ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
ನಮ್ಮೆಲ್ಲರನ್ನು ಕನ್ನಡ ಪುಸ್ತಕಗಳನ್ನೋದುವಂತೆ ಮಾಡಿದ ತೇಜಸ್ವಿ ಇನ್ನಿಲ್ಲ. ಇವರ ನೆನಪಿನಲ್ಲಿ ಇವರೊಂದಿಗೆ ನಾವು ನಡೆಸಿದ ಸಂದರ್ಶನದ podcast, ಅದರಲ್ಲಿನ ಅವರ ಮಾತುಗಳನ್ನು ಸ್ಮರಣ ಸಂಚಿಕೆಯಾಗಿ ಮತ್ತೆ ಸದಸ್ಯರ ಮುಂದಿಡುತ್ತಿದ್ದೇವೆ. ಈ ಸಂದರ್ಶನ ನಡೆಸಿದ್ದು ೨೦೦೫ರಲ್ಲಿ. ತೇಜಸ್ವಿಯವರೊಂದಿಗಿನ ಸಂದರ್ಶನ ಸಂಪದದ ಮೊದಲ podcast ಕೂಡ ಆಗಿತ್ತು.
ನಮಸ್ಕಾರ. ಸಂಪದದ ಸದಸ್ಯರೆಲ್ಲರಿಗೂ ದೀಪಾವಳಿ ಹಾಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಂಪದದಲ್ಲಿ podcasting ಪ್ರಾರಂಭ ಮಾಡಬೇಕೆಂದು ನಮ್ಮಲ್ಲಿ ಹಲವರು ಬಯಸಿದ್ದೆವು. ಕೊನೆಗೊಮ್ಮೆ ಸಮಯ ಕೂಡಿ ಬಂದಿದೆ. ಈ ಮೊದಲ 'ಕಡಿಮೆ ಆಡಂಬರದ' ಸಂಚಿಕೆಯಲ್ಲಿ ನಮ್ಮೆಲ್ಲರಿಗೂ ಚಿರಪರಿಚಿತರಾದ ಸಾಹಿತಿ ಮತ್ತು ಚಿಂತಕ, ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಸಂದರ್ಶನವನ್ನು ನಿಮ್ಮ ಮುಂದಿಡಲು ಸಾಧ್ಯವಾಗಿರುವುದು ಸಂತಸದ ವಿಷಯ. ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (14 MB)
ಧ್ವನಿ ಮುದ್ರಣದ ಕೃಪೆ ಪವನಜರವರಿಗೆ ಬಂದ ಎಮ್ ವಿ ಪಿ ಗಿಫ್ಟು - ಕ್ರಿಯೇಟಿವ್ ಮುವೋ ಎಮ್ ಪಿ ಥ್ರಿ ಪ್ರೇಯರಿನದ್ದು. ಮೊದಲನೆಯ ಪ್ರಯೋಗವಾದ್ದರಿಂದ ಧ್ವನಿ ಮುದ್ರಣ ಒಂದಷ್ಟು ಹೆಚ್ಚು ಕಡಿಮೆಯಾಗಿದೆ. ಸ್ವಲ್ಪ ನಾಯ್ಸ್ ಇರುವುದರಿಂದ ಜೋಪಾನವಾಗಿ ಸೌಂಡ್ ಇಟ್ಟುಕೊಂಡು ಕೇಳಿ. ಈ ಪಾಡ್ಕ್ಯಾಸ್ಟಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸಂಪದ ಡಾಟ್ ನೆಟ್ಟಿನಲ್ಲಿ ಇದಕ್ಕಾಗಿ ತೆರೆದಿರುವ ಈ ಥ್ರೆಡ್ ನಲ್ಲಿ ಮರೆಯದೆ ದಾಖಲಿಸಿ. ವಂದನೆಗಳೊಂದಿಗೆ, ಹರಿ ಪ್ರಸಾದ್ ನಾಡಿಗ್. ಪೂರ್ಣಚಂದ್ರ ತೇಜಸ್ವಿಯವರ ಮನೆಗೆ ಭೇಟಿ ನೀಡಿದ ದಿನದಂದು ತೆಗೆದ ಕೆಲವು ಫೋಟೋಗಳು: ಇಸ್ಮಾಯಿಲ್, ಪವನಜ, ತೇಜಸ್ವಿ. ತೇಜಸ್ವಿಯವರ ಮನೆಯ ಅಂಗಳದ ತಾವರೆ ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ [:mailto:hpnadigATgmail.com|ಇ-ಮೇಯ್ಲ್ ಮೂಲಕ ಕಳುಹಿಸಿ].