ವರಕವಿ ಬೇಂದ್ರೆಯವರಿಗೆ ನಮನಗಳು ; ಹಿರಿಯಕವಿ, ಡಾ. ಚನ್ನವೀರಕಣವಿಯವರು, ತಮ್ಮ ಗುರುಗಳಾದ ಬೇಂದ್ರೆಯನ್ನು, ಸ್ಮರಿಸಿಕೊಂಡರು !
ಈಗ್ಗೆ ಸುಮಾರು ೧೧೨ ವರ್ಷಗಳಹಿಂದೆ, ೧೮೯೬ ರ ಜನವರಿ, ೩೧ ರಂದು, ಧಾರವಾಡದ ಪುಣ್ಯಭೂಮಿಯಲ್ಲಿ ಮರಾಠಿಮೂಲದ ಚಿತ್ಪಾವನ್ ಬ್ರಾಹ್ಮಣರ ಮನೆಯಲ್ಲಿ ಒಂದು ಶಿಶು ಜನಿಸಿ, ಬೃಹತ್ ಪ್ರಮಾಣದಲ್ಲಿ ಬೆಳೆದು, ಕರ್ನಾಟಕ ಮನೆಮನೆಗಳಲ್ಲಿ ಕನ್ನಡಭಾಷೆಯ ಸಾಹಿತ್ಯಪರಂಪರೆಯನ್ನು ಸುಮಾರು ೮ ದಶಕಗಳ ಕಾಲ ಮೆರೆಸಿ, ಕನ್ನಡ ಸಾರಸ್ವತಲೋಕವನ್ನು ಸಮೃದ್ದಿಮಾಡಿತು. ಆ ಮಗುವೇ ಮುಂದೆ ಬೆಳೆದು, ನಮಗೆಲ್ಲಾ ’ಅಂಬಿಕಾತನಯದತ್ತ ’ ನೆಂದು ಹೆಸರುವಾಸಿಯಾಗಿರುವುದು, ನಮ್ಮೆಲ್ಲರಿಗೂ ತಿಳಿದ ಸಂಗತಿ. ಕನ್ನಡಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅನನ್ಯ !
ಧಾರವಾಡದ ಮಣ್ಣಿನಲ್ಲಿ, ಕನ್ನಡದ ಜೊತೆಗೆ, ಮರಾಠಿ ಭಾಷೆಯ ಕಂಪು ಹಾಗೂ ಅದರ ಅದ್ಭುತಸೌಂದರ್ಯವನ್ನು ಅನೇಕ ಸನ್ನಿವೇಷಗಳಲ್ಲಿ ಕಾಣುತ್ತೇವೆ. ಕನ್ನಡ-ಮರಾಠಿಭಾಷೆಗಳೆರಡೂ ಅಂತರ್ಜಲದಂತೆ ಪ್ರವಹಿಸಿ ಬೆರೆತಿರುವುದರಿಂದ ಅಲ್ಲಿನ ಕನ್ನಡದ ಸೊಗಡೇ ಬೇರೆ ! ಇದು ಎಲ್ಲರಿಗೂ ತಿಳಿದ ಸಂಗತಿ. ಗಮನಿಸಬಹುದಾದ ಒಂದು ಅಂಶವೆಂದರೆ, ಧಾರವಾಡದ ಬಹುತೇಕ ಕವಿಗಳ ಮನೆಮಾತು ಮರಾಠಿ, ಆದರೆ, ಕನ್ನಡಭಾಷೆಯಬಗ್ಗೆ ಅಪಾರ ಒಲವಿನಿಂದಾಗಿ ಉತ್ಕೃಷ್ಟ ಸಾಹಿತ್ಯರಚನೆಯಾಯಿತು. [ಮೊದಲು, ಭಾಷಾವಾರು ಪ್ರಾಂತ್ಯಗಳಾಗಿ ಬಿಭಾಗಿಸುವ ಮುನ್ನ, ಧಾರವಾಡ ಬಾಂಬೆಪ್ರಾವಿನ್ಸ್ ನಲ್ಲಿದ್ದ ಪ್ರಯುಕ್ತ, ಮರಾಠಿಭಾಷೆಯ ಪ್ರಭಾವ ಅಧಿಕವಾಗಿರುವ ಕಾಣಬರುತ್ತದೆ.]
ಬೆಂದ್ರೆಯರಿಗಿಂತ ೧೪ ವರ್ಷ ಕಿರಿಯ, ಪ್ರೊ. ಎಸ್. ಆರ್. ಮಳಗಿ (ಸೇತುರಾಮ್ ಮಳಗಿ) ಹಾಗೂ ಬೆಂದ್ರೆಯವರ ಒಡನಾಟ ಅತ್ಯಂತ ರೋಚಕ ಎನ್ನುತ್ತಾರೆ, ಪ್ರೊ. ಮಳಗಿ. ಕಾವ್ಯಗಾರುಡಿಗ, ವರಕವಿ, ಮಾಯ್ಕಾರ, ಬೇಂದ್ರೆಯವರ ಆಪ್ತ ಸಾಂಗತ್ಯದ ಸವಿಯನ್ನುಂಡವರು ಅವರು. ಅವರು ಸ್ಥಾಪಿಸಿದ ಗೆಳೆಯರಬಳಗದ ಸದಸ್ಯರು ಕೂಡ. ತಮ್ಮ ೯೯ ನೆಯ ಹರೆಯದಲ್ಲೂ ಬೇಂದ್ರೆಯವರ ಹಲವಾರು ಸಂಗತಿಗಳನ್ನು ಸ್ವಲ್ಪವೂ ಮರೆಯದೆ, ಅಧಿಕೃತವಾಗಿ ಹಂಚಿಕೊಳ್ಳಬಲ್ಲ ಹಿರಿಯಚೇತನ. ’ತಮ್ಮನ್ನು ಬೇಂದ್ರೆಯವರು ತುಂಬಾಹಚ್ಚಿಕೊಂಡಿದ್ದರು. ಯಾವ ಹೊಸಕವನ ಬರೆದರೂ, ತಗಂಡುಬಂದು ಓದಿತೋರಿಸುತ್ತಿದ್ದರು.’ ಅವರಿಗೆ ಸಂಗೀತದ ಜ್ಞಾನವಿತ್ತು. ಹಾಡುವ ಗೀಳಿದ್ದಿದ್ದರಿಂದ ಮಳಗಿ ಮೇಷ್ಟ್ರ ಜೋಡಿ ಹಾಡಿಸಿ ಸವಿಯುತ್ತಿದ್ದರು. ಮಳಗಿ ಮಾಸ್ತರ್, ಬೆಂದ್ರೆಯವರಿಗಾಗಿ ನೂರಾರು ಹಾಡುಗಳನ್ನು ಹಾಡಿದ್ದಾರೆ. ಬೆಂದ್ರೆ, ಜೀವನದಲ್ಲಿ ಬಹಳ ನೋವನ್ನುಂಡವ್ಯಕ್ತಿ. ಆದರೂ ಅದನ್ನು ಹೊರಗಡೆ ತೋರ್ಪಡಿಸದೆ, ಹಾಸ್ಯ, ವಿಡಂಬನೆಗಳನ್ನು ಮಾಡುತ್ತಾ ಮರೆಯುತ್ತಿದ್ದರು. ಮಳಗಿಮಾಸ್ತರು ಮತ್ತೊಂದು ಸಂಗತಿಯನ್ನು ತಮ್ಮ ನೆನೆಪಿನಾಳದಿಂದ ಹೊರತೆಗೆದಿದ್ದಾರೆ. ನಾವು ಪದೇ ಪದೇ ಓದಿ ಆಕರ್ಶಿತರಾಗಿರುವ ಸಾಧನಕೇರಿಯ ಬಗ್ಗೆ. ಸಾದನಕೇರಿಯಲ್ಲಿ ಅವರು ಸ್ವಂತಮನೆ ಮಾಡಿಕೊಂಡಿದ್ದು, ಒಂದು ವಿಶೇಷ ಸಂಗತಿಯೇ ! ಬಹಳ ವರ್ಷ ಅಂದರೆ, ಸುಮಾರು ೧೯೨೯ ರ ವರೆಗೂ ಬೇಂದ್ರೆಯವರು, ಬಾಡಿಗೆ ಮನೆಯಲ್ಲೇ ವಾಸ್ತವ್ಯಮಾಡಿದ್ದರು. ಸ್ವಂತಮನೆಯಿರಲಿಲ್ಲ. ’ಕರ್ನಾಟಕ ಕುಲಗುರು, ಆಲೂರ್ ವೆಂಕಟರಾಯರು,” ಸಾಧನಕೇರಿಯಲ್ಲಿ, ತಮ್ಮ ಸಾಧನೆ, ತಪಸ್ಸು ಇತ್ಯಾದಿಗಳನ್ನು ಮಾಡಿಕೊಳ್ಳಲು ಒಂದು ವಿಶಾಲವಾದ ಮನೆಯನ್ನು ಹೊಂದಿದ್ದರು. ಬೇಂದ್ರೆಯವರನ್ನು ಕಂಡರೆ ಆಲೂರ್ ರವರಿಗೆ, ಅತ್ಯಂತ ಪ್ರೀತಿ. ಹಾಗೆಯೇ ಹಿರಿಯರಾದ ಆಲೂರ್, ಬೇಂದ್ರೆಯವರಪಾಲಿಗೆ, ದೇವರಸಮಾನ. ಹೀಗಾಗಿ, ತಮ್ಮಮನೆಯನ್ನು ಅವರು ಬೇಂದ್ರೆಯವರಿಗೆ ೧೯೨೯ ರಲ್ಲಿ, ಮಾರಾಟಮಾಡಿದರು.
ವಿದ್ವತ್ಪೂರ್ಣ ಭಾಷಣಗಳಿಂದ ವಿದ್ಯಾರ್ಥಿಗಳಮೇಲೆ ಮೋಡಿಮಾಡಿದ್ದರು. ಬೇಂದ್ರೆಯವರ ಕೊನೆಯದಿನಗಳಲ್ಲಿ ಬಾಂಬೆಯಲ್ಲಿ ಚಿಕಿತ್ಸೆ ಕೊಡಿಸಿದ್ರು. ವೈದ್ಯರಸಲಹೆಯಂತೆ ಅಲ್ಲೇ ಇರಬೇಕಾಯ್ತು. "ಖರೇ ಹೇಳ್ಲಾ ? ಅವ್ರಿಗೆ ಧಾರವಾಡದಲ್ಲಿ ಸಾಯ್ಬೇಬ್ಕಂತ ಆಸೆಯತ್ತು. ಆದರೆ ಬಾಂಬೆ ಅಭಿಮಾನಿಗಳು ಅಲ್ಲಿಯೇ ಅಂತ್ಯಕ್ರಿಯೆ ಆಗ್ಬೇಕಂತ ಹಟಹಿಡಿದ್ರು"-ಎನ್ನುತ್ತಾರೆ, ಮಳಗಿಯವರು. (ಬೇಂದ್ರೆಯೆಂಬಕಲ್ಲುಸಕ್ಕರೆ, ರೋಹಿಣಿ ಮುಂಡಾಜಿ, ಮಯೂರ, ಪು. ೯೬.ಜನವರಿ, ೨೦೦೯)
ಧಾರವಾಡವೆಂದೊಡನೆ ಅಲ್ಲಿನ ಉತ್ಕೃಷ್ಟ ಪೇಢೆಯಜೊತೆಗೆ, ವರಕವಿ, ದಾ. ರ ಬೇಂದ್ರೆ, ಹಾಗೂ ಅವರ ಸಾಧನಕೇರಿ, ಡಾ. ವಿ. ಕೃ. ಗೋಕಾಕ್, ಮನೋಹರ ಗ್ರಂಥಮಾಲ, ಪ್ರಕಾಶನಾಲಯದಸಂಸ್ಥಾಪಕ, ಜಿ. ಬಿ ಜೋಷಿ [ಧಾರವಾಡದ ಮಹಾಮೌನಿ] ಹಾಗೂ ಅಲ್ಲಿ ಉದಯಿಸಿದ ಅನೇಕ ಕವಿವರೇಣ್ಯರು, ಹಾಗೂ ಅವರ ಕಾವ್ಯಸಂಪತ್ತು, ಥಟ್ಟನೆ ನಮ್ಮ ಮನಃ ಪಟಲದಮೇಲೆ ಥಟ್ಟನೆ ಸುರುಳಿ-ಸುರುಳಿಯಾಗಿ ಸುಂದರ ಚಿತ್ರಗಳು, ಮೂಡಿಬರುತ್ತವೆ ! ಧಾರವಾಡ ಆಕಾಶವಾಣಿಯ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಬಾಲ್ಯದದಿನಗಳಿಂದಲೂ ಕೇಳುತ್ತಾ ಬೆಳೆದ ನನಗೆ, ಎನ್ಕೆ, ನಾರಾಯಣ ಸಂಗಮ, ವಸಂತಕವಲಿ, ಯಮುನಾಮೂರ್ತಿ ಇತ್ಯಾದಿ ಕಲಾವಿದರು ನೆನಪಿಗೆ ಬರುತ್ತಾರೆ. ಕನ್ನಡದ ಡೈಜೆಸ್ಟ್ ಆಗಿ ಬಹಳಕಾಲ ಮಂಚೂಣಿಯಲ್ಲಿದ್ದ ರಂಗನಾಥದಿವಾಕರರ, 'ಕಸ್ತೂರಿ' ಮಾಸ ಪತ್ರಿಕೆ, ಅಂತಹವರಲ್ಲಿ ಈಗ ನಮ್ಮೊಡನಿರುವ ಹಿರಿಯಕವಿಗಳಾದ ಚನ್ನವೀರಕಣವಿಯರು ಪ್ರಮುಖರು. ಅವರ ಉಪನ್ಯಾಸವನ್ನು ಕೇಳಲು ನಾನು ಜನವರಿ, ೧೭, ೨೦೦೯ ರಂದು ಮೈಸೂರು ಅಸೋಸಿಯೇಷನ್ ಗೆ ಹೋಗಿದ್ದೆ. ಈಗ ಬೇಂದ್ರೆಯವರು ಜೀವಂತವಾಗಿದ್ದಿದ್ದರೆ, ೧೧೨ ವರ್ಷತುಂಬುತ್ತಿತ್ತು. ಈಗಲೂ ಕನ್ನಡ ಸಾರಸ್ವತ ವಾಜ್ಞ್ಮಯದಲ್ಲಿ ಅವರು ಅಮರರಾಗಿ ಕನ್ನಡಿಗರ ಎದೆಯಲ್ಲಿ ಸದಾ ನೆಲೆಸಿದ್ದಾರೆ.
ಮೈಸೂರು ಅಸೋಸಿಯೇಷನ್, ಮುಂಬೈ, ಮತ್ತು ಮುಂಬೈ ವಿಶ್ವವಿದ್ಯಾಲಯ ದ ಕನ್ನಡ ವಿಭಾಗಗಳ, ಸಂಯುಕ್ತ ಆಶ್ರಯದಲ್ಲಿ, ಬಂಗಾರದ ಹಬ್ಬದ ದತ್ತಿ ಉಪನ್ಯಾಸ-೨೦೦೯, ಶನಿವಾರ, ೧೭-೦೧-೨೦೦೯ ಸಂಜೆ ೬-೩೦ ಕಿರುಸಭಾಗೃಹದಲ್ಲಿ ನಾಡೋಜ, ಡಾ. ಚೆನ್ನವೀರ ಕಣವಿಯವರಿಂದ ಉಪನ್ಯಾಸವನ್ನು ಎರ್ಪಡಿಸಿದ್ದರು. ವಿಷಯ : "ವರಕವಿ ಬೇಂದ್ರೆ ಮತ್ತು ನಾವು ; ಒಂದು ಸೃಜನಶೀಲ ಪ್ರತಿಕ್ರಿಯೆ"
ಮುಂಬೈ ವಿಶ್ವವಿದ್ಯಾಲಯದ, ಕನ್ನಡ ವಿಭಾಗದ ಮುಖ್ಯಸ್ಥರಾದ, ಡಾ. ಜಿ. ಎನ್. ಉಪಾಧ್ಯೆ, ಹಾಗೂ ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷ, ರಾಮಭದ್ರರೂ ಉಪಸ್ಥಿತರಿದ್ದರು. ಕಾರ್ಯಕ್ರಮ, ೬-೩೦ ಕ್ಕೆ ಸರಿಯಾಗಿ ಪ್ರಾರಂಭವಾಯಿತು. ಮೈಸೂರು ಅಸೋಸಿಯೇಷನ್ ನ ಸದಸ್ಯೆ, ಶ್ಯಾಮಲಾರಾಜೇಶ್ ರವರ, ಸುಗಮಸಂಗೀತದ ೪ ಹಾಡುಗಳು ಕಾರ್ಯಕ್ರಮಕ್ಕೆ ಶೋಭೆನೀಡಿದವು. ಡಾ. ಕಣವಿಯವರೂ ಕೆಲವು ಕ್ಷಣ ಕಾಲ ಶ್ರೋತೃಗಳಮಧ್ಯೆ ಶ್ರೋತೃವಾಗಿ ಕುಳಿತು, ಸುಗಮಸಂಗೀತವನ್ನು ಆಲಿಸಿ ಆನಂದಿಸಿದರು. ಬಿ.ಎಮ್. ಶ್ರೀ ರವರ ಕವನದಿಂದ ಆರಂಭವಾದ ಸಂಜೆ, ಬೇಂದ್ರೆಯವರರು ಒಂದು ನಾಟಕಕ್ಕೆ ಬರೆದ, ’ ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ,’ ಕವಿತೆಯಿಂದ ಮುಕ್ತಾಯವಾಯಿತು.
೧. ’ ಕರುಣಾಳು ಬಾಬೆಳಕೆ, ಮುಸಿಕಿದೀಮಬ್ಬಿನಲಿ, ಕೈಹಿಡಿದು ನಡೆಸೆನ್ನನು”
ಕರುಣಾಳು ಬಾ ಬೆಳಕೆ
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು
ಹೇಳಿ ನನ್ನಡಿಯಿಡಿಸು ಬಲುದೂರ ನೂಟವನು
ಕೀಳಿನೋಡನೆಯೆ ಸಾಕು ನಿನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸು ಎನುತ
ನನ್ನ ದಾರಿಯ ನಾನೇ ನೋಡಿ ಹಿಡಿದೆನು ಇನ್ನು
ಕೈ ಹಿಡಿದು ನಡೆಸು ನೀನು
ಮಿರುಗು ಬಣ್ಣಕೆ ಬೆರೆತು ಭಯಮರೆತು ಕೊಬ್ಬಿದೆನು
ಮೆರೆದಾಯ್ತು ನೆನೆಯದಿರು ಹಿಂದಿನದೆಲ್ಲ
ಇಷ್ಟುದಿನ ಸಲಹಿರುವೆ ಮೂರ್ಖನನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೋಳೆಗಳ ಹಾದು
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೋಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ
ಡಾ. ಚೆನ್ನವೀರ ಕಣಿವೆಯವರ ಕವನ :
೨. ವಿಶ್ವನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ.
ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ
ಜಯಭಾರತಿ, ಕರುನಾಡ ಸರಸ್ವತಿ
ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ.
ವಿಶ್ವವಿನೂತನ…………………….||೧||
ಗಂಗ, ಕದಂಬಾ, ರಾಷ್ಟ್ರಕೂಟ ಬಲ
ಚಲುಕ್ಯ, ಹೊಯ್ಸಳ,ಬಲ್ಲಾಳ
ಹುಕ್ಕ,ಬುಕ್ಕ,ಪುಲಕೇಶಿ, ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ.
ವಿಶ್ವವಿನೂತನ…………………….||೨||
ಆಚಾರ್ಯತ್ರಯ ಮತಸಂಸ್ಥಾಪನ
ಬಸವಾಲ್ಲಮ ಅನುಭಾವ ನಿಕೇತನ
ಶರಣ, ದಾಸ, ತೀರ್ಥಂಕರ ನಡೆ-ನುಡಿ ವಿಶ್ವತಮೋಹಾರಿ.
ವಿಶ್ವವಿನೂತನ…………………….||೩||
ಪಂಪ, ರನ್ನ, ನೃಪತುಂಗ, ಹರೀಶ್ವರ
ರಾಘವಾಂಕ, ಸರ್ವಜ್ಞ, ಪುರಂದರ
ಕುವರವ್ಯಾಸ, ರತ್ನಾಕರ, ಜನಪದ ಕಾವ್ಯ ಸಮುದ್ರವಿಹಾರಿ.
ವಿಶ್ವವಿನೂತನ…………………….||೪||
ಸಾಯಣ, ವಿದ್ಯಾರಣ್ಯ, ಭಾಸ್ಕರ
ಮಹಾದೇವಿ, ಮುಕ್ತಾಯಿ ಮಹಂತರ,
ಕಂತಿ-ಹಂಪ, ಸುಮನೋರಮೆ-ಮುದ್ದಣ
ಸರಸ ಹೃದಯ ಸಂಚಾರಿ.
ವಿಶ್ವವಿನೂತನ…………………….||೫||
ತ್ಯಾಗ-ಭೋಗ-ಸಮಯೋಗದ ದೃಷ್ಟಿ
ಬೆಳುವೊಲ, ಮಲೆ, ಕರೆ, ಸುಂದರ ಸೃಷ್ಟಿ
ಜ್ಞಾನದ, ವಿಜ್ಞಾನದ, ಕಲೆಯೈಸಿರಿ,
ಸಾರೋದಯ ಧಾರಾನಗರಿ.
ವಿಶ್ವವಿನೂತನ…………………….||೬||
ಅರಿವೇ ಗುರು, ನುಡಿ ಜ್ಯೋತಿರ್ಲಿಂಗ,
ದಯವೇ ಧರ್ಮದ ಮೂಲ ತರಂಗ
ವಿಶ್ವಭಾರತಿಗೆ ಕನ್ನಡದಾರತಿ,
ಮೊಳಗಲಿ ಮಂಗಲ ಜಯಭೇರಿ.
ವಿಶ್ವವಿನೂತನ…………………….||೭||
೩. ಯಾಕೋಕಾಣೆ ರುದ್ರ ವೀಣೆ ಮೀಟುತಿರುವುದು.
೪. ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ-(ಬೇಂದ್ರೆಯವರು ಒಂದು ನಾಟಕಕ್ಕೆ ಬರೆದ ಅತಿ-ಜನಪ್ರಿಯ ಕವಿತೆ.) (ಸಖೀಗೀತ - ಕವನ ಸಂಗ್ರಹ)
ಹುಬ್ಬಳ್ಳಿಯಾಂವಾ
ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
ವಾರದಾಗ ಮೂರುಸರತಿ ಬಂದು ಹೋದಂವಾ || ಪಲ್ಲವಿ ||
ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ
ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ
ಇನ್ನೂ ಯಾಕ ಬರಲಿಲ್ಲ ..................
ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇದಾಂವಾ
ಬಂಗಾರ-ಹುಡೀಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಇನ್ನೂ ಯಾಕ ಬರಲಿಲ್ಲ ...............
ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹೀಡೀಲೆ ರೊಕ್ಆ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈಮಾಡಿದರ ಹಿಡs; ಬಿಡಾಂವಾ
ಇನ್ನೂ ಯಾಕ ಬರಲಿಲ್ಲ ..............
ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗುಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ ಬರಲಿಲ್ಲ ..............
ಹುಟ್ಟಾಯಾಂವಾ ನಗಿಕ್ಯಾದಿಗೀ ಮೂಡಸಿಕೊಂದಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯ ಮಡಿಚಿಕೊಂದಾಂವಾ
ಜಲ್ಮಕ ಜಲ್ಮಕ ಗೆಣ್ಯಾ ಆಗಿ ಬರತೇನೆಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
ಇನ್ನೂ ಯಾಕ ಬರಲಿಲ್ಲ.............
ಸೆಟ್ಟರ ಹುಡುಗ ಸೆಟಗೊಂಢೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕುತೈತ್ರೆ ಬಿಟ್ಟ ಎಲ್ಲ ಹ್ಯಾಂವಾ
ಎಲ್ಲೀ! ಮಲ್ಲೀ! ಪಾರೀ! ತಾರೀ! ನೋಡೀರೇನವ್ವಾ
ನಿಂಗೀ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ
ಇನ್ನೂ ಯಾಕ ಬರಲಿಲ್ಲ ..............
ಮುಂಬೈ ವಿಶ್ವವದ್ಯಾಲಯದ ಕನ್ನಡ ವಿಭಾಗದವತಿಯಿಂದ ಬಂದಿದ್ದ ವಿದ್ಯಾರ್ಥಿನಿ, ಕು. ಜ್ಯೋತಿ ಸುವರ್ಣ, ಸೂತ್ರಧಾರಿಣಿಯಾಗಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೇರಿಸಿದರು. ಮುಂಬೈ ವಿಶ್ವವಿಧ್ಯಾಲಯದ ಕನ್ನಡ ಶಾಖೆಯಮುಖ್ಯಸ್ಥ, ಡಾ. ಉಪಾಧ್ಯೆ, ಪ್ರಾಸ್ತಾವಿಕವಾಗಿ ಡಾ. ಚನ್ನವೀರ ಕಣವಿಯವರನ್ನು ಸಭಿಕರಿಗೆ ಪರಿಚಯಿಸಿ, ಅವರನ್ನೂ ಹಾಗೂ ಸಭಿಕರನ್ನೂ ಸಭೆಗೆ ಆಹ್ವಾನಿಸಿದರು. ಉಪಾಧ್ಯೆಯವರು, ಡಾ. ಕಣವಿಯವರಿಗೆ ಧಾರವಾಡದಲ್ಲಿ ಅವರ ೭೯ ನೇ ವರ್ಷದ ಸಂದರ್ಭದಲ್ಲಿ ಸಲ್ಲಿಸಿದ ಗೌರವ ಸನ್ಮಾನ ಸಮಾರಂಭಕ್ಕೆ ಮುಂಬೈನಿಂದ ಧಾರವಾಡಕ್ಕೆ ಧಾವಿಸಿದ್ದ ಸಂದರ್ಭವನ್ನು ನೆನೆಸಿಕೊಳ್ಳುತ್ತಾ, ಅಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರಚಂಡ ಅಭಿಮಾನಿಗಳ ಬಗ್ಗೆ ಬೆಳಕುಚೆಲ್ಲುತ್ತಾ, ಡಾ. ಕಣವಿಯವರ, ಜನಪ್ರಿಯತೆಯಬಗ್ಗೆ ವಿಸ್ಮಯವನ್ನು ವ್ಯಕ್ತಪಡಿಸಿದರು. ತಮ್ಮ ಕವನಗಳಿಂದ ಕನ್ನಡನಾಡಿನುದ್ದಕ್ಕೂ ಅಪಾರ ಅಭಿಮಾನಿಗಳನ್ನು ಕಣವಿಯವರು ಸಂಪಾದಿಸಿದ್ದಾರೆ. ನಿಜಕ್ಕೂ ಡಾ. ಕಣವಿಯರು, ನಮ್ಮ ಉತ್ತರಕರ್ನಾಟಕದ ಅತ್ಯುತ್ತಮ ಕವಿಶ್ರೇಷ್ಠರಲ್ಲೊಬ್ಬರು. ಬೇಂದ್ರೆಯವರ ತರುವಾಯ ಆ ಹಾದಿಯಲ್ಲಿ ಅವರ ಸಾಹಿತ್ಯ-ಕೃಷಿ ಎಲ್ಲರ ಪ್ರಶಂಸೆಗೆಪಾತ್ರವಾಗಿದೆ.
ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷ, ರಾಮಭದ್ರರವರು, ಡಾ. ಚನ್ನವೀರಕಣವಿಯವರಿಗೆ ಶಾಲುಹೊದಿಸಿ, ಪುಷ್ಪಗುಚ್ಛವನ್ನು ನೀಡಿ ಗೌರವಿಸಿದರು. ನಂತರ, ಡಾ. ಕಣವಿಯವರ ಉಪನ್ಯಾಸಕ್ಕಾಗಿಯೇ ಡಾ. ಗಿರಿಜಾಶಾಸ್ತ್ರಿ ಹಾಗೂ ಅವರ ಸಂಪಾದಕವೃಂದದವರಿಂದ, ಸಿದ್ಧಪಡಿಸಿದ, ಅಸೋಸಿಯೇಷನ್ ನ 'ನೇಸರು ಪತ್ರಿಕೆ' ಯ ವಿಶೇಷಸಂಚಿಕೆಯನ್ನು ಡಾ. ಚನ್ನವೀರ ಕಣವಿಯವರ ಅಮೃತಹಸ್ತದಿಂದ ಬಿಡುಗಡೆಮಾಡಲಾಯಿತು. ಡಾ. ಚನ್ನವೀರ ಕಣವಿಯವರ ಮಗ, ಚಿ. ಶಿವಾನಂದಕಣವಿಯರನ್ನು ವೇದಿಕೆಯಮೇಲೆ ಆಹ್ವಾನಿಸಿ, ಅವರ ತಂದೆಯವರಕೈನಿಂದ ಪುಷ್ಪಗುಚ್ಛವನ್ನು ಕೊಡಿಸಲಾಯಿತು.
ಈಗಾಗಲೇ ಸುಮಾರು ೨೮ ವರ್ಷಗಳಿಂದ ನಡೆದುಕೊಂಡುಬರುತ್ತಿರುವ ದತ್ತಿ ಉಪನ್ಯಾಸಮಾಲಿಕೆಯಲ್ಲಿ, ಅನೇಕ ದೈತ್ಯಪ್ರತಭೆಗಳು ಅಸೋಸಿಯೇಷನ್ ಗೆ ಬಂದು, ತಮ್ಮ ಉಪನ್ಯಾಸಗಳನ್ನು ಮಂಡಿಸಿದ್ದಾರೆ. ಡಾ. ಶಿವರಾಮಕಾರಂತ, ಶ್ರೀರಂಗ, ಡಾ. ದೇ. ಜ. ಗೌಡ, ಡಾ.ಪರಮೇಶ್ವರಭಟ್ಟ, ಡಾ. ಹಾ. ಮಾ. ನಾಯಕ,[೧೯೩೧-]ಜಿ. ಟಿ. ನಾರಾಯಣರಾವ್, ಡಾ. ಜಿ. ಎಸ್. ಎಸ್, ಡಾ. ಚಂದ್ರಶೇಖರ ಕಂಬಾರ, ಸೂರ್ಯನಾಥ ಕಾಮತ್, ಡಾ. ಎಚ್. ಕೆ. ರಂಗನಾಥ, ಡಾ. ಎಸ್. ಕೆ. ರಾಮಚಂದ್ರರಾವ್, ಡಾ. ಯು. ಆರ್. ಅನಂತಮೂರ್ತಿ, ಆ. ರಾ. ಮಿತ್ರ, ಡಾ. ಮತ್ತೂರು ಕೃಷ್ಣಮೂರ್ತಿ, ಡಾ. ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ, ಡಾ. ಕೀರ್ತಿನಾಥ ದತ್ತಾತ್ರೇಯ ಕುರ್ತುಕೋಟಿ [ಅಕ್ಟೋಬರ್, ೧೩, ೧೯೨೮-ಜುಲೈ, ೩೧, ೨೦೦೩], ಕೀರ್ತಿನಾಥ ಕುರ್ತುಕೋಟಿ, ಶತಾವಧಾನಿ, ಗಣೇಶ್, ಡಾ. ಎಲ್. ಎಸ್. ಶೇಷಗಿರಿರಾವ್, ಡಾ. ಎಸ್. ಎಲ್. ಭೈರಪ್ಪ. ಇವರಲ್ಲಿ ಡಾ. ಚನ್ನವೀರಕಣವಿಯವರು ಕೊನೆಯವರು.
ಬೇಂದ್ರೆಯವರ [೧೮೯೬-೧೯೮೧] ಬಗ್ಗೆ ಕುರ್ತುಕೋಟಿಯವರು, ಹಾಗೂ ಅಸೋಸಿಯೇಷನ್ ಗೆ ಭೇಟಿಕೊಟ್ಟಿದ್ದ ಅನೇಕರು ಹಿಂದೆ ತಮ್ಮ ಭಾಷಣದಲ್ಲಿ ಅನುಭವಗಳನ್ನು ವ್ಯಕ್ತಪಡಿಸಿದ್ದರು. ಕಣವಿಯವರು ಹಿಂದೆ, ಅಸೋಸಿಯೇಷನ್ ನ ’ಅಮೃತಮಹೋತ್ಸವ,’ ದಲ್ಲಿ ಪಾಲುಗೊಂಡ ಸವಿನೆನೆಪನ್ನು ಎಲ್ಲರೊಡನೆ ಹಂಚಿಕೊಂಡರು. ಬೇಂದ್ರೆಯವರಿಗೆ ಮುಂಬೈನ ಪರಿಸರ ಹಾಗೂ ಅದರಬಗ್ಗೆ ಭಾವನಾತ್ಮಕವಾಗಿದ್ದ ಸಂಬಂಧ ಅವರ ಅಂತ್ಯದವರೆಗೂ ಹಿಂಬಾಲಿಸಿತ್ತು ಎನ್ನುವಮಾತಿಗೆ ಉದಾಹರಣೆಕೊಡುತ್ತಾ, ಮುಂಬೈನ ಆಕಾಶವಾಣಿಯಲ್ಲಿ ಅವರ ಕೊನೆಯ ಕವನ ಪ್ರಸಾರವಾಯಿತು, ಎನ್ನುವಮಾತನ್ನು ಸ್ಮರಿಸಿಕೊಂಡರು. ತಮ್ಮ ೮೫ ರಪ್ರಾಯದಲ್ಲಿ ಅವರು, 'ಹರಿಕಿಷನ್ ದಾಸ್' ಆಸ್ಪತ್ರೆಯಲ್ಲಿದಾಖಲಾಗಿದ್ದು ಅಲ್ಲಿಯೇ ಕೊನೆಯುಸಿರೆಳೆದರು. ಆದಿನದ ಸಾಯಂಕಾಲವೇ, ಮುಂಬೈ ನ ದಾದರ್ ಬಳಿಯ ಶಿವಾಜಿಪಾರ್ಕ್ ಸ್ಮಶಾನದಲ್ಲಿ ಅವರ ಅಂತಿಮಕ್ರಿಯೆ ಜರುಗಿತು. ಅದಾದ ೧೧ ದಿನಗಳನಂತರ ಅವರ ಚಿತಾಭಸ್ಮ, ಅವರ ಪ್ರೀತಿಯ ಹುಟ್ಟಿದೂರಾಗಿದ್ದ ಧಾರವಾಡಕ್ಕೆ ತಂದರು.
ಡಾ. ಬೇಂದ್ರೆಯವರ ವ್ಯಕ್ತಿಚಿತ್ರ, ಹಾಗೂ ಕಾವ್ಯಸಂಕಲನಗಳ ಬಗ್ಗೆ ನಮಗೆ ’ಇಂಟರ್ನೆಟ್,’ ನಲ್ಲೂ ಸಹಿತ ಮಾಹಿತಿ ಲಭ್ಯವಿದೆ :
(ಪ್ರಥಮ ಆವೃತ್ತಿಯ ವರ್ಷದೊಂದಿಗೆ)
* ೧೯೨೨: ಕೃಷ್ಣಾಕುಮಾರಿ;
* ೧೯೩೨: ಗರಿ;
* ೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
* ೧೯೩೭: ಸಖೀಗೀತ;
* ೧೯೩೮: ಉಯ್ಯಾಲೆ;
* ೧೯೩೮: ನಾದಲೀಲೆ;
* ೧೯೪೩: ಮೇಘದೂತ;
* ೧೯೪೬: ಹಾಡು ಪಾಡು;
* ೧೯೫೧: ಗಂಗಾವತರಣ;
* ೧೯೫೬: ಸೂರ್ಯಪಾನ;
* ೧೯೫೬: ಹೃದಯಸಮುದ್ರ;
* ೧೯೫೬: ಮುಕ್ತಕಂಠ;
* ೧೯೫೭: ಚೈತ್ಯಾಲಯ;
* ೧೯೫೭: ಜೀವಲಹರಿ;
* ೧೯೫೭: ಅರಳು ಮರಳು;
* ೧೯೫೮: ನಮನ;
* ೧೯೫೯: ಸಂಚಯ;
* ೧೯೬೦: ಉತ್ತರಾಯಣ;
* ೧೯೬೧: ಮುಗಿಲಮಲ್ಲಿಗೆ;
* ೧೯೬೨: ಯಕ್ಷ ಯಕ್ಷಿ;
* ೧೯೬೪: ನಾಕುತಂತಿ;
* ೧೯೬೬: ಮರ್ಯಾದೆ;
* ೧೯೬೮: ಶ್ರೀಮಾತಾ;
* ೧೯೬೯: ಬಾ ಹತ್ತರ;
* ೧೯೭೦: ಇದು ನಭೋವಾಣಿ;
* ೧೯೭೨: ವಿನಯ;
* ೧೯೭೩: ಮತ್ತೆ ಶ್ರಾವಣಾ ಬಂತು;
* ೧೯೭೭: ಒಲವೇ ನಮ್ಮ ಬದುಕು;
* ೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
* ೧೯೮೨: ಪರಾಕಿ;
* ೧೯೮೨: ಕಾವ್ಯವೈಖರಿ;
* ೧೯೮೩: ತಾ ಲೆಕ್ಕಣಕಿ ತಾ ದೌತಿ;
* ೧೯೮೩: ಬಾಲಬೋಧೆ;
* ೧೯೮೬: ಚೈತನ್ಯದ ಪೂಜೆ;
* ೧೯೮೭: ಪ್ರತಿಬಿಂಬಗಳು;
ವಿಮರ್ಶೆ :
೧೯೩೭: ಸಾಹಿತ್ಯ ಮತ್ತು ವಿಮರ್ಶೆ;
೧೯೪೦: ಸಾಹಿತ್ಯಸಂಶೋಧನೆ;
೧೯೪೫: ವಿಚಾರ ಮಂಜರಿ;
೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
೧೯೫೯: ಮಹಾರಾಷ್ಟ್ರ ಸಾಹಿತ್ಯ;
೧೯೬೨: ಕಾವ್ಯೋದ್ಯೋಗ;
೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
೧೯೭೬: ಕುಮಾರವ್ಯಾಸ ಪುಸ್ತಿಕೆ;
ಸಣ್ಣ ಕಥೆಗಳು :
೧೯೪೦: ನಿರಾಭರಣ ಸುಂದರಿ;
ನಾಟಕಗಳು :
* ದೆವ್ವದ ಮನೆ;
* ಹಳೆಯ ಗೆಣೆಯರು;
* ಸಾಯೊ ಆಟ;
* ತಿರುಕರ ಪಿಡುಗು;
* ಗೋಲ್;
* ಉದ್ಧಾರ;
* ಜಾತ್ರೆ;
* ನಗೆಯ ಹೊಗೆ;
* ಮಂದೀ ಮದಿವಿ;
* ಮಂದೀ ಮಕ್ಕಳು;
* ಮಂದೀ ಮನಿ;
* ಆ ಥರಾ ಈ ಥರಾ;
* ಶೋಭನಾ;
* ಮಕ್ಕಳು ಅಡಿಗೆ ಮನೆ ಹೊಕ್ಕರೆ;
ಅನುವಾದ :
* ಉಪನಿಷತ್ ರಹಸ್ಯ( ಮೂಲ: ಶ್ರೀ ರಾನಡೆ (೧)
* ಭಾರತೀಯ ನವಜನ್ಮ(ಮೂಲ:ಶ್ರೀ ಅರವಿಂದ (೨)
* ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ವೊಪದೇಶ;
* ಚೀನಾದ ಬಾಳು ಬದುಕು;
* ಗುರು ಗೋವಿಂದಸಿಂಗ;
* ನೂರೊಂದು ಕವನ( ಮೂಲ: ಶ್ರೀ ರವೀಂದ್ರನಾಥ ಠಾಕೂರ);
* ಕಬೀರ ವಚನಾವಳಿ;
* ಭಗ್ನಮೂರ್ತಿ(ಮೂಲ ಮರಾಠಿ: ಶ್ರೀ ಅ.ರಾ.ದೇಶಪಾಂಡೆ);
ಮರಾಠಿ ಕೃತಿಗಳು :
* ಸಂವಾದ;
* ವಿಠ್ಠಲ ಸಂಪ್ರದಾಯ;
* ಶಾಂತಲಾ( ಕನ್ನಡದಿಂದ ಅನುವಾದ:ಮೂಲ:ಕೆ.ವಿ.ಅಯ್ಯರ್)
೧೯೩೪ ರಲ್ಲಿ ಬೇಂದ್ರೆಯವರು ತಮ್ಮ ಚಿಕ್ಕಪ್ಪನವರ ಮನೆಯಲ್ಲಿ ಇದ್ದುಕೊಂಡು, ಪುಣೆಯ ಫರ್ಗುಸನ್ ಕಾಲೇಜ್ ನಲ್ಲಿ ಬಿ. ಎ. ಮಾಡಿದರು. ಅವರ ಕೃತಿ ’ನರಬಲಿ,’ ಪುಸ್ತಕದಿಂದ, ಅವರು ೩ ವರ್ಷ ಜೈಲುವಾಸ ಅನುಭವಿಸಬೇಕಾಯಿತು. ನಂತರ ೫ ವರ್ಷ ನೌಕರಿಯಿಲ್ಲದೆ ಪರದಾಡಿದರು. ಮಾಸ್ತಿಯವರ 'ಜೀವನ' ಮಾಸಪತ್ರಿಕೆಯ ಗೌರವ ಎಡಿಟರ್ ಆಗಿ ಡಿ. ಎ. ವಿ ಕಾಲೇಜ್ ಶೋಲಾಪುರ ದಲ್ಲಿ ಕನ್ನಡ ಪ್ರಾಧ್ಯಾಪಕ. ೧೨ ವರ್ಷಗಳ ತರುವಾಯ ಅಲ್ಲಿಯೇ ತಮ್ಮ ೬೦ ನೆಯ ವಯಸ್ಸಿನಲ್ಲಿ ನಿವೃತ್ತರಾದರು. ೩೦ ಪುಸ್ತಕಗಳನ್ನು ರಚಿಸಿದ್ದಾರೆ. ೧೯೪೩ ರಲ್ಲಿ ಶಿವಮೊಗ್ಗದಲ್ಲಿನಡೆದ ೨೭ ನೆಯ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿದ್ದರು. ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳು, ಗೌರವ ಡಾಕ್ಟಾರೇಟ್ ನೀಡಿ ಸನ್ಮಾನಿಸಿದರು. ೧೯೬೮ ರಲ್ಲಿ ಭಾರತಸರ್ಕಾರದವತಿಯಿಂದ ’ಪದ್ಮಶ್ರೀ,” ಸನ್ಮಾನ ದೊರೆಯಿತು. ೧೯೬೯ ರಲ್ಲಿ ಬರೆದ 'ಅರಳುಮರಳು' ಕಾವ್ಯಸಂಗ್ರಹಕ್ಕೆ, ಪ್ರಶಸ್ತಿ, ೧೯೭೪ ರಲ್ಲಿ ಬರೆದ 'ನಾಲ್ಕುತಂತಿ,' ಗೆ ಜ್ಞಾನಪೀಠ ಪ್ರಶಸ್ತಿ. ಬೇಂದ್ರೆಯವರ ೭ ಮಕ್ಕಳಲ್ಲಿ ಉಳಿದವರು, ೩ ಮಂದಿಮಾತ್ರ-ಪಂಡುರಂಗ, ವಾಮನ, ಹಾಗೂ ಮಂಗಳ.
೧೯೫೮ ರಲ್ಲಿ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ. ’ಕೇಲ್ಕರ್ ಪಾರಿತೋಷಕ ’ ೧೯೬೫ ರಲ್ಲಿ. ೧೯೬೮ ರಲ್ಲಿ ’ಫೆಲೋ ಆಫ್ ಸಾಹಿತ್ಯ ಅಕ್ಯಾಡಮಿ ’
'ನಿರಾಭರಣ ಸುಂದರಿ', ಮಹಾಪ್ರಬಂದ. ನಾಟಕ, ಉದ್ಧಾರ ೧೯೩೦ 'ತಿರುಕರ ಪಿಡುಗು', ೧೯೩೦ ನಗೆಯ ಹೊಗೆ, ೧೯೩೧ ಮತ್ತು 'ಹುಚ್ಚಾಟಗಳು '೧೯೩೫ ರಲ್ಲಿ. 'ಹೊಸಸಂಸಾರ ಮತ್ತು ಇತರ ಏಕಾಂಕಗಳು,' ೧೯೫೦. ’ಶಬ್ದ ಶೃತಿಯಾದಾಗ ಮಾತು ಕೃತಿಯಾಯಿತು”, 'ಬೆಂದರೆ ಬೇಂದ್ರೆ, ಯಾದಾನು' ಎಂದು ಅವರು ಹೇಳುತ್ತಿದ್ದರು. 'ನೀನುಹಾಡುತ್ತಿರುವ ತನಕ ನೀನೇ ಒಂದು ಹಾಡು.' ಟೀ ಎಸ್ ಇಲಿಯೆಟ್ ರವಾಕ್ಯವನ್ನು ಆಧರಿಸಿದ ಮಾತು. ಸಾಹಿತ್ಯಾಸಕ್ತರು ಹೇಳುವಂತೆ, ಮೇಕೆತಿನ್ನದ ಸೊಪ್ಪಿಲ್ಲ ; ಬೇಂದ್ರೆ ಕೈಯಾಡಿಸದ ಸಾಹಿತ್ಯಪ್ರಾಕಾರಗಳಿಲ್ಲ !
ಅಂಬಿಕಾತನಯ ದತ್ತ, ನಾಟಕ ಸಂಪುಟ ೧೯೮೨. ೧೯೩೭ ರಲ್ಲಿಸಾಹಿತ್ಯ ಮತ್ತು ವಿಮರ್ಶೆ. ೧೯೭೯ 'ಮತಧರ್ಮ ಮತ್ತು ಆಧುನಿಕಮಾನವ.'
ಕಣವಿಯವರು, ತಮ್ಮ ಭಾಷಣದಲ್ಲಿಮೊದಲು, ಬೇಂದ್ರೆಯರ ಸಾಹಿತ್ಯದ ಪ್ರಭಾವ ತಮ್ಮ ಕಾಲೇಜಿನ ದಿನಗಳಿಂದ ಹಾಗೂ ಧಾರವಾಡ ಪರಿಸರಗಳ ಬಗ್ಗೆ, ಮಾತಾಡಿದರು. ಈಗಾಗಲೆ ಹಿರಿಯರಾದ, ಶಂಕರ ಮೊಕಾಶೆಯವರು, [೧೯೨೮] ಕೀರ್ತಿನಾಥ ಕುರ್ತುಕೋಟಿಯವರು, ಗೋಕಾಕ್ [೧೯೦೯-೧೯೯೨] ಅವರ ಬಳಗದ ಸಸಸ್ಯರಾಗಿದ್ದರು. ಅವರ ಓರಿಗೆಯವರು ಮತ್ತು ಸಮಕಾಲೀನರು, ಒಡನಾಟವುಳ್ಳ ಸಮಾನಮನಸ್ಕರು, ಸಾಹಿತ್ಯಾಭಿಲಾಷಿಗಳು, ತಮ್ಮ ಅಭಿಪ್ರಾಯಗಳನ್ನು ಆಗಾಗ ಹಂಚಿಕೊಂಡಿದ್ದಾರೆ. ಬೇಂದ್ರೆಯವರ ಪ್ರೇರಣೆ ಅವರಮೇಲೆ ಹೆಚ್ಚಾಗಿತ್ತು. ಆದ್ದರಿಂದ ಅವರ ಪ್ರತಿಕ್ರಿಯೆಗಳ ಪ್ರಕಾರ, ೨೦ ನೆಯ ಶತಮಾನ ವಿಶ್ವದ ಅತ್ಯಂತ ಶ್ರೇಷ್ಟ ಸೃಜನಾತ್ಮಕ ಕಾವ್ಯರಚನಾಕಾರರಲ್ಲಿ ಹಾಗೂ ಭಾವಗೀತೆಯ ರಚನಾಕಾರರಲ್ಲಿ ಬೇಂದ್ರೆಯವರೊಬ್ಬರು, ಎಂದು ಶಂಕರ ಮೊಕಾಶೆಯವರು ನುಡಿದಿದ್ದರು. ಬೇಂದ್ರೆ, ಅತ್ಯಂತ ಸಮರ್ಥ ಕಾವ್ಯವಾಚನಕಾರರು.
ನಮ್ಮಲ್ಲಿ ಒಳ್ಳೆ ಹಾಡುಗಾರರಿದ್ದಾರೆ. ಹಿಂದೆ ಕೂಡಾ ಇದ್ದರು. ಅದರೆ ಕವಿಯಬಾಯಿನಿಂದ ಬಂದ ಹಾಗೆ ಜೀವಂತವಾಗಿ ಕವಿತೆಗೆ ತಮ್ಮನ್ನು ಸಮರ್ಪಿಸಿಕೊಂಡವರಲ್ಲಿ ಬೇಂದ್ರೆಯವರು ಅಸಮಾನ್ಯರು. ಈ ವಿಷಯದಲ್ಲಿ ಅವರ ಕಾವ್ಯದ ಗುಣಮಮಟ್ಟವನ್ನು ಅಳೆಯುವ ಮಾನದಂಡಗಳು ಹಲವಾರು. ಕನ್ನಡ ನವೋದಯಕಾಲದ ಕನ್ನಡ ಸಾಹಿತ್ಯವನ್ನು ಮೈಗೂಡಿಸಿಕೊಂಡು ಚಿಂತನೆ ಸಂಶೋಧನೆ, ಬರಹ, ನಾಟಕ ಪ್ರಾಕಾರಗಳಲ್ಲಿ ಸವ್ಯಸಾಚಿಯಾಗಿದ್ದರು. ಕಾವ್ಯ ಅವರನ್ನು ಸಂಪೂರ್ಣವಾಗಿ ಆವರಿಸಿತ್ತು. ಅದರಲ್ಲಿ ಅವರು ಮಾಡಿದ ಸಾಹಿತ್ಯ ಕೃಷಿ, ಅನನ್ಯ. ಉಚ್ಚಮಟ್ಟದ ಕವಿಯೆಂದು ಹೆಸರುಮಾಡಿದವರು. ೧೯೦೪ ರಲ್ಲಿ ಧಾರವಾಡಕ್ಕೆ ಬಂದಾಗ ಅವರ ಉಡುಗೆ-ತೊಡಿಗೆ, ರೂಪ, ಕಣ್ಣಿನ ಕಾಂತಿ, ಎಲ್ಲರಮೇಲೂ ಪರಿಣಾಮಮಾಡಿತ್ತು. ಡಾ. ನಂಜುಂಡಪ್ಪ ನವರ ಅಧ್ಯಕ್ಷತೆಯಲ್ಲಿ, ಬೇಂದ್ರೆಯವರು, ಸಭೆಯಲ್ಲಿ ಹಾಡಿದ ಪಾತರಗಿತ್ತಿ ಪಕ್ಕ, ಕುಣಿಯೋಣಬಾರ, ಗೀಗೀ-ಪದದಧಾಟಿಯಲ್ಲಿ ಹಾಡಿದ ಪದ್ಯಗಳು, ಅತ್ಯುತ್ತಮ ಪರಿಣಾಮವನ್ನು ಶ್ರೋತೃಗಳ ಮೇಲೆ ಬೀರಿತ್ತು. ಸಮೀಕ್ಷಕರ, ವಿಮರ್ಶೆಗಿಂತ, ಶ್ರೋತೃಗಳ ತೆರೆದ ಮನ, ಹಾಗೂ ಕಿವಿಗಳೇ ಮಾನದಂಡವಾಗಿದ್ದವು.
ಮಗುವಿಗೆ ತಾಯಿ, ತನ್ನ ಸ್ತನ್ಯಪಾನಮಾಡಿಸುವ ಸಮಯದಲ್ಲಿ, ಸಂತೃಪ್ತಳಾಗಿದ್ದಾಳೆ. ಅವಳಿಗೆ ತನ್ನ ಹಾಲಿನಮೇಲೆಭರವಸೆಯಿದೆ. ಅದನ್ನು ಸ್ಪಷ್ಟಪಡಿಸಲು, ಬೆಂದ್ರೆಯವರ ಕವಿತೆಯಲ್ಲಿ, ಆಕೆ ಹೇಳುವ ಮಾತುಗಳನ್ನು ಅವಲೋಕಿಸಿ. ಅವನಿಗೇನು ಕಡಿಮೆ ಹಾಲಿನಬಟ್ಟಲುಗಳಲ್ಲಿ ತೊಟ್ಟಿಲ ಕಾಲುಗಳಾದವು. ಬೆಂದ್ರೆ, ಸಂಶೋಧನೆ, ಪದ್ಯ, ಗದ್ಯ, ನಾಟಕ, ಎಲ್ಲದರಲ್ಲೂ ಸವ್ಯಸಾಚಿಯೆಂದು ಹೆಸರುಮಾಡಿದ್ದರೂ ಕಾವ್ಯಕ್ಷೇತ್ರ ಅವರಿಗೆ ಒಲಿದಿತ್ತು ; ಅದರಲ್ಲೂ ಭಾವಗೀತೆ ಅವರಿಗೆ ಪ್ರಾಣ. ೧೯೦೪ ರಲ್ಲಿ ಧಾರವಾಡ ಕಾವ್ಯವಾಚನ ವೈಖರಿ ಅನನ್ಯ. ಶ್ರಾವಣ ಬಂತು, ಬೆಳದಿಂಗಳು, ಕುಣಿಯೋಣ ಬಾರ, ಗಂಗಾವತರಣ, ವಿಲಕ್ಷಣಪರಿಣಾಮ ಬೀರಿತ್ತು. ಈಗಿನ ಸುಗಮ ಸಂಗೀತಕಾರರು ಹೇಳಿದರೂ, ಕವಿಯಮುಖದಿಂದ ಆ ಕವನಗಳು ಪ್ರಸ್ತುತಪಡಿಸಿದಾಗ ಅದರ ಖಳೆ, ನೂರ್ಮಡಿಯಾಗುತ್ತಿತ್ತು. ಧಾಟಿಯೇಬೇರೆ, ಅದರ ನಾದದ್ರವ್ಯ ಅನನ್ಯ. ಕಂಠ ದೇವರ ಕೊಡುಗೆ, ಕಾವ್ಯವಾಚನಕ್ಕೆ ನಾಂದಿಯಾಯಿತು. 'ಸಹಸ್ರ ತಂತಿ' ಅಕ್ಯಾಡಮಿ ಪ್ರಶಸ್ತಿ ಪಡೆಯಿತು. ೧೯೫೬ ರಲ್ಲಿ, ಪಾಂಡುಚೆರಿಯಿಂದ ವಾಪಸ್ ರೈಲಿನಲ್ಲಿ ಬರುವಾಗ, ಮಲಗಿದ್ದಾಗ, 'ಫ್ಯಾನ್' ಅವರಿಗೆ ಪ್ರೇರಣೆಯಾಯಿತಂತೆ. ಪಾಂಡುಚೆರಿಯ ಮಾತೆಯವರ ಪ್ರೀತಿ, ಅರವಿಂದರ ಅಶೀರ್ವಾದ, ಅವರ ಮನಸ್ಸಿನೇಲೆ ಗಾಢವಾದ ಪರಿಣಾಮ ಬೀರಿತ್ತು. ಡಾ. ಗೋಕಾಕ್ ರವರ ಅಧ್ಯಕ್ಷತೆಯಲ್ಲಿ ಒಂದು ಇಂಗ್ಲೀಷ್ ಕವಿತಾ ಕಾರ್ಯಕ್ರಮ ನಡೆಯಿತು. ಅಲ್ಲಿ ಬೇಂದ್ರೆಯವರು, ಕನ್ನಡದಲ್ಲೇ ಕವಿತೆಯೊಂದನ್ನು ಓದಿದರು. ಅದು ಎಲ್ಲರ ಪ್ರೀತಿಗೆಪಾತ್ರವಾಯಿತಂತೆ ! ೧೯೯೮ ರಲ್ಲಿ ಅವರು ತೀರಿಕೊಂಡು ೧೦ ವರ್ಷದನಂತರ, ಆಶ್ರಮದ, ಪತ್ರಿಕೆ, 'ಮದರ್ ಇಂಡಿಯಾ ಪತ್ರಿಕೆ' ದಲ್ಲಿ, ಆಶ್ರಮದ ಹೊರಗಿನ ೩ ಲೇಖಕರ, ಕೃತಿಗಳು ಎಲ್ಲರ ಗಮನಸೆಳೆದಿದ್ದವು. ಅದರಲ್ಲಿ ಕನ್ನಡನಾಡಿನ ಬೇಂದ್ರೆಯವರ ಹೆಸರೂ ಇತ್ತು.
ಡಾ. ಕಣವಿಯವರ ಸಾಹಿತ್ಯಕೃಷಿ :
೧೯೪೯ ರಲ್ಲಿ ಕಣವಿಯವ ಪ್ರಥಮ ಕವನ ಸಂಕಲನ 'ಕಾವ್ಯಾಕ್ಷಿ' (೩೪ ಕವಿತೆಗಳ ಗುಚ್ಛ) ಹೊರಬಂತು. ಸೊಲ್ಲಾಪುರದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ, ಬೇಂದ್ರೆಯವರ ಪ್ರತ್ಯಕ್ಷ ಪರಿಚಯವಿಲ್ಲದೆಯೂ ಬಹಳ ತಾಳ್ಮೆಯಿಂದ ಪುಸ್ತಕವನ್ನು ಓದಿ, ಒಳ್ಳೆಯ ಪರಿಚಯದ ಮುನ್ನುಡಿ ಬರೆದುಕೊಟ್ಟರು. ಕಣವಿಯವರ ಕವನಗಳಲ್ಲಿ ಇರುವ ಜೀವಂತಗತಿ, ಹಾಗೂ ಹೊಸತನ ಗಳನ್ನು ಸ್ಪಷ್ಟವಾಗಿ ಗುರುತಿಸಿದರು. ಬೇಂದ್ರೆಯವರಿಗೆ, ಕನ್ನಡ ಕಾವ್ಯಕ್ಷೇತ್ರದ ಮುಂದಿನ ಪೀಳಿಗೆಯ ಬಗ್ಗೆ ವಿಪರೀತವಾದ ಕಾಳಜಿಯಿತ್ತು. ಈ ಸೃಜನಾತ್ಮಕ ಪ್ರತಿಕ್ರಿಯೆ, ಕಣವಿಯವರಿಗೆ ಸ್ಫೂರ್ತಿಕೊಟ್ಟಿತು.
ಕುರ್ತುಕೋಟಿ, ವಸಂತ ಕವಲಿ, ಮುಂತಾದವರು ಕಾವ್ಯಾನುಭವ ಮಂಟಪದಲ್ಲಿದ್ದರು. ಆಗ ಅಲ್ಲಿಗೆ ಭೇಟಿಕೊಟ್ಟ ಬೆಂದ್ರೆ, ಹಾಗೂ ಗೋಕಾಕ್ ಎಲ್ಲರೊಡನೆ, ಸುಮಾರು ೩ ಗಂಟೆ ಇದ್ದರು. ಬೇಂದ್ರೆ, ಗೋಕಾಕ್, ಸಂಬಂದ ರಾಮಕೃಷ್ಣ ಪರಮಹಂಸ, ಹಾಗೂ ವಿವೇಕಾನಂದರ ತರಹ ಅತ್ಯಂತ ಹೃದಯಸ್ಪರ್ಷಿಯಾಗಿತ್ತೆಂದು, ಜಿ. ಎನ್. ಕುಲಕರ್ಣಿಯವರು ಅಭಿಪ್ರಾಯಪಡುತ್ತಾರೆ. ೧೯೫೦ರಲ್ಲಿ, ಖಂಡಕಾವ್ಯಕ್ಕೆ ಗೋಕಾಕ್ ಮುನ್ನುಡಿ, ೧೯೮೧ ರಲ್ಲಿ ೩೦ ವರ್ಷಗಳ ನಂತರ, ಪತಿಭಾವಂತ ಬೇಂದ್ರೆ ಸಾಹಿತ್ಯದ ಹಾದಿಯನ್ನು ಸುಗಮಗೊಳಿಸಿ ಹೊಸಪೀಳಿಗೆಗೆ ಅದರಲ್ಲಿ ಅಂಕುರಮಾಡಲು ಪ್ರಚೋದನೆ ಸಿಕ್ಕುತ್ತಿತ್ತು. ೧೯೫೬ ಸೊಲ್ಲಾಪುರ ನಿವೃತ್ತಿ. ಬೇಂದ್ರೆ ಒಂದು ಸಶಕ್ತ ವಿಮರ್ಶಕರ ಪರಂಪರೆಯನ್ನು ಬೆಳೆಸಿದರು. ೧೯೬೫ ರಲ್ಲಿ, 'ನೆಲಮುಗಿಲು' ಮುನ್ನುಡಿ ಪ್ರಕಟನೆ. ಶಬ್ದ-ಲಯದ ಮೇಲಿನ ಅಗಾಧ ಪ್ರಭುತ್ವ. ತಾವೇ ಹೊಸ ಛಂದಸ್ಸು ಸೃಷ್ಟಿಸಿ, ತಮ್ಮ ಮೇಘದೂತ ಕಾವ್ಯಕ್ಕೆ ಅಳವಡಿಸಿಕೊಂಡರು.
'ಉಯ್ಯಾಲೆ ಕಾವ್ಯಸಂಗ್ರಹ', ವಾತ್ಸಲ್ಯ ಪ್ರಧಾನ, ತಾಯಿಯ ಮೊಲೆಗಳ ಬಗ್ಗೆ, ರಚಿಸಿದ ಕವನದಲ್ಲಿ,ಕಂದನಿಗೆಂದೂ ಹಾಲಿನ ಕೊರತೆಯಿಲ್ಲ.
ಮಾತೆ, ತನ್ನ ಮೊಲೆಗಳನ್ನು ಉದಾಹರಿಸುತ್ತಾ, ಗೋದಲೆಗಳಿವು, ಕಪಿಲೆ ಕಾವೇರಿ ಅವನಿಗೇನು ಕಡಿಮೆ ? ಜೋಡುಕಳಸಗಳು, ತೊಟ್ಟಿಲ ಕಾಲುಗಳಿವು, ಎಂದು ಹೇಳಿರುವಂತೆ ಕವತೆ ರಚಿಸಲ್ಪಟ್ಟಿದೆ.
ಡಾ. ಕಣವಿಯವರೂ ಒಬ್ಬ ಧಾರವಾಡದ ಕವಿ. ಕಣವಿ, ಧಾರವಾಡದಲ್ಲಿ ಮಳೆಗಾಲ, ಹಬ್ಬಗಳ ಚಿತ್ರಣಗಳನ್ನು ಚೆನ್ನಾಗಿ ನಿರಹಿಸಿದ್ದಾರೆ. ೧೯೯೮- ಅತ್ತಿಕೊಳ್ಳದಲ್ಲಿ, ಆಗುತ್ತಿದ್ದ ಅತಿಬೆಳವಣಿಗೆಯನ್ನು ಕುರಿತು ಸುಂದರವಾದ ಕವಿತೆಯನ್ನು ರಚಿಸಿದರು. ಆಕಾಲದಲಿದ್ದ ಮತ್ತೊಬ್ಬ ಹಿರಿಯ ಕವಿ, ವಿ. ಜಿ. ಭಟ್ಟರ ಬಗ್ಗೆ ಬರೆಯುತ್ತಾ, ವಿಡಂಬನಾತ್ಮಕವಾಗಿ, ಬೇಂದ್ರೆ, ವೀ. ಸಿ, ಕವಿಗಳ ಕಾವ್ಯಗಳನ್ನು ಆಧರಿಸಿ, ಬೆದ ಪದ್ಯಗಳ ಕೆಲವು ನಮೂನೆಗಳನ್ನು ಪ್ರಸ್ತುತಪಡಿಸಿದರು. ಗಂಗಾವತರಣದ ಬಗ್ಗೆ ಬೆಂದ್ರೆಯವರ ಕೃತಿ, ’ಇಳಿದು ಬಾತಾಯೆ ಇಳಿದು ಬಾ,” ಕವಿತೆಯನ್ನು, ಇಳಿದು ಬರಬೇಡ, ಕವಿಗಳ ಹಿಂದೆ, ಓಗಂಗೆ, ಯೋಚನೆಯ ಬಿಡು, ಭೂಮಿಗೆ ಬಂದರೆ ನಿನಗೇ ತೊಂದರೆ, ಎಂದಿದ್ದಾರೆ. ೧೯೩೩ ರಲ್ಲಿ, ವಿ. ಸೀತಾರಾಮಯ್ಯನವರ ಪದ್ಯ, ವಧುವನ್ನು ಮನೆದುಂಬಿಸುವಾಗ ಹೇಳುವ ಹಾಡನ್ನು ಭಟ್ಟರು, ಹೋಗಿ ಬಾ ಮಗಳೆ, ಮಾಡದಿರು ಮನಬಂದಂತೆ, ಸಾಲ, ಹಾಗೂ ನಿನ್ನ ಬಳಗದ ಸ್ತುತಿಯ, ಸರಸವಾಡಲೆಬೇಡ ಮುದ್ದುಕಂದ, ನಿನ್ನ ತಾಯಿಯ ಹಾಗೆ, ಪ್ರತಿವರ್ಷ ಬಿಡದೆ ಹೆರಬೇಡ ನೀನು, ಹೋಗಿಬಾ ಮರೆಯದಿರು, ನನ್ನ ಕರುವೆ, ಎಂದು ಹೇಳಿರುವುದು ಚೆನ್ನಾಗಿದೆ. ಕುವೆಂಪುರವರ ಕವನಕ್ಕೆ ತಮ್ಮ ಕೆಲವು ಸಾಲುಗಳನ್ನು ಸೇರಿಸಿ ಆರೋಗ್ಯಕರ ವಿಡಂಬನೆಗೆ ಅವಕಾಶಮಾಡಿಕೊಟ್ಟಿದ್ದಾರೆ.
ಓ ಹಾಲು ಹಳ್ಳಹರಿಯಲಿ, ಜೇನುಸಿರಿಯಲಿ, ಪೈರುಪಚ್ಚೆ ಬೆಳೆಯಲಿ,
ಕರಿಯಾಳು ಕೆಮ್ಮಲಿ, ತುಪ್ಪ ತಿನ್ನಲಿ,
ಪ್ರತಿಕ್ರಿಯೆ ಮನುವಿನ ಮಕ್ಕಳು, ಅಪವಾದ, ರಾಧೆಯಪಾಡು,
ಮುಂದೇನೆ ಸಖಿ ಮುಂದೇನೆ ? ನಾನೆಲ್ಲಿ ಹೋಗಿದ್ದೆ, ನಿನ್ನ ಎದೆಯೊಳಗಿದ್ದೆ. (ಹೆಂಡತಿ ತೀರಿಕೊಂಡ ಮೇಲೆ, ಬರೆದ ಕವನ)
ಕಣವಿ, ಬರೆದ, 'ಏನೋ ಚಂದ್ರ, ಪೆಂಗೆ ನಾಟ್ಕಾ ಇವುನಿಂಗೆ, ತಂಪುಗಾಳಿಗೆ ನಿನ್ನ ಬೆಳೆದಿಂಗಳು. ಚಂದ್ರಪ್ಪ ಎಂದೆಂದಿಗೂ ಚೆಲುವಿನ ಮಾತು ಎತ್ತಬೇಡ. ಬೇಂದ್ರೆಯವರು ಕೋಪಗೊಳ್ಳುತ್ತಿರಲಿಲ್ಲದೇನಿಲ್ಲ. ಅವರೂ ಕೆಲವು ವಿಕಾರಗಳಿಗೆ ಆಗಾಗ ಬಲಿಯಾದದ್ದುಂಟು. ಅದರೆ, ಅದಕ್ಕೆ ಅವರು ಅಂಟಿಕೊಳ್ಳದೆ, ಬೇಗ ತಮ್ಮ ಮೊದಲಿನ ಸ್ಥಿತೆಗೆ ಮರಳುತ್ತಿದ್ದರು. ದುಡುಕು ಮಾತುಗಳು ಇದ್ದವು,
ಡಾ. ಚನ್ನವೀರ ಕಣವಿ ಬರೆದ ೨ ಪದ್ಯಗಳು :
೧. ೭೦ ರ ಬೇಂದ್ರೆ
೨. ಬೆಂದ್ರೆ ಪ್ರತಿಮೆ,
ಕಣವಿಯವರು, ಬೇಂದ್ರೆಯವರ ಜನ್ಮದಿನವನ್ನು, ಕವಿತಾದಿನವನ್ನಾಗಿ ಆಚರಿಸುವ ಪರಿಪಾಠವನ್ನು ಪ್ರಾರಂಭಿಸಿದರು. ಅಲ್ಲಿ ನಡೆದ ಸಾಹಿತ್ಯಗತಿವಿಧಿಗಳನ್ನು, ಪುಸ್ತಕರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಅದು ಸತತವಾಗಿ ಇಂದಿಗೂ ನಡೆದುಕೊಂಡು ಬರುತ್ತಿದೆ. ಧಾರವಾಡದ ಪ್ರಮುಖ ಮೈದಾನವೊಂದರಲ್ಲಿ ಬೇಂದ್ರೆಯವರ ಪುಟ್ಟ ಪ್ರತಿಮೆಯನ್ನು ಪ್ರತಿಷ್ಠೆಮಾಡಲಾಯಿತು. ಅದರ ಕೆಳಗೆ ೫೯ ಜನರ ಕಾರ್ಯಕರ್ತರ ಹೆಸರುಗಳನ್ನು ಕೆತ್ತಿದ್ದರು. ಕವಿಗಳಬಗ್ಗೆ ಇರುವ ಕಾಳಜಿಗಿಂತ ತಮ್ಮ ಹೆಸರುಗಳು ಎಲ್ಲರಿಗೂಕಾಣಿಸಬೇಕೆನ್ನುವುದೇ ಅವರೆಲ್ಲರ ಆಸೆಯಾಗಿತ್ತೆಂದು ಕಾಣಿಸುತ್ತಿತ್ತು. ಆಗ ಕಣವಿಯವರು ಅದನ್ನು ತಮ್ಮ ಕವಿತೆಯಲ್ಲಿ ಹೀಗೆ ನಿರೂಪಿಸಿದ್ದಾರೆ. 'ಅಂತೂ ಇಂತು ಅಂಬೋನಿಯ ನಿಲ್ಲಿಸಿಬಿಟ್ಟರು ಬಟ್ಟಬಯಲಿನಾಗ, ಬೇಂದ್ರೆಯವರ ಆಮುಖ ಹೋತಿಲ್ಲ, ಎನ್ನುವಮಾತನ್ನು ಎಲ್ಲರ ಗಮನಕ್ಕೆ ತಂದರು.
ಡಾ. ಚನ್ನವೀರಕಣವಿಯವರು, ಸುಮಾರು ೫೦ ವರ್ಷಗಳ ಸಾಹಿತ್ಯಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರು, ಒಳ್ಳೆಯ ಬೋಧಕರು, ಲೇಖಕರು, ಉತ್ತಮ ಆಡಳಿತಗಾರರು, ಸದಾ ನಗುಮುಖದ ಸಹೃದಯಿ, ವಿನಯವಂತ, ಮೃದುಭಾಷಿ, ಬೇಂದ್ರೆಯವರಂತೆ ಉದಯೋನ್ಮುಖ ಕವಿಗಳಿಗೆ ಸದಾ ಪ್ರೋತ್ಸಾಹಿಸುವ ಗುಣ. ತಂದೆ ಪ್ರಾಥಮಿಕಶಾಲಾ ಉಪಾಧ್ಯಾಯರು, ಸುಸಂಸ್ಕೃತ ಮನೆಯ ವಾತಾವರಣ, ಅತ್ಯಂತ ಶ್ರದ್ಧೆ, ಹಾಗೂ ಸ್ವಂತ ಪ್ರತಿಭೆಯಿಂದ ಸ್ಕೂಲ್ ನ ವಿಧ್ಯಾರ್ಥಿವೇತನಗಳನ್ನು ಕ್ರಮವಾಗಿಗಳಿಸುತ್ತಾ ತಮ್ಮ ಹಾದಿಯನ್ನು ಸುಗಮಗಳಿಸಿಕೊಂಡರು. ಎಮ್. ಎ ಪಡೆದರು. [೨೮-೦೬-೧೯೨೮] ತಂದೆ ಅವರು ೪ ನೇ ತರಗತಿಯಲ್ಲಿದ್ದಾಗಲೇ ನಿವೃತ್ತಿಹೊಂದಿದರು. ಧಾರವಾಡದ ಹತ್ತಿರದ ಒಂದು ಗ್ರಾಮದಲ್ಲಿ ಶಿಕ್ಷಣ ಮುಂದುವರೆಸಿ, ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡಕೇಂದ್ರಕ್ಕೆ ಪ್ರಥಮರಾಗಿ ಬಂದರು. ಆಗಲೇ ಅವರು ತಮ್ಮ ನಿವಾಸದಲ್ಲೇ ಒಂದು ಕಾವ್ಯಾನುಭವ ಮಂಟಪ ವನ್ನು ಹಮ್ಮಿಕೊಂಡು, ಸಮಾನಮನಸ್ಕ ಗೆಳೆಯರೊದನ್ನೆ ಸಮಾಲೋಚನೆ ನಡೆಸುತ್ತಿದ್ದರು. ೧೯೫೦ ರಲ್ಲಿ ಗೋಕಾಕ್ ಮತ್ತು ಬೇಂದ್ರೆ ಅವರ ಬಂದು ಸುಮಾರು ೩-೪ ಗಂಟಗಳಕಾಲ ಕಳೆದದ್ದನು ನೆನೆಸಿಕೊಂಡರು. ಪ್ರಥಮ ಕವಿತಾ ಸಂಕಲನ, ’ಕಾವ್ಯಾಕ್ಷಿ”, ಹೆಸರುವಾಸಿಯಾಯಿತು. ಆಗಲೇ ಎಲ್ಲೆಲ್ಲೂ ಹೆಸರುಮಾಡಿದ್ದ ಬೇಂದ್ರೆಯವರ ಮೋಡಿ, ಬಾಲಕನಮೇಲೆ [ಸಖೀಗೀತ] ಅಗಾಧ ಮೋಡಿಮಾಡಿತ್ತು. ಮಧುರಚೆನ್ನರ ' ನನ್ನ ನಲ್ಲ' ಕೃತಿಯೂ ಅವರಿಗೆ ಇಷ್ಟವಾಗಿತ್ತು.
೧೯೫೦ ರಲ್ಲಿ ಗೋಕಾಕರ ಮುನ್ನುಡಿಯೊಂದಿಗೆ ಎರಡನೆಯ ಸಂಕಲನ ಹೊರಬಂತು. ನಾಡಿನ ಹೆಸರಾಂತ ಕವಿಗಳೂ ಇದನ್ನು ಓದಿ ತಲೆತೂಗಿದರು. ಅದೇವರ್ಷ, ಬಿ. ಎ. ಪದವಿ ಯಲ್ಲೂ ಶಿಷ್ಯವೇತನ ಗಿಟ್ಟಿಸಿಕೊಂಡರು. ಎಮ್ .ಎ. ಪರೀಕ್ಷೆಗೆ ಕುಳಿತಾಗ, ತೀ. ನಂ ಶ್ರೀ ಗಳಾದಿಯಾಗಿ ಅನೇಕ ಹಿರಿಯರ ಶಿಷ್ಯತ್ವ, ಅವರಿಗೆ ಪ್ರಾಪ್ತಿಯಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಆಗತಾನೆ ಅಸ್ತಿತ್ವಕ್ಕೆ ಬಂದಿತ್ತು. ಅಲ್ಲಿನ ಸಾಹಿತ್ಯಪ್ರಕಟಾನಾವಿಭಾಗದ ಕಾರ್ಯದರ್ಶಿಯಾಗಿ, ಆಯ್ಕೆಯಾದರು. ಡಾ. ಡಿ. ಸಿ. ಪಾವಟೆಯವರ ಒಲವನ್ನು ಪಡೆದುಕೊಂಡರು. ಪ್ರಸಾರಾಂಗ ಖಾತೆಯಲ್ಲಿ ಅವರು, ಸ್ಥಾಪಕ ನಿರ್ದೇಶಕರಾದರು. ಅಲ್ಲಿ ಮಾಡಿದ ಅನೇಕ ಕಾರ್ಯಗಳಲ್ಲಿ ಪ್ರಕಟಿಸಿದ, ಸಮಾಜ ವಿಜ್ಞಾನ, ವಿಜ್ಞಾನ, ಕಲಾಗ್ರಂಥಗಳು ಬೆಳಕನ್ನು ಕಂಡವು. ಪಠ್ಯಪುಸ್ತಕ, 'ಕರ್ನಾಟಕ ಭಾರತಿ' ಎಂಬ ಪತ್ರಿಕೆ. ಅವರು ಬರೆದ ಗೀತೆ, "ವಿಶ್ವಭಾರತಿಗೆ ಕನ್ನಡಾದಾರತಿ", ಒಳ್ಳೆಯ ಹೆಸರುಮಾಡಿದ್ದಲ್ಲದೆ, ವಿಶ್ವವಿಧ್ಯಾಲಯದ ಘಟಿಕೋತ್ಸದಲ್ಲಿ ಪ್ರಾರ್ಥನಾಗೀತೆಯಾಗಿ ಹಾಡಲಾಯಿತು. ಇಂದಿಗೂ ಅದೇ ಗೀತೆ ಪ್ರಾರ್ಥನಾಗೀತೆಯಾಗಿದೆ. ನವೋದಯ ಹಾಗೂ ನವ್ಯೋತ್ತರ ಕಾವ್ಯ ರಚನೆ ಸಾಹಿತ್ಯಗೋಷ್ಟಿ ವಿಚಾರಸಂಕಿರಣಗಳಲ್ಲಿ ಭಾಗವಹಿಸುವ ಗೀಳಿನಿಂದಾಗಿ ಅವರಿಗೆ ಅನೇಕ ಗಣ್ಯರ ಪರಿಚಯವಾಯಿತು. ಕುವೆಂಪು, ವಿ. ಸೀತಾರಾಮಯ್ಯ, ಪರಮೇಶ್ವರಭಟ್ಟ, ಡೀ. ವಿ. ಜಿ, ಅನಕೃ, ನರಸಿಂಹಸ್ವಾಮಿ, ಅಡಿಗ, ರಾಮಚಂದ್ರ ಶರ್ಮ, ಜಿ. ಎಸ್. ಎಸ್, ಸಂಯೋಜಿಸುತ್ತಿದ್ದರು ಬಿ. ಶಿವಮೂರ್ತಿ ಶಾಸ್ತ್ರಿಯಳು ೧೯೫೭ ರಲ್ಲಿ ಧಾರವಾಡದಲ್ಲಿ ನಡೆದ, ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ಆಗ ಕಾರ್ಯದರ್ಶಿಯಾಗಿ, ಕುವೆಂಪು ರವರ ಅಧ್ಯಕ್ಷತೆಯಲ್ಲಿ ೩೯ ನೆಯ ಕನ್ನಡ ಸಾಹಿತ್ಯ ಸಮ್ಮೆಳನ, ಕರ್ನಾಟಕ ರಾಜ್ಯದ ಅಕ್ಯಾಡಮಿ, ನ್ಯಾಷನಲ್ ಬುಕ್ ಟ್ರಸ್ಟ್ ಸಮಿತಿಗಳಲ್ಲಿ ಸೇವೆ. ೫೦ ವರ್ಷ ತುಂಬಿದಸಮಯದಲ್ಲಿ 'ಚೆಂಬೆಳಗು' ಎಂಬ ಸಂಭಾವನಾಗ್ರಂಥವನ್ನು ಅರ್ಪಿಸಿ ಮರ್ಯಾದಿಸಲಾಯಿತು. 'ಜೀವಧ್ವನಿ' ಎಂಬ ಕವನ ಸಂಗ್ರಹಕ್ಕೆ, ಕೆಂದ್ರಸಾಹಿತ್ಯ ಅಕ್ಯಾಡಾಮಿ ಪ್ರಶಸ್ತಿ ಬಂತು. ಪತ್ನಿ, ಶಾಂತ ಖ್ಯಾತ ಕತೆಗಾರ್ತಿ, ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಆಧುನಿಕ ಕನ್ನಡ ಸಾಹಿತ್ಯ ಪ್ರಾಕಾರದಲ್ಲಿ ಕಣವಿಯವರ ಕೊಡುಗೆ ಅಪಾರ.
ಕಣವಿ ೧೬ ಪುಸ್ತಕಗಳನ್ನು, ಬರೆದಿದ್ದಾರೆ. ಇವಲ್ಲದೆ, ಮರಾಠಿ ಪುಸ್ತಕಗಳೂ ಇವೆ. ವಿಮರ್ಶೆ : ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ ಸಮಾಹಿತ, ಮಧುರಚೆನ್ನ, ಸಮತೋಲನ, ಮಕ್ಕಳ ಕವಿತೆ, ಹಕ್ಕಿಪುಕ್ಕ, ಚಿಣ್ಣರ ಲೋಕವ ತೆರೆಯೋಣ, ಸಂಪಾಡನೆ : ಆಧುನಿಕ ಕನ್ನಡ ಕಾವ್ಯ. ಜಾವ್ಯಾಗ್ನಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ದೀಪಧಾರಿ, ನಗರದಲ್ಲಿ ನೆರಳು, ಜಿನಧ್ವನಿ, ಹೊಂಬೆಳಕು, ಚಿರಂತನ ದಾಹ, ಆಯ್ದ ಕವಿತೆಗಳು, ಹೂವು ಅರಳುವುವು ಸೂರ್ಯನ ಕಡೆಗೆ, ೧೯೯೬ ರಲ್ಲಿ, ಹಾಸನದಲ್ಲಿ, ೬೫ ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು.
ಬೇಂದ್ರೆ ಯವರ ಅನೇಕ ಕವಿತೆಗಳನ್ನು ಸಭಿಕರಮುಂದೆ ಓದಿ ತೋರಿಸಿದರು. ಬೇದ್ರೆ ಎಂದೊಡನೆ ಕಾವ್ಯಗಂಗೆಯ ಅವತರಣವಾಗುತ್ತದೆ.
('ಗಂಗಾವತರಣ'). ಅವುಗಳ ವಿವರಗಳನ್ನು, ಕೆಳಗೆ ನಮೂದಿಸಲಾಗಿದೆ. ಕೆಲವು ಕವಿತೆಗಳು ಅವರು ಬರೆದದ್ದು ಇದೆ.
''ರಸಪೂರ ಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ !
ಬಂದಾರೆ ಬಾರೆ ಒಂದಾರೆ ಸಾರೆ
ಕಣ್‌ಧಾರೆ ತಡೆವರೇನೆ?
ಆವತಾರವೆಂದೆ ಎಂದಾರೆ ತಾಯಿ
ಈ ಅಧಃಪಾತವನ್ನೆ.''
ಚನ್ನವೀರ ಕಣವಿಯವರ ಸಾಹಿತ್ಯ :
ವಿಶ್ವ ವಿನೂತನ ವಿದ್ಯಾಚೇತನ
ಸರ್ವಹೃದಯ ಸಂಸ್ಕಾರಿ | ಜಯಭಾರತಿ
ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ
ಗಂಗ ಕದಂಬ ರಾಷ್ತ್ರಕೂಟ ಚಾಲುಕ್ಯ ಹೊಯ್ಸಳ ಬಲ್ಲಳ
ಹಕ್ಕಬುಕ್ಕ ಪುಲಿಕೇಶಿ ವಿಕ್ರಮರ ಚೆನ್ನಮಾಜಿಯ ವೀರಶ್ರೀ
ಕುಲವಧು ಚಲನಚಿತ್ರದಲ್ಲಿ(1963) - ವೀ. ಸೀತಾರಾಮಯ್ಯನವರು ರಚಿಸಿದ ಕವನ, "ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು " ಗೀತೆಯನ್ನು ಅಳವಡಿಸಲಾಗಿದೆ.
ಸಂಗೀತ: ಜಿ.ಕೆ.ವೆಂಕಟೇಶ್
ಗಾಯನ: ಎಸ್.ಜಾನಕಿ
ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು
ಮರೆಮೋಸ ಕೊಂಕುಗಳನರಿಯಳಿವಳು ಇನಿಸ ವಿಶ್ವಾಸವನು ಕಂಡರಿಯಳು
ಕಷ್ಟಗಳ ಸಹಿಸದೆಯೆ ಕಾಣದೆಯೇ ಬೆಳೆದವಳು ಸಲಹಿಕೊಳಿರಿಮಗಳ ಓಪ್ಪಿಸುವೆವು
ನಿಮಗಿವಳು ನೀಡುತಿಹ ಹಾಲು ಹಣ್ಣುಗಳ ಸವಿ ಎಂದೆದೂ ಅವಳ ನಡೆ ನಿಮ್ಮ ಪರವಾಗಿ
ನಮ್ಮ ಕುಲ ಮನೆಗಳಿಗೆ ಹೊರಗಾಗಿ ಬಂದಿಹಳು ನಿಮ್ಮ ಕುಲವನು ಬೆಳಸೆ ಬಂದಿರುವಳು
ನಿನ್ನ ಮಡದಿಯ ಕೊಂಡು ಸುಖವಾಗಿರವ್ ಮಗುವೆ ನಿಮ್ಮ ಸೊಸೆ ಸೋದರಿಯು ಕೊಳ್ಳಿರಿವಳ
ನಿಮ್ಮ ಕೀರುತಿ ಬೆಳೆಯಲಿ ಇವಳ ಸೌಜನ್ಯದಲಿ ನಿಮ್ಮ ಕುಲಶೀಲಗಳು ಪರಿಮಳಿಸಲಿ
ಹೆತ್ತಮನೆಗಿಂದು ಹೊರಗಾದೆ ನೀ ಮಗಳೆ ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು ಇವರ ದೇವರೆ ನಿನ್ನ ದೇವರುಗಳು
ನಿಲ್ಲು ಕಣ್ಣರೊಸಿಕೊಳು ನಿಲ್ಲು ತಾಯ್ ಹೋಗುವೆವು ತಾಯಿರ ತಂದೆಯಿರ ಕೊಳ್ಳಿರಿವಳ
ಎರಡು ಮನೆಗಳ ಹೆಸರು ಖ್ಯಾತಿ ಉಳಿವಂತೆ ತುಂಬಿದಾಯುಶ್ಯದಲಿ ಬಾಳಿ ಬದುಕು
ರಚನೆ: ಚನ್ನವೀರ ಕಣವಿ
ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ
ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರ ಬರುವನು ಕೂಸಿನ ಹಾಗೆ
ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು
ಅದಕೆ ಅದರ ಗುಣ ದೋಷಗಳಂಟಿಸಿ
ಬಿಡಿಸಿ ಬಿಟ್ಟ ತೊಡಕು
ಗಿಡದಿಂದುರುವ ಎಲೆಗಳಿಗೂ ಮುದ
ಚಿಗುರುವಾಗಲು ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನು ಕಲಾವಿದ?
ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾಗಳಿಗೆ
ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ
ಡಾ. ಚನ್ನವೀರಕಣವಿಯವರ ಸಾಹಿತ್ಯ ರಚನೆಗಳು :ಒಂದು ಪಕ್ಷಿನೋಟ !
ಕಾವ್ಯಸಂಕಲನ [ಕಣವಿ]
* ಕಾವ್ಯಾಗ್ನಿ
* ಭಾವಜೀವಿ
* ಆಕಾಶಬುಟ್ಟಿ
* ಮಧುಚಂದ್ರ
* ಮಣ್ಣಿನ ಮೆರವಣಿಗೆ
* ದೀಪಧಾರಿ
* ನೆಲ ಮುಗಿಲು
* ಎರಡು ದಡ
* ನಗರದಲ್ಲಿ ನೆರಳು
* ಜೀವಧ್ವನಿ
* ಕಾರ್ತೀಕದ ಮೋಡ
* ಜೀನಿಯಾ
* ಹೊಂಬೆಳಕು
* ಶಿಶಿರದಲ್ಲಿ ಬಂದ ಸ್ನೇಹಿತ
* ಚಿರಂತನ ದಾಹ(ಆಯ್ದ ಕವನಗಳು)
* ಹೂವು ಹೊರಳುವವು ಸೂರ್ಯನ ಕಡೆಗೆ
ಬೆಳಗು : (ಬೇಂದ್ರೆಯವರ ಕವಿತೆ )
ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೊಯ್ದಾ,
ನುಣ್ಣ-ನ್ನೆರಕಾವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ,
ದೇವನು ಜಗವೆಲ್ಲಾ ತೋಯ್ದಾ
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೆ - ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ- ಪಟಪತನೇ ಒಡೆದು
ಎಲೆಗಳ ಮೆಲೆ ಹೂಗಳ ಒಳಗೇ
ಅಮೃತಾದ ಬಿಂದು
ಕಂಡವು ಅಮೃತಾದ ಬಿಂದು
ಯಾರಿರಿಸಿರುವರು ಮುಗಿಲ ಮೇಲಿಂ
ದಿಲ್ಲಿಗೆ ಇದ ತಂದು
ಈಗ ಇಲ್ಲಿಗೇ ತಂದು
ತಂಗಾಳೀಯಾ ಕೈಯೊಳಗಿರಿಸೀ
ಎಸಳಿನಾ ಚವರಿ
ಹೂವಿನ ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ ಮೈಯೆಲ್ಲಾ ಸವರಿ
ಗಿಡಗಂಟಿಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು ಕಾಡಿನಾ ನಾಡು
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದಿತೀ ದೇಹ
ಸ್ಪರ್ಷ ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹ
ದೇವರ - ದೀ ಮನಸಿನ ಗೇಹಾ
ಅರಿಯದು ಅಳವು ತಿಳಿಯದು ಮನವು
ಕಾಣಾದೋ ಬಣ್ಣಾ
ಕಣ್ಣಿಗೆ ಕಾಣಾದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಮ್ಮಾ
ಇದು ಬರಿ ಬೆಳಗಲ್ಲೋ ಅಣ್ಣಾ..
ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ
ಜಯಭಾರತಿ, ಕರುನಾಡ ಸರಸ್ವತಿ
ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ.
ವಿಶ್ವವಿನೂತನ…………………….||೧||
ಗಂಗ, ಕದಂಬಾ, ರಾಷ್ಟ್ರಕೂಟ ಬಲ
ಚಲುಕ್ಯ, ಹೊಯ್ಸಳ,ಬಲ್ಲಾಳ
ಹುಕ್ಕ,ಬುಕ್ಕ,ಪುಲಕೇಶಿ, ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ.
ವಿಶ್ವವಿನೂತನ…………………….||೨||
ಗಂಗಾವತರಣ - ಇಳಿದು ಬಾ ತಾಯಿ ಇಳಿದು ಬಾ
ಕವನ ಗಂಗಾವತರಣ ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹನಿಸಿ ಬಾ ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ
ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ ನೀರು ನೀರಾಗಿ ಉರುಳಿ ಬಾ ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ
ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಕೊಳೆಯ ತೊಳೆವವರು ಇಲ್ಲ ಬಾ ಬೇರೆ
ಶಕ್ತಿಗಳು ಹೊಲ್ಲ ಬಾ ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ ನಮ್ಮ ನಾಡನ್ನೆ ಸುತ್ತ ಬಾ ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ
ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ
ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಹ್ಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
ದಮ್ ದಮ್ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ ಬಾಳು ಬೆಳಕಾಗಿ ಬೆಳೆದು ಬಾ ಕೈ ತೊಳೆದು ಬಾ ಮೈ ತೊಳೆದು ಬಾ
ಇಳಿದು ಬಾ ತಾಯಿ ಇಳಿದು ಬಾ ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ ದತ್ತ ನರಹರಿಯ ಮುತ್ತೆ ಬಾ ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವಾ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೋಯ್ದ, ದೇವನು ಜಗವೆಲ್ಲಾ ತೋಯ್ದ
ಏಲೆಗಳ ಮೇಲೆ, ಹೂಗಳ ಓಳಗೆ
ಅಮೃತದ ಬಿಂದು, ಕಂಡವು ಅಮೃತದಾ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದಾ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರ ಸೀಮೆಯಾಯಿತು, ಕಾಡಿನ ನಾಡು
ಕ್ಷಣದೊಳು, ಕಾಡಿನಾ ನಾಡು
ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವಾ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೋಯ್ದ, ದೇವನು ಜಗವೆಲ್ಲಾ ತೋಯ್ದ
ಏಲೆಗಳ ಮೇಲೆ, ಹೂಗಳ ಓಳಗೆ
ಅಮೃತದ ಬಿಂದು, ಕಂಡವು ಅಮೃತದಾ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದಾ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರ ಸೀಮೆಯಾಯಿತು, ಕಾಡಿನ ನಾಡು
ಕ್ಷಣದೊಳು, ಕಾಡಿನಾ ನಾಡು
'ರಸಪೂರ ಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ !
ಬಂದಾರೆ ಬಾರೆ ಒಂದಾರೆ ಸಾರೆ
ಕಣ್‌ಧಾರೆ ತಡೆವರೇನೆ?
ಆವತಾರವೆಂದೆ ಎಂದಾರೆ ತಾಯಿ
ಈ ಅಧಃಪಾತವನ್ನೆ.''
('ಗಂಗಾವತರಣ')
"ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ"
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುದುಕುವಂತೆ ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ತಿರುಗತಿತ್ತು ತನ್ನ ಸುತ್ತ ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು, ಅರಳಲಿತ್ತು, ಪ್ರೇಮಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ವಜ್ರಮುಖವ ಚಾಚಿ ಮುತ್ತತಿತ್ತು ಹೂವ ಹೂವಾ
ನೀರ ಹೀರಿ ಹಾರತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸತಿತ್ತು ಕೂಟಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕತಿತ್ತು ತಾಳಾ
'ಬಂತೆಲ್ಲಿಗೆ?' ಕೇಳುತಿದ್ದನೀಯಂತ ಕಾಳಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಈ ಪದ್ಯ ಬೇಂದ್ರೆ ಯವರಿಗೆ ಙ್ನಾನಪೀಠ ಪ್ರಶಸ್ತಿ ತಂದುಕೊಟ್ಟಂತ ನಾಕು ತಂತಿ ಕವನ ಸಂಕಲದ್ದು!!!
ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಆದಕು ಇದಕು ಎದಕು
ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕತ್ತುವಂತ ಮೂರ್ತಿ
ಕಿವಿಗೆ ಮುತ್ತಿನೋಲೆ
ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೆ ಗಳಿಗೆ ಮೈಯ ತುಮ್ಬ
ನನಗೆ ನವಿರು ಬಟ್ಟೆ
ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬಾ ಮುತ್ತು
ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು
ಬೆಳಗು!!!
ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೊಯ್ದಾ,
ನುಣ್ಣ-ನ್ನೆರಕಾವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ,
ದೇವನು ಜಗವೆಲ್ಲಾ ತೋಯ್ದಾ
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೆ - ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ- ಪಟಪತನೇ ಒಡೆದು
ಎಲೆಗಳ ಮೆಲೆ ಹೂಗಳ ಒಳಗೇ
ಅಮೃತಾದ ಬಿಂದು
ಕಂಡವು ಅಮೃತಾದ ಬಿಂದು
ಯಾರಿರಿಸಿರುವರು ಮುಗಿಲ ಮೇಲಿಂ
ದಿಲ್ಲಿಗೆ ಇದ ತಂದು
ಈಗ ಇಲ್ಲಿಗೇ ತಂದು
ತಂಗಾಳೀಯಾ ಕೈಯೊಳಗಿರಿಸೀ
ಎಸಳಿನಾ ಚವರಿ
ಹೂವಿನ ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ ಮೈಯೆಲ್ಲಾ ಸವರಿ
ಗಿಡಗಂಟಿಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು ಕಾಡಿನಾ ನಾಡು
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದಿತೀ ದೇಹ
ಸ್ಪರ್ಷ ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹ
ದೇವರ - ದೀ ಮನಸಿನ ಗೇಹಾ
ಅರಿಯದು ಅಳವು ತಿಳಿಯದು ಮನವು
ಕಾಣಾದೋ ಬಣ್ಣಾ
ಕಣ್ಣಿಗೆ ಕಾಣಾದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಮ್ಮಾ
ಇದು ಬರಿ ಬೆಳಗಲ್ಲೋ ಅಣ್ಣಾ...
ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ
ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರ ಬರುವನು ಕೂಸಿನ ಹಾಗೆ
ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು
ಅದಕೆ ಅದರ ಗುಣ ದೋಷಗಳಂಟಿಸಿ
ಬಿಡಿಸಿ ಬಿಟ್ಟ ತೊಡಕು
ಗಿಡದಿಂದುರುವ ಎಲೆಗಳಿಗೂ ಮುದ
ಚಿಗುರುವಾಗಲು ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನು ಕಲಾವಿದ?
ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾಗಳಿಗೆ
ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ
ಉತ್ತರಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.
ಉತ್ತರಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.
ಬೇಂದ್ರೆಯವರ ಕವನಸಂಕಲನ 'ನಾದಲೀಲೆ'ಯಲ್ಲಿ ಪ್ರಕಟವಾದ ಕವನ)
ಸಾಹಿತ್ಯ: ಚನ್ನವೀರ ಕಣವಿ
ವಿಶ್ವ ವಿನೂತನ ವಿದ್ಯಾಚೇತನ
ಸರ್ವಹೃದಯ ಸಂಸ್ಕಾರಿ | ಜಯಭಾರತಿ
ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ
ಗಂಗ ಕದಂಬ ರಾಷ್ತ್ರಕೂಟ ಚಾಲುಕ್ಯ ಹೊಯ್ಸಳ ಬಲ್ಲಳ
ಹಕ್ಕಬುಕ್ಕ ಪುಲಿಕೇಶಿ ವಿಕ್ರಮರ ಚೆನ್ನಮಾಜಿಯ ವೀರಶ್ರೀ
ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲತರಂಗ
ವಿಶ್ವಭಾರತಿಗೆ ಕನ್ನಡದಾರತಿ ಮೋಳಗಲಿ ಮಂಗಳ ಜಯಭೇರಿ
ಭಾಗ-೧)
ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs
ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs
ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ
ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ
ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ
(ಭಾಗ-೨)
ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ;
ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;
ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;
ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;
ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ.
ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.
(ಭಾಗ-೩)
'ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ'
'ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.'
(ಭಾಗ-೪)
'ನಾನು' 'ನೀನು'
'ಆನು' 'ತಾನು'
ನಾಕೆ ನಾಕು ತಂತಿ,
ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.
(ಈಗ ಕವನದ ಮೊದಲನೆಯ ಭಾಗದ ಮೊದಲ ನುಡಿಯನ್ನು ನೋಡಿರಿ) :
ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs
ಗಂಗಾವತರಣ - ಇಳಿದು ಬಾ ತಾಯಿ ಇಳಿದು ಬಾ
ಕವನ ಗಂಗಾವತರಣ ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹನಿಸಿ ಬಾ ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ
ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ ನೀರು ನೀರಾಗಿ ಉರುಳಿ ಬಾ ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ
ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಕೊಳೆಯ ತೊಳೆವವರು ಇಲ್ಲ ಬಾ ಬೇರೆ
ಶಕ್ತಿಗಳು ಹೊಲ್ಲ ಬಾ ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ ನಮ್ಮ ನಾಡನ್ನೆ ಸುತ್ತ ಬಾ ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ
ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ
ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಹ್ಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
ದಮ್ ದಮ್ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ ಬಾಳು ಬೆಳಕಾಗಿ ಬೆಳೆದು ಬಾ ಕೈ ತೊಳೆದು ಬಾ ಮೈ ತೊಳೆದು ಬಾ
ಇಳಿದು ಬಾ ತಾಯಿ ಇಳಿದು ಬಾ ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ ದತ್ತ ನರಹರಿಯ ಮುತ್ತೆ ಬಾ ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವಾ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೋಯ್ದ, ದೇವನು ಜಗವೆಲ್ಲಾ ತೋಯ್ದ
ಏಲೆಗಳ ಮೇಲೆ, ಹೂಗಳ ಓಳಗೆ
ಅಮೃತದ ಬಿಂದು, ಕಂಡವು ಅಮೃತದಾ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದಾ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರ ಸೀಮೆಯಾಯಿತು, ಕಾಡಿನ ನಾಡು
ಕ್ಷಣದೊಳು, ಕಾಡಿನಾ ನಾಡು
ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವಾ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೋಯ್ದ, ದೇವನು ಜಗವೆಲ್ಲಾ ತೋಯ್ದ
ಏಲೆಗಳ ಮೇಲೆ, ಹೂಗಳ ಓಳಗೆ
ಅಮೃತದ ಬಿಂದು, ಕಂಡವು ಅಮೃತದಾ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದಾ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳಾ ಹಾಡು
ಗಂಧರ್ವರ ಸೀಮೆಯಾಯಿತು, ಕಾಡಿನ ನಾಡು
ಕ್ಷಣದೊಳು, ಕಾಡಿನಾ ನಾಡು
'ರಸಪೂರ ಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ !
ಬಂದಾರೆ ಬಾರೆ ಒಂದಾರೆ ಸಾರೆ
ಕಣ್‌ಧಾರೆ ತಡೆವರೇನೆ?
ಆವತಾರವೆಂದೆ ಎಂದಾರೆ ತಾಯಿ
ಈ ಅಧಃಪಾತವನ್ನೆ.''
('ಗಂಗಾವತರಣ') :
"ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ"
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುದುಕುವಂತೆ ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ತಿರುಗತಿತ್ತು ತನ್ನ ಸುತ್ತ ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು, ಅರಳಲಿತ್ತು, ಪ್ರೇಮಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ವಜ್ರಮುಖವ ಚಾಚಿ ಮುತ್ತತಿತ್ತು ಹೂವ ಹೂವಾ
ನೀರ ಹೀರಿ ಹಾರತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸತಿತ್ತು ಕೂಟಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕತಿತ್ತು ತಾಳಾ
'ಬಂತೆಲ್ಲಿಗೆ?' ಕೇಳುತಿದ್ದನೀಯಂತ ಕಾಳಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಈ ಕವನಗಳನ್ನು ಸಭಿಕರಮುಂದೆ ಪ್ರಸ್ತುತಿಪಡಿಸುವಾಗ, ಬೇಂದ್ರೆಯವರ ಮೈಮನಗಳೆಲ್ಲಾ ಹುರುಪಿನಿಂದ ಮಿಡಿಯುತ್ತಿದ್ದವು. ಸಭಿಕರಲ್ಲಿ ವಿದ್ಯುತ್ ಸಂಚಾರವಾಗುತ್ತಿತ್ತು. ಡಾ. ಕಣವಿಯವರೂ ಹಾಗೂ ಅವರ ಸಮಕಾಲೀನರೆಲ್ಲಾ ಈ ಮಾತನ್ನು ಒಪ್ಪಿಕೊಂಡಿದ್ದಾರೆ.
-(ಎಲ್ಲೆಡೆಗಳಿಂದ ಆಯ್ದ ಕವನಗಳು)
ಡಾ. ಜೀ. ವಿ. ಕುಲಕರ್ಣಿಗಳು ಡಾ. ಗೋಕಾಕ್ ಹಾಗೂ ಬೇಂದ್ರೆಯವರ ಶಿಷ್ಯರು. ಅವರ ಇತ್ತೀಚಿನ ಲೇಖನಗಳಲ್ಲಿ, ನಾವು ಹಲವು ಹೊಸವಿಷಯಗಳನ್ನು ಸಂಗ್ರಹಿಸಬಹುದು. ಕೊಂಡಿಗಳನ್ನು ಹಿಡಿಯಿರಿ :
http://thatskannada.oneindia.in/column/gv/2009/0131-unforgettable-days-of-gokak-in-dharwad.html