dli ಇಂದ ಪುಸ್ತಕ ಡೌನ್ಲೋಡ್!
ಹಿಂದೆ ಶ್ರೀಕಾಂತ ಮಿಶ್ರಿಕೋಟಿಯವರು dli ಇಂದ ಪುಸ್ತಕ ಇಳಿಸಿಕೊಳ್ಳುವ ಬಗ್ಗೆ ಬರೆದಿದ್ದರು. ಆದರೆ ವಿಂಡೋಸ್ ಬಳಸುವ ನನಗೆ ಅದು ಉಪಯೋಗಕ್ಕೆ ಬಂದಿರಲಿಲ್ಲ. dli ಯಲ್ಲಿ ಹಲವು ಉತ್ತಮ ಪುಸ್ತಕಗಳಿದ್ದವು, ಮತ್ತು ಸಾವಿರಾರು ಪುಟಗಳ ಋಗ್ವೇದ ಭಾಷ್ಯ (ಸಾಯಣ) ಕೂಡ ಇದ್ದಿತ್ತು.(ಇದರ ಬಗ್ಗೆ ಕೂಡ ಮಿಶ್ರಿಕೋಟಿಯವರು ಹಿಂದೆ ಬರೆದಿದ್ದಾರೆ) ಪುಸ್ತಕಗಳನ್ನು ಹೇಗೆ ಇಳಿಸಿಕೊಳ್ಳಲಿ ಎಂದು ಆಲೋಚಿಸುತ್ತಿದ್ದೆ. ಅಮೆರಿಕದಲ್ಲಿರುವ ನನ್ನ ಚಿಕ್ಕಪ್ಪನ ಮಗನಲ್ಲಿ ವಿನಂತಿಸಿದಾಗ ಆತ ನನಗೆ ಸಹಾಯ ಮಾಡಿದ, ಆಸಕ್ತಿಯಿರುವ ಸಂಪದಿಗರಿಗೆ ಉಪಯೋಗವಾಗಬಹುದೆಂದು ಇಲ್ಲಿ ಬರೆಯುತ್ತಿರುವೆ.
೧. ಮೊದಲು flashget software download ಮಾಡಬೇಕು. (ಗೂಗಲ್ ನಲ್ಲಿ ಹುಡುಕಿ, ಸಿಗುತ್ತೆ)
೨. ನಂತರ flashget ನ install ಮಾಡಬೇಕು.
೩. ಆಮೇಲೆ flashget ಅಲ್ಲಿ File ಮೆನುಗೆ ಹೋಗಿ, Add Batch download ಸೆಲೆಕ್ಟ್ ಮಾಡಬೇಕು.
೪. dli ಯಲ್ಲಿ ನಿಮಗೆ ಬೇಕಾದ ಪುಸ್ತಕದ High Bandwidth Reader ನ್ನು ಕ್ಲಿಕ್ ಮಾಡಿದಾಗ ಬರುವ URLನ್ನು ಎಂಟರ್ ಮಾಡಿ.
೫. from ಅಲ್ಲಿ 1 ಮತ್ತು to ಅಲ್ಲಿ ನಿಮಗೆ ಎಲ್ಲಿಯವರೆಗೆ ಬೇಕೊ ಅಲ್ಲಿಯವರೆಗಿನ ಪೇಜ್ ನಂಬರ್ ಬರೆಯಿರಿ.
೬.ನಂತರ wild card bytes ಜಾಗದಲ್ಲಿ 3 ಅಂತ ಕೊಡಬೇಕು.
ನಂತರ ok ಕೊಟ್ಟಾಗ ಒಂದೊಂದೇ ಪೇಜ್ download ಆಗುತ್ತೆ (ಜಾಸ್ತಿ ಪುಟಗಳಿದ್ದರೆ ಸ್ವಲ್ಪ ನಿಧಾನ ಆಗಬಹುದು)
ಕೊನೆಯದಾಗಿ ನಿಮ್ಮ ಕಂಪ್ಯೂಟರ್ ನ ಸುರಕ್ಷತೆ ಬಗ್ಗೆ ಕಾಳಜಿಯಿರಲಿ!