ಹದಿನೆಂಟು ಪುರಾಣಗಳು ಹಾಗೂ ಅಷ್ಟಸಿದ್ಧಿಗಳು

ಹದಿನೆಂಟು ಪುರಾಣಗಳು ಹಾಗೂ ಅಷ್ಟಸಿದ್ಧಿಗಳು

ಬರಹ

ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್|
ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ||

ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ
ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨)
ಭದ್ವಯಂ=ಭವಿಷ್ಯ, ಭಾಗವತ(೨)
ಬ್ರತ್ರಯಂ=ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮವೈವರ್ತ(೩)
ವಚತುಷ್ಟಯಂ=ವರಾಹ, ವಾಮನ, ವಾಯು, ವಿಷ್ಣು (೪)
ಅ=ಅಗ್ನಿ (೧)
ನಾ=ನಾರದ(೧)
ಪ=ಪದ್ಮ(೧)
ಲಿಂ=ಲಿಂಗ(೧)
ಗ=ಗರುಡ(೧)
ಕೂ=ಕೂರ್ಮ(೧)
ಸ್ಕಾ=ಸ್ಕಾಂದ(೧)

ಒಟ್ಟು ಹದಿನೆಂಟು ಪುರಾಣಗಳನ್ನು ಉದಾಹರಿಸುತ್ತಾರೆ.

ಅಷ್ಟಸಿದ್ದಿಗಳು:
ಅಣಿಮಾ ಮಹಿಮಾ ಚೈವ ಗರಿಮಾ ಲಘ್ಹಿಮಾ ತಥಾ
ಪ್ರಾಪ್ತಿಃಪ್ರಾಕಾಮ್ಯಮೀಶಿತ್ವಂ ವಶಿತ್ವಂ ಚಾಷ್ಟಸಿದ್ಧಯಃ||

ಅಣಿಮಾ= ಸಣ್ಣವಾಗುವುದು, ಮಹಿಮಾ=ದೊಡ್ಡಗಾಗುವುದು, ಗರಿಮಾ=ಭಾರವಾಗುವುದು, ಲಘಿಮಾ=ಹಗುರಾಗುವುದು, ಪ್ರಾಪ್ತಿಃ=ಬೇಕಾದ್ದನ್ನು ಪಡೆಯುವುದು, ಪ್ರಾಕಾಮ್ಯಂ=ಬೇಕಾದ ರೂಪ ಧರಿಸುವುದು, ಈಶಿತ್ವಂ=ಒಡೆತನ, ವಶಿತ್ವಂ=ಎಲ್ಲರನ್ನು ಎಲ್ಲವನ್ನು ತನ್ನ ಬಸಕ್ಕೆ ಒಳಪಡಿಸಿಕೊಳ್ಳುವುದು ಇವು ಅಷ್ಟ ಸಿದ್ಧಿಗಳು.