ಪ್ರಿಯ ಓದುಗರೇ ನಿಮಗೆ ಹೆಸರಾಂತ ಪತ್ತೇದಾರಿ ಸಾಹಿತಿ 'ಕೌಂಡಿನ್ಯ' ಅಥವಾ ವೈ ಏನ್ ನಾಗೇಶ್ ಗೊತ್ತ? ಅವರ ಕಾದಂಬರಿಗಳನ್ನ ಓದಿದ್ದೀರ? ಹೇಗನ್ನಿಸಿತು?
ನಾನು ಮೊದಲ ಸಾರಿ ಕೌಂಡಿನ್ಯ ಅವರ ಕಾದಂಬರಿಯನ್ನ ಬುಕ್ ಸ್ಟಾಲ್ ಒಂದರಲ್ಲಿ(ರಾಯಚೂರು) ಖರೀದಿಸಿ ಟೈಮ್ ಪಾಸ್ಗೆ ಅಂಥ ಓದಲು ಶುರು ಮಾಡ್ದೆ.
ಮೊದಲಲ್ಲಿ ಓದು ಒಂಥರಾ ವಿಶೇಷ ಅನ್ನಿಸಿತು... ನಂತರ ಅವರ ಕೌಂಡಿನ್ಯ ವಿಶೇಷ ಹೆಸರಿನ ಬುಕ್ ಅನ್ನು ಪ್ರತಿ ತಿಂಗಳು ಕೊಂದು ಓದಲು ಶುರು ಮಾಡ್ದೆ .
ಅವರ ಹಾಸ್ಯ, ಕ್ರೈಂ,ಶೃಂಗಾರ,ವನ್ನು ಅವರ ಕಾದಂಬರಿಗಳಲ್ಲಿ ಬಳಸುವ ರೀತಿ ಅಮೋಘ....
ನನಗನ್ನಿಸಿದ್ದು ಅಂದರೆ ಇವರೆನಾದರು ಬೇರೆ ದೇಶದಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ಹೆಸರಾಂತ ಪತ್ತೇದಾರಿ ಬರಹಗಾರ ಆಗಿ ಹೆಸರು ಮಾಡುತ್ತಿದ್ದರು..
ನಂತರ ನಾನು ಪ್ರತಿ ತಿಂಗಳು ಬರುವ ಅವರ ಕಾದಂಬರಿಗಾಗಿ ಕಾಯಲು ಆಗದೆ ಸರಕಾರೀ ಲೈಬ್ರರಿ ಗಳಲ್ಲಿ ಅವರ ಕಾದಂಬರಿ ಹುಡುಕಲು ಶುರು ಮಾಡಿದೆ..
ಮೊದಲು ಬೆಂಗಳೂರಲ್ಲಿ ಬಸವೇಶ್ವರನಗರದ ಕೇಂದ್ರ ಗ್ರಂಥಾಲಯದಲ್ಲಿ ದಿನವೂ ಹೋಗಿ (ಬೆಳಿಗ್ಗೆ ೯ಏ ಹೋದರೆ ಮತ್ತೆ ೧.೩೦ ಕ್ಕೆ ಊಟಕ್ಕೆ ಹೋಗಿ, ಮತ್ತೆ ವಾಪಸ್ಸು ಲೈಬ್ರರಿಗೆ ಬಂದು ೨.೩೦ - ೭.೩೦ ವರೆಗೆ ಓದಿದ್ದೇನೆ)
ಆಗ ನಾನು ನನ್ನ ೧೦ಣೇ ಕ್ಲಾಸ್ ಡೈರೆಕ್ಟ್ ಆಗಿ ಪರೀಕ್ಷೆ ಬರೆಯುತ್ತಿದ್ದೆ..(ಆದರು ಓದುವುದು ಬಿಟ್ಟು ಕೌಂಡಿನ್ಯ ಅವರ ಕಾದಂಬರಿ ಓದುತ್ತಿದ್ದೆ)
ಕೊನೆಗೆ ಬೇಸತ್ತ ನಮ್ಮಣ್ಣ ನನ್ನ ಈ ಚಟ(ನಮ್ಮಣ್ಣ ಪ್ರಕಾರ ಕೌನ್ದಿನ್ಯರ ಕಾದಂಬರಿ ಓದುವುದು ಒಂದು ಚಟ)
ಬಿಡಿಸಲು ನನ್ನನ್ನು ಮತ್ತೆ ರಾಯಚೂರಿಗೆ ಸಾಗ ಹಾಕಿದ.
ಆದರೆ ನಾನು ಇಲ್ಲಿಯೂ(ರಾಯಚೂರು) ನಗರ ಕೇಂದ್ರ ಗ್ರಂಥಾಲಯ ಹುಡುಕಿ ಅಲ್ಲಿ ಕೂಡ ಕೌಂಡಿನ್ಯ ಮತ್ತು ಬಿ ವಿ ಅನಂತರಾಮ್ (ಇನ್ನೊಬ್ಬ ಖ್ಯಾತ ಪತ್ತೇದಾರಿ ಕಾದಂಬರಿಕಾರ /ಮಹೇಶ್ ಎನ್ನುವ ಪತ್ತೇದಾರಿ ಎಜೆಂತನ ಸೃಸ್ತಿಕರ್ಥ ) ಹಾಗು ಇನ್ನಿತರ ಕಾದಂಬರಿ ಓದಲು ಶುರು ಹಚ್ಚಿ ಕೊಂಡೆ..
ಅದೂ ಸಾಲದಾದಾಗ, ತೆಲುಗಿನ ಕನ್ನಡ ಭಾಷೆಗೆ ಅನುವಾದ ಮಾಡಿದ ಕಾದಂಬರಿ ಓದಲು ಶುರು ಮಾಡ್ದೆ.
ಕೌಂಡಿನ್ಯ ಅವರ ಕೆಲ ಕಾದಂಬರಿಗಳು ಹೆಸರಿಸಬೆಕೆಂದರೆ,
ಸೂಪರ್ ಸುಬ್ಬ(ಇಲ್ಲಿ ಸುಬ್ಬ ಹೆಸರಿನ ವ್ಯಕ್ತಿ ಆಕಸ್ಮಿಕವಾಗಿ ಇನೊಬ್ಬ ಶ್ರೀಮಂತ ತರುಣ ಅದೂ ಸುಬ್ಬನ ತರಹವೇ ಇರುವ ಚೆಹರೆ ,ಅವನ ಮನೆಗೆ ಪ್ರವೇಶ ಪಡೆಯುತ್ತಾನೆ)
ಮಾನ್ಯ ಮತದಾರರೇ (ಇದು ಸೂಪರ್ ಕಾದಂಬರಿ ಒಮ್ಮೆ ಓದಿ ನೋಡಿ, ನೀವು ಮರುಳಾಗದಿದ್ದರೆ ನೋಡಿ)
ಇದರಲ್ಲಿ ನಮ್ಮ ನಾಯಕ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ ಈ ರಾಜ್ಯದ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತ, ಕೊನೆಗೆ ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿ ಏನೆಲ್ಲಾ ಅವಾಂತರ ಮಾಡುತಾನೆ ಅಂತ ಓದಿಯೇ ತಿಳಿಯಬೇಕು..
ರಾಜಕಾರಣದ ಹೊಲಸು ಪರಿಚಯವಾಗುವುದು ಈ ಕಾದಂಬರಿಯಲ್ಲಿ .
ಇನ್ನು ಹೇಳಲು ಹೊರಟರೆ ಎಸ್ಟೊಂದು ಇವೆ..
ಒಮ್ಮೆ ನೀವು ಅವರ ಒಂದಾದರು ಕಾದಂಬರಿ ಓದಿದರೆ ಮಾತ್ರ ಅದನ್ನಿ ತಿಳಿಯಲು ಸಾಧ್ಯ...
ನಾನು ಎಸ್ಟೋ ಜನರಿಗೆ ಕೌಂಡಿನ್ಯ ಕಾದಂಬರಿ ಓದುವ ಹುಚ್ಚ್ಚು ಹಚ್ಹ್ಚ್ಸಿದ್ದೇನೆ,,
ನೀವು ಒಂದು ಸಾರಿ ಓದಿ..
ಹೇಗಿರುತ್ತೆ ಅಂಥ ಹೇಳ್ತೀರಾ?..........
( ಕೌಂಡಿನ್ಯ ಅವರು ಹೊಳೆನರಸಿಪುರದಲ್ಲಿ ವಾಸ ಮಾಡ್ತಿದ್ದಾರೆ ಅಂತ ಗೊತ್ತು, ಅವರ ಫೋನ್ ನಂಬರ ಮತ್ತು ವಿಳಾಸ ಗೊತ್ತಿದ್ದರೆ ಕೊಡ್ತೀರಾ?..)
venkatb83@yahoo.co.in