ಕವಿತೆ

ಕವಿತೆ

ಕವನ

ಕವಿತೆ
** **

೧ 
ನೋಡು,
ಜಗದಗಲ, ಮುಗಿಲಗಲ
ಆ ಬಾನು ಈ ಭೂಮಿ
ಪ್ರಕೃತಿಯ ಅಣು ಅಣುವ 
ನೋಡು.... 
ಆ ಬೆಳಕಲ್ಲಿ
ಸೂರ್ಯ, ಚಂದ್ರ, ತಾರೆ
ತಲೆ‌ ಎತ್ತಿ 
ದಿಗಂತವ ನೋಡು.....


ಒಮ್ಮೆ ಕಣ್ತೆರೆದು ನೋಡು
ಬೆಟ್ಟ ಗುಡ್ಡಗಳ
ಅಲ್ಲೆಲ್ಲೋ ಸಣ್ಣಗೆ ಹರಿವ ನದಿಯ
ಗಿರಿ ತೊರೆಯ
ಜಳಪಾತ, ಪ್ರಪಾತವ ನೋಡು
ಜಲಚರಗಳ ಬಯಲಾಟವ.


ದಿಟ್ಟಿಸಿ ನೋಡು 
ಆ ಕಾನನದ ನಡುವೆ
ತಂಪಾಗಿ ಬೀಸೋ ಗಾಳಿಯ
ಆ ಮರದ ಕೊಂಬೆಯಲಿ 
ಕೂಗೋ ಕೊಗಿಲೆಯ
ಆ ವನ ಸುಮಗಳ ನಡುವೆ
ನಲಿದು ನರ್ತಿಸೋ
ನವಿಲ.


ನೋಡು ನೋಡೆನ್ನ ಮನವೇ
ಮನದ ಕಣ್ಣ ತೆರೆದು ನೋಡು 
ಆ ಊರು, ಈ ಕೇರಿ
ಮನೆ, ಮಠ, ಎಲ್ಲವ 

ಜೊತೆಗೆ 
ನಿನ್ನ

ನಿನ್ನ ನೀ ನೋಡು
ನಿನ್ನ ಅಂತರಾಳವ ನೋಡು 
ಅದರ ಒಳಗಿರುವ
ಸತ್ಯವ ನೋಡು 


ಓ ನನ್ನ ಪ್ರಿಯಾವಾದ
ಮನವೇ.... 
ನೋಡು 
ಸಾದ್ಯವಾದರೆ ಒಮ್ಮೆ  
ಒಂದೇ ಒಂದು ಬಾರಿ
ನೋಡಿ ಬಿಡು
ಅಪ್ಪನು ದುಡಿದು ಬಂದ ಆ ಅಂಗೈಗಳ  
ಅಮ್ಮನು ಕೂಡಿಟ್ಟ ಅಷ್ಟು ಕನಸುಗಳ.

- ಪ್ರಸಾದ್‌ ಅರಳೀಪುರ

(ಚಿತ್ರ ಕೃಪೆ ; ಇಂಟರ್ನೆಟ್)

ಚಿತ್ರ್