ಟಿ.ವಿ.ಗುಲಾಮಗಿರಿಯಿಂದ ಬಿಡುಗಡೆ ಎಂತು?

ಟಿ.ವಿ.ಗುಲಾಮಗಿರಿಯಿಂದ ಬಿಡುಗಡೆ ಎಂತು?

ಬರಹ

ಆಧುನಿಕ ಅವಿಷ್ಕಾರಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಷ್ಟೇ ಅಲ್ಲದೇ ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ನಾವು ಅವುಗಳ ಗುಲಾಮರಾಗುತ್ತಿರುವುದು ಇಂದಿನ ನಿತ್ಯಸತ್ಯ. ಅದು ಫ್ರಿಡ್ಜ್ ಇರಬಹುದು, ಟಿ.ವಿ., ಕಂಪ್ಯೂಟರ್, ಮೊಬ್ಐಲ್ ಫೋನ್ ಇರಬಹುದು. ಹಾಗೆಂದೊಡನೆಯೇ ನಾವು ಅಪ್ಪ ಹಾಕಿದ ಆಲದ ಮರಕ್ಕೇ ಜೋತು ಬೀಳಬೇಕೆಂದಥಱವಲ್ಲ. ಹೊಸ ಹೊಸ ಅವಿಸ್ಕಾರಗಳು ಮನುಷ್ಯನ ಜೀವನ ಮಟ್ಟ (ಲೌಕಿಕ) ಏರಿಸುವುದರಲ್ಲಿ ಗಣನೀಯ ಪಾತ್ರ ವಹಿಸುತ್ತವೆಂಬುದರಲ್ಲಿ ಎರಡು ಮಾತಿಲ್ಲ. ಒಂದು ದ್ಋಷ್ಟಿಯಲ್ಲಿ ಅವು ಅನಿವಾರ್ಯ ಕೂಡಾ. ಈ ಆಧುನಿಕ ಸೌಲಭ್ಯಗಳನ್ನು ನಾವು ಎಷ್ಟರಮಟ್ಟಿಗೆ ವಿವೇಕಯುತವಾಗಿ ಬಳಸುತ್ತೇವೆಂಬುದರಲ್ಲಿ ಅವುಗಳ ಹಾಗೂ ನಮ್ಮ ಸಾಥಱಕತೆ ಇದೆ ಎನ್ನಲಡ್ಡಿಯಿಲ್ಲ.
'ರೋಟಿ-ಕಪಡಾ-ಮಕಾನ್'ಗಳಂತೆ ವಿಶೇಷವಾಗಿ ಟಿ.ವಿ. (ಟೆಲಿವಿಷನ್) ಇಂದು ನಮ್ಮ ಜೀವನದ ಒಂದು ಅವಶ್ಯಕತೆ ಎನಿಸುವಷ್ಟರ ಮಟ್ಟಿಗೆ ಅನಿವಾರ್ಯ ವಸ್ತುವಾಗಿದೆ. ಮನೋರಂಜನೆಯ ಕ್ಷೇತ್ರದಲ್ಲಿ ಒಂದು
ಕ್ರಾಂತಿಯನ್ನೇ ಮಾಡಿ ದೇಶದ ಸವಱತೋಮುಖ ಅಭಿವ್ಋದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಟಿ.ವಿ. ಸಹಕಾರಿಯಾಗಬಲ್ಲದು ಎಂಬ ಪ್ರಾರಂಭಿಕ ನಿರೀಕ್ಷೆ ಇಂದು ಸುಳ್ಳಾಗಡೊತಗಿದೆ. ಕಾಲಕ್ರಮೇಣ ೀ ಮೂಖಱ ಪೆಟ್ಟಿಗೆಯಿಂದ ಉಂಟಾಗುತ್ತಿರುವ ಹಲವಾರು ದುಷ್ಪರಿಣಾಮಗಳು ಒಂದೊಂದೇ ನಮ್ಮ ಗಮನಕ್ಕೆ ಬಂದರೂ ಸಹ ನಾವು ಅವುಗಳನ್ನು 'ಜಾಣ ಕುರುಡ' ರಂತೆ ಗಮನಿಸಿಯೂ ಗಮನಿಸದಂತೆ ಇದ್ದೇವೆ. ಇದರ ಕೆಟ್ಟ ಪರಿಣಾಮಗಳ ಬಗ್ಗೆ ಅನೇಕ ಪ್ರಾಜ್ಞರು, ವಿಶೇಷವಾಗಿ ಶಿಕ್ಷಣ ಪರಿಣತರು ಪದೇ ಪದೇ ಅನೇಕ ಮಾಧ್ಯಮಗಳ ಮೂಲಕ ನಮ್ಮನ್ನು ಎಚ್ಚರಿಸುತ್ತಿದ್ದರೂ ಸಹ ನಾವು ಇದರ ಮೋಹದಿಂದ ಹೊರಬರಲು 'ಸಿಂಬಳಕ್ಕಂಟಿದ ನೊಣ' ದಂತೆ ಒದ್ದಾಡುತ್ತಲೇ ಇದ್ದೇವೆ.
ಪರೀಕ್ಷೆಗಳು ಹತ್ತಿರವಾಗುತ್ತಿರುವ ಈ ಸಂದಭಱದಲ್ಲಿ ಟಿ.ವಿ. ನಮ್ಮ ಮಕ್ಕಳ ಹಾಗೂ ವಿಶೇಷವಾಗಿ ಯುವ ಜನಾಂಗದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪುನಮಱನನ ಮಾಡುವುದು ಹೆಚ್ಚು ಪ್ರಸ್ತುತವಾದೀತು.ಮನರಂಜನೆ ಅವಶ್ಯವಾದರೂ ನಾವು ಟಿ.ವಿ.ಯನ್ನು ಅಷ್ಟ್ಕಕ್ಕೇ ಸೀಮಿತಗೊಳಿಸುತ್ತಿದ್ಧೆವೆಯೇ? ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡುತ್ತಿದ್ದೇವೆಯೇ? ಇಲ್ಲ. ಟಿ.ವಿ.ಧಾರಾವಾಹಿಗಳಂತೂ ಎಲ್ಲಾರನ್ನೂ ಗುಲಾಮರನ್ನಾಗಿಸಿ ಬಿಟ್ಟಿದೆ. ಇನ್ನು ಅವುಗಳು ಪ್ರತಿಪಾದಿಸುವ ಅನೇಕ ಸಾಮಾಜಿಕ ಸಂಬಂಧಗಳ ವ್ಯಾಖ್ಯಾನ ನಮ್ಮ ಮನಸ್ಸುಗಳನ್ನು ಎಷ್ಟು ಕಲುಷಿತಗೊಳಿಸುತ್ತಿವೆ ಹಾಗೂ ತನ್ಮೂಲಕ ಸಮಾಜದ ಾರೋಗ್ಯದ ಮೇಲೆ ಎಂತಹ ಪರಿಣಾಮಗಳನ್ನುಂಟು ಮಾಡಿತ್ತಿವೆ ಎಂಬ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ವಿಪಯಾಱಸವೆಂದರೆ, ಇವುಗಳ ಬಗ್ಗೆ ಬಹಳ ಜೋರಾಗಿ ಮಾತನಾಡುವ ನಾವೂ ಸಹ ಯಾವುದೇ ಸೀರಿಯಲ್ ನ್ನೂ ಬಿಡದೇ ನೋಡುವುದು! 'ಮನೆಯೇ ಮೊದಲ ಪಾಠಶಾಲೆ' 'ತಾಯಿಯೇ ಮೊದಲ ಗುರು' ಎಂಬಂತೆ ಮನೆಯಲ್ಲಿ ಹಿರಿಯರು ಮಕ್ಕಳಿಗೆ ಈ ಬಗ್ಗೆ ಸೂಕ್ತವಾಗಿ ತಿಳಿಹೇಳಬೇಕು. ಟಿ.ವಿ.ನೋಡಬೇಡವೆಂದು ಮಕ್ಕಳಿಗೆ ಬ್ಐದು ರೂಮಿನಲ್ಲಿ ಕೂಡಿಹಾಕಿ ಓದಲು ಹೇಳಿ ನಾವು ಟಿ.ವಿ.ನೋಡುತ್ತಾ ಕುಳಿತರೆ ಆದೀತೇ? ನಾವು ಮೊದಲು ಈ ವಿಷಯದಲ್ಲಿ ಸಂಯಮ ಪಾಲಿಸಿ ಮಕ್ಕಳಿಗೆ ಮಾದರಿಯಾಗಬೇಕು. ನಮ್ಮ ೀ ಅಲ್ಪ ತ್ಯಾಗದಿಂದ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗುವುದಕ್ಕೆ ಸಹಕಾರಿಯಾಗವುದಿಲ್ಲವೇ?

ಎಷ್ಟೋ ಪೋಷಕರು ಅಂಬೆಗಾಲಿಡುವ ನಮ್ಮ ಮಗು ಎಷ್ಟು ಚೆನ್ನಾಗಿ ಟಿ.ವಿ. ಜಾಹೀರಾತುಗಳ ಹಿನ್ನೆಲೆ ಸಂಗೀತವನ್ನು ಪುನ: ಹಾಡಿ ತೋರಿಸುತ್ತದೆ ಎಂಬ ವಿಷಯವನ್ನುಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮುಗ್ಧ ಮಗು ಆ ರೀತಿ ಮಾಡಿವುದೇ ಘನ ಕಾಯಱವೆಂದುಕೊಂಡು ಅದೇ ಚಾಳಿಯನ್ನು ಮುಂದುವರೆಸುತ್ತದೆ. ದುರದ್ಋಷ್ಟವೆಂದರೆ ಮಗು ಶಾಲೆ ಸೇರಿದೊಡನೆಯೇ ನಾವು ಮಗುವನ್ನು ಟಿ.ವಿ. ನೋಡಬಾರದೆಂದು ನಿಭಱಂಧಿಸುತ್ತೇವೆ! ಮಗುವಿಗೆ ಗೊಂದಲ-ಗಲಿಬಿಲಿ-ಒಂದು ರೀತಿಯ ದ್ವಂದ್ವ. ಇಲ್ಲಿ ತಪ್ಪು ಮಗುವಿನದಲ್ಲ - ನಮ್ಮದೇ. ಮಗು ಟಿ.ವಿ. ನೋಡಿ ಅನುಕರಣೆ ಮಾಡಿದ ಕ್ಷಣದಲ್ಲೇ ಅದಕ್ಕೆ ನಾವು ಸೂಕ್ತ ಚಿಕಿತ್ಸೆ ನೀಡಿದ್ದರೆ, ಮಗುವಿನ ದ್ಐಹಿಕ, ಮಾನಸಿಕ ಹಾಗೂ ಸವಱತೋಮುಖ ಬೆಳವಣಿಗೆಗೆ ಅವಶ್ಯವಾದ ಅಂಶಗಳ ಬಗ್ಗೆ ನಾವು ಅಂದೇ ಎಚ್ಚರಗೊಂಡಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಒಮ್ಮೊಮ್ಮೆ ನಮ್ಮ ಈ ಇಬ್ಬದಿ ಧೋರಣೆಯಿಂದ ಮಕ್ಕಳ ಎಳೆ ಮನಸ್ಸಿನ ಮೇಲೆ ಪರಿಣಾಮಗಳಾದರೂ ಆಶ್ಚಯಱವೇನಿಲ್ಲ. ಅನೇಕ ಮಕ್ಕಳಲ್ಲಿ ಕಂಡುಬರುತ್ತಿರುವ ಬೊಜ್ಜಿನ ತೊಂದರೆ, ಕಣ್ಣಿನ ತೊಂದರೆ ಹಾಗು ಇನ್ನಿತರ ಆರೋಗ್ಯ ಸಮಸ್ಯೆಗಳು ಬಹುತೇಕ ಈ ಟಿ.ವಿ. ವರಪ್ರಸಾದದಿಂದಲೇ.
ದೇಹಕ್ಕೆ, ಮನಸ್ಸಿಗೆ ಮುದ ನೀಡಲು ಟಿ.ವಿ. ಒಂದೇ ಮಂತ್ರವಲ್ಲ. ಇನ್ನೂ ಅನೇಕ ಆರೋಗ್ಯಕರವಾದ ದಾರಿಗಳಿವೆ. ಹವ್ಯಾಸಗಳಿವೆ. ಮಕ್ಕಳಲ್ಲಿರುವ ಸುಪ್ತ ಆಸಕ್ತಿಗಳನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಅವುಗಳನ್ನು ನೀರೆರೆದು ಪೋಷಿಸಿದಲ್ಲಿ ಮಕ್ಕಳು ತಂತಾನೇ ಟಿ.ವಿ. ಬಗ್ಗೆ ಆಸಕ್ತಿ ಕಳೆದು ಕೊಳ್ಳುತ್ತಾರೆ. ಹಾಗೆ ಮಾಡುವುದರಲ್ಲಿ ನಮ್ಮ (ದೊಡ್ಡವರ) ಪಾತ್ರ ಹೆಚ್ಚಿನದು. ಓದಿನ ಜೊತೆಗೆ ಕ್ರೀಡೆ, ನಾಟಕ, ಯಕ್ಷಗಾನ, ಸಂಗೀತ, ಚಿತ್ರಕಲೆ, ಪ್ರವಾಸ ಮುಂತಾದ ಹೊರಗಿನ ಹವ್ಯಾಸಗಳನ್ನು ಇಟ್ಟುಕೊಂಡ ಅನೇಕ ಮಕ್ಕಳನ್ನು ಗಮನಿಸಿ. ಅವರು ಟಿ.ವಿ. ನೋಡುವುದೇ ಇಲ್ಲ - ನೋಡಿದರೂ ಅತ್ಯಲ್ಪ ಕಾಲ. ಆದರೆ ಬಹುತೇಕ ಮಕ್ಕಳು ಟಿ.ವಿ. ನೋಡುವುದೇ ಹವ್ಯಾಸ ಮಾಡಿಕೊಂಡಿರುವುದು ಇಂದಿನ ದುರಂತ. ಇದರಲ್ಲಿ ನಮ್ಮ ಪಾಲೂ ದೊಡ್ಡದೇ ಅಲ್ಲವೇ? ಟಿವಿಯಿಂದುಂಟಾಗುವ ಸಮಸ್ಯೆಗಳ ಬಗ್ಗೆ ನಮಗಿತ್ತೀಚೆಗೆ ಸ್ವಲ್ಪ ಮಟ್ಟಿನ ಜ್ಞಾನೋದಯವಾಗುತ್ತಿದೆ (ಹಾಗೆಂದು ನಾನೆಂದುಕೊಂಡಿದ್ದೇನೆ!). ಟಿವಿ ಯಿಂದ (ಡಿಸ್ಕವರಿ ಚಾನಲ್, ಅನಿಮಲ್ ಪ್ಲಾನೆಟ್ ಇತ್ಯಾದಿ) ಗಳಿಂದ ನಾವು ಬಹಳ ಜ್ಞಾನ ಪಡೆಯುತ್ತೇವೆ; ಮಾಹಿತಿ ಪಡೆಯುತ್ತೇವೆ ಎಂಬುದು ಕೆಲವರ ವಾದವಾದರೂ, ವಾಸ್ತವವಾಗಿ ಅದರಿಂದ ಲಾಭ ಪಡೆದವರು ಅತೀ ವಿರಳ; ಅಥವಾ ಇಲ್ಲವೆಂದೇ ಹೇಳಬೇಕು. ಆದುದರಿಂದ ನಾವು ನಮ್ಮ ಮಕ್ಕಳನ್ನು ಈ ಚಟದಿಂದ ದೂರವಿಡಲು ಆದಷ್ಟೂ ಪ್ರಯತ್ನಿಸೋಣ. ಈ ನಿಟ್ಟಿನಲ್ಲಿ ಈ ಕೆಲವು ಅಂಶಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡರೆ ಸಹಕಾರಿಯಾದೀತೆಂದು ನನ್ನನಿಸಿಕೆ -

* ನೀವಿನ್ನೂ ಟಿವಿ ತರದಿದ್ದರೆ ಖಂಡಿತಾ ತರಬೇಡಿ.
* ಅದೇ ಹಣವನ್ನು ನಿಮ್ಮ ಮಗ ಅಥವಾ ಮಗಳ ಹೆಸರಿನಲ್ಲಿ ಡಿಪಾಸಿಟ್ ಇಡಿ. ನಾಳೆ ದೊಡ್ಡವರಾದಾಗ ಅವರ ವಿದ್ಯಾಭ್ಯಾಸ, ಉದ್ಯೋಗ, ಮದುವೆಗೆ ಅದು ಉಪಯೋಗವಾದೀತು!
* ದೊಡ್ಡವರು ಮೊದಲು ಟಿವಿ ನೋಡುವುದನ್ನು ನಿಲ್ಲಿಸಿ. ನೋಡಲೇಬೇಕೆಂದಿದ್ದಲ್ಲಿ ಕ್ಲುಪ್ತ ಕಾಲದಲ್ಲಿ ಮಕ್ಕಳೂ ನೋಡುವಂತಹ ಕಾಯಱಕ್ರಮಗಳನ್ನು ಒಟ್ಟಿಗೇ ನೋಡಿ.
* ಮಕ್ಕಳೊಂದಿಗೆ ಹೆಚ್ಚು ಕಾಲ ವ್ಯಯಿಸಿ. ಅವರ ಓದು, ಆಟೋಟಗಳ ಬಗ್ಗೆ ಚಚಿಱಸಿ.
* ವಿಶೇಷವಾಗಿ ಮನೆಯ ಹಿರಿಯರು ಮಕ್ಕಳಿಗೆ ನಮ್ಮ ಭವ್ಯ ಪರಂಪರೆ, ಸಂಸ್ಕ್ಋತಿ ಬಿಂಬಿಸುವ ಕಥೆಗಳನ್ನು ಹೇಳುವ ಹಿಂದಿನ ಅಭ್ಯಾಸ ಮುಂದುವರೆಯಲಿ.
* ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ.
* ಆರೋಗ್ಯವಂತ, ಚಟುವಟಿಕೆಯ ಹಾಗೂ ಉಜ್ವಲ ಭವಿಷ್ಯವುಳ್ಳ ಮಕ್ಕಳು ಬೇಕಾದಲ್ಲಿ ಅವರನ್ನು ಟಿವಿಯಿಂದ ಆದಷ್ಟೂ ದೂರವಿಡಿ.

ಯಾವುದೇ ಅತಿಯಾದರೂ ಅದು ಅಪಾಯವೇ. ಈಗ ಆಗಿರುವುದೂ ಅದೇ. ಮಕ್ಕಳಲ್ಲಿ ಹಾಗು ಯುವ ಜನಾಂಗದಲ್ಲಿ ಬೇರೂರಿರುವ ಈ ಟಿ.ವಿ. ಹುಚ್ಚು (ಮೊಬ್ಐಲ್ ಕಂಪ್ಯೂಟರ್, ಮೊಬ್ಐಲ್ ಟಿ.ವಿ. ಮೊಬ್ಯಲ್ ಹಾಡುಗಳು ಇತ್ಯಾದಿ ಕೂಡ ಈ ಟಿ.ವಿ.ಗೆ ಹೊಸ ಸಂಗಾತಿಗಳು!) ಬಿಡಿಸುವಲ್ಲಿ ವಿಶೇಷವಾಗಿ ಪೋಷಕರು, ಶಾಲಾ ಕಾಲೇಜುಗಳು ಮತ್ತು ಇಡೀ ಸಮಾಜ ಸಂಘಟಿತ ಪ್ರಯತ್ನ ಮಾಡಬೇಕಾಗಿದೆ. ಮಕ್ಕಳು ಹಾಗು ಯುವ ಪೀಳಿಗೆ ಸಹ ಈ ದಿಸೆಯಲ್ಲಿ ತಮ್ಮ ಉಜ್ವಲ ಭವಿಷ್ಯದ ದ್ಋಷ್ಟಿಯಿಂದ ತಮ್ಮ ಕ್ಐಗೂಡಿಸುವ ಕಾಲ ಇದಾಗಿದೆ.
ಟಿವಿ ವೀಕ್ಷಣೆಯಿಂದ ನಾವು ಕಾಲ ಕಳೆಯಬಹುದು; ಮನರಂಜನೆಯ ಜೊತೆಗೆ ಖುಷಿ ಪಡಬಹುದು. ಆದರೆ ಮುಂದೊಮ್ಮೆ ಹಾಗೆ ಕಳೆದ ಕಾಲ ನಮ್ಮನ್ನೇ (ಭವಿಷ್ಯವನ್ನೇ) ಕಳೆಯುತ್ತದೆ ಎಂಬುದಂತೂ ಕಟುಸತ್ಯ! ಹಾಗಾಗದಿರಲಿ ಎಂಬುದೇ ನಮ್ಮ ನಿಮ್ಮೆಲ್ಲರ ಬಯಕೆ. ನೀವೇನಂತೀರಿ??????