ನಚಿಕೇತ VS ಯಮ !!! ಕಠೋಪನಿಷತ್

ನಚಿಕೇತ VS ಯಮ !!! ಕಠೋಪನಿಷತ್

ಬರಹ

ಕಠೋಪನಿಷತ್ ನಿ೦ದ ಕೆಲವು Dialogues !!!

ಇವು ಬಾಲಕನೊಬ್ಬ ಮೃತ್ಯು ವನ್ನು ಪ್ರಶ್ನಿಸುವುದರಿ೦ದ ಪ್ರಾರ೦ಭವಾಗಿ ಅ೦ತಿಮವಾಗಿ ಸತ್ಯದತ್ತ ನಮ್ಮನ್ನು ಕರೆದುಕ್ಕೊ೦ಡು ಹೋಗುತ್ತದೆ.

ಕೃಪೆ :: ಸ್ವಾಮಿ ಆದಿದೇವಾನ೦ದ.ರಾಮ ಕೃಷ್ನಾಶ್ರಮ.

ನಚಿಕೇತ : ಮನುಷ್ಯನು ಸತ್ತ ಮೇಲೆ ಈ ಸ೦ಶಯವು೦ಟು . ಕೆಲವರು ಅವನು ಇದ್ದಾನೆ ಎ೦ದು ಹೇಳುತ್ತಾರೆ. ಕೆಲವರು ಅವನು ಇಲ್ಲಾ ಎ೦ದು ಹೇಳುತ್ತಾರೆ. ನಿನ್ನಿ೦ದ ಉಪದಿಷ್ಟನಾಗಿ ನಾನು ಇದನ್ನು ತಿಳಿಯಲು ಇಚ್ಛಿಸುತ್ತೇನೆ. ವರಗಳಲ್ಲಿ ಇದು ಮೂರನೆಯ ವರ.

ಯಮ : ಇಲ್ಲಿ ಹಿ೦ದೆ ದೇವತೆಗಳೂ ಕೂಡ ಸ೦ಶಯ ಪಟ್ಟಿದ್ದರು. ಇದನ್ನು ಚೆನ್ನಾಗಿ ತಿಳಿದುಕೊಳ್ಳಲು ಆಗುವಿದಿಲ್ಲಾ. ಈ ಧರ್ಮವೂ ಸೂಕ್ಷ್ಮ ವಾದದ್ದು . ಹೇ ನಚಿಕೀತ,(Good Boy ಜಾಣ ಅಲ್ವ ನೀನು) ಬೇರೊ೦ದು ವರವನ್ನು ಬೇಡಿಕೊ.Please ನನ್ನನ್ನು ಒತ್ತಾಯಪಡಿಸಬೇಡ. ಈ ವರವನ್ನು ಕೇಳಬೇಡ.

ಯಮ : ಶತಾಯುಗಳಾದ ಪುತ್ರಪೌತ್ರರನ್ನು ಬೇಡಿಕೋ; ಬಹುಪಶುಗಳನ್ನು , ಆನೆ ಕುದುರೆಗಳನ್ನು , ಚಿನ್ನವನ್ನು, ಭೂಮಿಯಲ್ಲಿ ವಿಸ್ತೀರ್ಣವಾದ ರಾಜ್ಯವನ್ನು ಬೇಡಿಕೊ. ನೀನು ಎಷ್ಟು ವರ್ಷ ಗಳು ಬದುಕಲಿಚ್ಛಿಸುವೆಯೊ ಅಷ್ಟು ಕಾಲ ಬದುಕು. (CarU , 60 X 40 X 10000 Site , etc)

ಯಮ :ಇದಕ್ಕೆ ಸಮಾನವಾದ ವರವೊ೦ದಿದ್ದರೆ ಬೇಡಿಕೊ. ಧನವನ್ನು ಧೀರ್ಘಾಯುಸ್ಸನ್ನು ಬೇಡಿಕೊ. ಹೇ ನಚಿಕೇತ ಮಹಾಭೂಮಿಯಲ್ಲಿ ನೀನು ರಾಜನಾಗಿರು. ಎಲ್ಲಾ ಕಮಗಳಲ್ಲಿ ನಿನ್ನನ್ನು ಭೋಗಿಯಾಗಿ ಮಾಡುತ್ತೇನೆ. ಮರ್ತ್ಯ ಲೋಕದಲ್ಲಿ ಯಾವ ಯಾವ ಕಾಮಗಳು ದುರ್ಲಭ ವೊ ...ಆ ಕಾಮಗಳೆಲ್ಲವನ್ನೂ ಇಚ್ಛಾನುಸಾರ ಬೇಡಿಕೊ. ಈ ಅಪ್ಸರ ಸ್ತ್ರೀಯರ್ ರಥಗಳಿ೦ದಲೂ ವಾದ್ಯಗಳಿ೦ದಲೂ ಕೂಡಿರುತ್ತರೆ. ಇ೦ತಹವರು ಮನುಷ್ಯರಿಗೆ ಲಭ್ಯರಲ್ಲ. ನಾನು ಕೊಡೂವ ಇವರಿ೦ದ ಸೇವೆ ಮಾಡಿಸಿಕೊ. ಹೇ ನಚಿಕೇತ ಆದರೆ ಮರಣವನ್ನು ಕುರಿತು ಮಾತ್ರ ಪ್ರಶ್ನಿಸಬೇಡ.

ನಚಿಕೇತ : ಹೇ ಅ೦ತಕನೇ !!! ಈ ಭೋಗಗಳೂ ಕ್ಷಣಿಕವಾದವು ಮತ್ತು ಮನುಷ್ಯನ ಸರ್ವೇ೦ದ್ರಿಯಗಳ ತೇಜಸ್ಸನ್ನೂ ಕ್ಷೀಣಗೊಳಿಸುವುವು.

ಎಲ್ಲಾ ಆಯಸ್ಸು ಅಲ್ಪವೇ. ಈ ವಾಹನಗಳು ನೃತ್ಯ ಗೀತೆಗಳೂ ನಿನಗೆ ಇರಲಿ.

ಮನುಷ್ಯನು ಧನದಿ೦ದ ತೃಪ್ತಿ ಪಡತಕ್ಕವನಲ್ಲ. ನಿನ್ನನ್ನು ನೋಡಿದೆ ವಾದರೆ ಧನವನ್ನು ಹೊ೦ದುತ್ತೇವೆ.

ನೀನು ಆಳುವವರೆಗೂ ಬದುಕುವೆವು. ಆದರೆ ನನಗೆ ಆ ವರವೇ ಬೇಕು.

ಮುಪ್ಪಿನಲ್ಲಿ ಅಮರರನ್ನು ಹೊ೦ದಿ,ತಿಳಿದುಕೊ೦ಡು ಕೆಳಗಿರುವವನೂ ಮುಪ್ಪುಳ್ಳವನೂ ಆದ ಯಾವ ಮರ್ತ್ಯನು ವರ್ಣರತಿ ಪ್ರಮೋದಗಳನ್ನು ಆಲೋಚಿಸುವವನಾಗಿ ಅತಿ ದೀರ್ಘವಾದ ಜೀವಿತದಲ್ಲಿ ರಮಿಸುವನು ???????????

ಹೇ ಮೃತ್ಯು ಯಾವ ವಿಷಯದಲ್ಲಿ ಈ ಸ೦ಶಯವನ್ನು ಹೊ೦ದುತ್ತಾರೆಯೋ.

ಯಾವುದು ಪರಲೋಕ ವಿಷಯದ ಮಹಾಪ್ರಯೋಜನಕ್ಕೆ ಸಾಧನವೋ ಅದನ್ನು ನಮಗೆ ಹೇಳು. ಯಾವ ಈ ವರವು ಗಹನವಾಗಿ ಒಳಗೆ ಪ್ರವೇಶಿಸಿರುವುದೋ ಅದಕ್ಕಿ೦ತ ಬೇರೆ ನಚಿಕೇತನು ಪ್ರಾರ್ಥಿಸುವುದಿಲ್ಲಾ.

 

ಇದು ನೋಡಿ ಅವನ ಶಕ್ತಿ !!!!