ಡಾ. ಅಗರ್ವಾಲರ ಆಮರಣಾಂತ ಉಪವಾಸ
"ಗಂಗೆ ಅಂತರ್ಧಾನಳಾದಾಳೇ?" ಎನ್ನುತ್ತ 'ಸುಗ್ಗಿ'ಯವರು ಈ ಹಿಂದೆ ವಾಟರ್ ಪೋರ್ಟಲ್ಲಿನಲ್ಲಿ ಲೇಖನ ಬರೆದಿದ್ದರು. ಎಷ್ಟು ಜನ ಆ ಸುದ್ದಿಯನ್ನು ಫಾಲೋ ಮಾಡಿದಿರೋ ಗೊತ್ತಿಲ್ಲ, ಅಂದು ಸರಕಾರ ಭಾಗೀರಥಿ ನದಿಗೇ ಕುತ್ತು ತಂದಿಡಬಹುದಾದ ಈ ಜಲವಿದ್ಯುತ್ ಯೋಜನೆಯನ್ನು ನಿಲ್ಲಿಸುವೆವು ಎಂದು ಬರಹ ರೂಪದಲ್ಲಿ ಆಶ್ವಾಸನೆ ನೀಡಿದಾಗ ಡಾ. ಅಗರ್ವಾಲರ ಉಪವಾಸ ಅಂತ್ಯ ಕಂಡಿತ್ತು.
ಆದರೆ ಸರಕಾರ ಏನೂ ಮಾಡಿಲ್ಲ. ಬದಲಿಗೆ ಜಲವಿದ್ಯುತ್ ಯೋಜನೆಯ ಕಾಮಗಾರಿ ಮುಂದುವರೆದಿದೆಯಂತೆ!
ಡಾ. ಅಗರ್ವಾಲರು ಮತ್ತೊಮ್ಮೆ ಉಪವಾಸಕ್ಕೆ ಕುಳಿತಿದ್ದಾರೆ, ಆಮರಣಾಂತ. ಇವತ್ತಿಗೆ ಎಂಟನೇ ದಿನ.
ಗಂಗಾನದಿ ಗಂಗೋತ್ರಿ ಹಾಗೂ ಉತ್ತರಕಾಶಿ ನಡುವೆ ಇರುವ ೧೨೫ ಕಿ. ಮೀ. ವಿಸ್ತಾರದಲ್ಲಿ ಮಾತ್ರ ಮುಂಚಿನಂತೆ ಉಳಿದಿರುವಳು. ಈ ಅಳಿದುಳಿದಿರುವ ವಿಸ್ತಾರವನ್ನು ಕೂಡ ಹಾಳುಗೆಡವಿದರೆ, ಗಂಗೆಯ ಹರಿವಿನ ದಿಶೆ ಬದಲಿಸಿದರೆ, ಭಾರತದಿಂದ ನಿಜವಾದ ಗಂಗೆಯೇ ಮಾಯವಾಗುವಳು!
ಇತ್ತೀಚೆಗೆ ನಮ್ಮೂರಿನ ಸುದ್ದಿಗಳನ್ನು ಮಾತ್ರ ತೋರಿಸುವ ಟಿವಿ ಚ್ಯಾನಲ್ಲುಗಳಿಗೆ ಈ ಸುದ್ದಿ ಬೇಕಿಲ್ಲ, ಸುಮಾರು ಪತ್ರಿಕೆಗಳಿಗೆ ಈ ವಿಷಯದ ಕುರಿತು ಸುದ್ದಿ ಪ್ರಕಟಿಸಲು ಜಾಗವಿಲ್ಲ. ಸರಕಾರಕ್ಕೆ ಸ್ಥಳೀಯ ವೋಟ್ ಬ್ಯಾಂಕು, ಒಂದು ಬೃಹತ್ ಯೋಜನೆ - ಇಷ್ಟೇ ಲೆಕ್ಕಕ್ಕೆ ಬರುತ್ತಿರುವಂತಿದೆ.
ಮತ್ತೊಂದೆಡೆ ಇದಕ್ಕೆ ರಾಜಕೀಯ, ದರ್ಮದ ಬಣ್ಣ ಮೆತ್ತುಕೊಂಡರೆ ಪರಿಸರಕ್ಕಾಗಲಿರುವ ನಿಜವಾದ ಅಪಾಯದೆಡೆ ಜನ ಆಲೋಚಿಸದೇ ಇದ್ದುಬಿಟ್ಟಾರು!
ಇದನ್ನು ನಾವೆಲ್ಲರೂ ಸೇರಿ ಪ್ರತಿಭಟಿಸಬೇಕಲ್ಲ. ಏನು ಮಾಡಬಹುದು?
ಇವತ್ತು ಡಾ. ಅಗರ್ವಾಲರ ಆರೋಗ್ಯ ಬಿಗಡಾಯಿಸಿದೆ ಎಂದು ಹಲವು ಪತ್ರಿಕೆಗಳು ವರದಿ ಮಾಡಿವೆ. ನಮ್ಮ ಭೂಮಿ, ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ಹೋರಾಡುವ ಜವಾಬ್ದಾರಿ ಡಾ, ಅಗರ್ವಾಲರ ಹೆಗಲ ಮೇಲೆ ಮಾತ್ರ ಹಾಕಬೇಕಿಲ್ಲ - ಆ ಜವಾಬ್ದಾರಿ ನಮ್ಮೆಲ್ಲರದ್ದೂ ತಾನೆ?
ಮತ್ತಷ್ಟು ಮಾಹಿತಿ:
- ಇಂಡಿಯಾ ವಾಟರ್ ಪೋರ್ಟಲ್ ಇಂಗ್ಲೀಷ್ ಬ್ಲಾಗಿನಲ್ಲಿ ಇದರ ಕುರಿತು ಲೇಖನ.
- ಡಾ. ಅಗರ್ವಾಲರ ಆಮರಣಾಂತ ಉಪವಾಸ ಇಂದಿಗೆ ಎಂಟನೇ ದಿನ
- ಭಾಗೀರಥಿ ಬಚಾವೋ ಆಂದೋಲನ [PDF]
- ಡಾ. ಅಗರ್ವಾಲರ ಉಪವಾಸದ ಕುರಿತು ಪತ್ರಿಕೆಗಳಿಗೆ ಕಳುಹಿಸಿದ ಪ್ರಕಟಣೆ
- ಈ ಕುರಿತು ಪತ್ರಿಕೆಗಳಲ್ಲಿ ಬಂದ ಸುದ್ದಿ
ಜೊತೆಗೆ ಓದಲೇಬೇಕಾದ ಲೇಖನ: