ಈ ಟೀವಿಯಲ್ಲಿ ಕನ್ನಡ ನಾಟಕಗಳು

ಈ ಟೀವಿಯಲ್ಲಿ ಕನ್ನಡ ನಾಟಕಗಳು

ಬೆಂಗಳೂರು ( ಚಂದನ) ದೂರದರ್ಶನದಲ್ಲಿ ಆಗಾಗ ಕನ್ನಡ ಹವ್ಯಾಸಿ ನಾಟಕಗಳು ಬರುತ್ತವೆ, 'ಹೂ ಹುಡುಗಿ' ಮತ್ತು 'ಶೋಕಾಂತಿಕ' ನಾನು ಮೆಚ್ಚಿದ ನಾಟಕಗಳು. ಎಷ್ಟು ಬಾರಿಯಾದರೂ ನೋಡಬಹುದು .

ಇತರ ವಾಹಿನಿಗಳಲ್ಲಿ ನಾಟಕಗಳನ್ನು ಈವರೆಗೆ ನೋಡಿದಿಲ್ಲ . ಆದರೆ ಈ ಟೀವಿ ಕನ್ನಡ ವಾಹಿನಿಯಲ್ಲಿ ನಾಟಕಗಳ ಕುರಿತು ಕಾರ್ಯಕ್ರಮಗಳು ಶುರುವಾದ ಹಾಗಿವೆ.

ಇವತ್ತು ಶನಿವಾರ ಸಂಜೆ ೬ ಗಂಟೆಗೆ ನಾಟಕ ಅಕಾಡೆಮಿಯ ಒಂದು ಕಾರ್ಯಕ್ರಮ ಇದೆ. ಬಹುಶ: ರಂಗ ಗೀತೆಗಳ ಬಗ್ಗೆ ಇರಬಹುದು . ನೋಡಿ . ಇದು ಪುನರ್‍ ಪ್ರಸಾರವಂತೆ .
ಹಾಗೆಯೇ ಹೋದ ರವಿವಾರ ರಾತ್ರಿ ೧೧ ಗಂಟೆಗೆ ಒಂದು ಕಾರ್ಯಕ್ರಮ ಅದೇ ಚಾನೆಲ್ಲಿನಲ್ಲಿ ನೋಡಿದೆ. ಅದೂ ಪುನರ್‍ ಪ್ರಸಾರವೇ ಇರಬಹುದು .ಹೋದ ವಾರ ಪು.ತಿ.ನರಸಿಂಹಾಚಾರ್ಯರ 'ಗೋಕುಲ ನಿರ್ಗಮನ' ನಾಟಕದ ತುಣುಕುಗಳು , ವ್ಯಾಖ್ಯಾನಗಳಿಂದೊಡಗೂಡಿ ಇತ್ತು . ಚೆನ್ನಾಗಿ ಇತ್ತು. ನೀನಾಸಂ ರವರ ಪ್ರಸ್ತುತಿ . ಆ ನಾಟಕದ ಅನೇಕ ವಿಭಿನ್ನ ನೆಲೆ/ಆಯಾಮಗಳನ್ನು ಪರಿಚಯಿಸಿದರು , ಇನ್ನೂ ಹೊಸ ಹೊಸ ವ್ಯಾಖ್ಯಾನಗಳು ಬರುತ್ತಿವೆಯಂತೆ. ' ಕೃಷ್ಣನಾ ಕೊಳಲಿನಾ ಕರೆ , ಆಲಿಸು , ಕೃಷ್ಣನಾ ಕೊಳಲಿನಾ ಕರೆ, ತ್ವರೆ ತ್ವರೆ ಬ್ರಂದಾವನಕೇ ತ್ವರೆ, ಮಲಗಿರುವ ಕೂಸಿನ ಮರೆ , ಪಕ್ಕದ ಗಂಡನ ತೊರೆ' ಮತ್ತು ' ಅಕೋ ಶ್ಯಾಮ ಅವಳೆ ರ್‍ಆಧೆ ' ಎಂಬ ಹಾಡುಗಳನ್ನು ನೀವು ಕೇಳಿರಬಹುದು . ಇವು ಈ ನಾಟಕದ ಪದ್ಯಗಳು.

ಇಂದು ಸಂಜೆ ೬ ಗಂಟೆಗೆ ಮತ್ತು ನಾಳೆ ರಾತ್ರಿ ೧೧ ಗಂಟೆಗೆ ಈ-ಟಿವಿಯಲ್ಲಿ ಬರುವ ಈ ಎರಡು ಬೇರೆ ಬೇರೆ ಕಾರ್ಯಕ್ರಮಗಳನ್ನು ನೋಡಲು ಮರೆಯದಿರಿ.

Rating
No votes yet