ಮಗಳು ಋತುಮತಿಯಾದಾಗ.........
ಈಗಿನ ಕಾಲದಲ್ಲಿ cleanliness' ಮತ್ತು 'hygiene' ಎಂಬ ಎರಡನ್ನು ಬಿಟ್ಟರೆ "ಆ ಕಾಲದಲ್ಲಿ", ಅದರಲ್ಲೂ ವಿಶೇಷವಾಗಿ ಆ ಘಟ್ಟವನ್ನು ಪ್ರವೇಶಿಸುತ್ತಿರುವ ಬಾಲೆಯರು ಮತ್ತು ಪೋಷಕರು ಅನುಸರಿಸಬೇಕಾದ ಕೆಲವು ಸೂಚನೆಗಳ ಬಗ್ಗ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಕೆಳದಿ ಕವಿ ಮನೆತನದ ವಂಶಾವಳಿಯನ್ನು ಪ್ರಕಟಿಸಿದ ನನ್ನ "ಹಳೆ ಬೇರು ಹೊಸಚಿಗುರು"* ಎಂಬ ಪುಸ್ತಕದಲ್ಲಿ ಇಂತಹ ಒಂದು ವಿಚಾರದ ಬಗ್ಗೆ ಸಹ ಅನೇಕ ಹಿರಿ-ಮಹಿಳೆಯರ ಮತ್ತು ಅನುಭವಿಗಳೊಂದಿಗೆ ಸಮಾಲೋಚಿಸಿ ಲೇಖನವೊಂದನ್ನು ಸೇರಿಸಿದ್ದೆ. ಅದೇ ಆಸಕ್ತರಿಗಾಗಿ ಇಲ್ಲಿ ಮಂಡಿಸಿದೆ: [ಹಳೇ ಕಂದಾಚಾರ ಎಂದು ಮೂಗು ಮುರಿಯದಿರಿ; old is always gold!
* ಕಂಡಕೂಡಲೇ ಮೊದಲು ತಾಯಿ ಅದನ್ನು ನೋಡಬಾರದು. ಬೇರೆಯವರಿಂದ ಋತುಮತಿಯಾಗಿರುವುದನ್ನು ಖಚಿತಪಡಿಸಿಕೊಂಡ ಮೇಲೆ ಮೊದಲು
ಹುಡುಗಿಗೆ ಒಂದು ಲೋಟ ಹಾಲಿಗೆ ಸಕ್ಕರೆ, ತುಪ್ಪ ಮತ್ತು ಅರಿಷಿನ ಹಾಕಿ ಕುಡಿಯಲು ಕೊಟ್ಟು, ತಿನ್ನಲು ಭಾಳೆಹಣ್ಣು ಕೊಡಬೇಕು.
* ನಂತರ ದಡಬ ಹಾಸಬೇಕು. ಅಂದರೆ ಒಂದು ಹೊಸ ಬಿಳಿ ಟವಲ್ ನಾಲ್ಕು ಮೂಲೆಗೆ ಕುಂಕುಮ ಹಚ್ಚಿ, ಮಧ್ಯದಲ್ಲಿ ಶ್ರೀ ಎಂದು ಓಕುಳಿಯಲ್ಲಿ ಬರೆಯಬೇಕು. ಅದನ್ನು ಮಣೆಯ ಮೇಲೆ ಹಾಸಬೇಕು. 4 ಮುಲೆಯಲ್ಲೂ ವಿಳೆದೆಲೆ ಪಟ್ಟಿ, ಚಿಗುಳಿ ಉಂಡೆ ಇಟ್ಟು ಮಧ್ಯದಲ್ಲಿ ಹುಡುಗಿಯನ್ನು ಕೂರಿಸಿ, ಓಕುಳಿಯಿಂದ 4 ಕಡೆಯೂ ಚಟ್ಟು ಬಡಿಸಬೇಕು. ಜೊತೆಯಲ್ಲಿ ಒಂದು ಬೊಂಬೆಯನ್ನು ಕೂರಿಸಿ, ಹಣ್ಣುಗಳ ತಟ್ಟೆ ಕೊಟ್ಟು ಆರತಿ ಮಾಡಬೇಕು.
* 5 ಜನ ಮುತ್ಐದೆಯರಿಂದ ಹುಡುಗಿಗೆ ನೀರು ಹಾಕಿಸಬೇಕು. ಸಂಜೆಯೂ ಆರತಿ ಮಾಡಿ, ಮುತ್ಐದೆಯರಿಗೆ ಚಿಗುಳಿ, ಬಾಳೆಹಣ್ಣು ಮತ್ತು ಬಾಗಿನ ಕೊಡಬೇಕು. ಮೂರು ದಿವಸವೂ ಬೆಳಿಗ್ಗೆ-ಸಂಜೆ ಚಿಗುಳಿ, ತುಪ್ಪ ತಿನ್ನಲು ಹುಡುಗಿಗೆ ಕೊಡಬೇಕು.
* 4ನೆಯ ದಿನ ಹಾಗು ಐದನೇ ದಿನ ಮೊದಲ ದಿನದಂತೆಯೇ 5 ಜನರಿಂದ ನೀರು ಹಾಕಿಸಿ, ಆರತಿ ಮಾಡಬೇಕು. 5ನೆ ದಿನ 5 ಮುತ್ಐದೆಯರಿಗೆ ಊಟ ಹಾಕಿ, ಉಡುಗೊರೆ ಕೊಡಬೇಕು. ಇದರಲ್ಲಿ ಸೋದರತ್ತೆಯ ಪಾತ್ರವೇ ಹೆಚ್ಚಿರುತ್ತದೆ ಹಾಗು ಸೋದರತ್ತೆಯ ಕ್ಐಯಿಂದ ನೀರು ಹಾಕಿಸಿದರೆ ಹುಡುಗಿಗೆ ಶ್ರೇಯಸ್ಸು ಜಾಸ್ತಿ ಎಂದು ಹೇಳುತ್ತಾರೆ. 16 ದಿನಗಳ ಒಳಗೆ ಹುಡುಗಿಗೆ ಆರತಿ (ಬೆಳಿಗ್ಗೆ ಸತ್ಯನಾರಾಯಣ ಪೂಜೆ ಇತ್ಯಾದಿ ಮಾಡಿ) ಮಾಡಬಹುದು. ಆ ದಿನ, ಮುತ್ತಜ್ಜಿ (ತಾಯಿಯ ತಾಯಿ) ಕೊಟ್ಟ ಸೀರೆ ಉಡಿಸಬೇಕು.
* ಋತುಮತಿಯಾದಾಗ ಹಾಕಿಕೊಂಡಿದ್ದ ಬಟ್ಟೆಯನ್ನು ಅಗಸರಿಗೆ ದಾನ ಮಾಡಬೇಕು.
* ಪುರೋಹಿತರಲ್ಲಿ ಋತುಮತಿಯಾದ ಸಮಯ, ದಿನ ಹಾಗೂ ಹಾಕಿಕೊಂಡಿದ್ದ ಬಟ್ಟೆಗಳ ವಿವರ ತಿಳಿಸಿ ಅವರ ಸಲಹೆ ಪಡಯಬೇಕು.
* ಸೋದರಮಾವ ಹುಡುಗಿಗೆ ಮೂಗುಬಟ್ಟು ಹಾಗೂ ಹೊಸಬಟ್ಟೆ ಕೊಡಬೇಕು.
* ತಂದೆಯ ಕಡೆ ಸೋದರತ್ತೆಯಿಂದ ಚಿನ್ನದ ಉಡುಗೊರೆ ಹುಡುಗಿಗೆ ಕೊಡಬೇಕು.
* ಎಳ್ಳು ಹಾಕಿ ಮಾಡಿದ ಅಂಟಿನುಂಡೆಯನ್ನು 16 ದಿನ ಕಳೆದ ನಂತರ ಕೊಡಬೇಕು.
* ಮಂಗಳವಾರ - ಶುಕ್ರವಾರ 3 ತಿಂಗಳವರೆಗೂ ಎಣ್ಣೆ-ನೀರು ಹಾಕಬೇಕು.
* ಮೆಂತ್ಯದ ದೋಸೆ, ಸಜ್ಜಿಗೆ ತಿನ್ನಲು ಕೊಡಬೇಕು.
*"ಹಳೆ ಬೇರು ಹೊಸಚಿಗುರು" - ಪುಟ 120+6: ಕವಿ ಪ್ರಕಾಶನ ಶಿವಮೊಗ್ಗ (2007)