Holy ಹೋಳಿ By rohitkumarhg on Sat, 03/19/2011 - 18:50 ಕವನ ಕನಸ ಕಾಮನಬಿಲ್ಲೊಳಗೆ ನೆಂದು ಬದುಕ ಬಣ್ಣದಿ ಮೀಯೋಣ.. ನೋವ ಕಲೆಗಳಿಗೆ ಬಣ್ಣದ ಮುಸುಕ ತೊಡಿಸಿ ನಗಿಸೋಣ, ರಂಗಿನಾಟದ ರಂಗದೊಳಗೆ ನುಡಿಸೋ ಕಲಾವಿದರು ನಾವು.. ದ್ವೇಷ-ದುಃಖ-ದುಮ್ಮಾನಗಳ ಎಸೆಯುತಲಿ ಸ್ನೇಹದೋಕುಳಿ ಗೆ ಮುಖ ಚಾಚೋಣ... ಬಣ್ಣ ಬಣ್ಣದ ಬದುಕು ಬದುಕಾಗಿ ಬರಲಿ. - ರೋಹಿತ್ Log in or register to post comments