬಿಡುವ
ಖಾಲಿ ಹಾಳೆಗೆ
ತಿರುಗಿ ತಿರುಗಿ ಚಕ್ರ
ಹುಡುಕಿ ಹುಡುಕಿ ವ್ಯ್ರೆರ್ಥ
ಬಿಟ್ಟಲೇ ಬಂದು ನಿಲ್ಲುವ
ಆಟವಷ್ಟೇ ಅರ್ಥವಿಲ್ಲಿ,
ನೋಟ ನೆಡಲಿ ಆಟದಿ
ಗೆಲ್ಲುವ ಆಸೆ ಮನದಲ್ಲಿ
ಸೋತೆರೇನು ಆಟ ತಾನೆ
ಎನ್ನುವ ಜಾಣ್ಮೆ ಕಾಣಲಿ,
ನಗುತ ಬಾಳು ಜೀವವೇ
ಮಾವು ಬೇವು ದಾಳಿಗೆ
ನಗುತ ಬಾಳು ಜೀವವೇ
ಉಳಿದ ರಸದ ಬಾಳಿಗೆ!!