DLI ಪುಸ್ತಕನಿಧಿ - ಅಲ್ಲಿನ ಪುಸ್ತಕ PDF ರೂಪದಲ್ಲಿ ಇಳಿಸಿಕೊಳ್ಳುವುದು ಹೇಗೆ?

DLI ಪುಸ್ತಕನಿಧಿ - ಅಲ್ಲಿನ ಪುಸ್ತಕ PDF ರೂಪದಲ್ಲಿ ಇಳಿಸಿಕೊಳ್ಳುವುದು ಹೇಗೆ?

ನಿಮಗೆ ಗೊತ್ತಿರಬಹುದು - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣಗಳಲ್ಲಿ ಕನ್ನಡದ ನಾಲ್ಕೈದು ಸಾವಿರ ಪುಸ್ತಕ ಸೇರಿದಂತೆ ಅನೇಕ ಭಾಷೆಗಳ ಲಕ್ಷಾಂತರ ಪುಸ್ತಕಗಳು ಇವೆ.

ಅವುಗಳನ್ನು PDF ರೂಪದಲ್ಲೇ ಇಳಿಸಿಕೊಳ್ಳುವುದು ಹೇಗೆ?
ಹಿಂದೆ ಈ ಬಗ್ಗೆ ನಾನು ಬರೆದಿದ್ದರೂ ಈ ಕೆಳಗಿನದು ಈಗ ಸುಲಭ ಉಪಾಯ.

ಮೊದಲು http://dli.serc.iisc.ernet.in/ ಮತ್ತು ಅವರದೇ ಇನ್ನೊಂದು ತಾಣವಾದ
http://www.dli.ernet.in/ ತಾಣಗಳನ್ನು ನಿಮ್ಮ browser ನ ಬೇರೆ ಬೇರೆ ಟ್ಯಾಬ್ ಗಳಲ್ಲಿ ತೆರೆದಿಟ್ಟು ಕೊಳ್ಳಿ

ಮೊದಲು http://dli.serc.iisc.ernet.in/ ತಾಣಕ್ಕೆ ಹೋಗಿ ಅಲ್ಲಿ ಎಡ ಭಾಗದಲ್ಲಿನ ಹುಡುಕು ಸೌಲಭ್ಯ ಬಳಸಿ ನಿಮಗೆ ಬೇಕಾದ ಭಾಷೆಯ ಪುಸ್ತಕಕ್ಕಾಗಿ ಹುಡುಕಿ. ಬಲ ಭಾಗದಲ್ಲಿ ಫಲಿತಾಂಶಗಳು ಬರುತ್ತವೆ ತಾನೇ . ಅದರಲ್ಲಿ ನೀವು ಬಯಸಿದ ಪುಸ್ತಕದ ಹೆಸರನ್ನು ನಕಲು ಮಾಡಿಕೊಳ್ಳಿ.

http://www.dli.ernet.in/ ತಾಣದ ಹುಡುಕು ಸೌಲಭ್ಯ ಬಳಸಿ , ಆ ಪುಸ್ತಕದ ಹೆಸರನ್ನು ಅಂಟಿಸಿ ಹುಡುಕಿ , ಅದು ನಿಮ್ಮ ಬಯಕೆಯ ಪಸ್ತಕದ PDF ಗೆ ಕೊಂಡಿ ಇರುವ ಪುಟಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಆ ಪುಸ್ತಕವನ್ನು ಇ(/ಉ)ಳಿಸಿಕೊಳ್ಳಿ!

Comments

Submitted by Timmappa Naik Sat, 04/08/2017 - 17:43

In reply to by smurthygr

ಹಲವು ಅಮೂಲ್ಯ ಪುಸ್ತಕಗಳ ಸಂಗ್ರಹ ಈ ಡಿಜಿಟಲ್ ಲೈಬ್ರರಿಯಲ್ಲಿದೆ.ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು.