ಕೊಂಕಣಿಗಳ ಸಂಘ ನಿಷ್ಟೆಯೂ, ಪುಣ್ಯಕೋಟಿಯ ಧರ್ಮನಿಷ್ಟೆಯೂ...

ಕೊಂಕಣಿಗಳ ಸಂಘ ನಿಷ್ಟೆಯೂ, ಪುಣ್ಯಕೋಟಿಯ ಧರ್ಮನಿಷ್ಟೆಯೂ...

ಬರಹ

ಈ ಹಿಂದೆ ಕೊಂಕಣಿಗರ ಸಂಘ ನಿಷ್ಟೆ ಮತ್ತು ಅದರಿಂದ ಕೊಂಕಣಿಗರಿಗಾಗಿರುವ ಅನ್ಯಾಯದ ಬಗ್ಗೆ ಗುರು ಬಾಳಿಗರ ಪ್ರಬಂಧಕ್ಕೆ ನನ್ನ ಕೆಲವು ವ್ಯಾಖ್ಯಾನಗಳು.
ಬಾಳಿಗರ ಬರವಣಿಗೆಯ ರೀತಿ ಇಷ್ಟ ಆಯಿತು. ಅವರು ವಿಷಯವನ್ನು ಮಂಡಿಸುವ ರೀತಿಯಂತು ಸುಂದರ... ಇದನ್ನ ಇನ್ನೆಲ್ಲಾದರು ಹೇಳ್ತೆನೆ.. ವಿಷಯಕ್ಕೆ ಬರೋಣ.
ಇಂದಿನ ಸಂಕೀರ್ಣ ಕಾಲಗತಿಯಲ್ಲಿ ಕೊಂಕಣಿಗರ ಬಗ್ಗೆ ಬರೆದ ಸಂಕೀರ್ಣ ಲೇಖನ ಓದಲು ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಂಡದ್ದಂತು ನಿಜ.

ವಿನಾ ಕಾರಣ ಸಂಘ ಪರಿವಾರವನ್ನು ಸಲ್ಲದ ವಿಷಯಗಳಿಗೆ ಎಳೆದು ತಂದು ತಾವು ಜಾತ್ಯಾತೀತರೆಂದು ತೋರಿಸಿಕೊಳ್ಳುವುದು ಬುದ್ದಿ ಜೀವಿಗಳ ಒಂದು ಹಳೆಯ ಟ್ರಿಕ್ಕು. ಬಾಳಿಗರು ಅದನ್ನೆ ಮಾಡಿದ್ದಾರೆ :) .

ನನಗೆ ತಿಳಿದಿರುವಂತೆ ಗೋವಾದ ಮೂಲ ನಿವಾಸಿಗಳಾದ ಕೊಂಕಣಿಗಳು ಪೋರ್ಚುಗೀಸರ ಕಾಲದಲ್ಲಿ ತಮ್ಮ ಧರ್ಮ ಅಥವ ಜೀವದ ಆಯ್ಕೆ ಮಾಡಲು ತಿಳಿಸಿದಾಗ, ಎರಡನ್ನು ಒಟ್ಟಿಗೆ ಆಯ್ಕೆ ಮಾಡಿದ ಕೆಲ ಮಂದಿ ಜೀವ ಮತ್ತು ಧರ್ಮ ರಕ್ಷಣೆಗಾಗಿ ಕರ್ನಾಟಕ ಮತ್ತು ಕೇರಳದ ತೀರ ಪ್ರದೇಶಗಳಿಗೆ ವಲಸೆ ಬಂದರೆಂದು ನಮ್ಮ ಜನರ ಬಲವಾದ(?) ನಂಬಿಕೆ.

ನಮ್ಮ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯು ಸರ್ವಧರ್ಮ ಸಮನ್ವಯತೆಗೆ ಹೆಸರಾದುದು. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಒಬ್ಬ ಹೆಮ್ಮೆಯ ಉದಾಹರಣೆ. ಜೈನ ಮತಾನುಯಾಯಿಗಳಾದ ಹೆಗ್ಗಡೆಯವರು ಶಿವ ಮಂದಿರದ ಮುಖ್ಯಸ್ಥರು.

ಹೀಗೆ ಗೋವಾದಿಂದ ವಲಸೆ ಬಂದ ಕೊಂಕಣಿಗರನ್ನು ಕೂಡ ನಮ್ಮ ಜನ ಒಪ್ಪಿದರು. ಈಗ ಕೊಂಕಣಿಗರಲ್ಲದೆ ವ್ಯಾಪಾರ ವ್ಯವಹಾರ ಊಹಿಸುವುದೆ ಕಷ್ಟ. ಇಂದಿನ ಪೀಳಿಗೆಯ ಕೊಂಕಣಿಗಳಂತು ಅಪ್ಪಟ ಅಪ್ಪಟ ಕನ್ನಡಿಗರು.
ಇಲ್ಲಿನ ಜನಜೀವನಕ್ಕೆ ಹೊಂದಿಕೊಂಡ ಕೊಂಕಣಿ ಮಾತೃ ಭಾಷೆಯ ಕನ್ನಡಿಗ ಕೊಂಕಣಿಗಳು ತಮ್ಮ ಪೂರ್ವಜರ ಮೇಲಾದ ದೌರ್ಜನ್ಯವನ್ನು ಮರೆತಿಲ್ಲ(ಮರೆಯುವುದು ಅಷ್ಟು ಸುಲಭವೂ ಅಲ್ಲ ಬಿಡಿ). ಅಲ್ಲಿ ಪೊರ್ಚುಗೀಸರು, ಇಲ್ಲಿ ಮುಸ್ಲಿಮರ ದಬ್ಬಾಳಿಕೆಯನ್ನು ಎದುರಿಸಲು ಕೆಲ ಕೊಂಕಣಿಗರು ಒಂದು ಸಂಘಟನೆಯನ್ನು ಮನಗಂಡರು ಆ ಸಂಘಟನೆಯ ಹೆಸರೆ ರ‍ಾಷ್ಟ್ರೀಯ ಸ್ವಯಂ ಸೇವಕ ಸಂಘ. ಈ ಸಂಘಟನೆಯು ಬಹು ಸಂಖ್ಯಾತ ಸಮಾಜಕ್ಕೆ ಆಳಿಸಿಕೊಳ್ಳುವುದನ್ನು ಬಿಟ್ಟು ಆಳುವುದರ ಬಗ್ಗೆ ತಿಳಿಸಿಕೊಟ್ಟಿತು. ಅಷ್ಟಾವಕ್ರದಂತಿದ್ದ ಸಮಾಜದ ಓರೆ ಕೋರೆಗಳನ್ನು ಸರಿಪಡಿಸಿತು ಮತ್ತು ಸರಿಪಡಿಸುತ್ತಿದೆ. ಈ ಒಂದು ಬೆಳವಣಿಗೆ ಸಮಾಜದ ಅದರಲ್ಲೂ ಕೊಂಕಣಿಗಳ ಆತ್ಮ ಸ್ಥೈರ್ಯವನ್ನು ಹೆಚ್ಚಿಸಿತು. ಬಹಳಷ್ಟು ಕೊಂಕಣಿಗರು ಇತರ ಸಮಾನ ಮನಸ್ಕರೊಡಗೂಡಿ ಸಂಘದ ಏಳಿಗೆಗಾಗಿ ಹಗಲೂ ರಾತ್ರಿ ಶ್ರಮಿಸಿದರು. ಇದರ ಮುಂದೆ ತಮ್ಮ ಜಾತಿಗೆ ಎಷ್ಟು ಲಾಭ ಎಂದು ತಿಳಿಯಲು ಪಾಪ ಅವರಿಗೆ ಸಮಯವಾದರೂ ಎಲ್ಲಿತ್ತು? ಇದ್ದಿದ್ರು ಅವರಷ್ಟು ಚೀಪ್ ಅಲ್ಲ ಬಿಡಿ...
ಕೊಂಕಣಿಗಳು ತಮ್ಮ ದೇವಸ್ಥಾನವನ್ನು ಸ್ವಜಾತಿಗೆ ಮಾತ್ರ ಪ್ರೋತ್ಸಾಯಿಸುತ್ತಾರೆ ಎಂಬ ಆಪಾದನೆಯಿದ್ದರೂ ಕೂಡ, ದೈವ ಭೂತ, ದೇವಸ್ಥಾನಗಳ ನಾಡಿಗೆ ಇದೊಂದು ವಿಷಯವೇ ಅಲ್ಲ.
ಕೊಂಕಣಿಗರ ಲಾರಿ ಡ್ರೈವರ್ಗಳು ಮುಸ್ಲಿಮರಾಗಿರುತ್ತಾರೆಂಬ ಹೇಳಿಕೆಯನ್ನು ನಮ್ಮೂರಿನ(ಕೋಟ, ಕುಂದಾಪುರ) ಕೊಂಕಣಿಗಳಿಗೂ ಅನ್ವಯಿಸುವುದಾದರೆ ಇದೊಂದು ಭಯಂಕರ ಸುಳ್ಳು :) ಬಾಳಿಗರ ಊರಲ್ಲಿ ಒಂದೆರಡು ಕೇಸ್ ಇರಬಹುದು.
ಒಂದು ಸತ್ಯವಾದ ಕಥೆ ಹೇಳ್ತೀನೆ ಕೇಳಿ. ಒಂದೂರು, ಕುಂದಾಪುರದಿಂದ ಒಂದು ಹತ್ತು ಕಿಲೋಮೀಟರ್ ದೂರ (ಕರಾವಳಿಯ ಪೂರ್ವಕ್ಕೆ ಹೋದಂತೆಲ್ಲ ಹಸಿರು ಗುಡ್ಡಗಾಡು ಪ್ರದೇಶ ಸಿಗುತ್ತೆ. ನಮ್ಮ ಭಾಷೆಯಲ್ಲಿ ಇದನ್ನು ಹಾಡಿ ಅಂತಾರೆ). ಸುಂದರವಾದ ಪ್ರಕೃತಿಯ ಮಡಿಲಲ್ಲಿ ಇದೆ. ಅಲ್ಲಿ ಸ್ವಲ್ಪ ಜನ ವ್ಯವಸಾಯ ಮಾಡಿದರೆ, ಇನ್ನು ಕೆಲವರು ತೋಟಗಾರಿಕೆ ಮಾಡ್ತಾರೆ. ಎಲ್ಲರಿಗೂ ಕೈ ತುಂಬ ಕೆಲಸ, ಹೊಟ್ಟೆ ತುಂಬ ಊಟ. ಸ್ವಲ್ಪ ಅತಿ ಬುದ್ದಿವಂತರು ತಮ್ಮ ಜಮೀನನ್ನು ಮಾರಿ ಹೋಗಿದಾರೆ. ಇತ್ತೀಚೆಗೆ ಆ ಊರಲ್ಲಿ ಒಬ್ಬ ಮಲಯಾಳಿ ಕ್ರಿಶ್ಚಿಯನ್(ಅವನು ಯಾರೇ ಆಗಿರ್ಲಿ ಕಥೆಯ ನೀತಿ ಒಂದೆ ಇರುತ್ತೆ. ಸ್ವಲ್ಪ ಎಫೆಕ್ಟ್ ಜಾಸ್ತಿ ಇರ್ಲಿ ಅಂತ ಹಾಕ್ದೆ.) ಬಂದಿದ್ದಾನೆ. ಕಡಿಮೆ ಬೆಲೆಗೆ ಸಿಗುವ ಜಮೀನನ್ನು ಕೊಂಡುಕೊಳ್ಳೋದೆ ಆತನ ಹವ್ಯಾಸ. ಗಲ್ಫ್ ದೇಶದ ದುಡ್ಡಿನೆದುರಿಗೆ ಜಮೀನಿನ ಬೆಲೆ ಜುಜುಬಿ ಆತನಿಗೆ. ಆ ಊರಲ್ಲೊಂದು ಭೂ ಹಿಡುವಳಿದಾರರ ಚಿಕ್ಕ ಸಂಸಾರ. ತಮ್ಮ ಮನೆಯ ಸುತ್ತೆಲ್ಲ ಕಾಡಾದರೆ, ಸ್ವಲ್ಪ ದೂರದಲ್ಲಿ ಒಂದೆರಡೆಕರೆ ವ್ಯವಸಾಯ ಭೂಮಿ. ಮನೆ ಯಜಮಾನ ಅಕ್ಕಿ ಗಿರಣಿಯನ್ನು ನಡೆಸಿದರೆ ಆತನ ಪತ್ನಿ ಅಂಗನವಾಡಿಯೊಂದರ ಮೇಲ್ವಿಚಾರಕಿ. ಇಬ್ಬರು ಮುದ್ದಾದ ಮಕ್ಕಳು. ಯಾವಾಗ ಈ ಮಲ್ಲು ಆ ಊರಿಗೆ ಕಾಲಿಟ್ಟನೊ ಅವರ ಅಕ್ಕಪಕ್ಕದ ಜಮೀನುಗಳನ್ನು ಖರೀದಿಸಿ ಅಲ್ಲಿ ರಬ್ಬರ್ ಗಿಡಗಳನ್ನು ನಡಿಸಿದ. (ರಬ್ಬರ್ ರಸದ ಗಾಳಿ ಸೇವನೆ ಆರೋಗ್ಯಕ್ಕೆ ಹಾನಿಕರ.) ಈತನ್ಮಧ್ಯೆ ವ್ಯವಸಾಯ ಭೂಮಿಯನ್ನು ಖರಿದಿಸಿದ ಆತ ಕೂಲಿಗಳಿಗೆ ಅತಿಯಾದ ಸಂಬಳ ಕೊಡತೊಡಗಿದ. ಇದರಿಂದಾಗಿ ಉಳಿದ ಭೂ ಹಿಡುವಳಿದಾರರಿಗೆ ಕೆಲಸಕ್ಕೆ ಆಳು ಸಿಗದೆ ಅಧ್ವಾನವಾಯಿತು. ಈ ತೊಂದರೆ ತಾಪತ್ರಯಗಳೆ ಬೇಡ ಎಂದು ತಿಳಿದ ಮತ್ತಷ್ಟು ಮಂದಿ ಆಕರ್ಷಕ ಬೆಲೆಗೆ ಜಮೀನು ಮಾರಿದರು. ಇದರಿಂದಾಗಿ ಒಂದು ವ್ಯವಸ್ಥೆಯೆ ಹಾಳಾಯಿತು.
ಹಾಳಾಗ್ ಹೋಗ್ಲಿ ಬಿಡಿ. ಈಗ ಆತನಿಗೆ ರಬ್ಬರ್ ತೋಟ ವಿಸ್ತರಿಸಲು ಕಥಾ ನಾಯಕರಾದ ಭೂ ಹಿಡುವಳಿದಾರರ ಮನೆ ಅಡ್ಡ ಬಂದಿದೆ. ಉಳಿದೆಲ್ಲ ಭೂಮಿಗಿಂತ ಉತ್ತಮ ಬೆಲೆ ಕೊಡುವುದಾಗಿ ಹೇಳಿದರೂ ಕೂಡ ಈ ಮಂದಿ ಬಹಳ ಭಾವುಕರು. ಈ ರಬ್ಬರ್ ಗಾಳಿ ಸೇವಿಸಿಕೊಂಡು ಬದುಕುತ್ತೇವೆಯೆ(?) ಹೊರತು ಜಾಗ ಬಿಡುವುದಿಲ್ಲ ಎಂದು ಇವರ ವಾದ.
ಈ ಕಥೆಯ ನೀತಿ ಏನೆಂದರೆ "ಓಗ್ಗಟ್ಟಿನಲ್ಲಿ ಬಲವಿದೆ". ಈಗ ಅವರು ನಕ್ಸಲೈಟ್ಗಳಾದರು ಬಂದಿದ್ದರೆ ಚನ್ನಾಗಿತ್ತು ಎಂದು ಯೋಚಿಸುತ್ತಿದ್ದಾರೆ(ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಗುತ್ತೆ). ಇವರೇನೊ ಹುಚ್ಚರು ವ್ಯವಸ್ಥೆಯ ವಿರುದ್ಧ ಹೋರಾಡುತ್ತೇವೆ ನಮ್ಮ ತಲೆ ಗಟ್ಟಿ ಇದೆ ಬಂಡೆಗೆ ಕುಟ್ಟಿಕೊಳ್ತೇವೆ ಅನ್ನುತ್ತಾರೆ. ಆದರೆ ಅವರ ಮಕ್ಕಳು ಬುದ್ದಿವಂತರಾದರೆ ಅದೆ ಜಮೀನನ್ನು ಅದೇ ಮಲೆಯಾಳಿಗೆ ಕೊಟ್ಟು ಹೋಗ್ತಾರೆ.
ಈ ಕಥೆ ಏನಕ್ಕೆ ಹೇಳಿದನೆಂದರೆ, ಮುಂದೊಂದು ದಿನ ಆ ಮಲೆಯಾಳಿ ಖಂಡಿತ ತನ್ನ ಬಂಧು ಬಳಗವನ್ನೆ ಕೆಲಸಕ್ಕೆ ಇಟ್ಟುಕೊಳ್ಳುತ್ತಾನೆ. ಆಗ ಕೆಲಸದಿಂದ ಹೊರದಬ್ಬಲ್ಪಟ್ಟ ಮೂಲ ನಿವಾಸಿಗಳು ಅಷ್ಟು ಸಂಬಳದ ಕೆಲಸ ಹುಡುಕಲಾಗದೆ ಕದಿಯುವುದೊ, ಅಥವ ನಕ್ಸಲಿಸಂ ಚಳುವಳಿಯನ್ನೋ ಪ್ರಾರಂಭಿಸುತ್ತಾರೆ. ಮುಂದೊಂದು ದಿನ ಬುದ್ದಿ ಜೀವಿಯೊಬ್ಬ ಈ ಪರಿಸ್ಥಿತಿಯಲ್ಲಿ ಆ ಊರಿನ ಮೂಲ ನಿವಾಸಿಗಳಿಗೆ ಹವಾ ನಿಯಂತ್ರಿತ
ಕೊಠಡಿಯಿಂದ ಹೀಗೊಂದು ಸಂದೇಶ ರವಾನಿಸಬಹುದು. . "ಈ ಊರಿನ ಜನರ ಹೃದಯ ವಿಶಾಲವಾದುದು.. ಹಿಂದೆ ಕೇರಳದ ಮಲೆಯಾಳಿಗೆ ತಮ್ಮ ಜಮೀನನ್ನು ಮಾರಿ ತಮ್ಮ ಹೃದಯ ವೈಶಾಲತೆಯನ್ನು ಮೆರದಿದ್ದೀರಿ. ಈಗ ಅವರದೆ ವಂಶಜರ ಮೇಲೆ ಹಗೆ ಕಾರುವುದು ಒಳ್ಳೆ ಲಕ್ಷಣ ಅಲ್ಲ. ನಿಮ್ಮ ಮತ್ತು ಮಲೆಯಾಳಿಗಳ ಬಾಂಧವ್ಯ ಬಹಳ ಹಿಂದಿನದು.. ಮಲೆಯಾಳಿಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಮೂಲ ನಿವಾಸಿಗಳಾದ ನಿಮ್ಮ ಪಾತ್ರ ಮಹತ್ತರವಾದುದು". (ಇದರಿಂದ ಜನರ ಮನಸ್ಸಿನ ಮೇಲೆ ಹತ್ತು ಪೈಸೆಯ ಪರಿಣಾಮ ಬೀರದಿದ್ದರೂ, ಬುದ್ದಿಜೀವಿಗಂತು ಪ್ರಶಸ್ತಿ ಖಂಡಿತ.)

ಬಾಳಿಗರು ಹೆಸರಿಸಿದ ಪುಸ್ತಕಗಳು ಮುಸ್ಲಿಂ ಆಳ್ವಿಕೆಯಲ್ಲಿ ಬರೆದಿರುವುದರಿಂದ, ನಂಬಿಕೆಗೆ ಯೋಗ್ಯವಲ್ಲ.

ಕೊಂಕಣಿ ಮತ್ತು ಮುಸ್ಲಿಂ ಅನ್ಯೋನ್ಯತೆಗೆ ಕೆಲವೊಂದು ಕೊಂಕಣಿಗರ ಹೆಸರನ್ನು ಉದಾಹರಿಸಿದ್ದನ್ನು ಕಂಡು, ಭಾ. ಜ. ಪ.ದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಶಹನವಾಜ್ ಹುಸೆನರ ಹೆಸರು ನೆನಪಾಗಿ ನಗು ತಂದಿತು.

ಮುಸ್ಲಿಮರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಕೊಂಕಣಿಗರ ಪಾತ್ರದ ಬಗೆಗಿನ ಬಾಳಿಗರ ಆಲೋಚನೆ ಧಾಟಿಯು ಪುಣ್ಯಕೋಟಿಯ ಕಥೆಯನ್ನು ನೆನಪಿಸುತ್ತೆ.

ಈಗಿನ ಉಳಿವಿಗಾಗಿ ಹೋರಾಟದ ಸಂಕೀರ್ಣವಾದ ಜೀವನ ಪದ್ದತಿಯಲ್ಲಿ ಅವರ ಕೈ, ಅವರ ಬಾಯಿ. ನೋಡಿಕೊಂಡರೆ ಅಷ್ಟು ಸಾಕು.

ಮುಖ್ಯವಾಹಿನಿಗೆ ಬರಬೇಕಾದ ನಿಜವಾಗಿಯೂ ಅವಶ್ಯಕತೆ ಇದ್ದರೆ ಖಂಡಿತ ಬರ್ತಾರೆ(ಅಬ್ದುಲ್ ಕಲಾಂ, ಜೇಸುದಾಸ್ ಹೀಗೆ ಬಹಳಷ್ಟು ಉದಾಹರಣೆ ಕೊಡಬಹುದು)....

ಇದಕ್ಕಾಗಿ ತಲೆ ಕೆಡಿಸಿಕೊಳ್ಳೋದು ಬೇಡ ಅಂತ ನನ್ನ ಅನಿಸಿಕೆ.

ವಿ. ಸೂ : ಸಮಯದ ಅಭಾವದಿಂದ, ಯಾರೊಬ್ಬರ ಪ್ರಶ್ನೆಗಳಿಗೂ ಉತ್ತರಿಸಲಾಗುವುದಿಲ್ಲ.. ಕ್ಷಮಿಸಿ...