ಹೊಸ ನಗೆಹನಿಗಳು- ೬೩ನೇ ಕಂತು

Submitted by shreekant.mishrikoti on Mon, 12/02/2019 - 02:41

ಒಂದು ಸಹಾಯವಾಣಿಯಲ್ಲಿ ಮುದ್ರಿತ  ಸಂದೇಶ - ಕನ್ನಡಕ್ಕಾಗಿ ಒಂದನ್ನು ಒತ್ತಿ ; ಕನ್ನಡ ಗೊತ್ತಿಲ್ಲದಿದ್ದರೆ ಎರಡನ್ನು ಒತ್ತಿ .

------------------------

ಔಷಧಿ ಅಂಗಡಿಯಲ್ಲಿ ಒಬ್ಬ ತಾಯಿ ಅಂಗಡಿಯವನಿಗೆ ಹೇಳಿದಳು - ನನ್ನ ಮಗನಿಗೆ ವಿಟಮಿನ್ ಔಷಧಿ ಕೊಡಿ.

ಅಂಗಡಿಯವ - ಯಾವುದು ಕೊಡಲಿ ತಾಯಿ, ಎ , ಬಿ  , ಸಿ ?
ಅವಳು- ಯಾವುದಾದರೂ ಪರವಾಗಿಲ್ಲ , ಅವನಿನ್ನೂ ಎಬಿಸಿಡಿ ಕಲಿತಿಲ್ಲ.

------------------------

ಮೋಸ ,    ವಂಚನೆ  ಮತ್ತು ಪ್ರಾಯಶ್ಚಿತ್ತಗಳ ಕುರಿತಾದ ಪ್ರವಚನ ಕೇಳಿದವನೊಬ್ಬ ತೆರಿಗೆ ಇಲಾಖೆಗೆ ಪತ್ರ ಬರೆದ - ನಾನು ತೆರಿಗೆ ವಂಚನೆ ಮಾಡಿದ ಕಾರಣ ನನಗೆ ನಿದ್ದೆಯೇ ಬರುತ್ತಿಲ್ಲ . ಆದ ಕಾರಣ  ಈ ಪತ್ರದ ಜತೆಗೆ ಒಂದು ಸಾವಿರ ರೂಪಾಯಿಯ ಚೆಕ್ ಕಳಿಸುತ್ತಿದ್ದೇನೆ. ಈಗಲೂ ನಿದ್ದೆ ಬರದಿದ್ದರೆ  ಬಾಕಿ ಹಣವನ್ನು ಕೂಡ ಕಳಿಸುತ್ತೇನೆ.

------------------------
(ಇದನ್ನು ಕೇಳಿರಬಹುದು . ಚೆನ್ನಾಗಿದೆ  , ಇನ್ನೊಮ್ಮೆ ನಕ್ಕು ಬಿಡಿ ! )

ಪೋಲೀಸು ಅಧಿಕಾರಿ ಮೇಲಧಿಕಾರಿಗೆ ಫೋನ್ ಮಾಡಿದ - ಸರ್ , ಇಲ್ಲೊಬ್ಬ ಹೆಂಗಸು ತನ್ನ ಗಂಡನಿಗೆ ಗುಂಡು ಹಾಕಿದ್ದಾಳೆ , ತಾನು ಈಗ ತಾನೇ ಒರೆಸಿದ ನೆಲದ ಮೇಲೆ ಕಾಲಿಟ್ಟದ್ದಕ್ಕೆ.

ಮೇಲಧಿಕಾರಿ ಕೇಳಿದ - ಅವಳನ್ನ ಬಂಧಿಸಿದಿಯಾ ?
ಅಧಿಕಾರಿ ಉತ್ತರಿಸಿದ - ಇಲ್ಲ ಸರ್, ನೆಲ ಇನ್ನೂ  ಒಣಗಿಲ್ಲ!

Rating
Average: 4.2 (5 votes)