ನಾರಿ ನಾಚಿ ನೀರಾಗಿ....
ಮುಖದಲ್ಲಿ ಮೂಡಿದೆ ಮಂದಹಾಸ ತನ್ನ
ಇನಿಯನ ಬರುವಿಕೆಯನು ಕಂಡು,
ಹತ್ತಿರ ಬರುತಿರೆ ತುಟಿಕಚ್ಚಿದಳು ನಾಚಿ ನೀರಾಗಿ,
ಏನು ಹೇಳಬೇಕೆಂದು ತಿಳಿಯದೆ.
ತನ್ನ ಬಯಕೆಯ ಹೇಳುವ ತವಕದಲಿ,
ತನ್ನನೆ ಮರೆತಳು ಈ ಲೋಕದಲಿ.
ಕಣ್ಣ ಮುಂದಿನ ಮುಂಗುರುಳು ಮಾಡಿದೆ ಮೋಡಿ,
ಕಣ್ಣಂಚಿನಲಿ ತುಂಬಿದೆ ಊರಗಲದ ಪ್ರೀತಿ.
ತುಟಿಯಂಚಿನ ನಗೆಯು ಕರೆದಿದೆ ಇನಿಯನ,
ತನ್ನ ಬಾಹುಗಳಲ್ಲಿ ಬಂಧಿಸಲು ಕೊನೆತನಕ....
Rating
Comments
ಉ: ನಾರಿ ನಾಚಿ ನೀರಾಗಿ....
In reply to ಉ: ನಾರಿ ನಾಚಿ ನೀರಾಗಿ.... by palachandra
ಉ: ನಾರಿ ನಾಚಿ ನೀರಾಗಿ....
ಉ: ನಾರಿ ನಾಚಿ ನೀರಾಗಿ....
In reply to ಉ: ನಾರಿ ನಾಚಿ ನೀರಾಗಿ.... by malathi shimoga
ಉ: ನಾರಿ ನಾಚಿ ನೀರಾಗಿ....