ಪುಸ್ತಕ ಪರಿಚಯ

ಲೇಖಕರು: Ashwin Rao K P
November 22, 2023
“ಹೂದೋಟದಲ್ಲಿ ದುರ್ದೈವಿ ಸಂಗ’ ಕವಿ ಸಂಗಪ್ಪ ನಾಗಲಾಪುರ ಅವರ ಕವನ ಸಂಕಲನ. ಈ ಪುಸ್ತಕದ ವಿಶೇಷತೆ ಎಂದರೆ ಸುಮಾರು ೫೦ ವರ್ಷಗಳ ಹಿಂದೆ ಬರೆದ ಕವನಗಳನ್ನು ಮಸ್ಕಿಯ ಅಡ್ಲಿಗಿ ಪ್ರಕಾಶನ ೨೦೨೩ ರಲ್ಲಿ ಪ್ರಕಟಿಸಿದೆ. ಈ ಕವನ ಸಂಕಲನದಲ್ಲಿ ೭೨ ಕವಿತೆಗಳಿವೆ. ಚಿಕ್ಕ ಚಿಕ್ಕ ಕವಿತೆಗಳು ಹಿಡಿದು ದೀರ್ಘ ಕವಿತೆಗಳು ಇವೆ. ಕವಿ ಸಂಗಪ್ಪ ನಾಗಲಾಪುರ ಅವರು ತಮ್ಮ ಯೌವನ ಕಾಲದಲ್ಲಿ ಬರೆದ ಕವಿತೆಗಳು. ಕವಿ ನಾಗಲಾಪುರ ಅವರ ಬದುಕಿನ ಸಿಹಿ ಕಹಿ ದುಃಖ ನೋವು ನಿರಾಸೆ ಪ್ರೇಮ ಸರಸ ವಿರಸ ವಿರಹ ಈ ರೀತಿಯ ಅನೇಕ…
ಲೇಖಕರು: Ashwin Rao K P
November 20, 2023
ಉದಯೋನ್ಮುಖ ಕಾದಂಬರಿಗಾರ್ತಿ ರಂಜನೀ ಕೀರ್ತಿ ಅವರ ಸಂಗೀತಾತ್ಮಕ ಥ್ರಿಲ್ಲರ್ ಕಾದಂಬರಿ ‘ಪಸಾ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕಾದಂಬರಿಯು ಅತ್ಯಂತ ರೋಚಕವಾಗಿ ಸಾಗುತ್ತಾ, ಎಲ್ಲಿಯೂ ಬೋರ್ ಹೊಡೆಸದೇ ಮುಂದುವರಿಯುತ್ತದೆ. ಈ ಕಾದಂಬರಿಯ ಕುರಿತಾಗಿ ನಾಡಿನ ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಕೃತಿಗೆ ಬೆನ್ನುಡಿಯನ್ನು ಬರೆದು ಲೇಖಕಿಯ ಬೆನ್ನು ತಟ್ಟಿದ್ದಾರೆ. ಅವರು ಬೆನ್ನುಡಿಲ್ಲಿ ಬರೆದ ವಾಕ್ಯಗಳು ನಿಮ್ಮ ಓದಿಗಾಗಿ… ‘ಪಸಾ' ರಂಜನೀ ಕೀರ್ತಿ ಅವರ ರೋಚಕ…
ಲೇಖಕರು: Ashwin Rao K P
November 17, 2023
ಪ್ಲಾಸ್ಟಿಕ್ ಎಂಬ ವಸ್ತು ನಮ್ಮ ಪರಿಸರವನ್ನು ಪೆಡಂಭೂತದಂತೆ ಕಬಳಿಸುತ್ತಾ ಹೋಗುತ್ತಿದೆ. ಮಣ್ಣಿನಲ್ಲಿ, ನೀರಿನಲ್ಲಿ ಕರಗದ ಈ ಪ್ಲಾಸ್ಟಿಕ್ ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಈ ಬಗ್ಗೆ ಹಲವಾರು ಕೃತಿಗಳು ಹೊರಬಂದಿದ್ದರೂ ಪ್ಲಾಸ್ಟಿಕ್ ಮಾಡುವ ಹಾನಿಯ ಬಗ್ಗೆ ಹೇಳುವುದು ಇನ್ನೂ ಉಳಿದಿದೆ. ಈ ಕೃತಿಯಲ್ಲಿ ಪ್ಲಾಸ್ಟಿಕ್ ಕಸವನ್ನು ಹೆಕ್ಕುವವರ ಬಗ್ಗೆ ಲೇಖಕಿ ಎಚ್ ಎಸ್ ಅನುಪಮಾ ಅವರು ಮಾಹಿತಿ ನೀಡುತ್ತಾ ಹೋಗಿದ್ದಾರೆ. ಅವರು ಈ ಕೃತಿಯ ಬಗ್ಗೆ…
ಲೇಖಕರು: Ashwin Rao K P
November 15, 2023
ಸದಾಶಿವ ಸೊರಟೂರು ಅವರ ನೂತನ ಕವನ ಸಂಕಲನ “ನಿನ್ನ ಬೆರಳು ತಾಕಿ" ಬಿಡುಗಡೆಯಾಗಿದೆ. ಭರವಸೆಯ ಕವಿಯಾಗಿರುವ ಸದಾಶಿವ ಸೊರಟೂರು ಅವರ ಈ ೧೧೮ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಲಕ್ಸ್ಮಣ ವಿ ಎ. ಇವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾ...‘“ನಿನ್ನ ಬೆರಳು ತಾಕಿ' ಸದಾಶಿವ ಸೊರಟೂರರ ಪ್ರೇಮ ಕವನ ಸಂಕಲನ. ಸೃಷ್ಟಿಯ ಆದಿಯಿಂದಾಗಿ ಇಲ್ಲಿಯ ತನಕ ಭಾಷೆಯ ಹಂಗಿಲ್ಲದೆ ಸಂವಹನ ಸಾಧ್ಯವಾಗಿದ್ದು ಈ ಪ್ರೇಮಕ್ಕೆ ಮಾತ್ರ. ಪ್ರೇಮ ಸರಳವೆಂದುಕೊಂಡಷ್ಟೂ ಜಟಿಲ. ಕ್ಲಿಷ್ಟಕರ…
ಲೇಖಕರು: addoor
November 15, 2023
ಡಾ. ಮೀನಗುಂಡಿ ಸುಬ್ರಹ್ಮಣ್ಯ ಅವರ ಜನಪ್ರಿಯ ಪುಸ್ತಕ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಅದರ 2ನೇ ಭಾಗ ಈ ಪುಸ್ತಕ. ಇದರಲ್ಲಿವೆ ಒಂಭತ್ತು ವೃತ್ತಾಂತಗಳು ಮತ್ತು ಎರಡು ಲೇಖನಗಳು: “ವಿಪಶ್ಯನ ಧ್ಯಾನ ಶಿಬಿರ - ಒಂದು ಅನುಭವ” ಮತ್ತು “ವಿಜ್ನಾನಕ್ಕೆ ಅಪಚಾರ.” ಹಲವರು ಮಾನಸಿಕ ಸಮಸ್ಯೆಯಿಂದ ಸಂಕಟ ಪಡುತ್ತಾ ಇರುತ್ತಾರೆ - ಒಂದೆರಡಲ್ಲ, ಹಲವಾರು ದಶಕಗಳ ಕಾಲ. ಇಲ್ಲಿನ ವೃತ್ತಾಂತಗಳನ್ನು ಓದಿದಾಗ ಅವರು ಎಷ್ಟು ಸುಲಭವಾಗಿ ತಮ್ಮ ಸಂಕಟ ಹೋಗಲಾಡಿಸಿಕೊಳ್ಳಬಹುದು ಎಂದು ಸ್ಪಷ್ಟವಾಗುತ್ತದೆ. ಅದಕ್ಕಾಗಿ…
ಲೇಖಕರು: Ashwin Rao K P
November 10, 2023
ಯಾಕೂಬ್ ಎಸ್ ಕೊಯ್ಯೂರು ಅವರು ವೃತ್ತಿಯಲ್ಲಿ ಪ್ರೌಢ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕರು. ಮಕ್ಕಳಿಗೆ ಗಣಿತ ಯಾವಾಗಲೂ ಕಬ್ಬಿಣದ ಕಡಲೆಯೇ. ಇವರು ಕಾರ್ಯ ನಿರ್ವಹಿಸುವ ಸರಕಾರಿ ಪ್ರೌಢ ಶಾಲೆ ನಡ, ಬೆಳ್ತಂಗಡಿಯಲ್ಲಿ ಗಣಿತ ಪ್ರಯೋಗ ಶಾಲೆಯನ್ನು ನಿರ್ಮಿಸಿ, ರಾಜ್ಯದಲ್ಲೇ ಸಂಚಲನ ಮೂಡಿಸಿದ್ದಾರೆ. ಇವರ ಈ ಸೃಜನಶೀಲ ವ್ಯಕ್ತಿತ್ವವನ್ನು ಗುರುತಿಸಿ ಕೇಂದ್ರ ಸರಕಾರವು ಯಾಕೂಬ್ ಅವರಿಗೆ ೨೦೨೦ರಲ್ಲಿ ದೇಶದ ಅತ್ಯುನ್ನತ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಯಾಕೂಬ್ ಅವರು ಒಬ್ಬ ಉತ್ತಮ ಶಿಕ್ಷಕರು…