'Communalism' ಏಕೆ ನಮ್ಮನ್ನು ಮೆಟ್ತಿಕೊಂಡಿದೆ?
'ಒಂದು ಕಡೆ ಪ್ರತಿನಿತ್ಯ ತಮ್ಮ ಬೇಡಿಕೆಗಾಗಿ ಸರ್ಕಾರದ ಬಳಿ ಒತ್ತಾಯ ಇಡುತ್ತಿರುವ ಜನರು, ಇನ್ನೊಂದೆಡೆ ಈ ಬೇಡಿಕೆಯನ್ನು ಪ್ರತಿಭಟಿಸುವ ಜನರ ಗುಂಪು,
ಇದೆಲ್ಲವನ್ನು ಆಲೋಚಿಸಿ ನೋಡಿದಾಗ ನಮಗೇ ಹೇಸಿಗೆಯೆನಿಸುತ್ತದೆ. ಇದು ಭಾರತದುದ್ದಕ್ಕೂ ನಾವು ಕಂಡುಕೊಳ್ಳುತ್ತಿರುವ ಸತ್ಯ ಸಂಗತಿ. ದಿನನಿತ್ಯದ
ಆಹಾರಕ್ಕಾಗಿ ಒಂದೆಡೆ ದುಡಿಯುತ್ತಿರುವ ಜನ ಸಮೂಹವಾದರೆ, ಅದನ್ನು ಕಸಿಯಲು ಹವಣಿಸುತ್ತಿರುವ ಜನರ ಗುಂಪುಗಳು ಅಸ್ಟೇ ಸ್ವೇಛ್ಚೆಯಿಂದ ಕಾರ್ಯನಿರ್ವಹಿಸುತ್ತಿದೆ.
ಇಂದು ಕರಾವಳಿ ಕರ್ನಾಟಕದಲ್ಲಿ ಬೆಳೆಯುತ್ತಿರುವ ಇಚ್ಚಾಶಕ್ತಿಯೂ ಅದೇ ಆಗಿದೆ. ಜಗತ್ತಿನ ಮುಂದುವರಿಕೆಯಲ್ಲಿ ತಾನೂ ಉನ್ನತ ಸ್ಥಾನವನ್ನು ಪಡೆಯಬೇಕೆಂಬ ಹಂಬಲ
ಭಾರತದ್ದಾದರೆ, ಜನರು ಮಾತ್ರ ಕೋಮು ದ್ವೇಶವನ್ನು ಕಾರಿಕೊಂಡು ಜನರಲ್ಲಿ ಭಯ,ಆತಂಕವನ್ನು ಉಂಟುಮಾಡುತ್ತಿದ್ದಾರೆ. ದಿನನಿತ್ಯ ಜನರ ಇಚ್ಛಾಶಕ್ತಿಯನ್ನು ಕೆರಳಿಸ ಬಯಸುವ
ಕೇವಲ ಕೆಲವೇ ಜನರ ಗುಂಪುಗಳಿಂದಾಗಿ ಇಂದು ಸುಂದರ ಮಂಗಳೂರು ಅಭಿವ್ರದ್ದಿಯಲ್ಲಿ ಕುಂಟುತ್ತಿದೆ ಎಂಬುವುದು ತೀರಾ ನಾಚಿಕೆಕೇಡಿನ ಸಂಗತಿಯಾಗಿದೆ.
ಮಂಗಳೂರಿನಲ್ಲಿ 'Communalism' ಎಂಬ ಕಂಟಕ ಒಂದಿಲ್ಲದಿದ್ದರೆ ಇಂದು ಭಾರತದ ಮುಂಚೂಣಿಯ ನಗರದಲ್ಲಿ ಒಂದಾಗಿರುತ್ತಿತ್ತು. ಇದರಿಂದಾಗಿ ಹೊಸ ಹೊಸ ಕಂಪನಿಗಳು
ಮಂಗಳೂರಿನಲ್ಲಿ ಬಂಡವಾಳ ಹೂಡಲು ಹಿಂದೆ ಸರಿಯುತ್ತಿವೆ. ಉದ್ಯೋಗದವನ್ನು ಅರಸಿಕೊಂಡು ಎಷ್ಟೋ ಕಾಲ ಅಲೆಯುತ್ತಿರುವ ಯುವಕ, ಯುವತಿಯರು ನಮ್ಮಲ್ಲಿದ್ದಾರೆ.
ಅವರ ಪರಿತಾಪ ನಮಗೆ ಅರ್ಥವಾಗಲಾರದು, ದಿನನಿತ್ಯದ ಜೀವನಕ್ಕಾಗಿ ಪರಿಶ್ರಮಿಸುತ್ತಿರುವ ಸಹಸ್ರಾರು ಜನರಿದ್ದಾರೆ, ಇವರೆಲ್ಲರ ಕಣ್ಣೀರು ನಮ್ಮಕಲ್ಲು ಮನಸ್ಸನ್ನು ಕರಗಿಸಲಾರದೇ
ಹೋಯಿತೇ? ಎಂಬ ಪ್ರಶ್ನಾರ್ತಕವಾದ ಉಚ್ಚಾರ ಮಾತ್ರ ಈ 'Communalism' ಅನ್ನು ವಿರೋಧಿಸುವ 95% ಪ್ರತಿಶತ ಮನಸ್ಸುಗಳನ್ನು ಕುಟ್ಟುತ್ತಿವೆ. ಕೇವಲ ಕೆಲವೇ ಕಿಡಿಗೇಡಿಗಳ
ಇಂತಹಾ ಕಟು ಕ್ರೌರ್ಯದಿಂದ ಶಾಂತಿಯನ್ನೂ, ಸಾಮರಸ್ಯವನ್ನೂ ಕೆದಕುವಾಗ, ಸಾಮರಸ್ಯತೆಯನ್ನು ಪ್ರೀತಿಸುವ ಮಂಗಳೂರಿನ ಮಾನವ ಪ್ರೇಮಿಗಳಿಗೆ ಇದನ್ನು ಹತ್ತಿಕ್ಕಳು
ಸಾಧ್ಯವಿಲ್ಲವೇ?
Comments
ಉ: 'Communalism' ಏಕೆ ನಮ್ಮನ್ನು ಮೆಟ್ತಿಕೊಂಡಿದೆ?
ಕ್ರಿಯೆಯಿದ್ದಲ್ಲಿ ಪ್ರತಿಕ್ರಿಯೆಯಿರುತ್ತದೆ.