ಪುಸ್ತಕ ಸಂಪದ

  • ನಾನು  ಇತ್ತೀಚಿಗೆ  ಓದಿದ  ಕಾದಂಬರಿ  S. L  ಭೈರಪ್ಪ ರವರ   ನಾಯಿ  ನೆರಳು  ಬಹಳ  ಹಿಡಿಸಿ ಬಿಟ್ಟಿತು.   ಅವರ  ಭಾಷ ಪಾಂಡಿತ್ಯ  ಓದುಗನನ್ನು  ಕಥೆಯಲ್ಲಿ  ಒಂದು  ಪಾತ್ರವಾಗಿಸಿಬಿಡುತ್ತೆ !!!  1 9 6 8  ರಲ್ಲಿ  ಬರೆದ ಪಾತ್ರಗಳು, ಊರಿನ  ವಿವರಣೆ ...  ನಾವು  ಈಗಿರುವ ಕಾಲ  ಪರಿಸ್ಥಿತಿಯನ್ನು  ಸಂಪೂರ್ಣವಾಗಿ ಮರೆಸಿ  ,  ನಮ್ಮನ್ನು  ಸಮಯದಲ್ಲಿ  ಹಿಂದಕ್ಕೆ  ಕರೆದುಕೊಂಡು  ಹೋಗುವುದರಲ್ಲಿ  ಸಂಶಯವೇ ಇಲ್ಲ..  ನಾಯಿ  ನೆರಳನ್ನು   ನಾನು  ಅರ್ಥ  ಮಾಡಿಕೊಂಡಿರುವ  ಪರಿಯನ್ನು  ನನ್ನ ಗೆಳೆಯರೊಡನೆ  ಹಂಚಿಕೊಳ್ಳುವ  ಆಸೆ !!!  

      ಕಥಾನಾಯಕ  ವಿಶ್ವ  ತನ್ನ  ಚಿಕ್ಕ ವಯಸ್ಸಿನಿಂದ  ತನಗೊಬ್ಬಳು  ಹೆಂಡತಿ ಮತ್ತು  ಒಂದು ವರ್ಷದ  ಗಂಡು ಮಗುವೊಂದಿದೆ  ಎಂದು  ಹೇಳುತ್ತಿರುತ್ತಾನೆ ..  ಮೊದ  ಮೊದಲು   ಮನೆಯವರು  ಅದನ್ನು  ಹಾಸ್ಯವಾಗಿ  …
  •  

    ಹೇಳತೇವ ಕೇಳ....     

    “ಮುಂದೊಂದು ದಿನ

    ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.”

    ಅವಧಿಯ ಸಂಪಾದಕರಾದ ಜಿ.ಎನ್‍.ಮೋಹನ್‍ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು ಬಿಕ್ಕುತ್ತದೆ. ಇನ್ನಾದರೂ ‘ಈ ಜಗತ್ತು ಬದಲಾಗಬಾರದೇ..’ ಎನ್ನಿಸುತ್ತದೆ. ಇದರ ಸಂಪಾದಕಿ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್‍ ಮತ್ತು ಇದರಲ್ಲಿನ ಲೇಖನಗಳ ಸಂಯೋಜಕಿ ಶ್ರೀಮತಿ ಎನ್‍. ಸಂಧ್ಯಾರಾಣಿ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರತಿಭಟನೆಯ ಸಂದರ್ಭದಲ್ಲಿ ಅವಧಿಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಿದು. ಹಲವು ಮಂದಿ ಮಹಿಳೆಯರು ಬಚ್ಚಿಟ್ಟ ತಮ್ಮ ನೋವನ್ನು ಇಲ್ಲಿ ತೆರೆದಿದ್ದಾರೆ.

    ಇದರಲ್ಲಿ ‘ಹೀಗಾಯ್ತು.., ಬೇಡ.., ಬಿಕ್ಕು..,ಮತ್ತು ಬೆಳಕಿಗಾಗಿ…

  •  

    ಬೇಸಿಗೆಯ ಧಗೆಯಲ್ಲಿ ಮಳೆಹನಿ ಸಿಂಚನ..

    ತಾವು ಪ್ರೀತಿಸಿದವರಿಂದಲೇ ಪ್ರೀತಿ ಪಡೆದು ತಾವು ಬಯಸಿದಂತೆ ಬದುಕುವ ಅವಕಾಶ ಎಲ್ಲೋ ಕೆಲವರಿಗೆ ಸಿಗುವಂತದ್ದು.. ಅಂತಹ ಬದುಕನ್ನು ಪಡೆದ ರಾಜೇಶ್ವರಿ ತೇಜಸ್ವಿಯವರ  ಬದುಕಿನ ನೆನಪುಗಳ ಬುತ್ತಿ ‘ನನ್ನ ತೇಜಸ್ವಿ’.

    ತೇಜಸ್ವಿ ನಮ್ಮ ತಲೆಮಾರಿನ ಮಂದಿಗೆ ಹೀರೋನೇ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವುಗಳು ನಮ್ಮ ಮಕ್ಕಳಿಗೆ ಓದಿಸಲೇಬೇಕಾದ ಲೇಖಕರಲ್ಲಿ ಕೂಡ ತೇಜಸ್ವಿ ಬಹುಮುಖ್ಯರು. ಅವರ ‘ಪರಿಸರದ ಕಥೆ’ ಓದಿ ಹುಚ್ಚರಾದವರು ಅವರನ್ನು ಹುಡುಕಿ ಹೋದವರು ಅದೆಷ್ಟೋ ಮಂದಿ. ಅಂತಹವರಿಗೆ ಈ ಪುಸ್ತಕ ನಿಜಕ್ಕೂ ರಸಗವಳ.

    ಈ ಪುಸ್ತಕದಲ್ಲಿ ಏನಿದೆ? ಮೈಸೂರಿನ ಆ ಕಾಲದ ಕಾಲೇಜು ಕ್ಯಾಂಪಸ್‍, ಹಾಸ್ಟಲ್‍ಗಳು, ಕಾಲೇಜಿನ ಚಟುವಟಿಕೆಗಳು.. ಹುಡುಗರು ಹುಡುಗಿಯರು.. ಇದರ ನಡುವೆಯೇ…

  • ಬೇಸಿಗೆಯ ಧಗೆ.. ಹುಳಿಮಾವಿನ ಸಂಗ..

    ‘ನನ್ನ ಹೆಸರು ಇಂದಿರಾ.’     

    ಲಂಕೇಶರ ಮಡದಿ ಇಂದಿರಾ ಲಂಕೇಶರು ಬರೆದಿರುವ “ಹುಳಿಮಾವು ಮತ್ತು ನಾನು” ಪುಸ್ತಕದ ಮೊದಲ ಸಾಲಿದು. ಮೊದಲಿಗೆ ಲಂಕೇಶ್ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡಿದ್ದು ಈ ವರ್ಷದ ಲಂಕೇಶರ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಸ್ತಕ ರೂಪದಲ್ಲಿ ಓದುಗರ ಕೈ ಸೇರಿತು.

    ಲಂಕೇಶ್ ಎಂಬ ದೈತ್ಯನೊಂದಿಗೆ ಒಡನಾಡಿದ, ಅವರ ಸಂಗಾತಿಯಾಗಿ ಕಂಡುಂಡ ಬದುಕಿನ ಏಳುಬೀಳುಗಳನ್ನು ಇಂದಿರಾ ಅವರು ತಣ್ಣನೆಯ ಧ್ವನಿಯಲ್ಲಿ ನಿರೂಪಿಸುತ್ತಾರೆ. ಲಂಕೇಶರಂತಹ ಅಸಾಧಾರಣ ಪ್ರತಿಭಾವಂತ, ವಿಕ್ಷಿಪ್ತ ಮನಸ್ಥಿತಿಯ ಕಲೆಗಾರನೊಂದಿಗೆ ಬದುಕಿನ 40 ಮಳೆಗಾಲಗಳನ್ನು ಕಳೆದ ಬಗೆಯನ್ನು ಅವರು ತೆರೆದಿಡುವ ಬಗೆ ಮನಮುಟ್ಟುವಂತಿದೆ.

    ಪುಸ್ತಕವನ್ನು ಓದುತ್ತಾ ಹೋದ ಹಾಗೆ ಲಂಕೇಶರ ವ್ಯಕ್ತಿತ್ವದ…

  • ‘ಕಾವ್ಯ ಮತ್ತು ಏಕೀಕರಣ’ ಪುಸ್ತಕದಲ್ಲಿನ ಕೆಲವು ಸಾಲುಗಳು : 

    ‘ಕಾವ್ಯ ಮತ್ತು ಏಕೀಕರಣ’ ಎಂಬ ಈ ಪುಸ್ತಕದಲ್ಲಿ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಾಹಿತಿಗಳ ಲೇಖನಿಯಿಂದ ಮೂಡಿಬಂದ ಬರಹಗಳು, ಅದರಲ್ಲೂ ಮುಖ್ಯವಾಗಿ ಕಾವ್ಯಧಾರೆಯ ಪಾತ್ರವನ್ನು ಚರ್ಚಿಸುವ ಕಾರ್ಯ ಮಾಡಲಾಗಿದೆ. ಇಂದಿನ ನಮ್ಮ ವಿಶಾಲ ಕರ್ನಾಟಕ ಉದಯವಾಗಿ ಐವತ್ತಾರು ವರ್ಷಗಳು ತುಂಬಿ ಐವತ್ತೇಳನೆಯ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ನಾಡು ರೂಪುಗೊಳ್ಳಲು ಪ್ರಮುಖವಾದ ಏಕೀಕರಣ ಚಳುವಳಿಯನ್ನು ಅವಲೋಕಿಸುತ್ತ, ಈ ಚಳುವಳಿಯ ಕಾವನ್ನು ಹೆಚ್ಚುವಂತೆ ಮಾಡಿದ ಸಾಹಿತಿಗಳ ಕಾವ್ಯಗಳ ಅವಲೋಕನ ಮಾಡುವುದು ಸೂಕ್ತವೆನಿಸಿದೆ. ಏಕೀಕರಣವನ್ನು ಸಾಹಿತಿಗಳ ಬರವಣಿಗೆಯ ಮೂಲಕ ನೋಡುವ ಪ್ರಯತ್ನವನ್ನು ಈ ಪುಸ್ತಕ ಪ್ರಾಮಾಣಿಕವಾಗಿ ಮಾಡಿದೆ. ಇಪ್ಪತ್ತಕ್ಕೂ ಹೆಚ್ಚು ಭಾಗಗಳಾಗಿ…

  •  

    ‘ಕಂಬಾರರ ಎರಡು ಕಾದಂಬರಿಗಳು’ ಪುಸ್ತಕದ ಒಳನೋಟ :

    ಪ್ರಸ್ತುತದ ಈ ಪುಸ್ತಕದಲ್ಲಿ ಕಂಬಾರರ ಕಾದಂಬರಿಗಳಲ್ಲಿ 'ಸಿಂಗಾರೆವ್ವ ಮತ್ತು ಅರಮನೆ' ಹಾಗೂ 'ಶಿಖರಸೂರ್ಯ' ಕಾದಂಬರಿಗಳನ್ನು ಮಾತ್ರ ಅಧ್ಯಯನದ ವಿಷಯವಾಗಿ ತೆಗೆದುಕೊಂಡು ಅವುಗಳು ಬಿಚ್ಚಿಡುವ ವಿಶೇಷ ಅಂಶಗಳನ್ನು ವಿಶ್ಲೇಷಣಾತ್ಮಕ ದೃಷ್ಟಿಯಿಂದ ಅಭ್ಯಸಿಸಿ ಈ ಪುಸ್ತಕವನ್ನು ರಚಿಸಿದ್ದೇನೆ. ಈ ವಿಶ್ಲೇಷಣಾತ್ಮಕ ಅಧ್ಯಯನದ ಸಾರವನ್ನು ಈ ಕೆಳಗಿನಂತೆ ವಿವರಿಸುತ್ತೇನೆ.

     'ಸಿಂಗಾರೆವ್ವ ಮತ್ತು ಅರಮನೆ' ಕಾದಂಬರಿಯ ವಸ್ತು ವಿಶ್ಲೇಷಣೆ ಅಧ್ಯಾಯದಲ್ಲಿ ಚರಿತ್ರೆಯ ಪುಟಗಳಿಂದ ತೆಗೆದುಕೊಂಡ ಈ ಕಾದಂಬರಿಯ ಕಥಾವಸ್ತುವಿನಲ್ಲಿ ಊಳಿಗಮಾನ್ಯ ವ್ಯವಸ್ಥೆ ತನ್ನ ಹುಸಿ ಪ್ರತಿಷ್ಠೆ, ಕ್ರೌರ್ಯ ಮತ್ತು ತನ್ನ ದೌರ್ಬಲ್ಯಗಳಿಂದ ನಿಧಾನವಾಗಿ ಅಧಃಪತನಗೊಳ್ಳುವ ಕಟುವಾಸ್ತವ ಚಿತ್ರಣವಿದೆ. ಕಾದಂಬರಿಯ…

  • ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ ಹೊಸ ಭಾವನೆಗಳ ಮಿಳಿತವಿದೆ, ನೋವಿನ ಜೊತೆಗೆ ನಲಿವಿದೆ, ನಂಬಿಕೆ ಅಪನಂಬಿಕೆಗಳ ನಡುವಿನ ಗುದ್ದಾಟವಿದೆ, ಅರ್ಧದಾರಿಗೇ ನಮ್ಮನ್ನು ನಿಲ್ಲಿಸಿಹೋಗುವ ಒಗಟುಗಳಿವೆ, ಪ್ರಶ್ನೆಯಾಗಿ ಕಾಡಿ ಪ್ರಶ್ನೆಯಾಗಿಯೇ ಉಳಿದುಕೊಳ್ಳುವ ಭಾವನೆಗಳಿವೆ, ಜೊತೆಗೆ ಕುಂದಾಪುರ ಕನ್ನಡದ ನವಿರು ಸೊಗಡಿನ ದುಡಿಮೆಯಿದೆ. ಇವೆಲ್ಲಕ್ಕಿಂತಲೂ ಈ ಕಥೆಗಳಲ್ಲಿ ಪ್ರಮುಖವಾಗಿ ಗ್ರಹಿಸಿಕೊಳ್ಳಬಹುದಾದ ಅಂಶವೆಂದರೆ ‘ಪ್ರತಿ ಕಥೆಯಲ್ಲೂ ವಿರುದ್ಧಭಾವಗಳು ಒಟ್ಟೊಟ್ಟಿಗೆ ಮೇಳೈಸಿಕೊಂಡಿವೆ’, ಇಷ್ಟು ಅದ್ಭುತವಾಗಿ ಒಂದೇ ಕಥೆಯಲ್ಲಿ ಕೆಲವೇ ಸಾಲುಗಳಲ್ಲಿ ವಿರುದ್ಧಭಾವ…

  • ಹುಟ್ಟಿದ ನೆಲದಿಂದ ಯಾವ್ಯಾವುದೋ ಅನಿವಾರ್ಯಗಳಿಂದ ಹೊರಗೆ ಬಂದು ನೆಲೆಸಿದ ಮನಗಳಲ್ಲಿ ತಾಯ್ನೆಲದ ತುಡಿತ, ಕಳಚಿದ ಕೊಂಡಿಯಂತಾಗಿ ಏನೋ ಆತ್ಮೀಯವಾದದ್ದನ್ನು ಕಳೆದುಕೊಂಡ ಭಾವನೆ ಸ್ವಂತ ನೆಲದಲ್ಲೆ ಸದಾ ಇರುವವರಿಗಿಂತ ಹೆಚ್ಚು ತೀವ್ರವಾಗಿ ಬಾಧಿಸುವುದು ಸಹಜ. ಅಂಥಹ ಬಾಧೆಗಳೇ ತೀವ್ರವಾಗಿ ಯಾತನೆ, ತುಡಿತಗಳಾದಾಗ , ಆ ಭಾವೋತ್ಕರ್ಷದ ತೀವ್ರತೆ ಅಭಿವ್ಯಕ್ತವಾಗಲೂ ಸೂಕ್ತ ಮಾಧ್ಯಮಕ್ಕಾಗಿ ಹುಡುಕಾಟ ನಡೆಸುವುದು ಅಷ್ಟೇ ಸಹಜ. ಆ ತುಡಿತ, ಯಾತನೆ, ಉಲ್ಲಾಸ, ಮುಗ್ಧತೆ , ಉತ್ಸಾಹಗಳೆಲ್ಲ ಕ್ರಿಯಾಶೀಲತೆಯ ಮಾರ್ಗ ಹಿಡಿದರೆ ಸೃಷ್ಟಿಯಾಗುವ ಸರಕುಗಳು ಆ ವಿಶೇಷತೆಯಿಂದಲೆ ಆಪ್ತವಾಗಿ ಆಪ್ಯಾಯಮಾನವಾಗುತ್ತವೆ. ಅಂತದೊಂದು ಅನುಭವಕ್ಕೆ ಉದಾಹರಣೆ, ಶ್ರೀಯುತ ವಸಂತರ ಮೊದಲ ಕವನ ಸಂಕಲನ "ಅಂತರ ಹಾಗು ಇತರ ಕವನಗಳು". ಸುಮಾರು ಏಳು ವರ್ಷಗಳಿಂದ ಬರೆದುಕೊಂಡುಬಂದ…

  • ಈ ಪುಸ್ತಕದ ಒಂದೊಂದು ಲೇಖನಗಳೂ ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಹಾಗೆ ಮರುಕ್ಷಣ ಕಚುಗುಳಿ ಇಡುವ, ಗಾಢ ಆಲೋಚನೆಗೆ ದಾರಿ ಮಾಡಿ ಕೊನೆಗೆ ಒಂದು ಸಣ್ಣ ಪಾಠ ಹೇಳಿ ಹೋಗುವ ಲೇಖನಗಳ ಮಾಲೆ. ಬದುಕು ಕಂಡ ಅನುಭವದ ಮಾರ್ಗದರ್ಶನಗಳು ಎಂದಿಗೂ ಸರಿಯಾಗಿಯೇ ಇರುತ್ತವೆ. ಓದಿರದಿದ್ದಲ್ಲಿ ಒಮ್ಮೆ ಓದಿ ನೋಡಿ..
     ಅಮ್ಮ ಹೇಳಿದ ಎಂಟು ಸುಳ್ಳುಗಳು ಪ್ರತಿಬಾರಿ ಓದಿದಾಗಲೂ ಹೊಸತೊಂದು ಅನುಭವದ ಪರಿಚಯ ಮಾಡಿಕೊಡುತ್ತದೆ. ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ಇಲ್ಲಿನ ಬರಹಗಳು ನಮ್ಮ ಮನ ಮುಟ್ಟುತ್ತವೆ, ಸೋತೆನೆಂಬ ಭಾವ ಮನದಲ್ಲಿ ಮೂಡಿದಾಗ ಬೆನ್ನು…

  • ದಿನ ನಿತ್ಯದ ಜೀವನದಲ್ಲಿ, ಸುತ್ತಮುತ್ತಲ ಆಗುಹೋಗುಗಳಲ್ಲಿ, ನೈಸರ್ಗಿಕ ವಿದ್ಯಮಾನಗಳಲ್ಲಿ ಸಂಭವಿಸುವ ಹಲವಾರು ಘಟನೆಗಳು ನಮ್ಮ ಮನಸ್ಸಿನಲ್ಲಿ ಕೌತುಕವನ್ನು, ವಿಸ್ಮಯವನ್ನು, ಪ್ರಶ್ನೆಗಳನ್ನು ಮೂಡಿಸುತ್ತವೆ. ಅದೇ ವಿಜ್ಞಾನ. ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗ. ಇಂದು ಕೃಷಿಯಲ್ಲಿ ವಿಜ್ಞಾನವಿದೆ. ಅಡುಗೆ ಮಾಡುವುದು ಕೂಡ ಒಂದು ವಿಜ್ಞಾನವೆಂದು ಪರಿಗಣಿಸಲ್ಪಟ್ಟಿದೆ.. ಬಟ್ಟೆ ತೊಳೆಯುವುದೂ ವಿಜ್ಞಾನವೇ. ಜೀವನದ ಪ್ರತಿಯೊಂದು ಚಟುವಟಿಕೆಯಲ್ಲೂ ಭೌತ, ರಸಾಯನ, ಜೀವಶಾಸ್ತ್ರಗಳಿವೆ. ಏನು? ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮೂಡಿಸುವುದೇ ವಿಜ್ಞಾನದ ಲಕ್ಷಣ. ಆದರೆ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಎಲ್ಲಿಂದ ಹೇಗೆ ಪಡೆಯಬೇಕೆಂಬುದು ತಿಳಿಯದೇ ಗೊಂದಲಕ್ಕೊಳಗಾಗಿ ನಾವು ಸುಮ್ಮನಾಗಿಬಿಡುತ್ತೇವೆ. ಆದರೆ ಅವೇ ಪ್ರಶ್ನೆಗಳನ್ನು ಎಳೆಯರು ನಮ್ಮ…