ಕವಿತೆಯ ತಂತು

ಕವಿತೆಯ ತಂತು

ಪಲ್ಲವಿ ಸಂಪದದ ಇತಿಹಾಸ ಆಗಿಬಿಟ್ಟಿದ್ದಾರೆ. ಒಂದಷ್ಟು ಒಳ್ಳೆ ಚರ್ಚೆಗಳನ್ನು ಮಾಡಿ, ಲೇಖನಗಳನ್ನು ಬರೆದು, ಫಡಕ್ಕನೆ ಮಿಂಚಿದ್ದ ಅವರು, ಅದೇಕೋ ಇದ್ದಕ್ಕಿದ್ದಂತೆ ಸಂಪದ ಬಿಟ್ಟು ಹೊರನಡೆದರು. ಅವರು ಪ್ರಾರಂಭಿಸಿದ್ದ ’ಕವಿತೆ ಬರೆಯೋಣ್ವ’ ಪೋಸ್ಟನ್ನು ಓದಿದೆ. ಆ ಪೋಸ್ಟಿಗೆ ಬಂದ ಅಷ್ಟು ಕಮೆಂಟುಗಳಲ್ಲಿ ಇದ್ದ ಕವಿತೆಗಳು ನಿಜಕ್ಕು ನನಗೆ ಅಚ್ಚರಿ ಮೂಡಿಸಿತು. ಇದಕ್ಕು ಮುಂಚೆ ಆರ್ಕುಟ್ಟಿನ ಒಂದು ಕಮ್ಯೂನಿಟಿಯಲ್ಲಿ ಕೆಲವು ಗೆಳೆಯರು ಸೇರಿಕೊಂಡು ಇಂತದ್ದೇ ’ಕವಿತಾ ಸಮರ’ ನಡೆಸಿದ್ವಿ. ತುಂಬಾ ಖುಷಿ ಕೊಟ್ಟಿದ್ದ ಗಳಿಗೆಗಳವು. ಕಚಗುಳಿ ಇಟ್ಟು ನಗಿಸುವಂತ, ಯೋಚನೆಗೆ ಹಚ್ಚುವಂತಹ, ನಮ್ಮ ಕ್ರಿಯೇಟಿವಿಟಿಗೆ ಸವಾಲೆಸಗುವ ಬರಹ. ಪುಟ್ಟದೊಂದು ಕವಿತೆ ಬರೆದು, ಅದಕ್ಕೆ ಸಂಬಂಧ ಪಟ್ಟ ಪಡದ ಇನ್ನೊಂದು ಕವಿತೆ, ಅದರ ಬೆನ್ನಿಗೆ ಅಂತದ್ದೇ ಮತ್ತೊಂದು ಹೀಗೆ ಕವಿತೆಗಳ ಹಾರ ಹೆಣಿಯೋದು. ಅದೇ ಪ್ರಯತ್ನವನ್ನು ಮತ್ತೆ ಮುಂದುವರೆಸೋಣವೆನಿಸಿತು. ನೀವೇನಂತೀರಿ?

ನಾನು ಶುರು ಮಾಡಿದ್ದೀನಿ:-

ಓದಿದರೆ ಚಿಂತನೆ,
ಬರೆದರೆ ಕತೆ,
ಹೇಳಲಾಗದ ಭಾವವೊಂದು
ಅಕ್ಷರಗಳಲ್ಲಿ ಕಾಣಿಸಿದರೆ ಅದು ಕವಿತೆ.....

Rating
No votes yet

Comments