DNA

DNA

#DNA

ಮುಚ್ಚಟೆಯಿಂದ ಬೆಳೆಸಿದ ಕರುಳಕಂದ
ಬುದ್ಧಿ ಬಲಿತು ವಿದ್ಯೆ ಕಲಿತು ಅಭಿಯಂತನಾದ
ಆಕಾಂಕ್ಷೆ ಗರಿಗೆದರಿ ದೂರದೇಶವ ಸೇರಿದ
ಸ್ವೇಚ್ಛೆ-ಸ್ವಚ್ಛಂದತೆಗೆ ಕರಗಿ ಮರಳಿ ಬಾರದಾದ
ಅನುದಿನವು ಅನುಕ್ಷಣವು ಮಿಡಿದಿಹುದು ತುಡಿತ
ಆತ ಹಂಚಿಕೊಂಡಿರುವುದು ಎನ್ನದೇ ರಕ್ತ

#D_ದೂರವಿದ್ದರೂ
#N_ನನ್ನಕುಡಿ
#A_ಅವನು

©ಅಜಿತ್ ಕಾಶೀಕರ್
೨೫/೦೨/೨೦೧೯