ನೀರಿನ ಬಗ್ಗೆ ಕನ್ನಡದಲ್ಲಿ ಹಾಡುಗಳು

To prevent automated spam submissions leave this field empty.

ನಮ್ಮ ಮಡಿವಾಳ ಕೆರೆಯ ಹತ್ತಿರ ಒಂದು ಚಿಕ್ಕ ಕಾರ್ಯಕ್ರಮವನ್ನು ಈ ಭಾನುವಾರ ಆಯೋಜಿಸಿದ್ದೇವೆ.
ಕಾರ್ಯಕ್ರಮದ ಉದ್ದೇಶ ನೀರಿನ ಬಗ್ಗೆ ಅರಿವು ಮೂಡಿಸುವುದಾಗಿದೆ. ಅಕ್ಕ ಪಕ್ಕದ ಜನರನ್ನು ಕೂಡಿಸಿ ಕೆರೆಯ ಬಗ್ಗೆ ಸಂವಾದವನ್ನು
ಮಾಡಲಿದ್ದೇವೆ. ಜೊತೆಗೆ ಕನ್ನಡ ಹಾಡುಗಳನ್ನು ಹಾಡಿಸುವ ಯೋಜನೆಯನ್ನು ಮಾಡಿದ್ದೇವೆ.
ನಿಮಗೆ ತಿಳಿದಿರುವ ನೀರಿಗೆ ಸಂಬಂಧ ಪಟ್ಟ ಹಾಡುಗಳನ್ನು ಈ ಪಟ್ಟಿಗೆ ಸೇರಿಸಿ.

1. ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ.
2. ಇಳಿದು ಬಾ ತಾಯಿ ..ಗಂಗಾವತರಣ
3.ಮಳೆ ಬಂತು ಮಳೆ
4.ಕಾವೇರಿ.
5.ದೋಣಿ ಸಾಗಲಿ

ಕನ್ನಡ ನಾಡಿನ ಜನಪ್ರಿಯ ಗಾಯಕಿಯರನ್ನು ಆಹ್ವಾನಿಸುವ ತಯಾರಿ ನಡೆಯುತ್ತಿದೆ.
ದಯವಿಟ್ಟೂ ಕೂಡಲೇ ಪ್ರತಿಕ್ರಿಯಿಸಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮತ್ತೊನ್ದಸ್ಟು..
ಓ ಮೇಘ ರಾಜನೇ ಸುರಿ ಸುರಿ .. ( ಸಿಪಾಯಿ)
ಮೇಘ ಬಂತು ಮೇಘ ,ಮೇಘ ಮಲ್ಹಾರ ಮೇಘ ..
ಮುತ್ತು ಮುತ್ತು ನೀರ ಹನಿಯ .. ( ನಮ್ಮೂರ ಮನ್ದಾರ ಹೂವೆ)
ಕನ್ನಡ ನಾಡಿನ ಜೀವನದಿ ಈ ಕಾವೇರಿ

ದನ್ಯವಾದಗಳು..

ಅಯ್ಯೊ ಯಾಕ್ರೀ ಹೀಗೆ ಹೇಳ್ತೀರ.... ನಾನು ಈ ರೀತಿ ಬರೆಯೋಕೆ ಶುರು ಮಾಡಿದ್ದು ತೀರ ಇತ್ತೀಚೆಗೆ ನನ್ನ ಸ್ನೇಹಿತೆಯರು ನೀನು romantic ಕವನ ಬರೆಯೊಲ್ವ ಅಂತ ಕೇಳಿದ್ದಕ್ಕೆ....
ಸಧ್ಯ ನಮಗೆ ಟೆಸ್ಟ್ ನಡೀತಿದೆ... ಮುಗಿದ ಮೇಲೆ ಖಂಡಿತ ಬರೆದು ನನ್ನ ಬ್ಲಾಗ್ನಲ್ಲಿ ಹಾಕ್ತೀನಿ.....ನೀವು ನನ್ನೆಲ್ಲ ಕವನಗಳನ್ನು ಓದದೆ ಹೀಗೆ ಹೇಳೊದು ಸರೀನ... ಈ ಕವನಗಳನ್ನು ಓದಿ ಆಮೇಲೆ generalise ಮಾಡಿ
http://sampada.net/blog/indushree/04/03/2009/17560
http://sampada.net/blog/indushree/25/02/2009/17302

ಹಾಗೆ ಸಾಧ್ಯವಾದರೆ 9ನೇ ತರಗತಿಯ ತೃತೀಯ/ದ್ವಿತೀಯ ಭಾಷೆ ಪಠ್ಯಪುಸ್ತಕದಲ್ಲೊಂದು ಪದ್ಯವಿದೆ...ಅದನ್ನು ಸಂಗ್ರಹಿಸಿ....
ನಾವು ಅದಕ್ಕೆ ರಾಗ ಸಂಯೋಜನೆ ಯನ್ನು ಮಾಡಿದ್ದೆವು.... ಆ ಪದ್ಯ ಹೀಗಿದೆ
"ಸನನ ಸನನ ಸವಿಯ ರಾಗದಿ ಮಳೆಯ ಧಾರೆಯ ಕರೆಯಲಿ
ಹನಿಗಳೊಂದೂ(?) ಬಿಡದೆ ಮಾತೆಯ ಉದರದಾಳದಿ ಇಳಿಯಲಿ"
ಹೀಗೆ ಮುಂದುವರೆಯುತ್ತದೆ... ರಾಗ ಸಂಯೋಜನೆ ಮಾಡಲು ನೀವು ಪ್ರಯತ್ನಿಸಬಹುದು.... ನಿಮ್ಮ ಬಡಾವಣೆಯಲ್ಲೂ 9ನೇ ತರಗತಿ ವಿದ್ಯಾರ್ಥಿಗಳಿದ್ದೆ ಇರುತ್ತಾರೆ

೧.ನೀರೇ ನೀರೇ ನೀರೇ ನೀರೇ....
ಬಿಸಿಲೇರಿತು ಬಾಯಾರಿತು
೨. ಮಳೆ ಬರಲಿ ಮಳೆ ಬರಲಿ

೩. ನೀರ ಮೇಲಿನ ಲೀಲೆ ನಮ್ಮದೀ ಜೀವನ

೪. ಬಂಗಾರ ತೀರ ಕಡಲಾಚೆ...

೫. ತಾರಕ್ಕ ಬಿಂದಿಗೆ ನಾ ನೀರಿಗ್‌ಹೋಗುವೆ

೧. ಹೊಸ ವರ್ಷದ ಮೊದಲಿನಿಂದ ಮಳೆ ಬಾರದೆ ಹೋಗಿದೆ - ಬಾರದ ಮಳೆ - ಕೆ.ಎಸ್.ನರಸಿಂಹಸ್ವಾಮಿ
೨. ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ - ಅಡಿಗರು
೩. ಜಲಲ ಜಲಲ ಜಲ ಧಾರೆ
೪. ಗಗನದಲಿ ಮಳೆಯ ದಿನ ಗುಡುಗಿನ ತನನ

ಇಲ್ಲಿ ಪ್ರಸ್ತಾಪವಾಗಿರುವುದು ತುಮಕೂರಿನ ಮಡಿವಾಳ ಕೆರೆ ತಾನೆ? ಕಾರ್ಯಕ್ರಮ ಯಶಸ್ವಿಯಾಗಲಿ.

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು.......
ಹರಿವ ತೊರೆ ತೀರದಲಿ, ಎಳೆಹಸಿರು ಬಳ್ಳಿಯಲಿ.....
ನಾ ನೋಡಿ ನಲಿಯುವ ಕಾರವಾರ ಕಡಲಿನ ತೀರ......
ಒಂದು ಮುಂಜಾವಿನಲಿ ..........

ಇನ್ನಷ್ಟು ನೆನಪಿಗೆ ಬಂದರೆ ಬರೆಯುತ್ತೀನಿ!

~ಮೀನಾ

೧. ನೀರಿನಲ್ಲಿ ಅಲೆಯ ಉಂಗುರಾ, ಕೆನ್ನೆ ಮೇಲೆ ಪ್ರೇಮದುಂಗುರಾ...

೨. ಕಾವೇರಮ್ಮ ಕಾಪಾಡಮ್ಮ ಈ ದೋಣಿಯಾ ತೇಲಿಸೂ

೩. ಮಳೆ ಬಂತೂ ಮಳೆ, ಮಳೆ ಬಂತೂ ಮಳೆ, ಹನಿ ಹನಿಯಾಗಿ ಬಂದಿತೂ ಬಾನಿಂದ (ಚಿತ್ರ ಮಳೆ ಬಂತು ಮಳೆ)

೪. ಉಪ್ಪಾ ತಿಂದಾ ಮೇಲೆ ನೀರಾ ಕುಡಿಯಲೆ ಬೇಕು (ಚಿತ್ರ: ಕಾಲೇಜು ರಂಗ)

1. ಹುಯ್ಯೊ ಹುಯ್ಯೊ ಮಳೆರಾಯ, ಹೂವಿನ ತೋಟಕೆ ನೀರಿಲ್ಲ.
2. ಮೇಘ ಬಂತು ಮೇಘ - ಹೃದಯ ಹಾಡಿತು.
3. ಬಾ ಮಳೆಯೆ ಬಾ..
4. ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...
5. ಮಾನವನಾಗಿ ಹುಟ್ಟಿದ್ ಮ್ಯಾಲೆ ಏನೇನ್ ಕಂಡಿ?? - ಜೋಗದ ಜೋಕು..
6. ಮುಂಗಾರಿನ ಅಭಿಷೇಕಕೆ.. ಮಿದುವಾಯಿತು ನೆಲವು.. ( ನನ್ನ ಪರ್ಸನಲ್ ಫೇವರಿಟ್)
7. ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ..

ಈಗ ಜ್ಞಾಪಕ ಬಂದಿದ್ದು ಇಷ್ಟು .. ಮತ್ತೆ ಸಾಧ್ಯ ಆದ್ರೆ ಬರೀತಿನಿ..
ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಲಿ.. ನಾನ್ ಅಲ್ಲಿ ಇರ್ಬೇಕಿತ್ತು - ಈ ಕಾರ್ಯಕ್ರಮ ನೋಡ್ಬೇಕಿತ್ತು ಅನ್ನಿಸ್ತಾ ಇದೆ..

೧. ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
೨. ಮುತ್ತಿನ ಹನಿಗಳು ಸುತ್ತಲು ಮುತ್ತಲು, ಮುಗಿಲಿನ ಆಟಕೆ ಮಿಂಚಿನ ಓಟಕೆ
೩. ಬಿಸಿಲಾದರೇನು ಮಳೆಯಾದರೇನು,
೪. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
೫. ಮುತ್ತು ಮಳೆಗಾಗಿ ಹೊತ್ತು ಕಾದಿದೆ

ಕಣವಿ ಯವರ "ಮುಂಗಾರಿನ ಅಭಿಷೇಕಕೆ ಪುಟಿದೆದ್ದಿತು ಚಲುವು...ಧಗೆಯಾರಿದ ಹೃದಯದಲ್ಲಿ...."
ಸಿ.ಎಸ್. ಅಶ್ವತ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಭಾವಗೀತೆ

೧. ಬಂಗಾರದೊಡವೆ ಬೇಕೆ ?.. ನೀರೇ...
ಅಂಗನೆ ನಿನ್ನಂದ ಅಂಗಾಂಗಕೊಫ್ಫುವ....
ಬಂಗಾರದೊಡವೆ ಬೇಕೆ ?

೨. ಕಾವೇರಿ ಏಕೆ ಓಡುವೇ...ನನ್ನಲ್ಲಿ ಆಸೆ ಇಲ್ಲವೇ ?

೩. ಕೊಡಗಿನ ಕಾವೇರಿ...
ಕಾವೇರಿ,.. ನೀ ಬೆಡಗಿನ ವಯ್ಯ್ಯಾರಿ..

೪. ಮುಗಿಲು ತೆರೆಯಿತು. ಹಗಲು ಹರಿಯಿತು
ಏಳು ಪಯಣಿಗ ಎಚ್ಚರ.
ಅಲೆಯ ವಡನೆ ಸರಸ ಬೇಡ ಬಲ್ಲೆನೆಂಬ ಬಿಂಕ ಬೇಡ (ಚಕ್ರತಿರ್ಥ ಚಿತ್ರದ್ದು)

೫. ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮ್ರುಗಗಳ ಬೀಡು.

ಬಂಗಾರದೊಡವೆ ಬೇಕೆ ಎಂಬೋ ಹಾಡಿನಲ್ಲಿ
"ನೀರೆ" ಎಂದರೆ ನೀರಿನ ಬಗ್ಗೆ ಹೇಳಿಲ್ಲ... ನೀರೆ ಎಂದರೆ ಹೆಣ್ಣು
ನಾ ಹೇಳಿದ್ದು ತಪ್ಪಿದ್ದರೆ ಅನ್ಯಥಾ ಭಾವಿಸಬೇಡಿ