ಪುಟ್ಟಿಯ ದಿನಚರಿ

To prevent automated spam submissions leave this field empty.

ಅಮ್ಮ ಅಮ್ಮ ಎನುತಾಳೆ
ಕೂಗಿ ಕೂಗಿ ಅಳುತಾಳೆ
ಹತ್ತಿರ ಹೋಗಲು ನಗುತಾಳೆ
ಹಾಡಿ ಹಾಡಿ ಕುಣಿತಾಳೆ

ಹಾಲು ಬೇಕು ಅಂತಾಳೆ
ಕೊಟ್ಟರೆ ಹಾಲು ಚಲ್ತಾಳೆ
ಅಮ್ಮ ಪೆಟ್ಟು ಕೊಡುತಾಳೆ
ಪೆಟ್ಟಿಗೆ ಹೆದರಿ ಓಡ್ತಾಳೆ

ಮತ್ತೆ ಬಂದು ಕರಿತಾಳೆ
ಆಟ ಆಡು ಅಂತಾಳೆ
ಆಡಲು ಹೋದರೆ ಬೀಳ್ತಾಳೆ
ಬಿದ್ದು ಬಿದ್ದು ಏಳ್ತಾಳೆ

ಅಮ್ಮ ಅಡಿಗೆ ಮಾಡ್ತಾಳೆ
ಇವಳೂ ಹೋಗಿ ನೋಡ್ತಾಳೆ
ಊಟ ಹಾಕು ಅಂತಾಳೆ
ತರಲು ಊಟ ಓಡ್ತಾಳೆ

ಅಮ್ಮ ಹೋಗಿ ಹಿಡಿತಾಳೆ
ಹೈಚೇರ್ ಮೇಲೆ ಕೂರ್‍ಸ್ತಾಳೆ
ಭಾರೀ ಜೋರು ಮಾಡ್ತಾಳೆ
ಇವಳು ಸುಮ್ನೆ ತಿಂತಾಳೆ

ಊಟ ಮುಗಿಸಿ ಏಳ್ತಾಳೆ
ನಿದ್ದೆ ಬರುತ್ತೆ ಅಂತಾಳೆ
ಅಮ್ಮ ತಟ್ಟಿ ಹಾಡ್ತಾಳೆ
ಇವಳು ನಿದ್ದೆ ಮಾಡ್ತಾಳೆ

ನಿದ್ದೆ ಮುಗಿದು ಏಳ್ತಾಳೆ
ಮತ್ತೆ ಶುರು ಮಾಡ್ತಾಳೆ
ಅಮ್ಮ ಅಮ್ಮ ಎನುತಾಳೆ
ಕೂಗಿ ಕೂಗಿ ಅಳುತಾಳೆ

( ಹೈ ಚೇರ್ ಅಂದರೆ ಮಕ್ಕಳನ್ನು  ಬೆಲ್ಟ್ ಹಾಕಿ ಕಟ್ಟಿ ಕೂರಿಸಿ ಊಟ ಮಾಡಿಸಲೆಂದೇ ಇರುವ ಕುರ್ಚಿ )

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ ಅನುಭವದ ಮಾತುಗಳಿರಬೇಕು. ಮಕ್ಕಳ ಮನಸ್ಸಿನಲ್ಲಿ ಏನು ದ್ವಂದ್ವ ಇರಬಹುದು ಎನ್ನುವುದರ ಬಗ್ಗೆ ಬರೆಯಲು ಪ್ರಯತ್ನಿಸಿ. ಅದು ಬಲು ಕಷ್ಟ. ಏಕೆಂದರೆ ಮಕ್ಕಳಿಗೆ ಯೋಚನೆಗಳೇ ಇಲ್ಲವೆನ್ನುತ್ತಾರೆ. ಆದರೂ ಅವರುಗಳು ಎಲ್ಲವನ್ನೂ ಕುತೂಹಲವಾಗಿ ನೋಡುವುದನ್ನು ನೋಡಿದರೆ ಹಿರಿಯರನ್ನು ಅನುಸರಿಸಬೇಕು ಅನ್ನುವ ಅಂಶ ಕಲಿಯುತ್ತಿರುತ್ತಾರೆ ಅಂತ ನನ್ನ ಅನಿಸಿಕೆ. ಅಂತಹ ಬರಹಗಳು ಬಹಳ ಕಡಿಮೆ. ಜಿ.ಪಿ,ರಾಜರತ್ನಂ ಮತ್ತು ಸಂಗಮೇಶ ಅವರ ಕವನಗಳನ್ನು ಓದಿದ್ದೀನಿ. ಅಂತಹದ್ದು ಬಹಳವಾಗಿ ಬರಬೇಕಿದೆ. ತವಿಶ್ರೀನಿವಾಸ