ಅನ್ನವೆಂದರೆ ?

ಅನ್ನವೆಂದರೆ ?

ಬರಹ

ಅನ್ನಂ ನ ನಿಂದ್ಯಾತ್ | ತದ್ ವ್ರತಂ | ಪ್ರಾಣೋ ವಾ ಅನ್ನಂ |
ಶರೀರಮನ್ನಾದಂ |ಪ್ರಾಣೆ ಶರೀರಂ ಪ್ರತಿಷ್ಠಿತಮ್ |
ಶರೀರೇ ಪ್ರಾಣಃ ಪ್ರತಿಷ್ಠಿತಃ | ತದೇ ತದನ್ನಮನ್ನೇ ಪ್ರತಿಷ್ಠಿತಮ್ |
ಸ ಯ ಏತದನ್ನಮನ್ನೇ ಪ್ರತಿಷ್ಠಿತಮ್ ವೇದ ಪ್ರತಿಷ್ಠತಿ |

ಅನ್ನವನ್ನು ನಿಂದಿಸದಿರು. ಅದನ್ನು ವ್ರತದಂತೆ ಪಾಲಿಸು.ಅನ್ನವು ಪ್ರಾಣವಿದ್ದಂತೆ.ಈ ಶರೀರವು ಅನ್ನವನ್ನು ತಿನ್ನುತ್ತದೆ ಮತ್ತು ಪ್ರಾಣವನ್ನು ಶರೀರದಲ್ಲಿರುವಂತೆ ನೋಡಿಕೊಳ್ಳುತ್ತದೆ .ಶರೀರದಲ್ಲಿ ಪ್ರಾಣ ಪ್ರತಿಷ್ಟಿತವಾಗುತ್ತದೆ .ಅನ್ನದಲ್ಲಿ ಅನ್ನವು(ಶಕ್ತಿ) ಪ್ರತಿಷ್ಟಿತವಾಗಿದೆ
ನಾವು ಸಾಮಾನ್ಯ ಅಡುಗೆ ಚೆನ್ನಾಗಿಲ್ಲ ಅಂದ್ರೆ ಏನಂತಿವಿ ಥೂ..ಅಡುಗೆ ಚೆನ್ನಾಗಿಲ್ಲ (ಕೆಟ್ಟ ಅಡುಗೆ ಮಾಡಿದ್ದರೆ ದರಿದ್ರವಾಗಿ ಮಾಡಿದ್ದರೆ ಕೆಲವರು ಹೀಗೂ ಅಂತಾರೆ ) . ಇದು ತಪ್ಪು ಅಂತ ಉಪನಿಷತ್ ಹೇಳುತ್ತೆ .(ಮೇಲಿನ ವಾಕ್ಕುಗಳು ತೈತ್ತರಿಯೋಪನಿಷತ್ತಿನ ಭ್ರುಗುವಲ್ಲಿಯಿಂದ ಆಯ್ದದ್ದು ).ಪ್ರಾಣವು ಇರಬೇಕಾದರೆ ಅನ್ನವು ಇರಬೇಕು ಅನ್ನದಿಂದ ಶಕ್ತಿ ಸಂಚಯಗೊಂಡು ಪ್ರಾಣವು ಬದುಕುತ್ತೆ .ಅನ್ನವು ಪ್ರಾಣವಿದ್ದಂತೆ ಅನ್ನವು ಬ್ರಹ್ಮನಿದ್ದಂತೆ ಸೊ ನೀವ್ಯಾರೂ ಹಾಗನ್ನಲ್ಲ ಅಂತ ಗೊತ್ತು ಅಂದವರಿಗೆ ಅದನ್ನು ತಪ್ಪು ಅಂತ ಹೇಳಿ