ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
April 01, 2006
ಹಳೆಯ ಗೆಳೆಯ : ಗೆಳೆತನ ಅಪೂರ್ವ. ಎಳೆಯಂದಿನಿಂದಿಂದಿಗೂ ಒಂದೆ ಥರ. ಹಲವಾರು ವರ್ಷ ಉರುಳಿದಮೇಲೆ ಮುಂಬಯಿಯಲೊಮ್ಮೆಗೇ ಸಿಕ್ಕ ಆ ಹಳೆ ಗೆಳೆಯ ಕೇಳಿದನು: 'ನಾನು ಯಾರೆಂದು ತಿಳಿಯಿತೆ ನಿನಗೆ ?' ಕಣ್ಣಲ್ಲಿ ಕಣ್ಣು. ಹುಡುಕಿಡೆ ಬೆನ್ನ ಹಿಂದುಗಡೆ. ಮರಳ ಹುದುಲಲ್ಲಿ ಬಚ್ಚಿಟ್ಟ ಹೆಜ್ಜೆಗಳನ್ನು ಬಗೆದೆ ಒಂದೊಂದಾಗಿ ಪುಟ ತೆಗೆದು. ಕತೆಗೆ ಕೊನೆ- ಯಿರುವಂತೆಯೇ ಉಂಟು ಒಂದೆ ಗ್ರಂಥದಲ್ಲದರ ಆರಂಭ, ಬೆಳವಣಿಗೆ. ಅಲ್ಲಲ್ಲಿ ನೆನಪಿಗೆಂ- ದಿರಿಸಿ ಮರೆತಿರುವಂಥ ನವಿಲುಗರಿ.ಬಿಡಿಸಿ ನೋ- ಡಿದರೆ ಈವತ್ತಿಗೂ ಜೀವಂತ…
ಲೇಖಕರು: shreekant.mishrikoti
ವಿಧ: Basic page
April 01, 2006
ಹುಟ್ಟಾ ಸತ್ತಿಲ್ಲ , ಸ್ವರ್ಗ ಕಂಡಿಲ್ಲ. ಹಾದಿ ಬಿಟ್ಟವನಿಗೆ ಹದಿನೆಂಟು ಹಾದಿ ಹತ್ತು ಆಡಬಹುದು , ಒಂದು ಬರೆಯಲಾಗದು. ( ಆಡಿದ್ದನ್ನು ಅಲ್ಲಗಳೆಯಬಹುದು , ಬರೆದದ್ದನ್ನು ಅಲ್ಲಗಳೆಯಲಾಗದು) ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು. ಸೆಟ್ಟರೇ ನಿಮ್ಮ ಮಗ ಬಿದ್ದ ಅಂದರೆ ಫಾಯದೇ ಕಾಣದೆ ಬಿದ್ದಿರಲಾರ ಅಂದರಂತೆ. ಸೌಟು ಬಲ್ಲದೆ ಸಾರಿನ ರುಚಿಯ ? ಸೆಟ್ಟಿ ಸಿಂಗಾರವಾಗುವದರೊಳಗೆ ಪಟ್ಟಣ ಹಾಳಾಯಿತಂತೆ. ಸುಂಕದವನ ಹತ್ತಿರ ಸುಖ ದು:ಖ ಹೇಳಿದರೆ , ಕಂಕುಳಲ್ಲಿ ಇರೋದು ಏನು ಅಂದನಂತೆ. ಸಿಪ್ಪೆ ತಿಂದವ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 01, 2006
ಬೆಂಗಳೂರು ( ಚಂದನ) ದೂರದರ್ಶನದಲ್ಲಿ ಆಗಾಗ ಕನ್ನಡ ಹವ್ಯಾಸಿ ನಾಟಕಗಳು ಬರುತ್ತವೆ, 'ಹೂ ಹುಡುಗಿ' ಮತ್ತು 'ಶೋಕಾಂತಿಕ' ನಾನು ಮೆಚ್ಚಿದ ನಾಟಕಗಳು. ಎಷ್ಟು ಬಾರಿಯಾದರೂ ನೋಡಬಹುದು . ಇತರ ವಾಹಿನಿಗಳಲ್ಲಿ ನಾಟಕಗಳನ್ನು ಈವರೆಗೆ ನೋಡಿದಿಲ್ಲ . ಆದರೆ ಈ ಟೀವಿ ಕನ್ನಡ ವಾಹಿನಿಯಲ್ಲಿ ನಾಟಕಗಳ ಕುರಿತು ಕಾರ್ಯಕ್ರಮಗಳು ಶುರುವಾದ ಹಾಗಿವೆ. ಇವತ್ತು ಶನಿವಾರ ಸಂಜೆ ೬ ಗಂಟೆಗೆ ನಾಟಕ ಅಕಾಡೆಮಿಯ ಒಂದು ಕಾರ್ಯಕ್ರಮ ಇದೆ. ಬಹುಶ: ರಂಗ ಗೀತೆಗಳ ಬಗ್ಗೆ ಇರಬಹುದು . ನೋಡಿ . ಇದು ಪುನರ್‍ ಪ್ರಸಾರವಂತೆ .…
ಲೇಖಕರು: venkatesh
ವಿಧ: Basic page
April 01, 2006
ಹಳೇ ಗಾದೆಗಳು : ಕದ ತಿನ್ನೋನ್ಗೆ ಹಪ್ಳ ಈಡೆ ? ಹೊಟ್ಟೆ ಬಾಕನಿಗೆ ಏನು ಕೊಟ್ಟರೂ ಕಡಿಮೆಯೆ. ಹೋದ್ಯ 'ಶನೀಶ್ವರ' ಅಂದ್ರೆ ಬಂದೆ ಗವಾಕ್ಷೀಲಿ, ಅಂದ. ಕಷ್ಟಗಳು ಪದೆ ಪದೆ ಬರುತ್ತವೆ. ಇಳಿವಯಸ್ ನಲ್ಲಿ ಸೂಳೆನೂ ಗರತಿ ಅದ್ಲಂತೆ. ಪರಿಸ್ಥಿತಿ ಒಂದೇಸಮನಾಗಿರಲ್ಲ. ಹೊಳೆನೀರ್ ಮುಟ್ಟಕ್ಕೆ, ಗೊಣೆನಾಯ್ಕನ್ ಅಪ್ಪಣೆಯೇ ? ಪ್ರಕ್ರುತಿಯಲ್ಲಿ ಕಾಣುವ ನದಿ, ತೊರೆಗಳು ಸರ್ವರಿಗೂ ಲಭ್ಯ.
ಲೇಖಕರು: venkatesh
ವಿಧ: Basic page
April 01, 2006
ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ. 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟಾರೆ ಕೆಡಲಿ.' ದಾಸರು ಹೇಳಿರುವಂತೆ ನಾವು ಈ ಗೊಂದಲಮಯ, ಜಗತ್ತಿನಲ್ಲಿ ವಯಸ್ಸಾಗುತ್ತಿದಂತೆ, ದೇಹ, ಮನಸ್ಸು ಪಕ್ವವಾದಂತೆ, ಯಾವುದೋ ಒಂದು 'ಅಗೋಚರ ಶಕ್ತಿ' ಎಲ್ಲ ವಹಿವಾಠುಗಳನ್ನೂ ನಿಯಂತ್ರಿಸುತ್ತಿದೆ ಎಂದು ಅನ್ನಿಸುತ್ತದೆ.ಅದನ್ನು ನಂಬುತ್ತೇವೆ. ಇಹದಲ್ಲೂ, ಪರದಲ್ಲೂ ನಮ್ಮನ್ನು ಕಾಯುವುದು ನಂಬಿಕೆಯೆ. 'ನಾಳೆ ಬೆಳಿಗ್ಯೆ ನಾನು ಏಳ್ತೇನೆ' ಎಂಬುವ ವಿಶ್ವಾಸ, ನಂಬಿಕೆ, ನನಗೆ ಭಯ ತರುವುದಿಲ್ಲ !…
ಲೇಖಕರು: venkatesh
ವಿಧ: Basic page
March 31, 2006
'ವಿಕೆಟ್' ಅಲ್ಲ 'ವಿಟೆಟ್' ! 'ಅಂದ್ರೆ ಏನಿದ್ರರ್ಥ' ? ತಾಳಿ. 'ಕೋಪಮಾಡ್ಕೋಬೇಡಿ'. ಇದನ್ನ ನಾನು ಯಾವರ್ಥದಲ್ಲಿ ಹೇಳ್ತಿದೀನಿ ಅಂದ್ರೆ, ನೆನ್ನೆ, ಟಾಟರವರ, 'ಯೆಲ್ಲೋ ಪೇಜಸ್' ನೋಡ್ತಿದ್ದೆ. ಮುಂಬೈನಲ್ಲಿ ನೋಡುವ ಸ್ಥಳಗಳನ್ನೆಲ್ಲಾ ಕೊಟ್ಟಿದ್ದರು.' ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್,' ಕಟ್ಟಿದ ವ್ಯಕ್ತಿ, 'ಜಾನ್.ವಿಕೆಟ್', ಎಂದಿತ್ತು. ಇದನ್ನು ಓದಿದ ಮೇಲೆ, ಬೇಸರವಾಯ್ತು ನೋಡಿ ! ಅದನ್ನು ನಿರ್ಮಿಸಿದ ಶ್ರೇಷ್ಠ 'ಇನ್ ಡೋ ಸರಿಸಿನಿಕ್ ಶ್ಯಲಿಯ' ಭವ್ಯ 'ಶಿಲ್ಪಿ', 'ಜಾನ್ ವಿಟೆಟ್'. (…
ಲೇಖಕರು: venkatesh
ವಿಧ: Basic page
March 31, 2006
ಹಳೆ ಗಾದೆಗಳು: ಸೆರೆಮನ್ಯಮ್ ಸೇರ್ ಹಾಕ್ಕೊಂಡ್ರೆ ನೆರೆಮನ್ಯಮ್ ನೇಣ್ ಹಾಕ್ಕೊಂಡ್ಲಂತೆ. ಅಂಥ ಪೈಪೋಟಿ ಇಬ್ಬರಿಗು ! ಉಗರ್ನಲ್ ಹೋಗೋದಕ್ಕೆ ಕೊಡ್ಲಿ ತೊಗೊಂಡ್ನಂತೆ ಅಷ್ಟು ಸುಲಭ್ವಾದ್ಕೆಲಸ ಮಾಡಕ್ಬರಲ್ಲ ಅಂತ ಜರಿ ಸೀರೇಲ್ ಹೂಸಿದ್ರೂ ಚೆಂದವಂತೆ. ಸಿರಿವಂತ್ರ ಕೆಟ್ ಆಚರಣೆನೂ ಯಾರೂ ದೋಷಿಸುವುದಿಲ್ಲ. ಬಡವರ ಮನೆ ಊಟಚೆಂದ ಸಿರಿವಂತ್ರ ಮನೆ ನೋಟ ಚೆಂದ ಸರಳವಾದ,ರುಚಿಯಾದ ಊಟ ಬಡವರಮನೇಲೆ ಸಿರಿವಂತರು ಮೇಲ್ನೋಟಕ್ಕೆ ಚೆನ್ನಾಗಿ ಕಾಣಿಸ್ತಾರೆ. ವೆಂಕಟೇಶ್
ಲೇಖಕರು: venkatesh
ವಿಧ: Basic page
March 30, 2006
ಎರಡು ಹೆತ್ತೋಳು ಹತ್ ಹೆತ್ತೋಳ್ಗೆ ಹೇಳಿದಳಂತೆ. ಹತ್ ಹೆತ್ತೋಳ್ಗೆ ಅನುಭವ ಹೆಚ್ಚಲ್ಲವೆ ? ಅಟ್ಮೇಲ್ ಒಲೆ ಉರಿತು ಕೆಟ್ ಮೇಲ್ ಬುಧ್ದಿ ಬಂತು ಪೂರ್ತಿ ಹಾಳಾದ್ ಮೇಲೆ ಬುದ್ದಿ ಬಂತು. ತಾ ಅನ್ನೋದ್ ತಾತನ್ಕಾಲದಿಂದ ಕ್ವಾ ಅನ್ನೋದ್ ಕುಲದಲ್ಲಿಲ್ಲ. ಇಸ್ಕೋಳ್ಳೋದೆ ಎಲ್ಲ, ಕೊಡೊದಂತೂ ಇಲ್ಲ ವೆಂಕಟೇಶ್.
ಲೇಖಕರು: venkatesh
ವಿಧ: ಬ್ಲಾಗ್ ಬರಹ
March 30, 2006
ಡಾ. ಯು.ಬಿ.ರಾವ್- ಒಂದು ಸವಿನೆನಪು ! ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ; ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ. ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ 'ಪೇನಲ್ ಡಾಕ್ಟರ್'. ಮುಂಬೈ ನ ಮಾಟುಂಗಾದಲ್ಲೇ ಬಹಳ ಜನಪ್ರಿಯ ವೈದ್ಯರು ! ಒಮ್ಮೆ ನಾನು ನನ್ನ ಹೆಂಡತಿ, ನಮ್ಮ ಮಗು ರವಿ ಯನ್ನು ಅವರಬಳಿ ತೋರಿಸಲೆಂದು ಕರೆದುಕೊಂಡು ಹೋಗಿದ್ದೆವು. ರವಿ, ಸ್ಪಲ್ಪ ಸಪೂರಾಗಿದ್ದ. ಆದರೆ ಆಟ ಆಡಿಕೊಂದಿದ್ದ; ಗೆಲುವಾಗಿದ್ದ…
ಲೇಖಕರು: venkatesh
ವಿಧ: Basic page
March 30, 2006
"ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ. ಎಲ್ಲೆಲ್ಲೂ ಮಂಗಳಮಯ ವಾತಾವರಣ ತುಂಬಿದೆ. ಕವಿಯವರ್ಣನೆ ಎಷ್ಟು ಅನ್ವರ್ಥವಾಗಿದೆ. ಪ್ರಕ್ರುತಿಯ ಸೊಬಗು ಹೇಳತೀರದು. ಎಷ್ಟೋ ದಿನ ಎಲ್ಲೋ ಅಡಗಿದ್ದ ಕೋಗಿಲೆ, ವಸಂತದ ಆಗಮನವಾಗುತ್ತಿದ್ದಂತೆಯೇ ತನ್ನ ಮಧುರ ಗಾನವನ್ನು ಉಣಬಡಿಸುತ್ತಿದೆ. ಎಲ್ಲಕಡೆ ಹಸಿರು, ಬೀಸುವ ಗಾಳಿಯಲ್ಲೂ ಮಧುರತೆ ಕಾಣಬರುತ್ತಿದೆ. ಪಕ್ಷಿಗಳ ಚಿಲಿಪಿಲಿ ಗಾನದಲ್ಲೂ ಏನೋ ಸಂಭ್ರಮ ಇದೆಯಲ್ಲ ! ಯುಗಾದಿಯ ದಿನ ಶುರುವಾಗುವುದು ಹೀಗೆ: ಇನ್ನು ಸ್ವಲ್ಪ ಹೊತ್ತಿನಲ್ಲೇ ಬಾಗಿಲಿಗೆ ಮಾವಿನತಳಿರಿನ…