ಕೋಚ್ ಬೇಕೇ?

To prevent automated spam submissions leave this field empty.
ರಾವಣನ ಮಕ್ಕಳು ರಾಮನ ಮಕ್ಕಳಿಗೆ ಹೊಡೆದದ್ದೊಂದು ಸುದ್ದಿ ಎಂದೂ ಎಲ್ಲಿಯೂ ಹೊಡೆಸಿಕೊಳ್ಳುವ ಜಾಯಮಾನದವರೀ ನಮ್ಮ ಮಕ್ಕಳು ದಾಂಡಿಗರಾದ ರಾವಣನ ಮಕ್ಕಳ ಮುಂದೆ ಕುಬ್ಜರಾಗಿ ಲವಲೇಶವೂ ಇಲ್ಲದಂತಾದರು ರಾಮನ ಮಕ್ಕಳು ಬದಿಯ ಬೀದಿಯಲಿ ತೋರಿಸಲಾರರು ಇವರ ಪೌರುಷ ಅದೆಲ್ಲಾ ನಮ್ಮ ಮುಂದೆಯೇ ತೋರಿಸುವ ಉತ್ತರ ಕುಮಾರರಿವರು ಇವರಿಗೆ ಸಿಗುವ ಕೋಚುಗಳೆಂಥವರು ರೈಟ್ ಎಂದು ಒಬ್ಬ ಅಂದು ಬಂದ ಬಂದು ಸ್ವಲ್ಪ ದಿನಗಳಿಗೇ ಇವರ ಮೊಂಡುತನ ನೋಡಿ ರೈಟ್ ಹೇಳಿದ ಈಗ ಬಂದಿಹ ಚಾಪೆಲ್ ಮೊದಲ ಬಾಲಿಗೇ ಮುಗ್ಗರಿಸಿಹ ಇವನಿಗೆ ಅಲ್ಲಿ ಕಾದಿದೆ ಒಂದು ಚಾಪೆಲ್ (ಮನೆಗಂಟಿದ ದೇವಸ್ಥಾನ) ಇವರಿಗೆ ಬೇಕೇ ಸರಿಯಾದ ಕೋಚು ನಮ್ಮಲ್ಲಿದ್ದೂ ನಾವು ಅರಿಯಲಿಲ್ಲವೇ ಮೊದಲ ಇನ್ನಿಂಗ್ಸಿನಲೇ ಬಾರಿಸಿದ ಸಹಸ್ರ ಶವಗಳ ಬಲಿ ಈಗ ಎರಡನೆ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಚಂಡಿ ಮಳೆಯೇ ನಮ್ಮ ದಾಂಡಿಗರಿಗೆ ಸರಿಯಾದ ಕೋಚು
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹರೀಶ್, ಸಂಪದಕ್ಕೆ ಸ್ವಾಗತ. ಸಾಧ್ಯವಾದಷ್ಟು ಕನ್ನಡದಲ್ಲಿ ಕಾಮೆಂಟ್ ಹಾಕಲು ಪ್ರಯತ್ನಿಸಿ. ಧನ್ಯವಾದಗಳು.