ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು

ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು

ಬರಹ

K P Purnachandra Tejasvi

ನಮ್ಮೆಲ್ಲರನ್ನು ಕನ್ನಡ ಪುಸ್ತಕಗಳನ್ನೋದುವಂತೆ ಮಾಡಿದ ತೇಜಸ್ವಿ ಇನ್ನಿಲ್ಲ. ಇವರ ನೆನಪಿನಲ್ಲಿ ಇವರೊಂದಿಗೆ ನಾವು ನಡೆಸಿದ ಸಂದರ್ಶನದ podcast, ಅದರಲ್ಲಿನ ಅವರ ಮಾತುಗಳನ್ನು ಸ್ಮರಣ ಸಂಚಿಕೆಯಾಗಿ ಮತ್ತೆ ಸದಸ್ಯರ ಮುಂದಿಡುತ್ತಿದ್ದೇವೆ. ಈ ಸಂದರ್ಶನ ನಡೆಸಿದ್ದು ೨೦೦೫ರಲ್ಲಿ. ತೇಜಸ್ವಿಯವರೊಂದಿಗಿನ ಸಂದರ್ಶನ ಸಂಪದದ ಮೊದಲ podcast ಕೂಡ ಆಗಿತ್ತು.

ನಮಸ್ಕಾರ. ಸಂಪದದ ಸದಸ್ಯರೆಲ್ಲರಿಗೂ ದೀಪಾವಳಿ ಹಾಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಂಪದದಲ್ಲಿ podcasting ಪ್ರಾರಂಭ ಮಾಡಬೇಕೆಂದು ನಮ್ಮಲ್ಲಿ ಹಲವರು ಬಯಸಿದ್ದೆವು. ಕೊನೆಗೊಮ್ಮೆ ಸಮಯ ಕೂಡಿ ಬಂದಿದೆ. ಈ ಮೊದಲ 'ಕಡಿಮೆ ಆಡಂಬರದ' ಸಂಚಿಕೆಯಲ್ಲಿ ನಮ್ಮೆಲ್ಲರಿಗೂ ಚಿರಪರಿಚಿತರಾದ ಸಾಹಿತಿ ಮತ್ತು ಚಿಂತಕ, ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಸಂದರ್ಶನವನ್ನು ನಿಮ್ಮ ಮುಂದಿಡಲು ಸಾಧ್ಯವಾಗಿರುವುದು ಸಂತಸದ ವಿಷಯ. > ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (14 MB)

ಧ್ವನಿ ಮುದ್ರಣದ ಕೃಪೆ ಪವನಜರವರಿಗೆ ಬಂದ ಎಮ್ ವಿ ಪಿ ಗಿಫ್ಟು - ಕ್ರಿಯೇಟಿವ್ ಮುವೋ ಎಮ್ ಪಿ ಥ್ರಿ ಪ್ರೇಯರಿನದ್ದು. ಮೊದಲನೆಯ ಪ್ರಯೋಗವಾದ್ದರಿಂದ ಧ್ವನಿ ಮುದ್ರಣ ಒಂದಷ್ಟು ಹೆಚ್ಚು ಕಡಿಮೆಯಾಗಿದೆ. ಸ್ವಲ್ಪ ನಾಯ್ಸ್ ಇರುವುದರಿಂದ ಜೋಪಾನವಾಗಿ ಸೌಂಡ್ ಇಟ್ಟುಕೊಂಡು ಕೇಳಿ. ಈ ಪಾಡ್ಕ್ಯಾಸ್ಟಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸಂಪದ ಡಾಟ್ ನೆಟ್ಟಿನಲ್ಲಿ ಇದಕ್ಕಾಗಿ ತೆರೆದಿರುವ ಈ ಥ್ರೆಡ್ ನಲ್ಲಿ ಮರೆಯದೆ ದಾಖಲಿಸಿ. ವಂದನೆಗಳೊಂದಿಗೆ, ಹರಿ ಪ್ರಸಾದ್ ನಾಡಿಗ್. ಪೂರ್ಣಚಂದ್ರ ತೇಜಸ್ವಿಯವರ ಮನೆಗೆ ಭೇಟಿ ನೀಡಿದ ದಿನದಂದು ತೆಗೆದ ಕೆಲವು ಫೋಟೋಗಳು: ಇಸ್ಮಾಯಿಲ್, ಪವನಜ, ತೇಜಸ್ವಿ. ಇಸ್ಮಾಯಿಲ್, ಪವನಜ, ತೇಜಸ್ವಿ. ತೇಜಸ್ವಿಯವರ ಮನೆಯ ಅಂಗಳದ ತಾವರೆ ತೇಜಸ್ವಿಯವರ ಮನೆಯ ಅಂಗಳದ ತಾವರೆ ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ [:mailto:hpnadigATgmail.com|ಇ-ಮೇಯ್ಲ್ ಮೂಲಕ ಕಳುಹಿಸಿ].