ಕನ್ನಡವೇ ಸತ್ಯ

ಕನ್ನಡವೇ ಸತ್ಯ

ಬರಹ

ನಾವು ಒಮ್ಮೆ ಅರಮನೆ ಮೈದಾನಕ್ಕೆ ಕನಡವೇ ಸತ್ಯ ಕಾರ್ಯಕ್ರಮ ನೋಡಲು ಹೊರಟಾಗ

ನಮಗಾದ ಈ ಅನುಭವವನ್ನು ಕವಿತೆ(ಕವನ) ರೂಪದಲ್ಲಿ ಬರೆದು ಕಳುಹಿಸಿದ್ದೇನೆ, ಪ್ರಕಟಿಸಬೇಕಾಗಿ ವಿನಂತಿ.

ಕನ್ನಡವೇ ಸತ್ಯ ಕನ್ನಡವೇ ನಿತ್ಯ.

ಒಮ್ಮೆ ಹೊರೆಟೆವು ನೋಡಲು ಕಾರ್ಯಕ್ರಮ ಕನ್ನಡವೇ ಸತ್ಯ
ಪಡೆಯಲೆಂದು ಬದಲಾವಣೆ ವಾರದ ಜಂಜಾಟದಿಂದ ದೂರ ನಿತ್ಯ
ನಮಗೆ ಸಿಕ್ಕಿತು ಪಾಸು ಅದರೆ ರಸ್ತೆ ಪಾಸ್ ಮಾಡುವುದೇ ಆಯಿತು ತ್ರಾಸು
ಏಕೆಂದರೆ ನಮಗೆ ಕನ್ನಡವೆಂದರೆ ಬಲು ಇಷ್ಟ
ಆದರೆ ಅರಮನೆ ಮೈದಾನ ಸೇರಲು ಆಯಿತು ಬಲು ಕಷ್ಟ
ರಸ್ತೆಯಲ್ಲಿ ವಾಹನಗಳ ಸಮೂಹವಿತ್ತು ತುಂಬಿದ ಬಸುರಿಯಂತೆ
ಹಿಂದೆ ಮುಂದೆ ಎಲ್ಲೆಲ್ಲೂವಾಹನಗಳಿತ್ತು ಹನುಮನ ಬಾಲದಂತೆ
ಉತ್ತರಹಳ್ಳಿಯಿಂದ ಮೈದಾನ ಸೇರಲು ಆಯಿತು ಎರಡೂವರೆ ಘಂಟೆ
ಅಷ್ಟರಲ್ಲೇ ಜತೆಯಲ್ಲಿದ್ದ ಮಕ್ಕಳು ಶುರುಮಾಡಿದರು ಗಲಾಟೆ ತಂಟೆ
ರಸ್ತೆಯಲ್ಲಿ ಬಿಸಿಲ ಬೇಗೆಯಿಂದ, ವಾಹನಗಳ ಬಿಸಿಗಾಳಿಯಿಂದ
ಆಗಲೇ ಮುಗಿದಿತ್ತು ಎರಡೂ ಬಾಟಲಿ ಕುಡಿಯುವ ನೀರು
ಹೊರಬಿಡುವ ವೇಳೆಯೂ ಆಗಿತ್ತು ಹೊಟ್ಟೆಗೆ ಸೇರಿದ್ದ ನೀರು
ದೊಡ್ಡ ಪ್ರದಕ್ಷಿಣೆ ಹಾಕಿ ಹೋಗಿದ್ದೆವು ಅರಮನೆಗೆ
ಅನಿಸಿತ್ತು ಏಕಾದರೂ ಬಂದೆವೋ ಈ ಟ್ರಾಫಿಕ್ ಎಂಬ ಸೆರೆ ಮನೆಗೆ
ಕೊನೆಗೂ ಹತ್ತಿರ ಬಂದೆವು ಅರಮನೆ ಮೈದಾನ ಮುಖ್ಯ ದ್ವಾರಕೆ
ಆಗಲೇ ಮಕ್ಕಳು ಸುಸ್ತಾಗಿ ಹೊಡೆಯುತ್ತಿದ್ದರು ಗೊರಕೆ
ಪ್ರವೇಶದ್ವಾರದ ವರೆಗೂ ನೆರೆದಿದ್ದ ಜನಪ್ರವಾಹ ನೋಡಿ
ಬಂದೆವು ನಿಟ್ಟುಸಿರು ಬಿಟ್ಟು ವಾಪಸ್ ಮನೆಗೆ ನಮಸ್ಕಾರ ಮಾಡಿ
ನಿರ್ಧರಿಸಿದೆ ಇನ್ನೆಂದೂ ಯಾವ ಕಾರ್ಯಕ್ರಮಕ್ಕೂ (ಅರಮನೆ ಮೈದಾನಕ್ಕೆ)ಹೋಗಲಾರೆನು
ಮನೆಯಲ್ಲೇ ಕುಳಿತು ಟಿವಿಯಲ್ಲೇ ಮುಂದೊಂದು ದಿನ ನೋಡುವೆನು
ಕನ್ನಡವೇ ಸತ್ಯ ಆದರೆ ಈ ನನ್ನ ಅನುಭವವೂ ಅಷ್ಟೇ ಪರಮ ಸತ್ಯ

ಲೀಲಾ ಚಂದ್ರಶೇಖರ. ಬೆಂಗಳೂರು.