ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ.
ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ.
'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟಾರೆ ಕೆಡಲಿ.' ದಾಸರು ಹೇಳಿರುವಂತೆ ನಾವು ಈ ಗೊಂದಲಮಯ, ಜಗತ್ತಿನಲ್ಲಿ ವಯಸ್ಸಾಗುತ್ತಿದಂತೆ, ದೇಹ, ಮನಸ್ಸು ಪಕ್ವವಾದಂತೆ, ಯಾವುದೋ ಒಂದು 'ಅಗೋಚರ ಶಕ್ತಿ' ಎಲ್ಲ ವಹಿವಾಠುಗಳನ್ನೂ ನಿಯಂತ್ರಿಸುತ್ತಿದೆ ಎಂದು ಅನ್ನಿಸುತ್ತದೆ.ಅದನ್ನು ನಂಬುತ್ತೇವೆ. ಇಹದಲ್ಲೂ, ಪರದಲ್ಲೂ ನಮ್ಮನ್ನು ಕಾಯುವುದು ನಂಬಿಕೆಯೆ. 'ನಾಳೆ ಬೆಳಿಗ್ಯೆ ನಾನು ಏಳ್ತೇನೆ' ಎಂಬುವ ವಿಶ್ವಾಸ, ನಂಬಿಕೆ, ನನಗೆ ಭಯ ತರುವುದಿಲ್ಲ ! ಎಲ್ಲಾ ಮಾನವ ಸಂಬಂಧಗಳೂ ನಂಬಿಕೆಯ ತಳಹದಿಯ ಮೇಲೆ ನಿಂತಿವೆ. ಸರ್ಕಸ್ಸಿನ 'ಟ್ರಪೀಸ್' ಆಟವನ್ನೇ ನೋಡಿ. ಅತಿ ಎತ್ತರದಲ್ಲಿ ಎದುರು ಬದುರಾಗಿ ತೂಗುತ್ತಿರುವ ಎರಡು ತೂಗು ಸರಳು ಜೋಕಾಲಿಗಳಲ್ಲಿ ಒಂದಕ್ಕೆ ಜೋತು ಬಿದ್ದು ನೇತಾಡುವ ವ್ಯಕ್ತಿ ಲೆಖ್ಖಾಚಾರವಾಗಿ ಮುಂದಿನ ಸರಳನ್ನು ಜಿಗಿದು ಹಿಡಿಯುತ್ತಾನೆ.ಇದೇ ಸಮಯದಲ್ಲಿ ಸರಳನ್ನು ಬಿಟ್ಟ ವ್ಯಕ್ತಿ ಇದಕ್ಕೆ ಜಿಗಿಯುತ್ತಾನೆ. ಸರುಳುಗಳು ಸರಿಯಾಗಿ, ಸಕಾಲಿದಲ್ಲಿ ಬರುವುದೆಂಬ ನಂಬಿಕೆ,ವಿಶ್ವಾಸವೇ ಅವರನ್ನು ಈ ಆಟವಾಡಲು ಪ್ರೇರೇಪಿಸುತ್ತವೆ. ಅಲ್ಲವೇ. ಅದಿಲ್ಲದೇ, ಕ್ಷಣಾರ್ಧದಲ್ಲಿ ಅವರಿಬ್ಬರೂ ಕೆಳಗೆ ಬೀಳುತ್ತಾರೆ. ಆತ್ಮವಿಶ್ವಾಸ ಬಹು ಮುಖ್ಯ ! ಈ ನಂಬಿಕೆಯೇ ಬದುಕಿಗೆ ಆಧಾರ ಅಲ್ಲವೇ !